Skip to main content

!!! ಮಾಧ್ಯಮಗಳು ಹಳ್ಳಿ ಜನರ ಸಮಸ್ಯೆಗಳತ್ತ ಗಮನಹರಿಸಲಿ !!!

ಇಂದ K.M.Vishwanath
ಬರೆದಿದ್ದುJune 1, 2013
noಅನಿಸಿಕೆ

ನಮ್ಮ ರಾಜ್ಯ ಹಾಗೂ ದೇಶದಲ್ಲಿ ಇಂದು ಎಲ್ಲವು ಸುಗಮವಾಗಿ ಸಾಗುತ್ತಿದೆಯೆ? ನಾವೆಲ್ಲ ಒಳ್ಳೆಯ ವಿಚಾರಗಳಲ್ಲಿ ಇದ್ದೇವೆಯೆ? ಈ ನಾಡು ಸಮೃದ್ಧಭರಿತವಾಗಿದೆಯೆ? ನಾವೆಲ್ಲ ಒಂದು ಒಳ್ಳೆಯ ಜೀವನ ಸಾಗಿಸಬಹುದೆ? ಎಂದು ಯಾವತ್ತು ಕೇಳಲು ಸಾದ್ಯವಾಗುತ್ತಿಲ್ಲ, ಇತ್ತಿಚಿಗೆ ಚುನಾವಣೆ ಬಂತು ಚುನಾವಣೆಯಲ್ಲಿ ಹಾಗಿರುತ್ತೆ ಹೀಗಿರುತ್ತೆ ಎನ್ನುವುದು ಮತ್ತು ಅದರ ಬಗ್ಗೆಯೆ ಚಿಂತನ ಮಂಥನ ಸೋಲು ಗೆಲುವು ಯಾರದೊ ಯಾವಾಗ ಆಗುತ್ತೊ ಆದರೆ ನಮ್ಮ ಮಾಧ್ಯಮ ಪ್ರತಿನಿಧಿಗಳು ಮಾತ್ರ ಅದನ್ನೆ ತೋರಿಸಿ ತೋರಿಸಿ ನಮ್ಮ ವಿಕ್ಷಕನಿಗೆ ಕೊಲ್ಲುತ್ತಾರೆ ಎನ್ನುವ ಲೆಕ್ಕಚಾರ ಬುಡಕೆಳಗೆ ಮಾಡಿದರು.


 


