Skip to main content

ಗೆದ್ದು ಬರುವರೆ ? ಸಿದ್ಧರಾಮಯ್ಯ?

ಇಂದ K.M.Vishwanath
ಬರೆದಿದ್ದುAugust 10, 2013
noಅನಿಸಿಕೆ

ಹಲವು ದಿನಗಳ ಕನಸ್ಸೊಂದು ನೆನಸಾಗಿ , ರಾಜಕೀಯ ಬಾಳಿನ ಕೂಸೊಂದು ಈಗ ಬೆಳಿದು ನಿಂತು ಈ ರಾಜ್ಯ ಆಳುವ ಕೆಲಸಕ್ಕೆ ಕೈ ಹಾಕಿದೆ ಈ ರಾಜ್ಯ ಈಗಾಗಲೇ ಹಲವು ಹಗರಣಗಳ ಆಗರವಾಗಿದೆ , ಎಲ್ಲರು ಭ್ರಷ್ಠರೆ ಎನ್ನುವ ಹಾಗೂ ಎಲ್ಲರು ಕಳ್ಳ ಖದೀಮರೆ ತುಂಬಿರುವ ಈ ರಾಜ್ಯ ರಾಜಕೀಯದಲ್ಲಿ ನಮ್ಮ ನೂತನ ಮಾನ್ಯ ಮುಖ್ಯ ಮಂತ್ರಿಗಳು ತಮ್ಮ ಅಸ್ತಿತ್ವ ಹೇಗೆ ಉಳಿಸಿಕೊಳ್ಳುವವರು ಎನ್ನುವುದು ಈಗ ವಿಶೇಷ .

ಪ್ರತಿಪಕ್ಷದಲ್ಲಿ ಈಗ ಘಟಾನು ಘಟಿ ರಾಜಕಾರಣಿಗಳನ್ನು ಹೊತ್ತು ನಿಂತ ವಿಧಾನಸೌಧ ಒಬ್ಬ ಮುಗ್ದ ಹಾಗೂ ಉತ್ತಮ ಮುಖ್ಯ ಮಂತ್ರಿಯನ್ನು ಹೇಗೆ ನಡೆಸಿಕೊಂಡೀತು ಎನ್ನುವ ಭಯ . ಈಗ ಸ್ಪಷ್ಟ ಎದುರಾಳಿಯಾಗಿರುವ ಹಾಗೂ ಈ ಮೊದಲು ಮೃಧು ಸ್ವಬಾವದ ಮಾನ್ಯ ಯಡಿಯೂರಪ್ಪರವರನ್ನೆ ಅಲ್ಲಾಡಿಸಿದ ಶ್ರೀ ಕುಮಾರ ಸ್ವಾಮಿಯಂತಹ ಕ್ಷಾಣಾಕ್ಷ ರಾಜಕಾರಣಿಯ ಮುಂದೆ ಮೃದು ಸ್ವಾಭಾವದ ಮೇರು ವ್ಯಕ್ತಿತ್ವದ ಸಿದ್ದು ತಮ್ಮ ರಾಜಕೀಯದಲ್ಲಿ ಗೆದ್ದು ಬರುವರೆ ಎನ್ನುವುದೆ ಕಾದು ನೋಡಬೇಕಿದೆ .

ಸಿದ್ಧರಾಮಯ್ಯನವರ ಇತಿಹಾಸದ ಬಗ್ಗೆ ಭಯವಿಲ್ಲ ಅವರು ಹೋರಾಟದ ಹಾದಿಯಿಂದ ತಮ್ಮ ಜನಬೆಂಬಲದಿಂದ ಆರಿಸಿ ಬಂದ ಜನನಾಯಕ ಅವರು ಜನರನ್ನು ನಂಬಿ ಅವರ ಪ್ರೀತಿಗೆ ಪಾತ್ರರಾದವರು ಅವರ ನಂಬಿಕೆ ಗಳಿಸಿದವರು ಹಿಂದೂಳಿದವರ ನಾಯಕರಾದರು ಎಲ್ಲರಿಗೂ ಏಕ ದೃಷ್ಠಿಯಿಂದ ನೋಡಿದ ಹಾಗೂ ಎಲ್ಲರ ಜನರ ಸಮಸ್ಯೆಗಳಿಗೆ ಸ್ಪಂದಿಸಿದ ರಾಜಕಾರಣಿ ತಮ್ಮ ಉತ್ತಮ ನುಡಿಗಳ ಮೂಲಕ ಜನಸೇವೆಯೆ ಮಾಡಿದ ಸಿದ್ದು ರೈತಪರ ಸಂಘಟನೆಗಳಿಂದ ಹೊರಬಂದ ಮಾಹಾನ್ ಮುತ್ಸ್ಸದ್ದಿ . ಆದರೂ ಈ ಕರಾಳ ರಾಜಕಾರಣ ಮತ್ತು ಇತ್ತಿಚಿಗೆ ನಡೆಯುತ್ತಿರುವ ಹಲವು ಚಟುವಟಿಕೆಗಳನ್ನು ಗಮನಿಸಿದರೆ ಸ್ವಲ್ಪ ಅಳುಕ ಉಂಟಾಗುತ್ತದೆ.

