Skip to main content

ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಭಂದ.

ಇಂದ yaseen
ಬರೆದಿದ್ದುSeptember 26, 2013
noಅನಿಸಿಕೆ

* ಭಾರತದಲ್ಲಿ ಹೆಚ್ಚಿದ ತೈಲ ಬಿಕ್ಕಟ್ಟು - ಪ್ರಗತಿಯ ಗತಿಯ ಮೇಲೆ ಅದರ ಪರಿಣಾಮ .

ದಕ್ಷಿಣ ಏಷ್ಯಾದಲ್ಲೇ ಅತಿ ದೊಡ್ಡ ಅರ್ಥವ್ಯವಸ್ಥೆ ಹೊಂದಿರುವ ಭಾರತವು ಇಂದು ತೈಲ ಬಿಕ್ಕಟ್ಟನ್ನು ಎದುರಿಸುತ್ತಿದೆ.
ಇದು ದೇಶದ ಪ್ರಗತಿಪರ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಇದಕ್ಕೆ ಹಲವಾರು ಕಾರಣಗಳನ್ನು ನಾವು ಗಮನಿಸಬಹುದು.

* ಯುರೋಪ್ ನ ಆರ್ಥಿಕ ಬಿಕ್ಕಟ್ಟು

*ಕುಸಿಯುತ್ತಿರುವ ರೂಪಾಯಿ ಮೌಲ್ಯ,

* ಹೆಚ್ಚುತ್ತಿರುವ ವಿತ್ತೀಯ ಕೊರತೆ ಮತ್ತು

* ಆಮದಿಗೆ ಬೇಕಾಗಿರುವ ಡಾಲರ್‌ನ ಅಭಾವ ದೇಶದಲ್ಲಿ ತೈಲ ಬಿಕ್ಕಟ್ಟನ್ನುಸೃಷ್ಟಿಸುತ್ತಿದೆ.

* ಯುರೋಪ್ ನ ಆರ್ಥಿಕ ಬಿಕ್ಕಟ್ಟಿನಿಂದ ಡಾಲರ್ ಹೆಚ್ಚು ಸದೃಢವಾಗಿದೆ. ಇದರಿಂದ ಭಾರತದ ಷೇರುಪೇಟೆ ಋಣಾತ್ಮಕ ಪ್ರಭಾವ ಬೀರಿದೆ.

* ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಕಚ್ಚಾ ತೈಲದ ಆಮದಿಗೆ ನೀಡಬೇಕಿರುವ ಡಾಲರ್‌ನಪ್ರಮಾಣವೂ ಹೆಚ್ಚಾಗುತ್ತಿದ್ದು, ಕೇಂದ್ರ ಸರಕಾರ ಅನಿವಾರ್ಯವಾಗಿ ತೈಲ ವೆಚ್ಚದ ಮೇಲೆ ನಿರ್ಬಂಧ ಹೇರಲು ಯೋಚಿಸುತ್ತಿದೆ. ಸಮಸ್ಯೆ ಮಾತ್ರ ಹಾಗೇ ಉಳಿದಿದೆ.ಭಾರತದಂಥ ಅಭಿವೃದ್ಧಿ ಹೊಂದುತ್ತಿರುವ ದೇಶದಲ್ಲಿ ತೈಲ ಬಹುಮುಖ್ಯ ಚಾಲಕ ಶಕ್ತಿ. ಅದರ ಮೇಲಿನ ನಿರ್ಬಂಧ ಹೇರುವುದೆಂದರೆ, ಅಭಿವೃದ್ಧಿಗೆ ಹಾಕಿದ ಕಡಿವಾಣವೆಂದೇ ಅರ್ಥ.

* ಬೇಡಿಕೆ ಇದ್ದಷ್ಟು ಪ್ರಮಾಣದಲ್ಲಿ ದೇಶೀಯವಾಗಿ ತೈಲ ಉತ್ಪಾದನೆಯಾಗುತ್ತಿಲ್ಲ. ಬಹುಪಾಲು ತೈಲ ವಿದೇಶಗಳಿಂದ ಡಾಲರ್ ಕೊಟ್ಟು ಆಮದು ಮಾಡಿಕೊಳ್ಳಬೇಕು. ಬೇಕಾದಷ್ಟು ಪ್ರಮಾಣದಲ್ಲಿ ತೈಲ ಆಮದು ಮಾಡಿಕೊಳ್ಳಲು ದೇಶದ ಬಳಿ ಅಗತ್ಯವಾದಷ್ಟು ಡಾಲರ್ ಸಂಗ್ರಹ ಇಲ್ಲ. ಹೀಗಾಗಿಯೇ ಬಿಕ್ಕಟ್ಟು.

