Skip to main content

ಕೇಂದ್ರ ಸರ್ಕಾರ ಹಂಗ,ರಾಜ್ಯ ಸರ್ಕಾರ ಹಿಂಗ, ಇವರಿಬ್ಬರ ನಡುವೆ ನಾವು ಹೆಂಡ ಕುಡಿದ ಕೋತಿಹಂಗ

ಇಂದ K.M.Vishwanath
ಬರೆದಿದ್ದುMay 4, 2013
noಅನಿಸಿಕೆ

ಈ ನಮ್ಮ ಪ್ರಸ್ಥುತ ರಾಜಕೀಯ ವ್ಯವಸ್ಥೆ ಹದಗೆಟ್ಟು ನಿಂತಿದೆ . ಎಲ್ಲವು ಅವರವರ ಹೊಟ್ಟೆ ತುಂಬಿಸಿಕೊಳ್ಳಲು ನೋಡುವರೆ ಹೊರತು ಈ ದೇಶದ ಸೇವೆ ಮಾಡಬೇಕು ಎನ್ನುವ ಲೆಕ್ಕಾಚಾರ ಯಾರಲ್ಲಿಯೂ ಇಲ್ಲ. ನಾನು ಒಮ್ಮೆ ಆರಿಸಿ ಬಂದರೆ ಸಾಕು ಮುಂದಿನದ್ದು ನೋಡಿದರಾಯಿತು ಎನ್ನುವ ಲೆಕ್ಕಾಚಾರದಲ್ಲಿ ಇರುವರು ನಮ್ಮ ರಾಜಕಾರಣಿಗಳು. ಜನರು ಈ ರಾಜಕೀಯ ಗಿಮಿಕ್ ನಿಂದ ಸೋತು ಹೋಗಿದ್ದಾರೆ. 

ಇನ್ನು ಈ ರಾಜಕೀಯದಲ್ಲಿ ಅನುವಂಶಿಯತೆ ಮೂಲ ಕಾರಣವಾಗಿ ಪರಿಣಮಿಸಿದೆ. ಅಪ್ಪನ ಹೆಸರಲ್ಲಿ ಕೆಸರನ್ನು ತಂದು ಇದು ತುಂಬಾ ಹೆಸರುವಾಸಿಯಾದ ಬಂಗಾರ ಅಪ್ಪ ಹೇಳಿದ್ದಾನೆ ತೊಗೊಳ್ಳಿ ಎಂದು ಮಾರುವ ಎಷ್ಟೊ ಜನರು ಈ ರಾಜಕೀಯದಲ್ಲಿ ಮನೆ ಮಾತಾಗಿದ್ದಾರೆ. ಬರಿ ಎಲ್ಲಿ ನೋಡಿದರು ಸ್ವಾರ್ಥ ಮಾತ್ರ ಎದ್ದು ಕಾಣುತ್ತಿದೆ. ರಾಜಕೀಯ ರಂಗು ಏರುತ್ತಿದೆ. ಎಲ್ಲೆಲ್ಲೂ ಪ್ರಚಾರದ ಭರಾಟೆ ಭರವಸೆಗಳ ಮಹಾಪುರ ಎಲ್ಲರು ಸದ್ಯಕ್ಕೆ ಈ ದೇಶವನ್ನು ಉದ್ಧಾರ ಮಾಡುತ್ತೇವೆ ನಮಗೆ ಓಟು ಕೊಡಿ ಎನ್ನುವ ಲೆಕ್ಕಚಾರ ಮಾತ್ರ ಜನರ ಮುಂದೆ ಇಡುತ್ತಿದ್ದಾರೆ. ಆದರೆ ಇಲ್ಲಿಯವರೆಗೆ ತಾವು ಮಾಡಿದ ಘನಕಾರ್ಯವಾದರು ಏನು? ಎನ್ನುವುದು ಮರೆತು ನಡೆದಿದ್ದಾರೆ ಹಾಗಾದರೆ ಕೇಂದ್ರದಲ್ಲಿರುವ ತಾಯಿ ಮಗ ಮಾಡಿದ ಸಾಧನೆಯೇನು ಎಂದು ಕೆದುಕಿದರೆ ಈ ವಿಶೇಷ ಹಗರಣಗಳು ಎದ್ದು ಬರುತ್ತವೆ. ಈ ಕೇಂದ್ರದ ತಾಯಿ ಮಗನ ಸ್ವಾರ್ಥ,ಭಾರತಕ್ಕೆ ಅನರ್ಥ. ತಂದೊಡ್ಡಿದೆ.  

