Skip to main content

ಕನ್ನಡಕದ ಕಂಗಳಿಗೆ ಹಿಡಿದ ಮಂಜು...

ಇಂದ radhika bhat
ಬರೆದಿದ್ದುSeptember 26, 2013
noಅನಿಸಿಕೆ


ಅದು ನರಕ... ಯಮನ ಲೋಕ.ಇಲ್ಲಿ ಪಾಪಗಳಿಗೆ ಸಿಗುವದು ಶಿಕ್ಷೆಯ ರೂಪದ ಪ್ರಾಯಶ್ಚಿತ ..ಪಾಪಗಳ ಪಟ್ಟಿ ಹಿಡಿದ ಚಿತ್ರಗುಪ್ತ..ಅದನ್ನಾಲಿಸುತ್ತಾ ಶಿಕ್ಷೆ ವಿದಿಸುವ ನ್ಯಾಯಾಧೀಶ ಯಮರಾಯ...

ಸಾದ್ಯವೇ ಇಲ್ಲ ಎನ್ನುತ್ತಿದ್ದಾನೆ ಯಮರಾಯ..ಅವನೆದುರು ಮನವೊಲಿಸುತ್ತಿರುವ ಒಬ್ಬ ಮುದುಕ ಕನ್ನಡಕದೊಳಗಿನ ತನ್ನ ಕಣ್ಣುಗಳಿಂದ ಯಾಚಿಸುವ ನೊಟ ಬೀರುತ್ತಿದ್ದಾರೆ..ಗಾಂದೀಜಿ.. ದಯವಿಟ್ಟು.. ಒಮ್ಮೆ ನನ್ನನ್ನು ನನ್ನ ನೆಲಕ್ಕೆ ಕರೆದೊಯ್ಯಿರಿ.. ಒಂದಿಷ್ಟು ದಿನಗಳು ನಾನು ಅಲ್ಲಿ ಕಳೆಯಬೇಕು..ಮತ್ತೆ ನನ್ನ ನೆಲದ ಸೌಗಂಧ ಹೀರಬೇಕು..ನನ್ನ ಜನರನ್ನು ನೋಡಬೇಕು..ದಯವಿಟ್ಟು ಯಮಧರ್ಮ ನನ್ನಾಸೆಯನ್ನು ಈಡೇರಿಸಿ..ಎಂದು ಯಮನ ಮನವೊಲಿಸಿದ ಗಾಂಧೀತಾತ ತಿಂಗಳುಗಳ ಕಾಲಕ್ಕೆ ಭಾರತ ನೆಲಕ್ಕೆ ಪ್ರವೇಶಿಸುವ ಒಪ್ಪಿಗೆ ಪಡೆದುಕೊಂಡರು. ಆಗ ಅವರ ಉತ್ಸಾಹ ಹೇಳ ತೀರದು ನಗುವಿನ ಚಿಲುಮೆ..ಹರೆಯದ ಉತ್ಸಾಹ ಕಂಡು ಯಮ ಅರೆ ಮನಸ್ಸಿನೊಂದಿಗೆ ಸಂತೋಷಗೊಂಡರು.
ಭಾರತಕ್ಕೆ ಹೊರಡುವ ಹಿಂದಿನ ದಿನ ಗಾಂಧೀ ಮಲಗಿದ್ದಾರೆ.. ತನ್ನ ಭಾರತ ಹೇಗಿರಬಹುದು..ರಾಮರಾಜ್ಯದ ಕನಸುಗಳು ನೆನಪಾಗಿ ನನ್ನೂರ ಚಿತ್ರಣ ಹೇಗಿರಬಹುದು.? ನ್ಯಾಯ ಧರ್ಮ ಪಾಲನೆಯ ಒಬ್ಬ ಪಂಚಾಯತಿ ಅಧ್ಯಕ್ಷ ..ನನ್ನ ಜನರೇ ನನ್ನ ದೇವರು ಎಮದು ತಿಲಿದಿರುವ ನಾಯಕ.. ಸ್ವಉದ್ಯೋಗದಿಂದ ಮೇಲೆದ್ದು ಬಂದ ಒಬ್ಬಾ ಆದರ್ಶವಾದಿ ಮನುಷ್ಯ..ಪ್ರಜಾರಾಜ್ಯ..ಭೂಮಿ ತೂಕದ ಹೆಣ್ಣು..ಮತ್ತನ್ನೇನೋ..ನಿದ್ದೆಯಾವರಿಸಿತು..