ಅಲ್ಲಿ ಚುನಾವಣೆ ನಡೆದರೆ , ಇಲ್ಲಿ ಕೂತು ಇವರು ಆಗಲೇ ಫಲಿತಾಂಶ ಪ್ರಕಟಿಸಿದ್ದರು. ನಾವೆ ಸರಿ ಹೇಳುತ್ತೇವೆ ನಾವು ಹೇಳಿದಂತೆ ಆಯಿತು ನಮ್ಮ ಉಹೆ ಸರಿಯಿದೆ ನಾವು ಭವಿಷ್ಯ ನುಡಿದ್ದಿದ್ದೇವೆ ಹೀಗೆ ಬರಿ ಗೊಂದಲಗಳ ಸೃಷ್ಠಿ ಮಾಡುವ ಕೆಲಸ ಈ ಮಾಧ್ಯಮಗಳು ಮಾಡಿದ್ದು ಅಷ್ಟೆ ಕಟುಸತ್ಯ . ಇನ್ನು ಎತ್ತಿ ಕಟ್ಟುವ ಬತ್ತಿ ಇಡುವ ಕೆಲಸ ಈ ಮಾಧ್ಯಮಗಳು ಮಾಡಿದ್ದು ಕಟು ಸತ್ಯವಾಗಿ ಗೋಚರಿಸುತ್ತದೆ. ಅಂದು ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿಯದ್ದು ತೋರಿಸಿ ತೋರಿಸಿ ಅವರ ಅವಹೇಳನ ಮಾಡಿ ಅವರು ಮಾಡಿದ ಅವಹೇಳನಾಕಾರಿ ಎಷ್ಟೊ ವಿಷಯಗಳು ಬರಿ ರಾಜಕೀಯ ಬಿಟ್ಟರೆ ಬೇರೆ ಯಾವುದೆ ಮಾತೆ ಇರಲಿಲ್ಲ ಒಂದು ಬಾರಿ ವಿಕ್ಷಕರಿಗೆ ನೋಡಿ ನೋಡಿಯೆ ಬೇಜಾರಾಗುವ ಕಾಲ ಅದಾಗಿತ್ತು ಆ ಸಮಯದಲ್ಲಿ ಯಾವ ಚಾನಲ್ ಹಾಕಿದರು ನಮಗೆ ದೊರಿಯುವುದು ರಾಜಕೀಯ ವಿಷಯಗಳು ಮಾತ್ರ ಈ ಮಾಧ್ಯಮಗಳು ಕೆಟ್ಟದ್ದು ಮಾತ್ರ ಹುಡುಕುತ್ತಿವೆ ಒಳ್ಳೆಯದು ಇವರ ಕಣ್ಣಿಗೆ ಕಾಣಲೇ ಇಲ್ಲ ಇರುವ ಚಿಕ್ಕ ವಿಷಯಕ್ಕೆ ಬಣ್ಣ ಹಚ್ಚಿ ಹೇಳುವ ಅವರ ಆ ಪರಿ ಸಾಮಾನ್ಯ ಜನರಿಗೆ ತಿಳಿಯದೆ ಹೋದ ಎಷ್ಟೊ ವಿಚಾರಗಳಿಗೆ ಮನ್ನಣೆ ಸಿಗಲೇ ಇಲ್ಲ.


 


ಇಷ್ಟು ದಿನ ಬಿಜೆಪಿಯವರಿಗೆ ಕತ್ತಿ ಹಿಡಿದು ಬತ್ತಿ ಇಡುತ್ತ ಅವರ ಅವಹೇಳನವನ್ನು ಮಾಡಿ ಯಡ್ಡಿ , ಸದಾ, ಶೆಟ್ಟರ ಹೀಗೆ ಈಡಿ ಬಿಜೆಪಿ ಜನರನ್ನೆ ಟಾರಗೆಟ್ ಮಾಡಿ ವಿಚಿತ್ರ ಪ್ರಶ್ನೆಗಳನ್ನು ಹಾಕುತ್ತ ಇದ್ದ್ದುದ್ದು ಹೇಳಿ, ಇಲ್ಲದ್ದು ಹೇಳಿ ಮಾಡುವ ಕೆಲವು ಒಳ್ಳೆಯ ಕೆಲಸಗಳಿಗೆ ಮಣ್ಣು ಹಾಕಿ ಕೊಳ್ಳೆ ಹೊಡಿಯಲಾಯಿತು . ಈಗ ಸದ್ಯ ಮಾನ್ಯ ಕಾಂಗ್ರೇಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಇನ್ನು ಮುಂದೆ ಇವರ ಪಾಡು ಅದೇ ಆಗುವುದೆ ಎನ್ನುವ ಲೆಕ್ಕಚಾರ ಪ್ರಾರಂಭವಾಗಿದೆ ಇವರಿಗೇನು ಮಾಡುವರೊ ತಿಳಿಯದು ಹೇಗೆ ಟಾರ್ ಗೇಟ್ ಮಾಡುವರು ತಿಳಿಯದು


 


