Skip to main content

!!! ಸಮನ್ವಯ ಶಿಕ್ಷಣ ಸಮರ್ಕವಾಗಿ ಬಳಕೆಯಾಗಲಿ !!!

ಇಂದ K.M.Vishwanath
ಬರೆದಿದ್ದುJune 1, 2013
noಅನಿಸಿಕೆ

ಈ ದೇಶ ವಿವಿಧತೆಯಲ್ಲಿ ಏಕತೆ ಸಾಧಿಸಿರುವ ದೇಶ , ನಾವೆಲ್ಲ ಒಂದೆ ಎಂದು ಸಾರಿರುವ ದೇಶ, ಶಿಕ್ಷಣ ತನ್ನದೇ ಆದ ಇತಿಹಾಸ ಹೊಂದಿದ್ದು ಅನೇಕ ರೀತಿಯಲ್ಲಿ ಬದಲಾವಣೆ ತರುತ್ತಾ ಪ್ರತಿಯೊಬ್ಬರನ್ನು ಮುಖ್ಯವಾಹಿನಿಗೆ ತರುವತ್ತ ಗಮನ ಹರಿಸಲಾಗುತ್ತಿದೆ . ಈ ಸಮಾಜದ ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆಯಬೇಕು ಎನ್ನುವುದು ಮುಖ್ಯ ಉದ್ಧೇಶ.


 


ಮಕ್ಕಳು ಬೆಳಿದು ಈ ನಾಡು ಆಳುವ ನಾಯಕರಾಗುವ ಕಾಲವಿದು ಅವರ ಶ್ರೇಯಸ್ಸಿನ ಮೇಲೆ ನಮ್ಮ ದೇಶದ ಭವಿಷ್ಯ ನಿಂತಿದೆ. ತಮ್ಮ ದೈಹಿಕ ಹಾಗೂ ಮಾನಸಿಕ ಸ್ಥಿತಿಗತಿ ಚೆನ್ನಾಗಿರುವ ಮಕ್ಕಳು ಕಲಿಯುವುದಕ್ಕು , ಕೆಲವು ದೋಷವುಳ್ಳ ಮಕ್ಕಳು ಕಲಿಯುವುದಕ್ಕು ತುಂಬಾ ವ್ಯತ್ಯಾಸಗಳಿರುತ್ತವೆ .


 


ಅದನ್ನು ಮನಗಂಡ ಸರ್ಕಾರ ಚಿಂತನೆ ಮಾಡಿ ಮಕ್ಕಳನ್ನು ಈ ರೀತಿ ಗುರುತಿಸಿ ಅವರ ಶ್ರೇಯೊಭೀವೃದ್ಧಿಗೆ ಶಿಕ್ಷಣ ತಜ್ಞರು ಸಮನ್ವಯ ಶಿಕ್ಷಣವನ್ನು ಜಾರಿಗೆ ತಂದು ವಿಶೇಷ ಅಗತ್ಯವುಳ್ಳ ಮಕ್ಕಳ ಶಿಕ್ಷಣದ ಕಡೆಗೆ ಗಮನಕೊಡಲು ನಿರ್ಧರಿಸಿದ್ದಾರೆ.


ಹಾಗಾದರೆ ಈ ಸಮನ್ವಯ ಶಿಕ್ಷಣ ಎಂದರೆ ಏನು ? ಗ್ರಾಮೀಣ ಮಕ್ಕಳ ಪಾಲಿಗೆ ಅದರ ರುಚಿ ಸಿಕ್ಕಿದಿಯೆ ? ಎಂಬ ಹತ್ತು ಹಲವು ಪ್ರಶ್ನೆಗಳು ಎದುರಾಗುತ್ತವೆ. ಅವುಗಳ ನೈಜ ಹುಡುಕಾಟವೆ ನನ್ನದು .


 


ಸಮನ್ವಯ ಶಿಕ್ಷಣದ ಅರ್ಥ: ವಿಶೇಷ ಅಗತ್ಯವುಳ್ಳ ಮಕ್ಕಳು ಸಹ ಇತರೆ ಮಕ್ಕಳಂತೆ ಬೆಳೆಯಲು , ವಿಕಾಸ ಹೊಂದಲು ಸಹಾಯಕವಾಗುವ ಪರಿಸರವನ್ನು ಒದಗಿಸಬೇಕು. ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಸಾಮಾನ್ಯ ಶಾಲಾ ತರಗತಿಗಳಲ್ಲಿ ಇತರೆ ಮಕ್ಕಳಿಗೆ ನೀಡುವಂತಹ ಶೈಕ್ಷಣಿಕ ಸೌಲಭ್ಯ ಮತ್ತು ಅನುಭವವನ್ನು ಒದಗಿಸುವುದರ ಜೊತೆಗೆ ಪೂರಕ ಚಟುವಟಿಕೆಗಳನ್ನು ಕೈಗೊಂಡು ಇತರೆ ಮಕ್ಕಳಂತೆಯೆ ಈ ಮಕ್ಕಳಿಗೂ ಸಹ ಕಲಿಯಲು ಸಾದ್ಯವಾಗುವಂತಹ ವಾತಾವರಣ ಒದಗಿಸುವುದು.


