Skip to main content

ವಿಸ್ಮಯ ಮಕ್ಕಳ ಪುಸ್ತಕ ಪಡೆಯುವ ವಿಧಾನ

ಬರೆದಿದ್ದುMay 12, 2013
noಅನಿಸಿಕೆ

ಕನ್ನಡದಲ್ಲಿ ಅದು ಯಾಕಿಲ್ಲ ಇದು ಯಾಕಿಲ್ಲ ಅನ್ನುವ ಹಲವು ಪ್ರಶ್ನೆ ನಮ್ಮಲ್ಲಿಯೇ ಮೂಡುತ್ತದೆ. ಕನ್ನಡದಲ್ಲಿ ಉತ್ತಮ ಗುಣಮಟ್ಟದ ಜಾಲತಾಣಗಳು ಯಾಕೆ ಕಡಿಮೆ ಎಂಬ ಪ್ರಶ್ನೆಯೊಂದಕ್ಕೆ ಉತ್ತರ ಕಂಡು ಕೊೞಲು ಆರಂಭವಾದ ಯೋಜನೆಯಲ್ಲಿ ವಿಸ್ಮಯ ನಗರಿಯೂ ಒಂದು. ಇದೇ ವಿಸ್ಮಯ ನಗರಿ ತಾಣ ಈಗ "ವಿಸ್ಮಯ ನಗರಿ ಪ್ರಕಾಶನ" ಲಾಂಛನದಲ್ಲಿ ಕನ್ನಡದಲ್ಲಿ ಉತ್ತಮ ಗುಣಮಟ್ಟದ ಮಕ್ಕಳ ಪುಸ್ತಕ ನೀಡಲು ಹೊರಟಿದೆ.

ವಿಸ್ಮಯ ಮಕ್ಕಳ ಪುಸ್ತಕವನ್ನು ಬೆಂಬಲಿಸಬೇಕು ಅನ್ನುವ ಕಳಕಳಿ ನಿಮ್ಮದೇ ಅಥವಾ ನಿಮ್ಮ ಮನೆಯಲ್ಲಿ ೧-೫ ವರ್ಷದ ಮಕ್ಕಳಿದ್ದಾರೆಯೇ ಅಥವಾ ನೀವು ಕನ್ನಡದ ಅಭಿಮಾನಿಯಾಗಿದ್ದು ಕನ್ನಡದ ಈ ಪ್ರಯತ್ನಕ್ಕೆ ಆರಂಭಿಕ ಬೆಂಬಲ ನೀಡಿ ಇಂತಹ ಇನ್ನಷ್ಟು ಯೋಜನೆ ನಡೆಯಲಿ ಎಂಬುದು ನಿಮ್ಮ ಆಸೆಯೇ? ಹಾಗಾದರೆ ತಪ್ಪದೇ ಖರೀದಿಸಿ.

ವಿಸ್ಮಯ ಮಕ್ಕಳ ಪುಸ್ತಕಗಳಾದ ಹಣ್ಣುಗಳು/ಅಂಕೆಗಳು ಈ ಮುಂದಿನ ಯಾವುದೇ ರೀತಿಯಲ್ಲಿ ಪಡೆಯಬಹುದು.

  • ನಿಮ್ಮ ಮನೆಯ ಹತ್ತಿರದ ಪುಸ್ತಕದ ಅಂಗಡಿಗೆ ಹೋಗಿ. ಈ ಪುಸ್ತಕ ತರಿಸಿ ಕೊಡುವಂತೆ ಕೇಳಿ.
  • ನೀವು ಮುಂದಿನ ವಿಳಾಸಕ್ಕೆ ರಾಜೇಶ ಎಂ. ಹೆಗಡೆ (Rajesh M Hegde) ಹೆಸರಲ್ಲಿ ಕೆಳಗೆ ಕೊಟ್ಟಿರುವಷ್ಟು ಹಣದ ಚೆಕ್/ಡಿಡಿ ಅಥವಾ ಎಂ.ಓ ಕಳುಹಿಸಿ ಇವನ್ನು ಪಡೆಯಬಹುದು. ಪತ್ರದಲ್ಲಿ ನಿಮ್ಮ ಹೆಸರು, ವಿಳಾಸ, ಫೋನ್ ನಂಬರ್ ಬರೆಯಲು ಮರೆಯದಿರಿ.

