Skip to main content

INDIAN ಯಾಕೆ ಇಂಡಿಯನ್ ಅಲ್ಲ?

ಬರೆದಿದ್ದುAugust 24, 2013
2ಅನಿಸಿಕೆಗಳು

ಇಪ್ಪತ್ತು ವರ್ಷಗಳ ಹಿಂದಿನ ಮಾತಿರಬಹುದು. ಆಗ ಕೆಲವು ಪುಸ್ತಕ, ಸಂಯುಕ್ತ ಕರ್ನಾಟಕ, ಕಸ್ತೂರಿ ಮೊದಲಾದ ಪತ್ರಿಕೆಗಳಲ್ಲಿ ಪುಟಗಳ ಸಂಖ್ಯೆ, ಅಂಕೆಗಳು ಎಲ್ಲ ಕನ್ನಡ ಅಂಕೆಗಳಲ್ಲೇ ಬರುತ್ತಿತ್ತು. ಕಾಲಕ್ರಮೇಣ ಆ ಪತ್ರಿಕೆಗಳು ಎಲ್ಲ ಇಂಗ್ಲೀಷ್ ಅಂಕೆಗೆ ತಲೆಬಾಗಿದವು. ಇಂದು ಕನ್ನಡ ಅಂಕೆಗೆ ನಾವು ತಿಲಾಂಜಲಿ ನೀಡಾಗಿದೆ.

ಇತ್ತೀಚೆಗೆ ಇನ್ನೊಂದು ಟ್ರೆಂಡ್ ಕಾಣಿಸುತ್ತಿದೆ. ಅದೇನೆಂದರೆ ಕನ್ನಡ ಲಿಪಿಗೆ ಒಂದು ಗತಿ ಕಾಣಿಸುವ ಪ್ರಯತ್ನ!

ಇತ್ತೀಚೆಗೆ ಬಿಗ್ ಬಾಸ್ ಇರಬಹುದು ಅಥವಾ ಹೊಸದಾಗಿ ಆರಂಭವಾಗಿರುವ ಇಂಡಿಯನ್, ರೋಬೋ ಫ್ಯಾಮಿಲಿ ಮೊದಲಾದ ದಾರಾವಾಹಿಗಳ ಟೈಟಲ್ ಗಳಲ್ಲಿ ಕನ್ನಡ ಲಿಪಿಯನ್ನು ಕೈ ಬಿಟ್ಟಿರುವದು. ಕನ್ನಡದಲ್ಲೂ ಇಷ್ಟೇ ಆಕರ್ಷಕವಾಗಿ ಹೆಸರನ್ನು ಮಾಡಬಹುದಿತ್ತಲ್ವಾ? ನೆನಪಿಡಿ ನಾನು ಖಂಡಿತ ದಾರಾವಾಹಿಗೆ ಈ ಹೆಸರಿಟ್ಟದ್ದಕ್ಕೆ ಪ್ರಶ್ನಿಸುತ್ತಿಲ್ಲ. ಆದರೆ ಆ ಹೆಸರನ್ನು ಕನ್ನಡ ಲಿಪಿಯಲ್ಲಿ ಬರೆಯದೇ ಇಂಗ್ಲೀಷ್ ಲಿಪಿಯಲ್ಲಿ ಬರೆದುದಕ್ಕೆ ಮಾತ್ರ ನನ್ನ ಆಕ್ಷೇಪಣೆ. ಕಾಲಕ್ಕೆ ಅನುಗುಣವಾಗಿ ಹೊಸ ಶಬ್ಧ ಕನ್ನಡಕ್ಕೆ ಸೇರಿಸುವದರಲ್ಲಿ ತಪ್ಪಿಲ್ಲ. ಆದರೆ ಕನ್ನಡ ಲಿಪಿಯ ಬಗ್ಗೆ ನಿರ್ಲಕ್ಷತೆ ಯಾಕೆ?

ರೋಬೋ ಹಾಗೂ ಇಂಡಿಯನ್ ಅಕ್ಷರಗಳಿಗೆ ತೋರಿಸಿದ ಅದೇ ಕಾಳಜಿ ಕನ್ನಡ ಲಿಪಿಯಲ್ಲಿ ಬರೆದು ಅಕ್ಷರ ಶೈಲಿ ಬಳಸಿದ್ದರೆ ಇನ್ನೂ ಚೆನ್ನಾಗಿ ಕಾಣುತಿತ್ತು.