ಈ ದೇಶದಲ್ಲೇ ಅತ್ಯಂತ ಚತುರತೆ ಹಾಗೂ ವಿಚಾರತೆಯ ಹಗರಣವೆಂದರೆ ನಮ್ಮ ಏ ರಾಜಾ ರವರ ಟು ಜಿ ಹಗರಣ ನಮ್ಮ ದೇಶದ ತರಂಗಗಳನ್ನು ಮಾರಿ ತೋರಿ ತಿನ್ನುವ ಲೆಕ್ಕಚಾರ ಸಾಹೇಬರದು. ಈಡಿ ದೇಶವೆ ತಲೆತಗ್ಗಿಸುವ ಕೆಲಸ ಕೇಂದ್ರ ಸರ್ಕಾರದ ಅಧಿಕಾರ ಅವಧಿಯಲ್ಲಿಯೆ ನಡೆದು ಹೋಯಿತು. ಆಗ ಈ ತಾಯಿ ಮಗ ಇಬ್ಬರು ಮರು ಮಾತಾಡದೆ ಸುಮ್ಮನೆ ಕುಳಿತ್ತಿದ್ದರು ಉದ್ದುದ್ದಾಗಿ ಭಾಷಣ ಕೊಡುವ ಇಬ್ಬರು ಈ ಹಗರಣದ ಬಗ್ಗೆ ಮಾತೆ ಆಡಲಿಲ್ಲ ಈ ಚೋರನ ವಿರುದ್ದ ಯಾವುದೆ ಕ್ರಮ ಕೈಗೊಳ್ಳಲಿಲ್ಲ ಕೈಗೊಂಡರು ಆದೆರ " ನೀ ಸತ್ತಂಗ ಮಾಡು ನಾ ಅತ್ತಂಗ ಮಾಡತ್ತೀನಿ" ಅನ್ನುವ ಗಾದೆಯಂದೆ ಕೆಲಸ ನಿರ್ವಹಿಸಿದರು. ಈ ಹಗರಣದಲ್ಲಿ ಬರಿ ರಾಜಾ ಒಬ್ಬನೆ ತಪ್ಪಿತತ್ಸನ್ನಲ್ಲ ಇಬ್ಬರು ತಾಯಿ ಮಗನು ತಪ್ಪಿತತ್ಸರೆ ಹೌದು ತಮ್ಮ ಸಂಸದರ ಬಗ್ಗೆ ತಮಗೆ ಅರಿವಿರದೆ ಈ ಘಟನೆ ನಡೆಯಲು ಯಾವತ್ತು ಸಾದ್ಯವಿಲ್ಲ ಸುಮಾರು ಎಪ್ಪತೊಂದು ಕೋಟಿ ಕೊಳ್ಳೆ ಹೊಡೆದು ಜೈಲು ಸೇರಿದ ರಾಜಾರವರಿಗೆ ಸಿಬಿಐ ಹೆಚ್ಚಿನ ತನಿಖೆಯಾಗಲಿಲ್ಲ ಏಕೆ? ಕೇಂದ್ರ ಸರ್ಕಾರ ಈ ಬಗ್ಗೆ ಹೆಚ್ಚಿನ ತೆಲೆಕೆಡಿಸಿಕೊಳ್ಳಲಿಲ್ಲ ಏಕೆ? ಎನ್ನುವ ವಿಚಾರ ಮಾತ್ರ ನೀಘೂಡ ಅಲ್ಲವೆ? 