ಈಗಾಗಲೇ ಸೋತು ಸುಣ್ಣವಾಗಿರುವ ಮಾನ್ಯ ಯಡ್ಡಿಯವರು ಇದ್ದಾರೆ , ಹಳೆಯ ವೈಶಮ್ಯವಿರುವ ಮಾಜಿ ಪ್ರಧಾನಿ ದೇವೆಗೌಡರು ಇದ್ದಾರೆ , ಅಪ್ಪ ಮಗ ಎಲ್ಲಿ ಯಾವಾಗ ಏನು ಮಾಡುವವರೊ ಎನ್ನುವ ಭಯ ಅಷ್ಟೆ ಏಕೆಂದರೆ ಈಗ ಇರುವ ಸರಕಾರವನ್ನು ತೆಗಳುವ ಕೆಳಗಿಳಿಸುವ ಕೆಲಸ ಬಿಟ್ಟರೆ ಮಾನ್ಯರಿಗೆ ಬೇರಾವುದೆ ಕೆಲಸವಿಲ್ಲ . ಪ್ರತಿಪಕ್ಷದಲ್ಲಿ ಕೂತು ಸರಕಾರದ ಕಣ್ಣು ತೆರೆಸುವ ಕೆಲಸ ಮಾಡುತ್ತೀವಿ ಎಂದು ಹೇಳುವ ಇವರು ಸರಕಾರದ ಕಣ್ಣಲ್ಲಿ ಕಾರದ ಪುಡಿ ಹಾಕುವ ಕೆಲಸ ಮಾಡುವುದಿಲ್ಲ ಎನ್ನು ನಂಬಿಕೆಯಿಲ್ಲ. ಇಲ್ಲ ಸಲ್ಲದ ಹಗರಣಗಳನ್ನು ಹೊರಹಾಕಿ ಸರಕಾರಕ್ಕೆ ಕುತ್ತು ತರುವ ಕೆಲಸ ಮಾಡಲಾರರು ಎನ್ನುವ ನಂಬಿಕೆಯಿಲ್ಲ.

ಇನ್ನು ಹೈಕಮಾಂಡನ್ನೆ ಬಲವಾಗಿ ನಂಬಿರುವ ಕಾಂಗ್ರೇಸ್ ಪಕ್ಷದ ಎಲ್ಲ ಮುಖಂಡರು ನಡುವೆ ಖ್ಯಾತೆ ತೆಗೆಯುವುದಿಲ್ಲ ಎನ್ನುವ ನಂಬಿಕೆ ಎಲ್ಲಯವರೆಗೆ ತಿಳಿಯದು. ಈಗಾಗಲೇ ಹಲವು ಜನ ಮುಖ್ಯಮಂತ್ರಿ ಆಸೆಯಲ್ಲಿ ನಿರಾಸೆ ಅನುಭವಿಸಿ ತಮ್ಮ ಹಳೆಯ ಸ್ಥಾನಕ್ಕೆ ಮರಳಿದ್ದಾರೆ . ಲಿಂಗಾಯತ ಸಮುದಾಯ ಒಬ್ಬ ಕುರುಬ ಜನಾಂಗದ ಮುಖ್ಯ ಮಂತ್ರಿಯನ್ನು ಎಲ್ಲಿಯವರೆಗೆ ಸಹಿಸುವರು ಎನ್ನುವ ಲೆಕ್ಕಚಾರ ಕಾದು ನೋಡಬೇಕಿದೆ . ಹಲವರು ಮಂತ್ರಿಗಿರಿ ಸಿಗದೆ ಸದ್ಯಕ್ಕೆ ವಿಧಿಯಿಲ್ಲ ಎಂದು ಸುಮ್ಮನಾಗಿದ್ದಾರೆ. ಮುಂದೆ ಹೈಕಮಾಂಡ್ ಮೇಲೆ ಒತ್ತಡ ತರಲಾರರು ಎನ್ನುವ ಹಾಗಿಲ್ಲ. ಈಗ ಸಿದ್ದು ಮಂತ್ರಿಯಾಗಿದ್ದು ಸಾಕು ಈಗ ಲಿಂಗಾಯತ ಸಮುದಾಯದ ಪ್ರತಿನಿಧಿ ಶ್ಯಾಮನೂರ ರವರು ಹಿರಿಯರು ಅವರಿಗೆ ಕೊಡಿ ಎನ್ನುವ ಕಾಲ ಬರಬಹುದೆ? ಅದಕ್ಕೆ ಹೈಕಮಾಂಡ ಮಣಿಯದಿದ್ದರೆ ಹುಚ್ಚಾರಟ ರಾಜ್ಯದಲ್ಲಿ ಎದರಾಗುವುದೆ ಎಂದು ಕಾದು ನೋಡಬೇಕಿದೆ.