ಈಗಾಗಲೇ ಈ ಮೊದಲು ಈ ಕತ್ತಿ ಹಿಡಿದು ಬತ್ತಿ ಇಡುವ ಕೆಲಸ ಪ್ರಾರಂಭಿಸಿದ್ದು ಮುಖ್ಯಮಂತ್ರಿ ಸ್ಥಾನಕ್ಕೆ ಪೈಪೋಟಿ ನಡೆದಾಗ ಮಾನ್ಯ ಖರ್ಗೆಯವರಿಗೆ ವರ್ಚೆಸಿಲ್ಲ ಅವರು ಬಹುತೇಕ ದಲಿತರ ಪ್ರತಿನಿಧಿ ಹಾಗಾಗಿ ಮುಖ್ಯಮಂತ್ರಿ ಸ್ಥಾನ ಸಿಗುವುದು ಖಚಿತವಿಲ್ಲ ಎಂದು ಒಂದು ಕಡೆ ಇವರು ಒಬ್ಬ ಹಿರಿಯ ರಾಜಕಾರಣಿ ಇವರಿಗೆ ಮುಖ್ಯಮಂತ್ರಿ ಸ್ಥಾನ ಸಿಕ್ಕೆ ಸಿಗುತ್ತೆ ಅವರ ಸಾಧನೆಯೆ ಅವರ ದಾರಯಾಗಲಿವೆ ಹೀಗೆ ಇನ್ನು ಆಗುವ ಮುನ್ನೆವೆ ವಿಚಿತ್ರ ಗಾಳಿ ಎಬ್ಬಿಸುವ ಕೆಲಸ ಈ ಮಾಧ್ಯಮದವರು ಮಾಡಿದರು


 


ಇನ್ನು ಸಿದ್ಧರಾಮಯ್ಯ ಮಾಸ್ ಲೀಡರ್ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎನ್ನುವ ವಿಚಾರ ಜನರಿಗಿಂತ ಮೊದಲು ಎತ್ತಿದ್ದು ಮಾನ್ಯ ಮಾಧ್ಯಮದವರು ಅವರು ವಲಸಿಗರು ಎಲ್ಲಿ ಎಡುವುದು ಎನ್ನುವ ವಿಚಾರ ಅವರು ಕುರುಬ ಜನಾಂಗವನ್ನು ಮಾತ್ರ ಪ್ರತಿನಿಧಿಸುವರು ಎನ್ನುವ ವಿಚಾರ ಆವರ ಮಾತು ಹೈಕಮಾಂಡ ತಳ್ಳಿಹಾಕುವುದಿಲ್ಲ ಹೀಗೆ ಎಲ್ಲರಿಗೂ ಹಾದಿ ತಪ್ಪಿಸುವ ಕೆಲಸ ಈ ಮಾಧ್ಯಮದ ಮಂದಿ ಮಾಡಿದ್ದಾರೆ


 


ಡಿ ಕೆ ಶಿವುಕುಮಾರ ಯಾವುದೆ ಅಕ್ರಮ ಎಸಗಿಲ್ಲ ಅವರು ಮೂಲ ಕಾಂಗ್ರೇಸ್ ನವರು ಅವರಿಗೆ ಸಚಿವ ಸ್ಥಾನ ಕೊಡಿ ಎನ್ನುವ ವಿಶೇಷ ಬತ್ತಿ ಇಡುವ ಕೆಲಸ ಇತ್ತಿಚಿಗೆ ಈ ಮಾಧ್ಯಮಗಳು ಮಾಡಿವೆ . ಯಾರನ್ನು ಯಾವ ರೀತಿ ವರ್ಣಿಸಬೇಕು ಎನ್ನುವ ವಿಚಾರ ಹೇಗೆ ನಿರ್ಧರಿಸುತ್ತಿದ್ದರು ಎನ್ನುವ ವಿಚಾರ ಅಳೆಯಲು ಸಾದ್ಯವಿಲ್ಲ ಎನ್ನುವ ಪರಿ ತಿಳಿಯದು


 


ಇನ್ನು ಶ್ಯಾಮನೂರುರವರು ಲಿಂಗಾಯತರ ಪ್ರತಿನಿಧಿ ಅವರು ಮುಖ್ಯಮಂತ್ರಿ ಆಕಾಂಕ್ಷಿ ಅವರನ್ನು ಆ ಸ್ಥಾನಕ್ಕೆ ಪೈಪೋಟಿ ಮಾಡುವವರು ಎನ್ನುವ ಕತ್ತಿ ಹಿಡಿದು ಬತ್ತಿ ಹಚ್ಚಿ ಲಿಂಗಾಯತರಲ್ಲಿ ವಿಚಿತ್ರವಾದ ಜಗಳ ಹಚ್ಚುವ ಲೆಕ್ಕಚಾರ ಮಾಡಿದ ಶ್ರೇಯಸ್ಸು ಈ ಮಾಧ್ಯಮ ಮಿತ್ರರಿಗೆ ಸಲ್ಲುತ್ತದೆ .