ನಮ್ಮ ದೇಶ ಅತ್ಯಂತ ಸಂಪತ್ ಭರಿತವಾದದ್ದು ಎಂದು ಗೊತ್ತಿದ್ದ ಅಂದಿನ ಬ್ರೀಟೀಷರು ಕೊಳ್ಳೆ ಹೊಡೆದರು ಇಂದು ನಮ್ಮವರೆ ನಮ್ಮನ್ನು ಕೊಳ್ಳೆಹೊಡೆದು ನೆಪ ಹೇಳಿ ತಪ್ಪಿಸಿಕೊಳ್ಳುವ ಕಾಲ ಬಂದಂತಿದೆ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸರ್ಕಾರ ಅವರ ಬಲದಿಂದಲೇ ಓಟು ಪಡೆದು ಅವರ ಬದುಕಿನ ಮೇಲೆ ಬರೆ ಎಳಿಯುವ ಕೆಲಸ ಕೇಂದ್ರದ ಯು ಪಿ ಎ ಸರ್ಕಾರ ಮಾಡಿದ್ದು ಯಾವತ್ತು ಮರೆಯುವಂತಿಲ್ಲ. ನಮ್ಮ ರೈತ ಈ ದೇಶದ ಬೆನ್ನೆಲುಬು ಅವನ ಆಧಾರದಿಂದಲೇ ಈಡಿ ದೇಶದಲ್ಲಿ ಇವತ್ತು ಅನ್ನ ಚಿನ್ನವೆಲ್ಲ ಇದೆ. ಆದರೆ ಈ ಕೇಂದ್ರ ಸರ್ಕಾರ ಮಾತ್ರ ರೈತರ ಸಾಲ ಮನ್ನಾ ಯೋಜನೆಯಲ್ಲಿಯೂ ಖೂಟಾ ಮಾಡಿ ಅವರನ್ನು ಮತ್ತೆ ಬಡವರನ್ನಾಗಿ ಮಾಡಿದೆ . ಈ ಸಾಲ ಮನ್ನಾ ಯೋಜನೆ ನಿಜವಾದ ರೈತರ ಪಾಲಾಗದೆ ರಾಜಕೀಯ ಧೂರಿಣರ ಮತ್ತು ಅಧಿಕಾರಿಗಳ ಪಾಲಾಗಿ ರೈತ ಮತ್ತೆ ತನ್ನ ಯಥಾಸ್ಥಿತಿಗೆ ಬರುವಂತೆ ಮಾಡಿದ್ದು ಈ ಕೇಂದ್ರದ ತಾಯಿ ಮಗನ ಕಾರ್ಯ . ಅನ್ನ ಕೊಡುವ ದೇವರಿಗೆ ಕನ್ನ ಹಾಕುವ ಕೆಲಸ ಕೇಂದ್ರ ಸರ್ಕಾರ ಮಾಡಿದೆ ಆದರೆ ಮೌನಯೋಗಿ ಮನಮೋಹನ ಮಾತ್ರ ಇದು ಯಾವಾಗ ನಡೆಯಿತು ನನಗೆ ಗೊತ್ತಿಲ್ಲ ಎಂದು ಹಲವು ಭಾಷಣದಲ್ಲಿ ಹೇಳಿದ್ದು ನೋಡಿದರೆ ಅವರೊಬ್ಬ ಆರ್ಥಿಕ ತಜ್ಞರೊ ಇಲ್ಲವೊ ಎನ್ನುವ ಅಪನಂಬಿಕೆ ಶುರುವಾಗುತ್ತದೆ.  

