Skip to main content

ಬ್ಯುಸಿ ಲೈಫ್-ಕಳೆದು ಹೋದ ನೆನಪು..

ಇಂದ radhika bhat
ಬರೆದಿದ್ದುSeptember 27, 2013
2ಅನಿಸಿಕೆಗಳು

ಮ್ಮೆ ತಿರುಗಿ ನೋಡಿ...ಆ ದಿನಗಳು..ಎಷ್ಟು ಚೆನ್ನಾಗಿತ್ತು ಅನ್ಸಲ್ವಾ.. ವಾಚ್‌ಮೆನ್ ಜಯಣ್ಣ, ಕ್ಯಾಂಟೀನ್ ಅಂಕಲ್, ಸ್ಟೇಶನರಿ ಅಣ್ಣ, ಕನ್ನಡದ ಶ್ರೀಧರ್ ಸರ್, ಅಮ್ಮನೇ ಆಗಿದ್ದ ಇಂದಿರಮ್ಮ, ಶೇಕ್ಸ್ ಪಿಯರ್ ಮಾಧವ್‌ಭಟ್ ಸರ್, ಸ್ಟ್ರಿಕ್ಟ್ ಮಾಸ್ಟರ್ ಮಹೇಶ್ ರೈ, ಫನ್ನೀ ಕ್ಯಾರೆಕ್ಟರ್ ವಿಷ್ಣು ಸರ್, ಮಾತು ಮಾತಿಗೂ ಫೆಂಟಾಬ್ಯುಲಸ್ ಅಂತಿದ್ದ ಗಣೇಶ್ ಸರ್, ಲಾಸ್ಟ್ ಕ್ಲಾಸ್‌ನಲ್ಲಿ ಏನಾಯ್ತ್ರೀ ಅಂತಿದ್ದ ದೊಡ್ಡೇಗೌಡ,ಕ್ಲಾಸೊಳಗೆ ಕಾವ್ಯ ಲೋಕ ಸೃಷ್ಟಿಸ್ತಿದ್ದ ಬಿ.ಕೆ ಸರ್,ಸ್ವೀಟ್ ಸುಬ್ಬ ಮನ್‌ಮೋಹನ್ ಸರ್, ನಮ್ಮಿಂದ ಕಾಮೆಂಟ್‌ಗೆ ಗುರಿ ಆಗದ ವ್ಯಕ್ತಿಗಳು ಯಾರಾದ್ರೂ ಇದ್ರಾ..?

ನಾನು ಲೇಟಾಗಿ ಕ್ಲಾಸೊಳಗೆ ಕಾಲಿಟ್ಟಾಗ ಇವತ್ತೂ ಲೇಟಾ ಎಂಬ ದೃಷ್ಟಿಯಲ್ಲಿ ನೀವು ನೋಡ್ತಿದ್ದಿದ್ದು, ಕ್ಲಾಸ್ ಮುಗ್ದ ಮೇಲೆ ಸುಂದರ ಮಾತುಗಳಿಂದ ಸಹಸ್ರ ನಾಮಾರ್ಚನೆ ಮಾಡ್ತಿದ್ದ್ದಿದ್ದು, ಮದ್ಯಾಹ್ನ ಅಮ್ಮ ಮಾಡಿದ ಪಲಾವ್‌ಗೆ ಜಗ್ಳವಾಡ್ತಿದ್ದಿದ್ದು..ತಿಂದಿದ್ದೇ ತಡ, ಎದ್ದು ಕಾರಿಡಾರ್‌ಗೆ ಗಿರಕಿ ಹೊಡಿತಿದ್ದಿದ್ದು..? ಯಾವ ಹುಡುಗ್ರೂ ತಿರುಗಾಡದಷ್ಟು ತಿರುಗಾಡಿ ತಿರುಗಾಡಿ ಹುಡುಗೀರು ಅಂತ ಹೆಸ್ರು ಬಂದಿದ್ದು..ಯಾವುದೂ ನೆನಪಾಗ್ತಿಲ್ವಾ..?