ಬೆಳಗ್ಗೆ ಗಾಂಧೀ ತುದಿಗಾಲಲ್ಲಿ ನಿಂತಿದ್ದಾರೆ. ಯಮಧರ್ಮ ಬಂದರು..ಗಾಂಧೀಜಿ..ನಿಮಗೆ ನಿಮ್ಮೂರಿಗೆ ಒಂದು ತಿಂಗಳ ಕಾಲಕ್ಕೆ ಹೋಗಿಬರುವ ಅನುಮತಿ ನೀಡಿದ್ದೇವೆ. ಅಲ್ಲಿ ನೀವು ನಿಮ್ಮವರೊಂದಿಗೆ ಕಾಲ ಕಳೆಯಬಹುದು..ಆದರೆ ನೆನಪಿರಲಿ ಒಂದೇ ತಿಂಗಳು..ಹಾಂ..! ಎಂದಾಗ ಒಮ್ಮೆ ಗಾಂಧೀಜಿ ಮುಖ ಸಪ್ಪೆಯಾದರೂ ಸಂತೊಷದಿಂದ ಹೊರಟಿದ್ದಾರೆ. 
(ಭಾರತದಲ್ಲಿ)
ಹೋಯ್ ತಾತ ಎಲ್ಗೋಗ್‌ಬೇಕ್ರೀ(॒ಕಂಡಕ್ಟರ್ ಕೇಳಿದಾಗ) ನನ್ನ ಬಾರತಕ್ಕೆ...ಎನ್ನುತ್ತಾರೆ ಗಾಂಧಿ..ಎಲ್ಲರೂ ಆತನನ್ನು ಚಿತ್ರ ವಿಚಿತ್ರವಾಘಿ ನೋಡುತ್ತಾರೆ.. ಅದಕ್ಕೆ ಕಂಡಕ್ಟರ್ ನೀವು ಭಾರತದಲ್ಲೇ ಇದೀರಾ..ಇಲ್ಲೆಲ್ಲಿ ಹೋಗ್ಬೇಕು ಹೇಳೀಪ್ಪಾ..ಕೊನೆ ನಿಲ್ದಾಣಕಪ್ಪಾ..ಎಂದಾಗ ಕಂಡಕ್ಟರ್ ಹ್ಹಾಹ್ಹಾಹಾಂ..ಅಲ್ಲೆ ಇದೀರಾ ಬಿಡಿ(ವ್ಯಂಗ್ಯವಾಗಿ)..ಹಾಂ..ಕೊಡಿ ನಲ್ವತ್ ರೂಪಾಯಿ..ಅಂದಾಗ ಗಾಂಧೀಜಿ ಸಾಧು ನಗು ಬೀರುತ್ತಾ..ನನ್ಹತ್ರ ಇಲ್ಲಪ್ಪಾ.. ಎಂದಾಗ ಹಾಗಾರೆ ಇಳ್ಕೊಳೀಪಾ ಎಂದ ಕಂಡೆಕ್ಟರ್ ಹಾಸ್ಯವಾಗಿಯೇ.. ಇಲ್ಲಾ..ನಾನು ಹೋಗ್ಬೇಕಾಗಿತ್ತಲ್ಲಾ..ಅಂದಾಗ..ಹೋಯ್ ಹಣ ಕೊಡಿ ಕರ್‍ಕೊಂಡ್ ಹೋಗಾಣ..ಇಗ ಇಳೀರಿ ಎಂದು ಮುಲಾಜಿಲ್ಲದೆ ಇಳಿಸಿದ..