 


ಮಾನ್ಯ ಮಾಧ್ಯಮದವರೆ ನೀವು ಬರಿ ರಾಜಕೀಯ ವಿಚಾರಗಳನ್ನು ಮಾತ್ರ ಪ್ರತಿಬಿಂಬಿಸದೆ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಈ ನಮ್ಮ ರಾಜಕಾರಣಿಗಳಿಗೆ ತೋರಿಸಬೇಕಾದ ಕೆಲಸ ಆಗಬೇಕು. ನಿಮ್ಮಿಂದ ಜನರ ಅಳಲು ನಮ್ಮ ಮುಖ್ಯಮಂತ್ರಿಗಳಿಗೆ ಮುಟ್ಟಬೇಕು ಇರುವ ಹತ್ತಾರು ಸಮಸ್ಯೆಗಳು ಬಗೆಹರಿಯಬೇಕು ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕು ಸಮಾಜದ ಪ್ರತಿಬಿಂಬವಾಗಿ ಕೆಲಸ ಮಾಡಬೇಕಾದ ಅಗತ್ಯ ಅನಿವಾರ್ಯವಿದೆ .
ಗುಲಬಗಾ೯, ರಾಯಚೂರು, ಯಾದಗಿರಿ , ಬಳ್ಳಾರಿಯ ಎಷ್ಟೊ ಊರಿನಲ್ಲಿ ಕುಡಿಯೋ ನೀರಿಲ್ಲ, ಬಳಸುವುದು ಅಂತು ದೂರಾ ಉಳಿತು ಬದುಕುವ ದಾರಿ ನೀರು ಅದೆ ಇಲ್ಲದೆ ಬದುಕಿರುವ ಜನರ ನೀರಿನ ಸಮಸ್ಯೆ ಪ್ರತಿಬಿಂಬಿಸಿ ನಮ್ಮ ಜನ ದೂರದಿಂದ ನೀರು ಹೊತ್ತು ತಂದು ತಂದು ಬೇಸತ್ತಿದ್ದಾರೆ. ನಮ್ಮ ಹೆಣ್ಣುಮಕ್ಕಳು ಸೊಂಟ ನೋವು ಮಾಡಿಕೊಂಡು ಸಾಗುತ್ತಿದ್ದಾರೆ. ತಮ್ಮ ಬದುಕಿನ ಸಂಭ್ರಮ ಮರೆತು ಈ ಸಮಸ್ಯೆಗಳ ಜಾಡಿನಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ . ನೀರಿನ ಸಮಸ್ಯೆ ನಮ್ಮ ರಾಜ್ಯದ ಮೂಲ ಸಮಸ್ಯೆ ಕಾವೇರಿ ಕೊಡದೆ ಕ್ಯಾತೆ ತೆಗೆಯುತ್ತಿರುವ ತಮಿಳುನಾಡು ನಮ್ಮ ಜೊತೆಗೆ ನೀರಿನ ಆಟ ಆಡುತ್ತಿರುವ ವಿಷಯದ ಅರಿವು ಮೂಡಿಸಿ ನಮ್ಮ ಸಾಮಾನ್ಯ ಜನರಲ್ಲಿ ಆಗ ನಮ್ಮ ಜನಕ್ಕೆ ನಿಮ್ಮ ಮಾಧ್ಯಮದ ಮೇಲೆ ನಂಬಿಕೆ ಮೂಡುತ್ತದೆ.


