Skip to main content

ಮೆಟ್ಟಿಲ ಬಳಿ ಇನ್ಯಾರದ್ದೂ ಗೆಜ್ಜೆ ನಾದ ಕೇಳುವುದಿಲ್ಲ

ಇಂದ Shivananda
ಬರೆದಿದ್ದುMay 17, 2013
4ಅನಿಸಿಕೆಗಳು

ಜಗತ್ತಿನ ನಿರ್ಭಾವುಕತೆಯೆಲ್ಲ ನನ್ನಲ್ಲಿಯೇ ಇದೆಯೆನೋ ಅನಿಸುವಂತ ಮೌನ. ರೂಮಿನ ತುಂಬೆಲ್ಲ ಹಬ್ಬಿತ್ತು. ನಮ್ಮಿಬ್ಬರಿಗಾಗಿಯೇ ಏಕಾಂತ ಸೃಷ್ಟಿಸಿದ್ದ ನನ್ನ ಗೆಳೆಯ ಲವ್ ಸಕ್ಸಸ್ ಆದ ಪಾರ್ಟಿ ಕೇಳಲು ಹೊರಗಡೆ ಕಾಯ್ತ ಇದ್ದ, ಆದರೆ ಅವನಿಗೇನು ಗೊತ್ತು ನಿನ್ನ ಈ ಭೇಟಿ ಮೊದಲನೆಯದು ಮಾತ್ರ ಅಲ್ಲ ಕೊನೆಯದೂ ಸಹ ಅಂತ.

ಹೌದು ಅಮ್ಮು, ನೀನು ನಮ್ಮ ರೂಮಿಗೆ ಬರ್ತೀಯ ಅಂತ ತಿಳಿದು ನನಗಿಂತ ಹೆಚ್ಚು ಖುಷಿ ಪಟ್ಟವನು ಅವನು, ಮೂರುವರೆ ವರ್ಷದಲ್ಲಿ ಒಮ್ಮೆಯೂ ಹಿಡಿ ಸೂಕಿಸದ ಇಡೀ ರೂಮಿಗೆ ರೂಮೇ ಹೊಳೆಯುವಂತೆ ಮಾಡಿಟ್ಟಿದ್ದ, ನನ್ನ ನನಗಿಂತಲೂ ಜಾಸ್ತಿ ಅರ್ಥ ಮಾಡಿಕೊಂಡವನು ಅವನು. ನಮಗಾಗೆ ಏಕಾಂತ ತಂದಿಟ್ಟಿದ್ದ. ನಾನೂ ಸಹ ಅವನಷ್ಟೇ ಹಿಗ್ಗುತ್ತಿದ್ದೆ. ಜೀವನದಲ್ಲಿ ಮೊದಲ ಸಲ ನಾನು ಪ್ರಾಣಕ್ಕಿಂತ ಜಾಸ್ತಿ ಪ್ರೀತಿಸಿದ್ದ ಹುಡುಗಿ ತಾನಾಗೇ ರೂಮಿಗೆ ಬರುತ್ತೇನೆ ಅಂತ ಹೇಳಿದ್ದಳು.
ನಿಮಿಷಕ್ಕೊಮ್ಮೆ ಗಡಿಯಾರ ನೋಡ್ತ ಇದ್ವಿ. . .
ನೀ ಬಂದೆ. . .
ನೀ ಬಂದೆ.. .
ಮೆಟ್ಟಿಲ ಬಳಿ ನಿನ್ನ ಕಾಲ್ಗೆಜ್ಜೆ ಸದ್ದು ಕೇಳಿ ಕಣ್ಣಲ್ಲೇ ಬೆಸ್ಟ್ ಆಪ್ ಲಕ್ ಹೇಳಿ ಹೊರ ಹೋದ ಗೆಳೆಯನ ಮುಖದಲ್ಲೆನೋ ಸಂತೃಪ್ತ ಭಾವ. ಕೊನೆಗೂ ಗೆಳೆಯನ ಪ್ರೀತಿ ನೌಕೆ ದಡ ಸೇರಿದ ನೆಮ್ಮದಿ.
ಆಗಲೇ ಅಲ್ಲವೇ ನೀ ತೆಗೆದದ್ದು ನಿನ್ನ ಮದುವೆ ಪತ್ರಿಕೆ. .. .
ನಿಂತ ನೆಲ ಬಿರಿದ ಅನುಭವ...
ಒಂದೂ ಮಾತೂ ಆಡದೆ ಕೈಗಿತ್ತು ಹೊರನಡೆದವಳ ಕಣ್ಣುಗಳಲ್ಲಿದ್ದ ದೈನ್ಯತ ಭಾವದ ಅರ್ಥ ಇವತ್ತಿಗೂ ತಿಳಿಯುತ್ತಿಲ್ಲ.
ಕೈಲಿದ್ದ ಆಮಂತ್ರಣ ನೋಡಿದ ನನಗೆ ಜೀವನವೇ ಮುಗಿದ ಅನುಭವ, ಅವನಿಗೆ ನನ್ನ ಸಮಾಧಾನಿಸುವ ಚಿಂತೆ.
ಹಾಗಾದರೆ ನಿನ್ನ ಪ್ರೀತಿ ಸುಳ್ಳಾ. . . ಮನೆಯವರ ಒತ್ತಾಯಕ್ಕೆ ಮಣಿದು ಮದುವೆ ಆದ್ಯಾ . . . ಏನೇ ಆಗಿರು. . . ನನಗೆ ಕಾರಣ ಹೇಳದೆ ಹೋದದ್ದಕ್ಕೆ ಎಂದಿಗೂ ನಿನ್ನ ಕ್ಷಮಿಸುವುದಿಲ್ಲ, ನಿನ್ನ ನನ್ನ ಉಸಿರಿರೋವರೆಗೂ ಎದೆಯ ಜೈಲಿನಲ್ಲಿ ಕೂಡಿಹಾಕಿ ನೆನಪುಗಳಲ್ಲೇ ಶಿಕ್ಷಿಸುತ್ತೇನೇ...
ನನ್ನ ಜೀವನದ ಸಂತೋಷದ ಕೊನೆಯ ಕಾರಣ ಮರೆಯಾಗಿ ಇಂದಿಗೆ ಒಂದು ವರುಷ ಗೆಳತಿ.. ನಂಗೊತ್ತು ಇನ್ಯಾವತ್ತೂ ರೂಮು ಕ್ಲೀನ್ ಮಾಡುವ ಕೆಲಸ ಇರುವುದಿಲ್ಲ,
ಮೆಟ್ಟಿಲ ಬಳಿ ಇನ್ಯಾರದ್ದೂ ಗೆಜ್ಜೆ ನಾದ ಕೇಳುವುದಿಲ್ಲ.