ಹಾಗೇ ನಡೆದುಕೊಂಡು ಹೋದ ಗಾಂಧೀಜಿಯೊಂದಿಗೆ ಅದೇ ಸ್ಟಾಪ್‌ನಲ್ಲಿ ಇಳಿದ ಹುಡುಗನೊಬ್ಬ ಏನ್ ತಾತಾ..ಎಲ್ಗೋಗ್ಬೇಕು ಎಂದಾಗ.. ಇಲ್ಗೇ ಬಂದಿದೀನಪ್ಪಾ..ದೇಶ ನೋಡ್ಬೇಕಾಗಿತ್ತು ಅಂದರು ಅದಕ್ಕೆ ನಗುತ್ತಾ..ಏನ್ ತಾತ ಕಂಪ್ಲೀಟ್ ಔಟಾ.. ಹಮ್ ವಯಸ್ಸಾದ್ರೆ ಹಿಂಗೆ ಹು ತೆಗೊಳಿ ಎಂದು ಬಿಕ್ಷ ಕೊಡೋ ಹಂಗೆ ೧೦ ರೂ. ನೋಟಿಟ್ಟು ಹೋದ..ನಂಗಿದು ಬೇಡಪ್ಪಾ ಎಂದ..ಪರ್‍ವಾಗಿಲ್ಲ ಇಟ್ಕೋರಿ..ಎಂದು ಆತ ಹೊರಟೇ ಹೋದ. ಅಲ್ಲೇ ಹತ್ತಿರದ ಪಾರ್ಕ್‌ನಲ್ಲಿ ಕುಳಿತ ತಾತ ಒಮ್ಮೆ ಸುತ್ತಲೂ ಕಣ್ಣು ಹರಿಸಿದಾಗ ಕಂಡಿದ್ದು ಸಣ್ಣ ಪುಟ್ಟ ಮಕ್ಕಳ ಆಟ ನಗು ಚೇಷ್ಟೆ ಒಮ್ಮೆ ಮನ ತಂಪಾದಂತಾಯಿತು .ಹಾಗೇ ನೋಡುತ್ತಿದ್ದಾಗ.. ಒಬ್ಬಾಕೆ ಗಜಗಾಮಿನಿಯಂತಾ ಹೆಂಗಸು ಹಾಗೆ ಆಕೆಯ ಜೊತೆಗಿದ್ದ ಎರಡು ಗಂಡಸರು ಅದೇ ದಾರಿಯಾಗಿ ಬಂದು ತಾತ ಇದ್ದಲ್ಲಿಗೆ ಬಂದು ಏಯ್ ಏಳಯ್ಯಾ.. ಲೇಯ್ ಶಂಕ್ರು ಏಳ್ಸೋ ಈ ಮುದ್ಕನ್ನಾ. ಎಂದು ಆಕೆ ಮುಖ ತಿರುಗಿಸಿ ತನ್ನ ಪೋನ್‌ನಲ್ಲಿ ಬ್ಯುಸಿಯಾದಾಗ ಶಂಕ್ರ ಏಯ್ ಯಾರಯ್ಯಾ ನೀನು ಏಳಲ್ಲೇ ಇದು ನಮ್ ಜಾಗ ಎಂದು ಏಳಿಸಿದಾಗ ನಮ್ ಜಾಗ ನಿಮ್ ಜಾಗ ಅಂತ ಇದೆಯೇನಪ್ಪಾ ಏಲ್ಲಾ ಆ ಶಿವನದ್ದು ಎಂದು ಹೇಳಿದ ಗಾಂದಿಯನ್ನು ನೋಡಿ ಉಳಿದಿಬ್ಬರು ನಗುತ್ತಾರೆ ಆಕೆ ಫೋನ್‌ನಲ್ಲಿ ಮಾತಾಡುತ್ತಲೇ ಗಾಂಧಿ ಕಡೆಗೆ ಲುಕ್ ಕೊಟ್ಟು ಫೋನ್‌ನಲ್ಲಿ ಸರಿಸರಿ ಅಮೇಲ್ ಮಾಡು ಎಂದು ಹೇಳಿ..