 


ಸಮನ್ವಯ ಶಿಕ್ಷಣದ ಗುರಿ : ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣದ ನಿಟ್ಟಿನಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶವನ್ನು ಹೆಚ್ಚಿಸುವುದು ಮತ್ತು ಸೂಕ್ತ ಪರಿಸರದಲ್ಲಿ ಎಲ್ಲರಿಗೂ ಶಿಕ್ಷಣ ನೀಡುವುದು.


 


ವ್ಯಾಪ್ತಿ :


ಸಮನ್ವಯ ಶಿಕ್ಷಣವು ಎಲ್ಲಾ ರೀತಿಯ ಮಕ್ಕಳನ್ನು ಒಳಗೊಂಡಿರುತ್ತದೆ. ಆದರೆ ಅತೀ ತೀವ್ರ ಬುದ್ಧಿಮಾಂದ್ಯ ಮೆದುಳಿನ ಪಾಶ್ವರ್ವಾಯು ,ಆಟಿಸಂ ಮತ್ತು ಬಹುವಿಧ ಅಂಗವಿಕಲತೆ ಹೊಂದಿದವರನ್ನು ಸಮನ್ವಯ ಶಿಕ್ಷಣದ ಅಡಿಯಲ್ಲಿ ತರಲು ಸಾದ್ಯವಾಗುತ್ತಿಲ್ಲಾ. ಏಕೆಂದರೆ ಇಂತಹ ಮಕ್ಕಳಿಗೆ ಕಲಿಕೆ ಮತ್ತು ಗೃಹಿಕೆಯ ಸಾಮರ್ಥ್ಯ ಅತ್ಯಂತ ತಳಮಟ್ಟದಲ್ಲಿ ಇರುತ್ತದೆ. ಇವರನ್ನು ಇತರ ಮಕ್ಕಳೊಂದಿಗೆ ಸಮನ್ವಯಗೊಳಿಸಿ ಶಿಕ್ಷಣ ನೀಡಲು ಸಾಧ್ಯವಾಗುವುದಿಲ್ಲಾ. ಇಂತಹ ಮಕ್ಕಳಿಗೆ ಗೃಹಾದಾರಿತ ಶಿಕ್ಷಣ ನೀಡಬಹುದು. ಇದು ಮಗುವುವಿನ ಜೀವನದ ಕೆಲವು ಪ್ರಾಥಮಿಕ ಕೌಶಲ್ಯಗಳನ್ನು ನೀಡಲು ವ್ಯವಸ್ಥೆಗೊಂಡಿದೆ ಹಾಗೂ ಪೋಷಕರಿಗೆ ಅರಿವನ್ನು ಮೂಡಿಸಲಾಗುತ್ತದೆ.


ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಅಗತ್ಯವಾದ ಎಲ್ಲಾ ರೀತಿಯಾ ಕಲಿಕೋಪಕರಣ ಹಾಗೂ ಸಾಧನ ಸಾಮಾಗ್ರಿಗಳನ್ನು ಒದಗಿಸಲು ಸಾಧ್ಯವಾಗದಿರಬಹುದು. ಆದ್ಯಾಗೂ ಸ್ಥಳೀಯ ಲಭ್ಯ ಉಪಕರಣ ಬಳಸಿ ಎಲ್ಲಾ ಮಕ್ಕಳಿಗೆ ಕಲಿಕೆ ಉಂಟುಮಾಡಬಹದು .


ಎಲ್ಲಾ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ಸಾಮಾನ್ಯ ಶಾಲೆ, ಸಾಮಾನ್ಯ ಶಿಕ್ಷಕರು/ರೂಪುಗೊಂಡಿರುತ್ತಾರೆ.


ಸ್ಥೂಲವಾಗಿ ಎಲ್ಲಾ ಚಟುವಟಿಕೆಗಳನ್ನು ಎಲ್ಲಾ ಮಕ್ಕಳಿಗೆ ಒದಗಿಸಿ ಮಗುವನ್ನು ಒಂದು ನೀರಿಕ್ಷಿತ ಮಟ್ಟಕ್ಕೆ ತಲುಪುವಂತೆ ವ್ಯವಸ್ಥೆಗೊಳಿಸುವುದು ಸಮನ್ವಯಶಿಕ್ಷಣದ ಆಶೆಯವಾಗಿದೆ. ಈ ಹಿನ್ನಲೆಯಲ್ಲಿ ಪ್ರತಿ ಮಗುವು ಭಾಗವಹಿಸುವಂತಹ ಚಟುವಟಿಕೆಗಳನ್ನು ರೂಪಿಸುವುದು ಸವಾಲಾದರೂ - ಕಾರ್ಯರೂಪಕ್ಕೆ ತರುವುದು ಅನಿವಾರ್ಯ್ಯವಾಗಿದೆ.