 

ಲೇಖಕರು

Shivananda

ನಂದೂ ಇರ್ಲಿ,

ನನ್ ಬಗ್ಗೆ ನಾನೇ ಹೇಳೋದಾದ್ರೆ ಸ್ವಲ್ಪ ಒಳ್ಳೆ ಹುಡ್ಗ. ಎಲ್ಲರ ಜೊತೆ ಒಬ್ಬನಾಗಿ, ಎಲ್ಲರಿಗಿಂತ್ ಬೇರೆದೇ ರೀತಿಲಿ ಬದ್ಕೋ ಆಸೆ. ಸ್ವಲ್ಪ ಕೋಪ ಜಾಸ್ತಿ.

ಅನಿಸಿಕೆಗಳು

ರಾಜೇಶ ಹೆಗಡೆ ಶನಿ, 05/18/2013 - 08:40

"ನಿನ್ನ ನನ್ನ ಉಸಿರಿರೋವರೆಗೂ ಎದೆಯ ಜೈಲಿನಲ್ಲಿ ಕೂಡಿಹಾಕಿ ನೆನಪುಗಳಲ್ಲೇ ಶಿಕ್ಷಿಸುತ್ತೇನೇ"

ವಾರೆ ವ್ಹಾ!! ಆಡು ಮಾತಿನ ಸರಳ ಭಾಷೆಯ ಜೊತೆಗೆ ಅಲ್ಲಲ್ಲಿ ಸಾಹಿತ್ಯದ ತಂಪನ್ನು ಚಿಮುಕಿಸುವ ಶೈಲಿ ಆಪ್ತವಾದದ್ದು. ಹೆಚ್ಚು ಓದುವ ಸಹನೆಯಿಲ್ಲದ ವೇಗದ ಈಗಿನ ಕಾಲಕ್ಕೆ ಹೇಳಿ ಮಾಡಿಸಿದ ಶೈಲಿ ಇದು.