ಗಾಂಧಿ ಹತ್ರ ಬಂದು ಹೇಯ್ ಏನ್ ನಿಂದು ..ತಿಕ್ಲಾ ಏನ್..ಹೋಗಲ್ಲೇ..ಎಂದಾಗ ಗಾಂಧಿ ತದೇಕಚಿತ್ತರಾಗಿ ನೋಡಿ..ಮೌನವಾಗೇ ಅತ್ತ ಸರಿದರು..ಸ್ವಲ್ಪ ಮುಂದೆ ಬಂದು ಅತ್ತ ತಿರುಗಿ ನೋಡಿದರು ಆಗ ಆಕೆ ಯಾವುದೋ ಮುದುಕನ ಕೆನ್ನೆಗೆ ಏಟು ಹಾಕಿ ಹೇಯ್ ಏನ್ಲೇ..ಸಾಲ ತೆಗೊಂಡೋಗ್ಬೇಕಾರೆ ನೆಂಪಿತ್ತು ಬಡ್ಡಿ ಕೊಡೋಕೆ ನೆಂಪಿಲ್ವಾ..?ಎಂದು ಹೇಳುತ್ತಾ ಬಾರಿಸಿದಾಗ ಮುದುಕ ನೀವು ಮೊದಲು ಹೇಳಿದಕ್ಕಿಂತ ಬಡ್ಡಿ ಹೆಚ್ಚು ಮಾಡಿದ್ದೇಕೆ..ಅದು ಯಾವ ನ್ಯಾಯ ಎಂದಾಗ. ಆಕೆ ನಾನು ನನ್ನ ಹಣಕ್ಕೆ ಎಸ್ಟು ಬೇಕಾರೂ ಬಡ್ಡಿ ಹೆಚ್ಚು ಮಾಡ್ತೀನಿ ನೀ..ಯಾವನೋ ಕೇಳೋಕೆ ಕೋಡೋದಾರೆ ಕೊಡು ಇಲ್ಲಾ ನಾನು ನನ್ಹತ್ರ ಇರೋ ನಿನ್ ಮನೆಪತ್ರಾನ ನನ್ನ ವಶ ಮಾಡ್ಕೊಂತೀನಿ. ಅಂತಾ ಹೇಳ್ದಾಗ ಮುದುಕ ಕಾಲಿಗೆ ಬಿದ್ದು ಬೇಡಿಕೊಳ್ತಾನೆ ಉಳಿದವರು ನಗುತ್ತಾರೆ. ಇದೆಲ್ಲಾ ನೋಡುತ್ತಿದ್ದ ಗಾಂಧಿ ಮತ್ತೆ ನೊಡಲಾರದೆ ಮುಖ ತಿರುಗಿಸಿ ಕೊಂಡು ಸೋತ ಹೆಜ್ಜೆ ಇಡುತ್ತಾ ಮುಂದೆ ಸಾಗಿ ಅಲ್ಲೇ ಇದ್ದ ಖಾಲಿ ಆಸನದಲ್ಲಿ ಕುಳಿತುಕೊಂಡರು. ಅವರೆದುರು ಕೆಲ ಹುಡುಗಿಯರು ಅರೆನಗ್ನ ಬಟ್ಟೆಗಳಲ್ಲಿ ತಿರುಗಾಡುತ್ತಾ, ಗಂಡಸರನ್ನು ಕಂಡು ನಗುತ್ತಾ ಕರೆಯುತ್ತಿದ್ದರೆ ಗಾಂಧಿಯ ಭೂಮಿ ತೂಕದ ಹೆಂಗಸು ನಾಚಿ ಭೂಮಿಯೊಳಗೆ ಸೇರಿಕೊಂಡಳು. ಸೋತ ಮನದಲ್ಲಿ ಗಾಂದಿ ನಿಟ್ಟುಸಿರು ಬಿಡಬೇಕಾದರೆ ಅವರ ಹೆಗಲ ಮೇಲೆ ಕೈಯೊಂದು ಬಿದ್ದಿತ್ತು..