Skip to main content

ನೋಕಿಯಾದಿಂದ ೪೧ ಮೆಗಾ ಪಿಕ್ಸೆಲ್ ಕ್ಯಾಮರಾ ಫೋನು ಬಿಡುಗಡೆ - ಲುಮಿಯಾ ೧೦೨೦

ಬರೆದಿದ್ದುJuly 12, 2013
2ಅನಿಸಿಕೆಗಳು

ನೋಕಿಯಾ ತನ್ನ ಸಿಂಬಿಯನ್ ಆಪರೇಟಿಂಗ್ ಸಿಸ್ಟೆಮ್ ಬಿಟ್ಟು ವಿಂಡೋಸ್ ಫೋನ್ ೮ ಅನ್ನು ತನ್ನ ಸ್ಮಾರ್ಟ್ ಫೋನು ಆಪರೇಟಿಂಗ್ ಸಿಸ್ಟೆಮ್ ಎಂದು ಘೋಷಿಸಿದಾಗ ಅದಕ್ಕೆ ಅನೇಕ ಟೀಕೆ ಕೇಳಿ ಬಂದಿತ್ತು.ಅದರಲ್ಲಿ ಒಂದು ಗೂಗಲ್ ನ ಅಂಡ್ರಾಯಿಡ್ ಬಳಸಿ ಎನ್ನುವದು ಒಂದು. ಆದರೆ ನೋಕಿಯಾ ಮೊದಲು ಗೂಗಲ್ ಅಂಡ್ರಾಯಿಡ್ ಬಳಸಲು ಗೂಗಲ್ ಜೊತೆ ಚರ್ಚೆ ಮಾಡಿತ್ತು. ಗೂಗಲ್ ಹಾಕಿದ ಹಲವು ಕಂಡೀಶನ್ ಗಳು ಅದಕ್ಕೆ ಸರಿ ಬರಲಿಲ್ಲ. ಅದರಲ್ಲಿ ಒಂದು ಗೂಗಲ್ ಬ್ರಾಂಡ್ ಅನ್ನು ಫೋನ್ ಮೇಲೆ ಬರೆಯುವದು.


ಜಗತ್ತಿನ ಅತ್ಯುತ್ತಮ ಗುಣಮಟ್ಟದ ಮೊಬೈಲ್ ಹಾರ್ಡವೇರ್ ತಯಾರಕರಾದ ನೋಕಿಯಾಗೆ ಅವರ ಬ್ರ್ಯಾಂಡ್ ಜೊತೆ ಇನ್ನೊಂದು ಬ್ರಾಂಡ್ ಬಳಸುವದು ಇಷ್ಟ ಇರಲಿಲ್ಲ. ಮೈಕ್ರೊಸಾಫ್ಟ್ ಜೊತೆ ಒಪ್ಪಂದ ಮಾಡಿಕೊಂಡ ಅವರು ಸುಮಾರು ೨ ವರ್ಷಗಳ ಹಿಂದೆ ಲುಮಿಯಾ ೭೧೦, ೮೧೦, ೯೦೦, ೯೨೦ ಮೊದಲಾದ ಫೋನ್ ಬಿಟ್ಟಿತು. ವಿಂಡೋಸ್ ಫೋನ್ ೭ ಅಲ್ಲಿ ಕೆಲವು ಕೊರತೆ ಇದ್ದರೂ ಹಾರ್ಡ್ ವೇರ್ ಗುಣ ಮಟ್ಟದಿಂದಾಗಿ ನೋಕಿಯಾ ಫೋನು ಗಳು ಜನಪ್ರಿಯವಾದವು. ಆದರೆ ಸ್ಮಾರ್ಟ್ ಫೋನು ಒಟ್ಟು ಮಾರಾಟದಲ್ಲಿ ಪ್ರಮಾಣ ಕಡಿಮೆ ಇತ್ತು. ಈಗ ವಿಂಡೋಸ್ ಫೋನ್ ೮ ಬಂದಿದೆ. ನೋಕಿಯಾದ ೫೨೦, ೬೨೦, ೭೨೦,೯೨೦ ಹಾಗೂ ೯೨೮ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ಹೆಚ್ಚಿಸಿಕೊಂಡಿವೆ. ಹಲವು ದೇಶಗಳಲ್ಲಿ ಇದರ  ಮಾರುಕಟ್ಟೆ ಪಾಲು ೩೦% ವರೆಗೆ ಇದೆ.


ಇಂದು ನೋಕಿಯಾ ವಿಂಡೋಸ್ ಫೋನು ಮಾರುಕಟ್ಟೆಯಲ್ಲಿ ೮೦% ಕ್ಕೂ ಹೆಚ್ಚು ಪಾಲು ಹೊಂದಿದೆ.


ನಿನ್ನೆ ನೋಕಿಯಾ ಮಾರುಕಟ್ಟೆಯಲ್ಲಿ ೪೧ಮೆಗಾ ಪಿಕ್ಸೆಲ್ ಕ್ಯಾಮರಾ ಇರುವ ಲುಮಿಯಾ ೧೦೨೦ ಮೊದಲ ವಿಂಡೋಸ್ ಫೋನು ಅನ್ನು ಬಿಡುಗಡೆ ಮಾಡಿತು.