 


ಉತ್ತಮ ರಸ್ತೆಯ ಸಂಚಾರ ವ್ಯವಸ್ಥೆಯಿಲ್ಲದೇ ಕಾಲುದಾರಿಯಲ್ಲೇ ಓಡಾಡ್ತಿದ್ದಾರೆ ಅದೆಷ್ಟು ಗ್ರಾಮಗಳು ಇನ್ನು ಒದ್ದಾಡುತ್ತಿವೆ ಹೋರಾಟ ಚೀರಾಟ ನಡೆಯುತ್ತಿದೆ. ಆದರೆ ಅಂತಹ ಚೀರಾಟಗಳು ಈ ಮಾಧ್ಯಮದವರ ಕಣ್ಣಿಗೆ ಯಾಕೆ ಬೀಳುವುದಿಲ್ಲ ಎನ್ನುವುದು ಗಂಭೀರವಾದ ಪ್ರಶ್ನೆ ಕರೆಂಟ್ ಕೈ ಕೊಟ್ಟು ಅನೇಕ ಹಳ್ಳಿಯ ಮಕ್ಕಳು ಓದುವ ಸಮಯ ಹಾಳು ಮಾಡುತ್ತಿದೆ. ಅವರ ಈ ಗೋಳು ಕೇಳುವವರು ಯಾರು ಅದನ್ನು ಎಷ್ಟು ಬಿಂಬಿಸಿದ್ದೀರಿ ಮಾಧ್ಯಮದವರು ತಿಳಿಸಿ ,ಇನ್ನು ಕೆಲವು ಹಳ್ಳಿಗಳಲ್ಲಿ ಈ ಕರೆಂಟ್ ಸ್ಥಿತಿ ತುಂಬಾ ಶೋಚನೀಯವಾಗಿದೆ ಕೆಲ ಹಳ್ಳಿಗಳು ಆ ಕರೆಂಟ್ ಕಂಬಗಳು ಕಾಣದೆ ಬಿಕೊ ಎನ್ನುತ್ತಿವೆ .


 