ತಿರುಗಿದಾಗ ಅಲ್ಲಿ ಕಂಡಿದ್ದು ೧೦ರೂ ನೀಡಿದ ನಗುಮೊಗದ ಆ ಹುಡುಗ..ಏನ್ ತಾತಯ್ಯ ಇಲ್ಲಿದೀರಾ.. ಏಲ್ ಹೋಗ್ಬೇಕು ನೀವು..?ಯಾರ್ ನೀವು..?ಯಾಕಿಲ್ಲಿದೀರಾ..?ಎಂದಾಗ ನಾನು ಗಾಂಧಿ. ಕರಮಚಂದ್ರ ಮೋಹನದಾಸ ಗಾಂಧಿ..ಇಲ್ಲಿಗೇ ಬಂದಿದೇನೆ. ಅದಕ್ಕೆ ಆ ಹುಡುಗ ನಗುತ್ತಾ..,ಹ್ಹ..ಹ್ಹ ಹುಚ್ಚು ಅಂತಾ ಗೊತ್ತಿತ್ತು ಆದ್ರೆ ಇಷ್ಟೊಂದು ಅಂತಾ ತಿಳ್ದಿತ್ತಿಲ್ಲಾ..ಹಾಂ..ಸರೀ ಅಲ್ಲೇನ್ ನೊಡ್ತಿದೀರಾ..?ಮತ್ತೆ ಅತ್ತ ತಿರುಗಿದ ಗಾಂಧಿಜಿಯತ್ರ ಕೇಳಿ ಅತ್ತ ನೋಡಿದಾಗ..ಆ ದೃಶ್ಯ ಆತನಿಗೆ ಕಂಡು ಬಂತು..ಓ ಇದಾ ವಿಷ್ಯಾ..ಆಕೆ ಕನಕಮ್ಮ..ಹೆಸರು ಹೂವಿಂದು ಆದ್ರೆ ಮನಸ್ಸು ಮಾತ್ರ ಕಪ್ಪು ಕಲ್ಲಿದ್ದಲು..ಬಡ್ಡಿ ವ್ಯವಹಾರ ಮಾಡ್ತಾಳೆ. ಜೊತೆಗೆ ಬೇರೆ ಬೇರೆ ದಂಧೆ ಕೂಡ ಕಾಲೇಜ್ ಸ್ಟುಡೆಂಟ್ಸ್‌ಗೆ ಡ್ರಗ್ಸ್, ಗಾಂಜಾ ಸಪ್ಲೈ ಎಲ್ಲಾ ಇವಳದ್ದೆ. ಅವಳ ಹಿಂದೆ ದೊಡ್ಡ ರೌಡಿ ಗುಂಪೇ ಇದೇ..ಇನ್ನು ಇಲ್ಲೆಲ್ಲಾ ಕಾಣಿಸ್ತಿದಾರಲ್ಲ ಹಕ್ಕಿಗಳು ಅವ್ಗಳೂ ಕೂಡ ಈಕೆಯದ್ದೆ.ನಮ್ಮಪ್ಪ ಈಕೆ ಕೈಲಿ ಸಾಲ ಮಾಡಿ ನೇಣಾಕ್ಕೊಂಡ್ ಸತ್ತೋದ. ಇವ್ಳ್ನ ಎದುರಾಕ್ಕೊಂಡಿದಕ್ಕೆ ನನ್ ತಮ್ಮ ನಕ್ಸಲೈಟ್ ಅನ್ನಿಸ್ಕೊಂಡು ಗುಂಡಿಗೆ ಬಲಿಯಾದ. ಹಮ್..