ಕೇಂದ್ರದ ಯುಪಿಎ ಸರ್ಕಾರ ಅಕ್ಕಿ ಹಗರಣದ ಹೂರಣ ತೋರಿತು ಅಕ್ಕಿ ಬೆಳೆಗಾರರ ಮೇಲೆ ಬರೆ ಎಳಿಯುವ ಕೆಲಸ ಮಾಡಿತು. ಅಂದು ಅಕ್ಕಿ ಕೊಳ್ಳುವ ಮತ್ತು ಮಾರುವ ವರ್ತಕ ಮೇಲೆ ಹೇರಿದ್ದ ತರಿಗೆ ಇಂದಿನ ತರಿಗೆ ಮತ್ತು ಅದರಲ್ಲಿ ಅವ್ಯವಹಾರವನ್ನೆಲ್ಲ ನೋಡಿದರೆ ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ. ಈ ಅಕ್ಕಿ ಹಗರಣದಲ್ಲಿ ಯಾರೂ ಎಷ್ಟು ಪಡೆದರು ಎಂದು ಅವರ ಈ ಕೆಲಸಕ್ಕೆ ಯಾವ ರೀತಿಯಲ್ಲಿ ಹೇಗೆ ಮನ್ನಣೆ ಯಾರು ನೀಡುವರು ತಿಳಿಯದು ಈ ದೇಶದ ಅಕ್ಕಿ ಎಲ್ಲವು ಕೊಳ್ಳೆ ಹೊಡೆದು ಬರಿ ಜೊಳ್ಳು ಮಾತನಾಡಿದ ಕೇಂದ್ರ ಸರ್ಕಾರ ಅಕ್ಕಿ ಹಗರಣದ ಪ್ರಮುಖ ರೂವಾರಿಗಳನ್ನು ಭಹಿರಂಗ ಪಡಿಸಲೇಯಿಲ್ಲ.  

ಇನ್ನು ಅನ್ನ ಉಣ್ಣುವುದು ಬಿಟ್ಟು ಕಲ್ಲಿದ್ದಲು ತಿನ್ನುವ ಲೆಕಕ್ಕೆ ಬಂದರು ನಮ್ಮ ಮೌನಯೋಗಿಯವರು ಈ ದೇಶ ನಾಚಿ ನೀರಾಗುವಂತ ಕೇಂದ್ರದ ಮತ್ತೊಂದು ಹಗರಣವೆಂದರೆ ಕಲ್ಲಿದ್ದಲು ಹಗರಣ ಮಾಧ್ಯಮಗಳು ಕೇಳುವ ಒಂದೊಂದು ಪ್ರಶ್ನೆಗಳಿಗೆ ಯಾರು ಉತ್ತರ ನೀಡದೆ ಸಾಗಿದರು. ಕೋಟಿಗಟಗಟ್ಟಲೆ ಹಗರಣ ಮಾಡಿದ ಕೇಂದ್ರವು ನಮ್ಮ ಜನತೆ ಕಟ್ಟುವ ತರಿಗೆ ಮೇಲೆ ಅದರ ಬೆಲೆಯ ಬಗ್ಗೆ ಸ್ವಲ್ಪವು ಯೋಚಿಸಲಿಲ್ಲ ಅವರ ಹಾದಿಯಲ್ಲಿಯೆ ಸಾಗಿ ಈ ಕಲ್ಲಿದ್ದಲು ಹಗರಣದ ಹರವು ಮೆರೆಸಿದರು. ಈ ಹಗರಣದಿಂದ ಸಾಮಾನ್ಯ ಜನರ ಮೇಲೆ ಯಾವ ರೀತಿ ಪರಿಣಾಮ ಬೀರಿತು ಎನ್ನುವುದು ಯಾವ ರಾಜಕೀಯ ವ್ಯಕ್ತಿಯು ಯೋಚಿಸಲಿಲ್ಲ ನಮ್ಮ ದೇಶ ಕೊಳ್ಳೆ ಹೊಡಿಯುವ ಲೆಕ್ಕಚಾರ ಬಿಟ್ಟರೆ ಅವರಿಗೆ ಯಾವ ಆಸೆಯು ಕಾಣಿಸಲಿಲ್ಲ ಕಲ್ಲಿದ್ದಲು ವರ್ತಕರು ಕೂಲಿ ಕಾರ್ಮಿಕರು ಈ ದೇಶದ ಅನೇಕ ಜನ ಉದ್ಯೂಗಿಗಳು ಇದರಿಂದ ತತ್ತರಿಸಿ ಹೋದರು. ಕಪ್ಪು ಕಾಗೆಯ ಹಾಗೆ ನಮ್ಮ ರಾಜಕೀಯದಲ್ಲಿ ಕಲ್ಲಿದ್ದಲು ನುಂಗಿ ನೀರು ಕುಡಿದ ಕೇಂದ್ರ ಸರ್ಕಾರ ಅದರ ಮುಂದಿನ ಯಾವುದೆ ತನಿಖೆ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ ಏಕೆ? ಎಂದು ಕೇಳುವ ಅನೇಕರ ಬಾಯಿಗೆ ಹಣದ ಆಮಿಷ್ಯವನ್ನು ಹಾಕಿ ಎಲ್ಲವು ಏನು ಆಗಿಲ್ಲ ಎನ್ನುವ ಕೆಲಸ ಮಾಡಿದರು ಎನ್ನುವ ಚಿತ್ರಣ ಸ್ಪಷ್ಟವಾಗಿ ಗೋಚರಿಸುತ್ತದೆ.  

