Skip to main content
Forums

ಯಕ್ಷಗಾನದ ಬಗ್ಗೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅವಹೇಳನಕಾರಿಯಾಗಿ ಮಾತಾಡಿದ "ರಿಷಿಕಾ" ಬಗ್ಗೆ ನಿಮ್ಮ ಅಭಿಪ್ರಾಯವೇನು....?

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಶುಕ್ರ, 06/07/2013 - 18:10

ಮಾನ್ಯರೇ, ಕುಃರಿಷಿಕಾ ಸಿಂಗ್ ರವರು ಖ್ಯಾತ ನಿರ್ಧೇಶಕ ಮತ್ತು ನಿರ್ಮಾಪಕರ ಮಗಳು ಎಂದು ಕೇಳಿದ್ದೇವೆ. ಅದರಲ್ಲು ನಮ್ಮ ಕನ್ನಡದವರು. ಅವರ ತಂದೆ ತಾಯಿಗಳ ಗೌರವಿಸುವಂತೆ, ಅವರ ಮಗಳಾದ ಇವರನ್ನು ಗೌರವಿಸುತ್ತೇವೆ. ಆ ಗೌರವವನ್ನು ಉಳಿಸಿಕೊಳ್ಲುವುದು ಅವರ ಜವಾಬ್ದಾರಿ. ಟಿ.ವಿ ಯಲ್ಲಿ ವೀಕ್ಷಕರು ನೋಡುತ್ತಿದ್ದಾರೆ. ನನ್ನ ಪ್ರತಿಯೊಂದು ನಡೆ ನುಡಿಯನ್ನು ಕನ್ನಡಿಗರು ನೋಡುತ್ತಿದ್ದಾರೆ ಎಂಬ ಪರಿವೆ ಇಲ್ಲದೆ. ಸಹ ನಟರನ್ನು ಹೀನಾಯವಾಗಿ ನಡೆಸಿಕೊೞುವುದು. ಹೀಯಾಳಿಸುವುದು ಮಾಡುತ್ತಿದ್ದರು. ಅವರ ಮಾನಸಿಕವಾಗಿ ಕ್ರೌರ್ಯ ತೋರಿಸುತ್ತಿದ್ದುದು ಕಂಡುಬರುತ್ತಿತ್ತು. ಗುಲಾಮರಂತೆ ನಡೆಸಿಕೊೞುತ್ತಿದ್ದರು. ಅವರು ಅನುಚಿತವಾಗಿ ನಡೆದುಕೊಂಡರೂ, ಬಿಗ್ ಬಾಸ್ ಅವರನ್ನು ಹೊರಗೆ ಕಳುಹಿಸಲಿಲ್ಲ. ಕೊನೆಗೆ ಕಳುಹಿಸುವಾಗಲೂ ಸಹ ಅವರ ತಪ್ಪುಗಳನ್ನು ಸೌಮ್ಯವಾಗಿ ತಿಳಿಸಲಾಯಿತು. ಆದರೂ ಅವರು ತಪ್ಪನ್ನು ಒಪ್ಪಿಕೊೞಲಿಲ್ಲ ಹಾಗು ಅವರಿಗೆ ತಾನು ತಪ್ಪು ಮಾಡಿದ್ದೇನೆಂಬ ಅಳುಕು ಸ್ವಲ್ಪವೂ ಇರಲಿಲ್ಲ. ಕೊನೆಗೆ ಶ್ರೀ ಸುಧೀಪ್ ರವರು ಅವರ ಪಾದಕ್ಕೆ ನಮಸ್ಕರಿಸಲು ಪ್ರಯತ್ನಿಸಿದರು. ಒಬ್ಬ ಚಿಕ್ಕ ವಯಸ್ಸಿನ ಕನ್ನಡ ನಟಿ ಗೌರವಾನ್ವಿತ ನಿರ್ದೇಶಕರ ಮಗಳು ಈ ರೀತಿ ನಡೆದುಕೊಂಡಿದ್ದು ಕನ್ನಡಿಗರಾದ ನಮಗೆ ಸರಿಅನಿಸಲಿಲ್ಲ. ಕರಾವಳಿ ಕಲೆಯಲ್ಲಿ ಯಕ್ಷಗಾನ ಪ್ರಮುಖವಾದುದು. ಆ ಬಗ್ಗೆ ಹಿಂದುಮುಂದು ಯೋಚಿಸದೆ ಯಕ್ಷಗಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು. ಅಕ್ಷಮ್ಯ ಅಪರಾದ. ಅಂತಿಮವಾಗಿ ಹೊರ ಹೋಗುವಾಗ ಹೇಳಿದ್ದು ನಾನು ಕರಾವಳಿಯವಳೇ, ನನ್ನ ತಾಯಿ ಕರಾವಳಿ ಮೂಲದವರು ಎಂದು ತಿಳಿಸಿದರು. ನಮಗಂತು ಮುಜುಗರವಾಯಿತು. ಆಗಿದ್ದು ಆಯಿತು. ಇನ್ನು ಮುಂದಾದರೂ ಇಂತಹ ಕಾರ್ಯಕ್ರಮಗಳಲ್ಲಿ ಹೀಗೆಲ್ಲಾ ಮಾತನಾಡುವುದು ಸರಿಯಲ್ಲ. ಕನ್ನಡ ಕಲಾವಿದರಿಗೆ ಅವರ ನಡವಳಿಕೆ, ಮಾತು, ವಿನಯ, ಕಲೆಯಲ್ಲಿ ಭಕ್ತಿ ಇವುಗಳನ್ನು ಹೇಗೆ ತೋರಿಸಬೇಕೆಂಬುದನ್ನು ಡಾಃರಾಜಕುಮಾರ್ ರವರು ತೋರಿಸಿಕೊಟ್ಟಿದ್ದಾರೆ. ಅಂತಹವರ ನಾಡಿನಲ್ಲಿ ಜನಿಸಿರುವ ಇವರು ಬೇರೆ ಯಾರಿಗೂ ನೋವಾಗದಂತೆ ನಡೆದುಕೊೞುತ್ತಾರೆಂದು ನಂಬಿರುತ್ತೇವೆ. ಅವರು ಕನ್ನಡ ಚಿತ್ರರಂಗದಲ್ಲಿ ಇನ್ನೂ ಬೆಳೆಯಬೇಕು. ಹೆಸರು ಮಾಡಬೇಕು. ಅಲ್ಲವೇ?

Mugilu ಭಾನು, 06/09/2013 - 10:24

ಪೂರ್ವ ಕಾಲದಿಂದಲೂ ನಡೆದು-ನಡೆಸಿಕೊಂಡು ಹೋಗುತ್ತಿರುವ ಯಕ್ಷಗಾನ ಕಲಾವಿದರ ಬಗ್ಗೆ ನಟಿ ರಿಷಿಕಾ ಬಗ್ಗೆ ಒಂದು ಮಾತು ನೆನಪಾಗುತ್ತದೆ. ಗಾದೆಯೇ ಇದೆಯಲ್ಲ. "ಕುಣಿಯಲು ಬಾರದ........ನೆಲ ಡೊಂಕು ಎಂದಳಂತೆ"

  • 1216 views