ಅಲ್ಲಲ್ಲಿ ಸಣ್ಣಪುಟ್ಟ ಟೈಪಿಂಗ್ ದೋಷಗಳಿದ್ದವು ಸರಿಪಡಿಸಿದ್ದೇನೆ, ಅದನ್ನು ಉತ್ತಮಗೊಳಿಸಿಕೊಂಡರೆ ಉತ್ತಮ ಬರಹಗಾರರಾಗುವದರಲ್ಲಿ ಸಂಶಯವಿಲ್ಲ.

ಇದು ನಿಜವಲ್ಲ ಬರಿ ಕಥೆ ಅಂದು ಕೊಂಡಿದ್ದೇನೆ.

Shivananda ಶನಿ, 05/18/2013 - 11:01

ಈಗ ತಾನೆ ಅಡುಗೆ ಕಲಿತವನಿಂದ  ಒಂದು ಸಾಮಾನ್ಯ ಸಾರಿಗೆ ಕರಿಬೇವಿನ ಒಗ್ಗರಣೆಯ ಪ್ರಯತ್ನ.

navya ಶನಿ, 05/18/2013 - 12:17

ಓಯ್ ಹುಡ್ಗ ನಾನು ಪ್ರೀತಿಸ್ತಿದಿನಿ ನನ್ನ ಮುದ್ದು ಹುಡುಗನ್ನ ಅದ್ರೆ ಅವನಿಲ್ಲದೆ ಹಮ್ ಬದುಕೋದು ನಂಗೆ ಗೋತ್ತು. ಅವನ ಸವಿ ನೆನಪಲ್ಲೆ ಖುಶಿಪಡೊದು ಗೊತ್ತು, ಅವನ ಜಾಗಕ್ಕೆ ಯಾರು ಬರದ ಹಾಗೆ ಕಯ್ದುಕೊಳೊದು ತುಂಬ ಚೆನ್ನಗೆ ಗೊತ್ತು. 

ಜೀವನ ಹಾಗೂ ಪ್ರೀತಿಗೂ ವ್ಯತ್ಯಸ ಇದೆ ಪ್ರೀತಿನೆ ಜೀವನ ಅಲ್ಲ ಅಲ್ವ, ಅಗಂತ ಪ್ರೀತಿಗೆ ಬೆಲೆ ಎಲ್ಲ ಅಂತ ಅಲ್ಲ. ನನ್ನ ಹುಡ್ಗ ಅಂದ್ರೆ ಉಸಿರು ಕಟ್ಟೊ ಹಾಗೆ ಪ್ರೀತಿಸ್ತಿನಿ, ಆದರೆ ಅವನ್ ಸಿಗಲ್ಲ ಅಂತ ಗೊತ್ತದ್ರೆ  ಖಂಡಿತ ಸಾಯಲ್ಲ, ಕೊರಗಲ್ಲ ಊಹೂ ಸದ್ಯಾನೆ ಎಲ್ಲ. ಅವನ ನೆನಪಲ್ಲೆ ಒಂಟಿ ಆಗಿ ಬದುಕಿ ಬಿಡ್ತೀನಿ.

ನಿನ್ನ ಪ್ರಿತಿಸ್ತಿದಳೆ ಅಂತ ಹೆತ್ತೋರ ಮರಿಯೋಕೆ ಅಗುತ್ತ, ಹೆಚ್ಚಿಗೆ ಕೊರಿಯೊದ್ ಬೇಡ ಮನಸು ಪಕ್ವವಗೊವರೆಗು ಪ್ರೀತಿ ಮದದೆ ಇದ್ರೆ ಉತ್ತಮ, ಅ ವಯಸಲ್ಲಿ ,ಮಾತ್ರ ನಾವು ಪ್ರೀತಿನ ಅರ್ತ ಮಾಡ್ಕೊಳೂಕೆ ಹಾಗು ಉಳಿಸಿಕೊಳ್ಲೋಕೆ ಸಾಧ್ಯ

K.M.Vishwanath ಮಂಗಳ, 05/21/2013 - 17:28

ಗುಡ್ ಮುಂದುವರೆಲಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.