ದೇಶದ ಹೆಮ್ಮೆಯ ಆಟಗಳು ಇ ಬಾರಿ ನಮ್ಮ ದೇಶಕ್ಕೆ ದೊರೆತ್ತಿದ್ದು ತುಂಬಾ ಹೆಮ್ಮೆಯ ವಿಷಯ ಹಾಗೂ ನಮ್ಮ ದೇಶದಲ್ಲಿ ಇಂತಹ ಅನೇಕ ದೇಶ ಸೇರಿ ಆಡುವ ಆಟದಿಂದ ನಮ್ಮ ದೇಶದ ಬಗ್ಗೆ ಬೇರೆ ದೇಶದ ಜನರಲ್ಲಿ ನಂಬಿಕೆ ಮತ್ತು ಉತ್ತಮವಾದ ಕಲ್ಪನೆ ಮೂಡಿ ಅವರಲ್ಲಿ ಈ ದೇಶದ ಬಗ್ಗೆ ಗೌರವ ಮೂಡುವುದು ಸಹಜ. ಆದರೆ ಕಾಮನ್ ವೆಲ್ತ ಕ್ರೀಡಾಕೂಟದಲ್ಲಿ ನಡೆದ ಹಗರಣದಿಂದ ಬೇರೆ ದೇಶದ ಜನರಿಗೆ ಹೋದ ಸುಂದರ ಎಸ್ ಎಂ ಎಸ್ ಬೇರೆಯೆ ಇತ್ತು ನಮ್ಮ ಈ ಕಾಮನ್ ವೆಲ್ತ ಕ್ರೀಡಾಕೂಟದ ವೇದಿಕೆಯೆ ಮೇಲೆ ಹಗರಣವಿದೆಯೆಂದರೆ ಎಂತವರು ಕೂಡಾ ನಾಚಲೇಬೇಕಾದ ಅಗತ್ಯವಿದೆ ಅನಿವಾರ್ಯವಿದೆ ಅಲ್ಲವೆ? ಅವರ ಈ ನಾಚಿಕೆ ತರಿಸುವ ಕೆಲಸ ಕೇಂದ್ರ ಸರ್ಕಾರ ಮಾಡಿದ್ದು ನೊಡಿದರೆ ಈ ಹೊಲಸು ರಾಜಕೀಯದಲ್ಲಿ ಎಲ್ಲರು ಬಿದ್ದು ಒದ್ದೆಯಾಗಿದ್ದಾರೆ ಎನ್ನುವ ಸ್ಪಷ್ಟ ಚಿತ್ರಣ ಮೂಡುತ್ತಿದೆ. ಸಾಮಾನ್ಯ ಜನರ ವಿಷಯವೇ ಅರ್ಥಮಾಡಿಕೊಳ್ಳದ ಈ ಹಗರಣ ಈಡಿ ದೇಶವೆ ನಾಚುವಂತಹ ಕೆಲಸಮಾಡಿತು ಇದರ ಸಂಪೂರ್ಣ ರುವಾರಿ ನಮ್ಮ ಕೇಂದ್ರದ ಯು ಪಿ ಎ ಸರ್ಕಾರವೆ ಹೊರತು ಬೇರೆ ಯಾರು ಅಲ್ಲ .  