ಕೆಳಗೆ ನೀಡಿರುವ ಚಿತ್ರಗಳನ್ನು ಗಮನಿಸಿ. ಈ ಎರಡು ದಾರಾವಾಹಿಗಳ ಟೈಟಲ್ ಗಮನಿಸಿ. ಹೆಸರನ್ನು ಬರಿ ಇಂಗ್ಲೀಷ್ ಅಲ್ಲಿ ಬರೆದಿರಲು ವ್ಯಾವಾಹಾರಿಕ ಕಾರಣ ಇರಬಹುದು. ಅಥವಾ ಕನ್ನಡ ಭಾಷೆಯ ಮಿತಿಯೆ ಕಾರಣವೇ? ಕನ್ನಡ ಬಿಗ್ ಬಾಸ್ ಧಾರಾವಾಹಿ ಹೆಸರು ಹಾಗೆ ಇಂಗ್ಲೀಷ್ ಅಲ್ಲಿ ಬಳಸಿ ಅದರಲ್ಲಿ ಭಾಗವಹಿಸಿದವರ ಹೆಸರೂ ಇಂಗ್ಲೀಷ್ ಅಲ್ಲೇ ಬರೆದರೂ ಕನ್ನಡದಲ್ಲಿ ಇರದಿದ್ದ ಬಗ್ಗೆ ಯಾರೂ ಸೊಲ್ಲೆತ್ತಲಿಲ್ಲ! ಏನು ವಿಚಿತ್ರ. ಕನ್ನಡ ಸಂಘಟನೆಗಳು ಶಕ್ತಿ ಕಳೆದು ಕೊಂಡು ನಿರ್ಜೀವವಾಗಿವೆ ಅನ್ನುವದಕ್ಕೆ ಇದಕ್ಕಿಂತ ಬೇರೆ ಸೂಚನೆ ಬೇಕೆ?

ನಿಮ್ಮ ಅನಿಸಿಕೆ ಏನು?

 

ಕನ್ನಡಕ್ಕೆ ಅನ್ಯಾಯವಾಗುತ್ತಿದ್ದರೆ ನಾವು ಕೈಗೆ ಬಳೆ ತೊಟ್ಟು ಕೂರಲು ಬರುತ್ತದೆಯೇ? ಸುಮ್ಮನೆ ಪೇಂಟ್ ಅಲ್ಲಿ ಕನ್ನಡ ವರ್ಶನ್ ಮಾಡಿದ್ದೇನೆ. ಕ್ಷಮಿಸಿ ನನ್ನ ಬಳಿ ೩ಡಿ ಸಾಫ್ಟವೇರ್ ಇಲ್ಲ. ಅದರಲ್ಲಿ ಇನ್ನೂ ಚೆನ್ನಾಗಿ ಮಾಡಬಹುದು. ನೋಡಿ ಆನಂದಿಸಿ. ನಿಮ್ಮ ಅನಿಸಿಕೆ ತಿಳಿಸಲು ಮರೆಯದಿರಿ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

Chitra M V ಸೋಮ, 08/26/2013 - 16:43

ಲೇಖನ ಹಿಡಿಸಿತು.

ಮೊದಲು ಇಂಡಿಯನ್ ಅಂತ ಯಾಕೆ ಹೆಸರು ಇಟ್ಟಿರೋದು??  ಅಲ್ಲಿ ಎಲ್ಲಾ ರಾಜ್ಯದವರು ಭಾಗವಹಿಸಿದ್ದಾರೆಯೇ??  ಇಲ್ಲ.  ಅಲ್ಲಿರುವವರೆಲ್ಲ ಕರ್ನಾಟಕದವರಂತೆ ಅಂತ ನನ್ನ ಸಹುದ್ಯೋಗಿಯೊಬ್ಬರು ಹೇಳಿದರು.  ಆಗಲೇ ನನ್ನ ತಲೆಗೆ ಬಂದ ವಿಚಾರ "INDIAN" ಹೆಸರು ಯಾಕೆ ಅಂತ???  ಇನ್ನು ಎಲ್ಲಾ ಇಲ್ಲಿಯವರೆ ಆದಮೇಲೆ ಇಲ್ಲಿಗೆ ಸೂಕ್ತವಾಗಿರೋ ಹೆಸರನ್ನು ಇಡಬಹುದಿತ್ತೇನೋ.


ಜನ ಚೇಂಜ್ ಕೇಳ್ತಾರೆ.   ಬದಲಾವಣೆಯ ಸಮಯದಲ್ಲಿ ನೀವು ಕನ್ನಡ ಅಂತ  ಹೌಹಾರಿದರೆ ಹೇಗೆ? 

ಪಿಸುಮಾತು ಮಂಗಳ, 08/27/2013 - 21:30

ಮಾಧ್ಯಮಗಳವರಿಗೆ ಕನ್ನಡ ಭಾಷಾಭಿಮಾನ ಕಡಿಮೆಯಾಗುತ್ತಿದೆ. ಮೊದಲು ಸುವರ್ಣ ೨೪ ನವರು “ದೊಡ್ಡ ಸುದ್ದಿ“ ಎಂಬೆಲ್ಲಾ ಹೆಸರಿನೊಂದಿಗೆ ಸುದ್ದಿ ಪ್ರಸಾರ ಮಾಡುತ್ತಿದ್ದರು. ಆದರೆ ಈಗ ಅವನ್ನೆಲ್ಲಾ ಇಂಗ್ಲೀಷಿನಲ್ಲೆ ಪ್ರದರ್ಶಿಸಲಗುತ್ತೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.