* ತೈಲ ಬಳಕೆ ಕಡಿಮೆ ಮಾಡಿದರೆ ಸ್ವಲ್ಪವಾದರೂ ಒತ್ತಡ ಕಡಿಮೆ ಕಡಿಮೆಯಾಗುತ್ತದೆ ನಿಜ. ಆದರೆ, ಹಾಗೆ ಮಾಡಲು ಸಾಧ್ಯವಿಲ್ಲದಂಥ ಸ್ಥಿತಿ ದೇಶದಲ್ಲಿ ಇದೆ.

* ರಫ್ತು ಹೆಚ್ಚಿಸುವ ಮತ್ತು ವಿದೇಶಿ ಬಂಡವಾಳ ಆಕರ್ಷಿಸುವ ಮೂಲಕ ಅಧಿಕ ಡಾಲರ್ ಸಂಗ್ರಹ ಮಾಡುವ ಮೂಲಕ ಸಮಸ್ಯೆ ನಿಭಾಯಿಸಬಹುದು. ಆದರೆ, ಅದು ಶೀಘ್ರ ಆಗುವಂಥದ್ದಲ್ಲ. ಹೀಗಾಗಿ, ಸರಕಾರ ದಿಢೀರ್ ಪರ್ಯಾಯ ಮಾರ್ಗಗಳನ್ನು ಹುಡುಕಬೇಕಾಗಿ ಬಂದಿದೆ.

* ತೈಲ ಆಮದಿನ ವಿಚಾರದಲ್ಲಿ ಭಾರತ ಕಳೆದ ಎರಡು ದಶಕಗಳಿಂದ ಸಮಸ್ಯೆಯನ್ನು ಎದುರಿಸುತ್ತಾ ಬಂದಿದೆ. ಅಮೆರಿಕ ಮತ್ತು ತೈಲ ಉತ್ಪಾದನಾ ದೇಶಗಳ ನಡುವಣ ಸಂಬಂಧಗಳು ಭಾರತಕ್ಕೆ ಸಮಸ್ಯೆಯನ್ನು ತಂದೊಡ್ಡುತ್ತಿವೆ. ಪರಮಾಣು ಅಸ್ತ್ರ ವಿವಾದದಿಂದಾಗಿ ಇರಾನ್ ಮತ್ತು ಅಮೆರಿಕ ನಡುವಣ ಸಂಬಂಧ ಕೆಟ್ಟಿದೆ. ಈ ಬೆಳವಣಿಗೆ ಭಾರತಕ್ಕೆ ಪೂರೈಸಲಾಗುತ್ತಿದ್ದ ತೈಲದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

* ಇದೀಗ, ಸಿರಿಯಾ ಮೇಲೆ ಅಮೆರಿಕ ದಾಳಿ ನಡೆಸಿದರೆ ಭಾರತ ಮತ್ತಷ್ಟು ತೈಲ ಸಂಕಷ್ಟ ಎದುರಿಸಬೇಕಾಗುತ್ತದೆ. ಈ ಸನ್ನಿವೇಶದಲ್ಲಿ ಭಾರತವು ಅಮೆರಿಕದ ಒತ್ತಡವನ್ನು ಕಡೆಗಣಿಸಿ, ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವುದು ಅನಿವಾರ್ಯ. ಇದರಿಂದಾಗುವ ಅನುಕೂಲವೆಂದರೆ, ರೂಪಾಯಿ ನೀಡಿ ಇರಾನ್‌ನಿಂದ ತೈಲ ಕೊಳ್ಳಲು ಸಾಧ್ಯವಿರುವುದು. ಆದರೆ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಕಡೆಗಣಿಸಿ ಇರಾನ್‌ನಿಂದ ತೈಲ ಕೊಳ್ಳುವುದು ಸುಲಭವಲ್ಲ. ಆದರೆ, ಅಂಥ ಒಂದು ಧೈರ್ಯದ ಹೆಜ್ಜೆ ಇಡುವುದು ಈಗ ಅನಿವಾರ್ಯವಾಗಿದೆ. ಇದು ತೈಲ ಬಿಕ್ಕಟ್ಟನ್ನು ಎದುರಿಸಲು ಅನುಸರಿಸಬಹುದಾದ ಒಂದು ಕ್ರಮ ಅಷ್ಟೆ. ಇದೇ ರೀತಿ ಇನ್ನೂ ಹಲವು ಕ್ರಮಗಳನ್ನು ಸರಕಾರ ತೆಗೆದುಕೊಂಡರೆ ಮಾತ್ರ ತೈಲ ಬಿಕ್ಕಟ್ಟಿನಿಂದ ಪಾರಾಗಲು ಸಾಧ್ಯ.

ಲೇಖಕರು

yaseen

tanveer

Software programmer by profession, Blogger by passion, working for an MNC.. IAS,IPS Aspirant.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.