 


ಉದ್ದೇಶಗಳು:


ವಿಶೇಷ ಅಗತ್ಯವುಳ್ಳ ಮಕ್ಕಳು ಸಾಮಾನ್ಯ ಮಕ್ಕಳಂತೆ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಅವರ ಸಾಮಾರ್ಥ್ಯಕ್ಕೆ ತಕ್ಕಂತೆ ಅವಕಾಶ ಕಲ್ಪಸುವುದು.


ವಿಶೇಷ ಅಗತ್ಯವುಳ್ಳ ಮಕ್ಕಳು ಮತ್ತು ಇತರ ಮಕ್ಕಳ ನಡುವೆ ಆರೋಗ್ಯಕರ ಸಾಮಾಜಿಕ ಸಂಬಂಧಗಳನ್ನು ಬೆಳೆಸುವ ಮೂಲಕ ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು.


ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಎಲ್ಲರು ಧನಾತ್ಮಕ ಮನೋಭಾವ ಬೆಳೆಸಿಕೊಳ್ಳುವಂತೆ ಪ್ರೇರೆಪಿಸಬಹುದು


ವಿಶೇಷ ಅಗತ್ಯವುಳ್ಳ ಮಕ್ಕಳ ಜೀವನ ಮಟ್ಟ ಉನ್ನತಗೊಳಿಸಿ , ಅವರ ಪೌರ ಹಕ್ಕುಗಳನ್ನು ಬದ್ರಪಡಿಸಬಹುದು .


ವಿಶೇಷ ಅಗತ್ಯವುಳ್ಳ ಮಕ್ಕಳ ಸಾಮಾನ್ಯ ಧ್ಯೇಯ ಮತ್ತು ಆತ್ಮ ವಿಶ್ವಾಸದಿಂದ ಎದುರಿಸಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯವಾಗುವಂತೆ ಮಾಡುವುದು.


ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಕೇವಲ ಅನುಕಂಪ ತೋರದೆ ಸಮಾನ ಅವಕಾಶ ತೋರಿಸುವ ಮನೋಭಾವ ಶಿಕ್ಷಕರಲ್ಲಿ ಹಾಗೂ ಸಮುದಾಯದಲ್ಲಿ ಬೆಳೆಸುವುದು.


ಪ್ರತಿ ಮಗುವು ತನ್ನಲ್ಲಿ ಹುದುಗಿರುವ ಸಾಮರ್ಥ್ಯಗಳ ಸಂಪೂರ್ಣ ಸಿದ್ಧಿಗೆ ಶಿಶು ಸ್ನೇಹಿ ಕಲಿಕೆಯ ಪರಿಸರವನ್ನು ಒದಗಿಸುವುದು


 


ನೈಜ ಸ್ಥಿತಿ : ಈ ಶಿಕ್ಷಣವನ್ನು ಪಡೆಯುತ್ತಿರುವ ಮಕ್ಕಳಿಗೆ ಹಾಗೂ ಕೊಡಿಸುತ್ತಿರುವ ಪಾಲಕರಿಗೆ ಕೇಳಿದರೆ ಈ ಶಿಕ್ಷಣದ ನೈಜ ಸ್ಥಿತಿಗತಿ ಏನು ಎಂಬುವುದು ಅರ್ಥವಾಗುತ್ತದೆ . ಇನ್ನು ನಮ್ಮ ಗ್ರಾಮೀಣ ಬಾಗದ ಮಕ್ಕಳ ಪಾಡು ಯಾರು ಹೇಳಲಾಗದು ಅನೇಕ ಸುಮಾರು ಇನ್ನು ಹಲವಾರು ಮಕ್ಕಳಿಗೆ ಈ ಅವಕಾಶ ದೊರುಕುತ್ತಿಲ್ಲ ಇನ್ನು ದೊರಕಿರುವ ಮಕ್ಕಳಲ್ಲಿ ತಂದೆ ತಾಯಿ ಬಳಕೆ ಮಾಡಿಕೊಳ್ಳುವಲ್ಲಿ ವ್ಯತ್ಯಾಸವಿದೆ . ತಮ್ಮ ಮಕ್ಕಳಿಗೆ ಇದೆಲ್ಲ ಬೇಕೆ ಎಂದು ಲೆಕ್ಕ ಹಾಕುವ ತಂದೆ ತಾಯಿಯಂದಿರು ಇನ್ನು ನಮ್ಮ ಸಮಾಜದಲ್ಲಿ ಇದ್ದಾರೆ .