ಎಂದು ನಿಟ್ಟುಸಿರು ಬಿಟ್ಟ..ಹು ಬಿಡಿ ಮತ್ತೆ ಊಟ ಮಾಡಿದ್ರಾ..?ಎಂದು ಕೇಳಿದಾಗ ನಂಗೆ ಹಸಿವು ಇಲ್ಲಪ್ಪಾ..ಹಾಂ..ನಿನ್ ಹೆಸ್ರು.. ಎಂದ ಗಾಂಧೀಯ ಮಾತುಗಳನ್ನು ಕೇಳಿಸಿಕೊಳ್ಳದೇ ಆತ ಎದುರಿನ ಶೇಕ್‌ನ ತಳ್ಳೋಗಾಡಿ ಹತ್ರ ಹೋಗಿದ್ದ. ಮತ್ತೆ ತಿರುಗಿ ಬಂದು ಗಾಂಧೀಜಿ ತಿನ್ನಲು ನೀಡಿ. ಶೇಖರ್ ಅಂತಾ..ನನ್ ಹೆಸ್ರು..ಮೊದ್ಲು ಇಲ್ಲಿಂದ ಹೊರ್‍ಡಿ.. ಯಾರೋ ನಮ್ಮವರು ತಕ್ರಾರ್ ಮಾಡ್ಕೊಂಡಿದಾರೆ ಗಲಾಟೆ ನಡೀತಿದೆ ಹೆಚ್ಚಾಗೋ ಸಾದ್ಯತೆ ಇದೆ ನಂಗೆ ಹೋಗ್ಬೇಕು ..ಎಂದು ಆತ ಹೊರಟು ಹೋದ..
ಆತ ನೀಡಿದ ತಿಂಡಿಗಳತ್ರ ಕಣ್ಣು ಸರಿದಾಗ ಆ ಗಾಡಿಯವನು ಮಾಡಿರಬಹುದಾದ ಮೋಸಗಳು ಕಣ್ಣೆದುರು ಕಂಡವು..ಓಹ್..ನಿಟ್ಟುಸಿರು ಬಿಟ್ಟ ಗಾಂಧೀಜಿ..ಹೊರಗಿನಿಂದ ಕೇಳಿದ ಸ್ವರಕ್ಕೆ ಬಿಚ್ಚಿ ತಿರುಗಿ ನೋಡಿದರು..ಆಕೆ ಆ ಮುದುಕನನ್ನು ಕೊಲಗೈದಿದ್ದಾಳೆ. ಆಕೆಯ ಚೇಲಾಗಳು ಕಾಲಲ್ಲಿ ತುಳಿದು ಮುಂದೆ ನಡೆಯುತ್ತಿದ್ದಾರೆ..ಎಲ್ಲರೂ ಮೂಕ ವಿಸ್ಮಿತರಾಗಿ ನೋಡುತ್ತಿದ್ದಾರೆ. 
ಆಕೆ ನಡೆದು ಬಂದು ಯಾವುದೋ ಬಿಳಿ ಟೊಪಿಯ ರಾಜಕಾರಣಿ ಹತ್ರ ಮಾತನಾಡುತ್ತಿದ್ದಾಲೆ. ಆತ ನಮ್ರತೆಯಿಮದ ತನ್ನ ಕಾರಿನ ಡೊರ್ ತೆಗೆದು ಆಕೆಗೆ ಕೂರಲು ಅನುವು ಮಾಡಿ ತಾನೂ ಮನ್ನಡೆಯುತ್ತಾನೆ.