ಇಂತಹ ಅನೇಕ ವಿಷಯಗಳ ಕುರಿತು ಚರ್ಚೆ ನಡೆಯಲಿ ಇವು ನಮ್ಮ ರಾಜ್ಯದ ಅತ್ಯಂತ ಗಂಭೀರ ಪರಿಸ್ಥಿತಿ ಇವುಗಳ ಬಗ್ಗೆ ಗಂಭೀರವಾದ ಗಹನವಾದ ಚಚೆ೯ ಮಾಡಿ ಆಯಾ ಪ್ರತಿನಿಧಿಗಳ ಮುಂದೆ ಕ್ಯಾಮರಾ ಹಿಡಿದು ಅವುಗಳ ಸಮಸ್ಯೆಗಳ ಮೇಲೆ ನಿಮ್ಮ ಮಾಧ್ಯಮದ ಬೆಳಕು ಚೆಲ್ಲಿ ಅವರ ಸ್ಥಾನದ ನೈಜ ಕರ್ತವ್ಯದ ವಿಷಯ ತಿಳಿಸಿ ಎಲ್ಲರಲ್ಲಿಯು ಕೆಲಸ ಮಾಡಬೇಕು ನೈಜ ಸಮಸ್ಯೆ ಇದೆ ಎನ್ನುವ ಲೆಕ್ಕಚಾರ ಹಾಕುವಂತಹ ಕಾರ್ಯಕ್ರಮ ಹಾಕಿಕೊಳ್ಳಿಮಾಧ್ಯಮ ಈ ಸಮಾಜದ ಕಣ್ಣು ಎನ್ನುವ ವಿಚಾರ ಮರೆಯಬೇಡಿ ನಿಮ್ಮಿಂದಲೇ ಈ ಸಮಾಜದ ಹಲವು ಸಮಸ್ಯೆಗಳು ಜನರಿಗೆ ಮುಟ್ಟಲಿವೆ ಜೊತೆಗೆ ಅನೇಕ ಯೋಜನೆಗಳ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರವಾಗಲಿ ಇದರಿಂದ ಜನರಲ್ಲಿ ಯೋಜನೆಗಳ ಮಾಹಿತಿ ಮೂಡಿ ಅದರ ಲಾಭ ಪಡೆಯುವಂತೆ ಅವಕಾಶವಾಗುವುದು. ನಮ್ಮ ಸರ್ಕಾರದಲ್ಲಿ ಎಷ್ಟೊ ಯೋಜನೆಗಳು ನಮ್ಮ ಸಾಮಾನ್ಯ ಜನರ ಕಿವಿಗೆ ಬೀಳುವ ಮುನ್ನವೆ ಮುಗಿದು ಹೋಗಿವೆ ದಯವಿಟ್ಟು ಮಾಧ್ಯಮ ಮಿತ್ರರೆ ನೀವು ನಿಮ್ಮ ಜವಾಬ್ದಾರಿ ಅರಿತು ಕೆಲಸ ಈ ಸಾಮಾಜಕ್ಕೆ ಒಂದು ಒಳ್ಳೆಯ ಕೆಲಸ ಮಾಡಿ. ತಾವು ದಯಮಾಡಿ ಈ ನಾರದ ಮುನಿಗಳಂತೆ ಆ ರಾಜಕಾರಣಿ ಹೀಗೆ ಮಾತಾಡಿದ ಇವನು ಹೀಗೆ ಮಾತಾಡಿದ ಇವಳು ಅವನೊಂದಿಗೆ ಸಂಬಂಧವಿದೆ ಇವನದು ಅವಳೊಂದಿಗೆ ಎನ್ನುವ ಲೆಕ್ಕಚಾರ ಬಿಡಿ ಕೆಲವರ ವೈಯಕ್ತಿಕ ವಿಚಾರಗಳಿಂದ ನಮ್ಮ ಸಾಮಾನ್ಯ ಜನರ ಬದುಕು ಹಸನಾಗುವುದಿಲ್ಲ ನಮ್ಮ ಹಳ್ಳಿ ಜನರ ಬದುಕು ಸಮಸ್ಯೆ ಸುಧಾರಿಸುವುದಿಲ್ಲಇನ್ನು ಮುಂದಾದರು ಬರಿ ರಾಜಕೀಯ ರಾಜಕಾರಣ ಎಂದು ಅವರ ಮುಂದೆ ನಿಂತು ಮೈಕ್ ಹಿಡಿದು ಅವರನ್ನು ಇಲ್ಲದ ಸಲ್ಲದ ಪ್ರಶ್ನೆಗಳನ್ನು ಕೇಳಿ ಹಾದಿ ತಪ್ಪಿಸುವ ಕೆಲಸ ಮಾಡಬೇಡಿ ಅದರಿಂದ ಯಾವ ಲಾಭವು ಇಲ್ಲ ಅವರಿಗೂ ಪ್ರಚಾರವೆಂದರೆ ಅದರಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳುವ ತಟ್ಟ ರಾಜಕಾರಣಿಗಳ ನಾಡು ನಮ್ಮದು ಅವರನ್ನು ಬಿಟ್ಟು ದಯಮಾಡಿ ಮಾಧ್ಯಮ ಮಿತ್ರರೆಲ್ಲ ನಮ್ಮ ಹಳ್ಳಿ ಕಡೆಗೆ ನಿಮ್ಮ ಕ್ಯಾಮರಾ ಕಣ್ಣು ತಿರುಗಿಸಿ ಅಲ್ಲಿನ ನೈಜ ಸಮಸ್ಯೆಗಳತ್ತ ಬೆಳಕು ಚೆಲ್ಲಿ ಮಾಧ್ಯಮದ ಅರ್ಥ ಕೆಡಿಸಬೇಡಿ.


 


ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.


ಲೇಖಕರು , ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪುರಸ್ಕೃತರು .

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.