ರಾಜೇಶ ಎಂ ಹೆಗಡೆ

ಶ್ರೀರಾಮ ನಿಲಯ, #535, 1ನೇ ಮಹಡಿ, 2ನೇ ಮುಖ್ಯ ರಸ್ತೆ, ಶ್ರೀನಗರ, ಬಿ.ಎಸ್.ಕೆ 1ನೇ ಹಂತ, ಬೆಂಗಳೂರು ಪಿನ್ - 560050

 

ಬೆಲೆಃ

ಬೆಂಗಳೂರಿನಲ್ಲಿ ೨ ಪುಸ್ತಕಕ್ಕೆ - ೧೮೦ರೂ (ಕೂರಿಯರ್ ವೆಚ್ಚ ೪೦ರೂ ಸೇರಿ)

ಕರ್ನಾಟಕಾದ್ಯಂತ ೨ ಪುಸ್ತಕಕ್ಕೆ - ೨೦೦ರೂ (ಕೂರಿಯರ್ ವೆಚ್ಚ ೬೦ರೂ ಸೇರಿ)

ವಿ.ಸೂಃ ಸಧ್ಯಕ್ಕೆ ಈ ಎರಡೂ ಪುಸ್ತಕಗಳ ಕೇವಲ  ೫೦ ಕಾಪಿಯನ್ನು ಡಿಜಿಟಲ್ ಪ್ರಿಂಟಿಂಗ್ ಮುಖಾಂತರ ಮುದ್ರಿಸಲಾಗಿದೆ. ಆದ್ದರಿಂದ ಮುದ್ರಣ ವೆಚ್ಚವೇ ೬೪ರೂ ಆಗಿದೆ. ಕನ್ನಡದಲ್ಲಿ ಬೇಡಿಕೆ ಇದ್ದು ಆಫ್ ಸೆಟ್ ಮಾದರಿಯಲ್ಲಿ ಮಾಡಿದರೆ ವೆಚ್ಚ ಕಡಿಮೆ ಆಗಿ ಆಗ ಇನ್ನೂ ಬೆಲೆ ಕಡಿಮೆ ಆಗಬಹುದು. ಕಡಿಮೆ ಗುಣಮಟ್ಟ, ಗಾತ್ರ ಅಥವಾ ಲ್ಯಾಮಿನೇಶನ್ ಇಲ್ಲದೇ ಮುದ್ರಿಸಿದರೂ ಇನ್ನೂ ಬೆಲೆ ಕಮ್ಮಿ ಆಗಬಹುದು. ಆದರೆ ವಿಸ್ಮಯ ನಗರಿ ಸಧ್ಯಕ್ಕೆ ಉತ್ತಮ ಗುಣಮಟ್ಟದಲ್ಲಿ ಮಾತ್ರ ಮುದ್ರಿಸಲಿದೆ.

ಹೆಚ್ಚು ಪ್ರತಿ ಬೇಕಿದ್ದಲ್ಲಿ ನೇರವಾಗಿ 9845888254 ಗೆ ಕರೆ ಮಾಡಿ.

 

ನೀವು ಪುಸ್ತಕ ಎಜೆಂಟ್ / ವಿತರಕರಾಗಿದ್ದು ಈ ಎರಡು ಪುಸ್ತಕ ಹಾಗೂ ಇನ್ನೂ ಪ್ರಕಟಿಸಲಿರುವ ಇತರ ಪುಸ್ತಕ ವಿತರಿಸಲು ಆಸಕ್ತಿ ಇದ್ದರೆ 9845888254ಗೆ ಕರೆ ಮಾಡಿ.ಉತ್ತಮ ಕಮೀಶನ್ ನೀಡಲಾಗುವದು.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.