ಇನ್ನು ಪಕ್ಷದಲ್ಲಿ ಬಂಡಾಯ ಭುಗಿಲೇಳದೆ ಇರುವುದೆ . ಈಗಾಗಲೇ ಸಿದ್ಧರಾಮಯ್ಯ ಆಪರೇಷನ್ ಹಸ್ತ ಇಲ್ಲಾ ಎಂದು ಘೋಷಿಶಿಸಿದ್ದಾರೆ. ಆದರೆ ಇಲ್ಲಿರುವ ಜನ ಬೇರೆ ಪಕ್ಷಗಳ ಕದ ತಟ್ಟಲಾರರು ಎನ್ನುವ ನಂಬಿಕೆ ಇಂದಿನ ರಾಜಕಾರಣದಲ್ಲಿ ಉಳಿದಿಲ್ಲ. ಏಕೆಂದರೆ ಮೊನ್ನೆ ಮಾನ್ಯ ಖರ್ಗೆಯವರ ಆಯ್ಕೆಯೆ ಇದಕ್ಕೆ ತಕ್ಕ ಉದಾಹರಣೆ ಅಂತಹ ಸೋಲಿಲ್ಲದ ಸರದಾರನ ಸ್ಥಿತಿಗತಿಯೆ ಹೀಗಿರುವಾಗ ಸಿದ್ದು ಇನ್ನು ತುಂಬಾ ಚಿಕ್ಕವರು ಇವರಿಗೆ ಚಳ್ಳೆ ಹಣ್ನು ತಿನಿಸುವ ರಾಜಕೀಯ ನಡೆಯದೆ ಇರುವುದೆ ನಂಬಲು ಅಸಾದ್ಯವಾದ ಮಾತು .

ಮಾನ್ಯ ಸಿದ್ಧರಾಮಯ್ಯನವರು ಮೂಲ ಕಾಂಗ್ರೇಸ್ಸಿಗರು ಅಲ್ಲ ಎನ್ನು ಇನ್ನೊಂದು ವೀಕ್ ವಿಷಯ ಇದನ್ನೆ ಎದರು ಮಾಡಿಕೊಂಡು ಮೂಲ ವಲಸೆಗಾರರು ಖ್ಯಾತೆ ತೆಗೆಲಾರರು ಎನ್ನುವಂತಿಲ್ಲ. ಹಲವು ಹಿರಿಯ ಮೂಲ ಕಾಂಗ್ರೇಸ್ ನವರು ಈಗ ಸದ್ಯಕ್ಕೆ ಹೈ ಕಮಾಂಡ ಮುಂದೆ ಮಂಡಿ ಊರಿದ್ದಾರೆ . ಆದರೆ ಮುಂದೆ ಆ ಮಂಡಿ ಎತ್ತಿ ಚೆಂಡಿ ಅವತಾರೆ ತಾಳದೆ ಇರುವರೆ ಪಕ್ಷದ ಬದ್ಧತೆ ಕಾಯುವವರೆ ಎನ್ನುವ ಭರವಸೆ ಸಧ್ಯದ ರಾಜಕೀಯದಲ್ಲಿ ಮಾಡಲಾಗದು.

ಯಾವುದಕ್ಕು ಸಿದ್ಧು ರವರ ಜಾಣ ರಾಜಕೀಯ ಹಾಗೂ ಎಲ್ಲರನ್ನು ಈ ರಾಜಕೀಯ ದೋಣಿಯಲ್ಲಿ ಸಮವಾಗಿ ಕರೆದುಕೊಂಡು ಯಾರಿಗೂ ನೋವಾಗದಂತೆ ಅವರ ಪೂರ್ಣ ಅಧಿಕಾರದ ಅವಧಿ ಮುಗಿಸುವ ಶಕ್ತಿ ಈ ಹಿರಿಯ ಚೇತನಗೆ ಕೊಡಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುವೆ . ಹಲವು ಕಷ್ಟಗಳ ಮದ್ಯೆ ಎದ್ದು ಬಂದು ಸಿದ್ಧರಾಮಯ್ಯ ಗೆದ್ದು ಬರಬೇಕಾಗಿದೆ. ಅವರ ಇಚ್ಛಾಶಕ್ತಿಯಿಂದ ಹಲವು ಜನಮೆಚ್ಚುಗೆಯ ಕೆಲಸ ಮಾಡಬೇಕಿದೆ . ರಾಜ್ಯದ ಹಲವು ಸಮಸ್ಯೆಗಳನ್ನು ಅರೆತು ಅವುಗಳನ್ನು ಬಗೆಹರಿಸಬೇಕು. ನಮ್ಮ ನಾಡಿನ ಶರಣರ ಕನಸು ನೆನಸು ಮಾಡುವ ಶಕ್ತಿ ಆ ಶರಣರು ಮಾನ್ಯ ಮುಖ್ಯ ಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಕೊಡಲಿ ಎಂದು ಹಾಗೂ ಸಿದ್ಧು ರಾಜಕೀಯದ ಈ ಚದುರಂಗದ ಆಟದಲ್ಲಿ ಗೆದ್ದು ಬರಲಿ ಎಂದು ಹಾರೈಸುವೆ.


ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.