ಮರುದಿನ:
ಎಲ್ಲೆಲ್ಲೂ ಬೆಂಕಿ ಕಾಣಿಸುತ್ತಿದೆ. ದೊಡ್ಡ ದೊಡ್ಡ ಕೋಲುಗಳನ್ನು ಹಿಡಿದ ಜನರು ಬಿಳಿಯ ಟೋಪಿ ಹಾಕಿದ ಮುಸ್ಲೀಂ ಜನರನ್ನು ಓಡಿಸುತ್ತಿದ್ದಾರೆ..ಕೆಲ ಮುಸ್ಲೀ ಜನರು ಅವರೊಂದಿಗೆ ಕಾದಾಟಕ್ಕೆ ಇಳಿದಿದ್ದಾರೆ. ಎರಡೂ ಮತಗಳ ನಡುವೆ ಕಾದಾಟ ನಡೆಯುತ್ತಿದೆ. ಶಾಲೆಯಿಂದ ಜೊತೆಯಾಗಿ ಬರುತ್ತಿದ್ದ ಹಿಂದೂ ಮುಸ್ಲೀ ಮಕ್ಕಳೂ ಇವರ ಕಾದಾಟದ ನಡುವೆ ಸಿಕ್ಕಿ ಸಾವನ್ನಪ್ಪುತ್ತಾರೆ.,. ಪೋಲೀಸರ ಆಗಮನವಾಗುತ್ತದೆ. ಪರಿಸ್ಥಿತಿಯನ್ನು ನಿಯಂತ್ರಿಸುತ್ತಾರೆ ಅದರೊಳಗಾಗಲೆ ಅನೇಕ ಜನರು ಸಾವನ್ನಪ್ಪಿದ್ದಾರೆ. ರಾಜಕಾರಣಿಗಳು ಆಗಮಿಸುತ್ತಾರೆ. ಒಬ್ಬರ ಮೇಲೊಬ್ಬರು ದೂರುತ್ತಿದ್ದಾರೆ.ವ್ಯಕ್ತಿಗಳ ನಡುವಿನ ಸಣ್ಣ ಮನಸ್ತಾಪ ಈಗ ರಾಜಕೀಯ ಕಲಹವಾಗಿ ಮಾರ್ಪಟ್ಟಿದೆ. ಇದನ್ನೆಲ್ಲಾ ನೋಡುತ್ತಿದ್ದ ಗಾಂಧೀ ತುಂಬಿದ ಕಣ್ಣುಗಳೊಂದಿಗೆ ದಿಗ್ಭ್ರಾಂತರಾಗಿ ನೊಡುತ್ತಿದ್ದಾರೆ. 
ಅಯ್... ಹೋಗ್ ಹೋಗ್.. ನೋಡುತ್ತಾ ಕುಳಿತಿದ್ದ ಗಾಂಧೀಜಿಗೆ ಅಲೆಮಾರಿಯೊಬ್ಬ ಹೇಳಿದ.. ಕೆದರಿದ ಕೂದಲು ಹುಚ್ಚನಂತೆ ಕಾಣುತ್ತಿದ್ದ ಆತ ಹೇಳಿದಾಗ ಗಾಂಧೀ ತನಗರಿವಿಲ್ಲದಂತೆ ಅತ್ತ ಕೈ ತೋರಿದರು. ಹ್ಹಾ ಹ್ಹಾ ಎಂದು ನಕ್ಕ ಆ ಹುಚ್ಚ (ಮಂದಿರದೆಡೆಗೆ ಕೈ ತೋರಿಸಿ, ಹುಚ್ಚುಚ್ಚಾಗಿ )ನಾನು ಹಣ್ಣಿಗೆ ಕಲ್ಲು ಬಿಸಾಕಿದ್ದೆ,ಅಲ್ಲಿ ಹೋಯ್ತು..,ಬಿತ್ತು ನಾನು ಓಡಿದೆ.. ಈಗೆಲ್ರೂ ಓಡ್ತಾ ಇದಾರೆ ಹ್ಹಾ ಹ್ಹಾ ಹ್ಹಾ... ಮೂಕವಾಗಿ ನೋಡಿದ ಗಾಂಧಿ..ಸುಸ್ತಾಗಿ ಹೋದರು..
