Skip to main content

ರೂಪಾಯಿ ಮೌಲ್ಯ

ಬರೆದಿದ್ದುSeptember 4, 2013
1ಅನಿಸಿಕೆ

ಮನದ ಮುಗಿಲಾಚೆಗೆ ಎಂದೂ ಕಾಣದ ಸ್ವಪ್ನ, 

ಗಾಢ ನಿದ್ದೆಯಲ್ಲೂ ಬೆಚ್ಚಿಬಿದ್ದೆ ಕಂಡು ಆ ದುಸ್ವಪ್ನ.

ಕ್ಷಣಕ್ಷಣಕ್ಕೂ ಡಾಲರ್ ಎದುರು ಕುಸಿಯುತ್ತಿತ್ತು ರೂಪಾಯಿ
ಮೌಲ್ಯ
,

ಏರಿಕೆಗೆ ಭಾರತೀಯರೆಲ್ಲರೂ ಕಾಯುತ್ತಿದ್ದರು ರಾಮನಿಗೆ ಕಾದಂತೆ
ಅಹಲ್ಯಾ.
 

ಕಾರಣಕರ್ತರು ಅಟ್ಟಹಾಸದಿಂದ ನಗುತ್ತಲೇ ಇದ್ದರು,

ಕಾರಣ ತಿಳಿಯದ ಜನಸಾಮಾನ್ಯರು ಹಸಿವೆಯಿಂದ ಬಿದ್ದರು. 

ನಾ ಸೂತ್ರ ಕಂಡುಹಿಡಿದಂತೆ ಮೌಲ್ಯ ಏರಿಸಲು ಕಾಸಿಗೆ,

ಸೂತ್ರ ಮಂಡಿಸುವುದರೊಳಗೆ ನೆಲಕ್ಕುರುಳಿಸಿ ಎಚ್ಚರಿಸಿತು ನಾ
ಮಲಗಿದ್ದ ಹಾಸಿಗೆ.

 

 

- ಹರ್ಷ ಹೆಮ್ಮಾಡಿ.

ಲೇಖಕರು

Harsha R Poojary

ಹರ್ಷ ಹೆಮ್ಮಾಡಿ

ಅನಿಸಿಕೆಗಳು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.