ಈ ಶಿಕ್ಷಣ ನಮ್ಮ ಹೆಣ್ಣು ಮಗುವಿನ ಕಡೆ ಹೋದರೆ ಈ ಪ್ರತಿಶತ ಕಡಿಮೆಯೆ ಆಗುತ್ತದೆ . ಒಂದು ಊರಿನ ಅಂದಾಜಿನ ಪ್ರಕಾರ ನೋಡಿದರೆ ಇನ್ನು ನಮ್ಮ ಹೆಣ್ಣು ಮಗುವಿಗೆ ಈ ಸೌಲಭ್ಯ ಸಿಗುತ್ತಿಲ್ಲ ಇದಕ್ಕೆ ಮೂಲ ಕಾರಣ ಪಾಲಕರು ಪೋಷಕರು ತಮ್ಮ ಮಗ/ಮಗಳು ಈ ಸ್ಥಿತಿಯಲ್ಲಿ ಇದ್ದು ಕಲಿತೇನು ಸಾಧಿಸಬೇಕು ಎನ್ನುವ ಕೆಟ್ಟ ನಿರ್ಧಾರ ಮಾಡಿ ಅವರ ಬದುಕಿನ ಮೇಲೆ ಬರೆ ಎಳೆಯುವ ಕೆಲಸ ಸಮುದಾಯದಿಂದ ನಡೆಯುತ್ತಿದೆ .


 


ಸರ್ಕಾರದ ಅಧಿಕಾರಿಗಳ ನಿರ್ಲಕ್ಷ್ಯ : ವಿಶೇಷ ಅಗತ್ಯವುಳ್ಳ ಮಕ್ಕಳು ಕೂಡಾ ಕಲಿಯಬಹುದು ಅವರಿಗೂ ವಿಶೇಷ ಅಬಕಾಶವಿದೆ ಎಂಬ ಮಾಹಿತಿ ಸಮುದಾಯಕ್ಕೆ ಮುಟ್ಟಿಸಬೇಕಾದ್ದು ಅಧಿಕಾರಿಗಳ ಕೆಲಸ ಈಗಾಗಲೇ ಸಾಕಷ್ಟು ಮಾಹಿತಿ ಹೊಂದಿರುವ ಪತ್ರಗಳು ಹಾಗೂ ಬೇರೆ ಮಾಧ್ಯಮಗಳು ಇವೆ ಆದರೆ ಅವು ಯಾವು ನಮ್ಮ ಮುಗ್ಧ ಗ್ರಾಮೀಣ ಜನತೆಯ ಪಾಲಿಗೆ ಮಾತ್ರ ಆಕಾಶದ ನಕ್ಷತ್ರವಾಗುತ್ತಿವೆ .


ಇಂತಹ ಶಿಕ್ಷಣ ನೈಜವಾಗಿ ಮಕ್ಕಳಿಗೆ ಸಿಗಬೇಕಾದರೆ ಎಲ್ಲರು ಅದರ ಜೊತೆಗೆ ಪ್ರಮಾಣಿಕವಾಗಿ ಕೆಲಸ ಮಾಡಬೇಕಾದ ಅಗತ್ಯ ಹಾಗೂ ಅನಿವಾರ್ಯವಿದೆ . ಸರಕಾರಿ ಅಧಿಕಾರಿಗಳು , ಶಿಕ್ಷಕರು , ಸಮುದಾಯದವರು , ಸಂಘ ಸಂಸ್ಥೆಯವರು ಒಟ್ಟಾರೆಯಾಗಿ ದುಡಿದು ಈ ಮಕ್ಕಳ ಬೆಳವಣಿಗೆಗೆ ಶ್ರಮಿಸಬೇಕಾದ ಕಾಲ ಇದಾಗಿದೆ . ಬನ್ನಿ ಹಾಗಾದರೆ ಈ ಮಕ್ಕಳ ಉತ್ತಮ ಶಿಕ್ಷಣ ದೊರಕಲು ನಾವೆಲ್ಲ ಒಂದು ಹೆಜ್ಜೆ ಇಡೋಣ ಏಕೆಂದರೆ " Let us Change ourself, world Change it self “ ಅಲ್ಲವಾ? .


 



 


ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.


B.Sc., B.Ed.


" ಶಿಕ್ಷಣ ಸಂಯೋಜಕರು"


ಕಲಿಕೆ ಸರ್ ರತನ್ ಟಾಟಾ ಟ್ರಸ್ಟ ಯಾದಗಿರಿ .


ಹಾಗೂ


ಲೇಖಕರು ರಾಜ್ಯ " ರಾಷ್ಟ್ರಕವಿ ಕುವೆಂಪು ಕಾವ್ಯ " ಪ್ರಶಸ್ತಿ ಪುರಸ್ಕೃತರು . 9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.