ಅದರ ಸ್ಪೆಸಿಪಿಕೇಶನ್ ಹೀಗಿವೆ



  • ೪೧ ಮೆಗಾ ಪಿಕ್ಸೆಲ್ ಕ್ಯಾಮರಾ

  • ಆಪ್ಟಿಕಲ್ ಇಮೇಜ್ ಸ್ಟೆಬಿಲೈಜೇಶನ್

  • ೬ ಲೆನ್ಸ್ ಜೆಸ್ ಆಪ್ಟಿಕ್ಸ್

  • ಲೆಇಡಿ ಫ್ಲ್ಯಾಶ್

  • ಕ್ಸೆನಾನ್ ಫ್ಲ್ಯಾಶ್

  • ೧.೨ಮೆಗಾ ಪಿಕ್ಸೆಲ್ ಕ್ಯಾಮರಾ ಮುಂದೆ

  • ೧೦೮೦ಪ್ ವಿಡಿಯೋ ಶೋಟಿಂಗ್

  • ೧.೫ಗಿಗಾ ಹರ್ಟ್ಜ್ ಡ್ಯುಯಲ್ ಕೋರ್ ಸಿಪಿಯು

  • ೨ಜಿಬಿ ರಾಮ್

  • ೩೨ಜಿಬಿ ಮೆಮರಿ (ಮೈಕ್ರೋ ಎಸ್ ಡಿ ಇಲ್ಲ)

  • ೪.೫ ಇಂಚಿನ ಕ್ಲಿಯರ್ ಬ್ಲ್ಯಾಕ್ ಅಮೋಲ್ಡ್ ಡಿಸ್ಪ್ಲೆ ೧೨೮೦ * ೭೬೮

  • ಬ್ಲ್ಯೂ ಟೂತ್, ಎನ್.ಎಫ್.ಸಿ, ವೈ.ಫೈ.,ಜಿಪಿಎಸ್, ೨ಜಿ/೩ಜಿ/೪ಜಿ ಸಪೋರ್ಟ್

  • ೨೦೦೦ ಎಂ ಎ ಎಚ್ ಬ್ಯಾಟರಿ.

  • ಹಳದಿ, ಬಿಳಿ ಹಾಗೂ ಕಪ್ಪು ಬಣ್ಣಗಳಲ್ಲಿ ಲಭ್ಯವಿದೆ.

ನೋಕಿಯಾ ಸ್ಮಾರ್ಟ್ ಫೋನು ರಂಗದಲ್ಲಿ ಸ್ಪರ್ಧೆ ನೀಡುತ್ತಿದೆ. ಇದು ಫಲ ನೀಡುವದೋ ಇಲ್ಲವೋ ಇದಕ್ಕೆ ಕಾಲವೇ ಉತ್ತರ ಹೇಳಬೇಕು. ಆದರೆ ಸಧ್ಯಕ್ಕೆ ಲುಮಿಯಾ ೧೦೨೦ ಜಗತ್ತಿನ ಅತ್ಯುತ್ತಮ ಕ್ಯಾಮರಾ ಹೊಂದಿರುವ ಫೋನು ಅನ್ನುವದರಲ್ಲಿ ಬೇರೆ ಮಾತಿಲ್ಲ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

prabhu ಶುಕ್ರ, 07/19/2013 - 22:10

ರಾಜೇಶ್ ಅವ್ರೆ ನೋಕಿಯಾ ಲುಮಿಯಾ-೧೦೨೦ರ ವಿವರ ಚೆನ್ನಾಗಿದೆ.ಬೆಲೆ ಎಷ್ಟು ಗೊತ್ತಾಗಲಿಲ್ಲ.ತಿಳಿಸಿದ್ರೆ ಚೆನ್ನಾಗಿತ್ತು.-ಡಾ.ಪ್ರಭು.ಅ.ಗಂಜಿಹಾಳ್.ಗದಗ.

ರಾಜೇಶ ಹೆಗಡೆ ಶುಕ್ರ, 07/19/2013 - 23:36

ನಮಸ್ಕಾರ ಪ್ರಭು ಅವರೇ,

ನೋಕಿಯಾ ೧೦೨೦ರ ಬೆಲೆ ಆರಂಭಿಕವಾಗಿ ೪೩೦೦೦ ಇರುವ ಸಾಧ್ಯತೆ ಇದೆ. ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ.

ಆದರೆ ಬಿಡುಗಡೆ ಆಗಿ ೬ ತಿಂಗಳಿಂದ ೧ ವರ್ಷಕ್ಕೆ ೩೫-೩೮ ಸಾವಿರಕ್ಕೆ ಇಳಿಯಬಹುದು.

ನೋಕಿಯಾ ಲುಮಿಯಾ ೧೦೨೦ರಲ್ಲಿ ತೆಗೆದ ಒಂದಿಷ್ಟು ಸ್ಯಾಂಪಲ್ ಚಿತ್ರ ಕೆಳಗೆ ಇದೆ. ಅಧ್ಬುತವಾಗಿವೆ. ಫುಲ್ ರಿಸಾಲ್ಯೂಶನ್ ಅಲ್ಲಿ ನೋಡಿ.

http://press.nokia.com/products/media/8350/photo/nokia-lumia-1020-pro-3/

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.