ಗಾಂಧಿಜಿ ಸೊತ ಕಾಲ್ಗಳಿಂದ ಘಟನೆ ನಡೆದ ಜಾಗದಲ್ಲಿ ನಡೆಯುತ್ತಿದ್ದಾರೆ.. ಅನೇಕ ರಾಜ ಕಾರಣಿಗಳು ಘಟನೆಯ ಲಾಭ ಪಡೆಯುತ್ತಿದ್ದಾರೆ ಅನೇಕ ತಾಯಂದಿರು ಹೆಂಡಿರು ಅಳುತ್ತಿದ್ದಾರೆ. ಹಿಂದು ಮುಸ್ಲೀ ಎನ್ನದೆ ಎಲ್ಲರೂ ತಮ್ಮವರಿಗಾಗಿ ರೋಧಿಸುತ್ತಿದ್ದಾರೆ. ಸತ್ತುಹೋದ ಮುಸ್ಲೀಂ ಹಿಂದೂ ದೇಹಗಳನ್ನು ಒಂದೇ ವ್ಯಾನ್ನಲ್ಲಿ ಕೊಂಡೋಯ್ಯಲಾಗುತ್ತಿದೆ.. ಆಗ ಕಂಡಿದ್ದು ೧೦ ರು ನೀಡಿದ ಆತನ ಮೃತ ದೇಹ...ಆತನನ್ನು ಮುಟ್ಟಿ ಮುಟ್ಟಿ ಅಳುತ್ತಿದ್ದ ಮುಸ್ಲೀಂ ಹುಡುಗಿ..!!!
ಮುನ್ನಡೆದ ಗಾಂಧೀಜಿ..ಗೆ ಕಂಡಿದ್ದು ಸರಕಾರಿ ಆಫೀಸುಗಳು..ಹೊರಗೆ ಬಂದ ಸರಕಾರೀ ಆಪೀಸರ್‌ಗಳಿಗೆ ಹಣ ನೀಡುತ್ತಿರುವ ಜನಗಳು.. ಮುತ್ತೂ ಮುಂದೆ ಸಾಗಿದಾಗ ರಾಜಕಾರಣಿಗಳು..ಮುಖ್ಯವಾಗಿ ಆ ಹೆಂಗಸಿನೊಂದಿಗೆ ಕಾಣಿಸಿಕೊಂಡ ಆ ರಾಜಕಾರಣಿ.. ಆತನ ಹಿಂದೆ ಘೋಷಣೆ ಕೂಗುತ್ತಿದ್ದ ಆಕೆಯ ಚೇಲಾಗಳು..ಜೊತೆಗೆ ಆ ವಾಹನಕ್ಕೆ ಹಾಕಿರುವುದು ಕೈ ಮುಗಿದು ವಿನಮ್ರತೆಯಿಂದ ನಿಂತಿರುವ ಆಕೆಯ ಫೋಟೋ..
ನೋಬಿಂದ ಕಣ್ಣು ಮುಚ್ಚಿದ ಗಾಂಧಿ..ನರಕಕ್ಕೆ ತಲುಪಿದ್ದಾರೆ..ಶಿಕ್ಷೆಯನ್ನು ವಿಧಿಸುತ್ತಿದ್ದ ಯಮ ಹಾಗೂ ಚಿತ್ರಗುಪ್ತ ಇವರನ್ನು ಕಂಡು ಆಶ್ಚರ್‍ಯದಿಂದ ನೊಡುತ್ತಾರೆ..ಎರಡೇ ದಿನದಲ್ಲಿ ಬಂದ ಗಾಂಧೀಜಿಯನ್ನು ಕಂಡು ಏನು ಇಷ್ಟು ಬೇಗ ಬಂದಿರಿ ಎರಡೇ ದಿನಕ್ಕೆ ಸಾಕಾಯ್ತೇ ಊರು ಎಂದು ಯಮ ಕೇಳಿದಾಗ..ತುಂಬಿದ ಕಂಗಳಲ್ಲಿ ನನ್ನಿಂದ ಮಹಾಪರಾಧವಾಗಿದೆ ಎಂದು ಹೇಳಿ..ತಾವು ಕಟ್ಟಿದ ಕನಸುಗಳುದೇಶ ವಿಭಜನೆಯ ಕಾರ್ಯ ನೆನಪಾಗಿ ಜೊತೆಗೆ ತಾವು ಕಂಡ ದೃಶ್ಯಗಳನ್ನು ನೆನಪಿಸಿಕೊಂಡು ಅತ್ತುಬಿಡುತ್ತಾರೆ. 
ಎಲ್ಲವೂ ಗಾಢ ಮೌನ..ಸತ್ತ ಮನೆಯಂತೆ.

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.