ಭಾಗ್ಯ ನಿಂಗೆ..?ವಂದು ನಿಂಗೆ..? ಚಿಪ್ಪಿ ನಿಂಗೆ..? ಭಾಗ್ಯನ್ ರೂಮ್‌ನಲ್ಲಿ ಹರಟೆ ಹೊಡೀತಿದ್ದಿದ್ದು, ಕ್ಲಾಸ್‌ನಲ್ಲಿ ನಿದ್ದೆ ತೂಗ್ತಿದ್ದಿದ್ದು, ಕಾರಿಡಾರ್ ಉದ್ದಕ್ಕೂ ಹೋಡಿತಿದ್ದ ಸೈಟ್,ಯಾರಿಗೂ ಬಿಟ್ಟು ಕೊಡದ ಫಸ್ಟ್ ಬೆಂಚ್, ಕ್ಲಾಸೊಳಗಿನ ತರಲೆಗಳು, ಮಹೇಶ್ ರೈಗೆ ಹೊಡೆದ ವಿಶಲ್, ನಮ್ಮ ಪಾಪದ ಗಣಪತಿ ಸಿಕ್ಕಿಬಿದ್ದಿದ್ದು, ರಾಜೇಶ್ ರೈಯ ಪಾಠ, ನನ್ನ ಎಟೆಂಡೆನ್ಸ್ ಶಾರ್ಟೇಜ್‌ಗಳು, ನಿಮಗಾಗುತ್ತಿದ್ದ ಟೆನ್ಷನ್ನು, ಪುತ್ತೂರ ಜಾತ್ರೆ,ನಮ್ಮೂರ ತೇರು, ಆವಾಗವಾಗ ಕಣ್ಣೀರು, ಮತ್ತೊಂದಷ್ಟು ನಗು,ಸಣ್ಣ ಪುಟ್ಟ ಕಿತ್ತಾಟಗಳು ಮತ್ತೆ ಬರಲು ಸಾದ್ಯಾನಾ..?

ಬರೆಯುತ್ತಿದ್ದ ಕವನಗಳು, ಮುಗ್ದ ಮಾತುಗಳು, ಪತ್ರಿಕೆಯಲ್ಲಿ ಅಚ್ಚಾಗಿ ಹೋದ ಭಾವರಾಶಿಯ ಸ್ನೇಹ, ಕವನಗಳಲ್ಲಿ ಹಳೆಯ ಪತ್ರಿಕೆಯಲ್ಲಿ ಮಾತ್ರ ಉಳಿಯಿತೇ.. ಯಾವುದೇ ಜಗಳವಿಲ್ಲದೇ, ಕಿತ್ತಾಟವಿಲ್ಲದೇ ಇಷ್ಟೊಂದು ದೂರಾಗಿದ್ದು ಏಕೆ..? ನಂಗೊತ್ತು ಈ ದಿನ ಈ ಕ್ಷಣ ನೀವೂ ಹಳೆಯ ನೆನಪಲ್ಲಿ ತೊಳಲಾಡ್ತಿದೀರಾ ಅಂತಾ... ಮತ್ತೇಕೆ ತಡ..ಭಾಗ್ಯ ಮತ್ತೆ ಅದೇ ನೆನಪುಗಳನ್ನು ಆಯೋಣ.. ಚಿಪ್ಪಿ ಮತ್ತೆ ನಮ್ಮ ಇಂಡಿಯನ್ ಗೇಟ್‌ನಲ್ಲಿ ಕೂತು ಹೊಸದಾಗಿ ಜಗಳವಾಡೋಣ.. ವಂದು ಮತ್ತೆ ಹೊಸ ಕನಸು ಕಾಣೋಣ.. ಮತ್ತೆ ಒಟ್ಟಾಗಿ ಬರುವಿರಾ..?ನೀವೆಲ್ಲಾ?

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

Goutam ಭಾನು, 10/19/2014 - 10:43

Nice 

Goutam ಭಾನು, 10/19/2014 - 10:44

Nice 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.