Skip to main content

ಮರೆತೇನೆಂದರ ಮರೆಯಲಿ ಹ್ಯಾಗ!

ಇಂದ Chaaya Karkera
ಬರೆದಿದ್ದುJune 16, 2013
noಅನಿಸಿಕೆ

ಉರುಳಿದವು ಬಾಲ್ಯದ ತುಂಟಾಟದ ದಿನಗಳು
ಅಮ್ಮನ ಮಡಿಲಲ್ಲಿ ಆಡಿದ ಸಿಹಿಯಾದ ಕ್ಷಣಗಳು
ಬದುಕು ಹೂವಂತೆ ಅರಳುತ್ತಿದ್ದ ನೆನಪುಗಳು
ಮನತುಂಬಿತ್ತು, ಬಣ್ಣ ಬಣ್ಣದ ಕನಸುಗಳು
ಜೊತೆಗೆ ಆ ಕನಸುಗಳಿಗೆ ಜೀವ ತುಂಬಬೇಕೆನ್ನುವ ಹುಮ್ಮಸ್ಸು
ಆ ದಿನಗಳ ನೆನಪ ಮರೆತೇನೆಂದರ ಮರೆಯಲಿ ಹ್ಯಾಗ...



ಮಳೆ ಬಂತೆಂದರೆ ಕೆಸರಲ್ಲಿ ಬಿದ್ದಾಡುವ ಹುಚ್ಚು
ಮನೆಗೆ ಬಂದಾಗ ಅಮ್ಮನ ನೋವಾಗದಂತಹ ಏಟು
ಹೆಣ್ಣು-ಗಂಡು ಭೇದವಿಲ್ಲದೆ ಕೈ ಕೈ ಹಿಡಿದು ಹುಲಿದನ ಆಡಿದ ಸವಿ ನೆನಪು
ಅಜ್ಜಿಯ ಕಥೆ, ಅಣ್ಣನಿಗೆ ಕೀಟಲೆ, ಅಕ್ಕನಿಗೆ ಮುತ್ತು
ರಾತ್ರಿಗೆ ಗುಮ್ಮ ಬಂದಾನ ಎಂದು ಅಮ್ಮ ಹೇಳುವ ಸುಳ್ಳು
ಮರೆತೇನೆಂದರ ಮರೆಯಲಿ ಹ್ಯಾಗ...


ಬದುಕೆಂದರೇನು ಎನ್ನುವ ಕಲ್ಪನೆಯೇ ಇರದೆ
ಕಾಮಧೇನಾಗಿತ್ತು ಅಮ್ಮನ ಮಮತೆ ನೋವು ತರದೆ
ತಂದೆಯ ಪ್ರೀತಿಯಲಿ ಬೆಳೆದೆ ಸುಪುತ್ರಿಯಾಗಿ
ನೋಡು ನೋಡುತ್ತಾ ಬಾಲ್ಯ, ವಿದಾಯ ಹೇಳಿತ್ತು ತಿಳಿಯದಾಗಿ
ಯವ್ವನ ಮಾಯೆಯಾಗಿ ಆವರಿಸಿದ್ದು
ಮರೆತೇನೆಂದರ ಮರೆಯಲಿ ಹ್ಯಾಗ...


ಯವ್ವನದ ಕುಡಿನೋಟ, ಜಗವೆಲ್ಲ ವಿಸ್ಮಯ
ಕಾಲೇಜಿನ ತರುಣ ತರುಣಿಯರ ಲೋಕ ಸ್ನೇಹಮಯ
ಅಣ್ಣನ ಹಿಡಿತ, ಅಪ್ಪನ ಓರೆನೋಟ
ಪಂಜರದ ಅರಗಿಣಿಯಂತೆ ಬೆಳೆದೆ ನಾನಾಗ.
ಬಯಸಿದಷ್ಟು ಸ್ವಾತಂತ್ರ್ಯ ಸಿಗದಿದ್ದರೂ ಆಕಾಶದಲಿ ಹಾರಾಡಿದ ಸಂತಸವ
ಮರೆತೇನೆಂದರ ಮರೆಯಲಿ ಹ್ಯಾಗ...


ಬದುಕನು ಹೇಳದೆ ಪ್ರವೇಶಿಸಿತು ಜವಾಬ್ದಾರಿ
ಅರಿತೆನು, ಅದುವೇ ಪ್ರಬುದ್ಧತೆಗೆ ದಾರಿ
ಮನದ ಹುಚ್ಚು ಬಯಕೆಗಳಿಗೆ ಕಡಿವಾಣ ತೋರಿ
ಹೆಣ್ಣಾಗಿ ನಾ ತಲುಪಬೇಕೆನ್ನ ಬದುಕ ಗುರಿ
ಬಾಲ್ಯದ ತುಂಟ ನೆನಪುಗಳು ಕಣ್ಣ ಹೊಡೆದವು ಮುಗುಳುನಗು ಬೀರಿ
ಆ ಕ್ಷಣವ ಮರೆತೇನೆಂದರ ಮರೆಯಲಿ ಹ್ಯಾಗ...

ಲೇಖಕರು

Chaaya Karkera

ಎಲ್ಲೆಲ್ಲೋ ಓಡುವ ಮನಸ್ಸೆ...!!!

ನಾನು ಸರಳ ಸ್ವಭಾವದವಳಾಗಿದ್ದು, ಸಾಂಪ್ರದಾಯಿಕ ಕುಟುಂಬದಿಂದ ಬಂದಿರುತ್ತೇನೆ. ಪ್ರಸಕ್ತವಾಗಿ ನಾನು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನೋಲಜಿ (MIT) ನಲ್ಲಿ ನನ್ನ ಸಂಶೋಧನಾಧ್ಯಯನವನ್ನು ಮಾಡುತ್ತಿರುವೆನು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.