ಈ ದೇಶವು ಅತ್ಯಂತ ಸಂಪತ್ಭರಿತವಾದ ದೇಶ ನಮ್ಮ ಭೂಮಿ ಬೇರೆ ಎಲ್ಲು ಇಲ್ಲದ ನೆಲ ಅದರ ಬೆನ್ನಲೆ ಬೆಳಿದು ನಿಂತ ಥೋರಿಯಂನ್ನು ಹೇಗೆ ವಿನಿಯೋಗಿಸಿ ಜನರ ಜೀವನಕ್ಕೆ ಆಧಾರವಾಗಲು ಮುಟ್ಟಿಸಬೇಕಾದ್ದು ಕೇಂದ್ರ ಸರ್ಕಾರದ ಕೆಲಸ ಆದರೆ ಕೇಂದ್ರ ಸರ್ಕಾರ ಮಾಡಿದ ಘನ ಕೆಲಸವಾದರು ಏನು ಹೇಳಿ ಈ ಥೋರಿಯಂನಲ್ಲು ಅದರ ಬಳಕೆ ಮತ್ತು ಉಳಿಕೆಯಲ್ಲು ಹಗರಣದ ಮಜಾ ಮಾಡಿದರು ನಮ್ಮ ಈ ಹೊಲಸು ರಾಜಕೀಯ ಈ ಥೋರಿಯಂ ವಿಲೇವಾರಿಯ ನೇತೃತ್ವವನ್ನು ಸಂಪೂರ್ಣ ಕೇಂದ್ರ ಒಪ್ಪಿಕೊಂಡಿತ್ತು ಮತ್ತು ಅದರಂತೆ ಕಾರ್ಯಮಾತ್ರ ಮಾಡಲಿಲ್ಲ. ಈ ಥೋರಿಯಂನಲ್ಲು ಕಳ್ಳತನವನ್ನು ಮಾಡಿ ಈಡಿ ದೇಶದ ಪಾಲಿಗೆ ರಾಕ್ಷಸ ಅನುಭವ ನೀಡಿದ್ದು ಈ ಕೇಂದ್ರದ ಯುಪಿಎ ಸರ್ಕಾರ.  

ಆದರ್ಶ ಹೌಸಿಂಗ್ ಹಗರಣ ನಮ್ಮ ದೇಶದ ಅತ್ಯಂತ ಸುಂದರ ಹಾಗೂ ಸ್ವಚ್ಯ ಯೋಜನೆಯೆಂದು ಹಾಗೂ ಜನರ ಮನದಾಳದ ಮಾತು ಕೇಳುವ ಏಕೈಕ ದೃಷ್ಠಿಕೋನದಿಂದ ಸ್ಥಾಪಿಸಿದ ಆದರ್ಶ ಹೌಸಿಂಗ್ ಬೋರ್ಡ ಕೇಂದ್ರದಲ್ಲಿ ಕೊಳ್ಳೆ ಹೊಡೆಯುವ ಕೆಲಸಕ್ಕೆ ಕೈ ಹಾಕಿತು ಮತ್ತು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ತಾಕತ್ತು ಮಾಡಿದ್ದು ಕೇಂದ್ರ ಸರ್ಕಾರ. ಕೇಂದ್ರದ ಕಾಂಗ್ರೇಸ್ ಸರ್ಕಾರದಲ್ಲಿ ಇಂತಹ ಹಗರಣ ಮಾಡುವ ಕಳ್ಳ ಕಧೀಮರು ಇದ್ದ ಸಂಗತಿ ಅವ್ವ ಮಗನಿಗೆ ಗೊತ್ತಿಲ್ಲವೆ? ಅಥವಾ ಗೊತ್ತಿದ್ದು ಅದರಲ್ಲಿ ನಮಗೂ ಪಾಲಿದೆಯೆಲ್ಲ ಅಂತಾ ಸುಮ್ಮನಿರುವರೆ ತಿಳಿಯದು.  

ಹೀಗೆ ಈ ಕೇಂದ್ರ ಸರ್ಕಾರ ಹಗರಣಗಳ ಪಟ್ಟಿ ಬೆಳಿಯುತ್ತದೆ. ಐಪಿಎಲ್ ಹಗರಣ,ಸತ್ಯಂ ಹಗರಣ,ಎಲ್ ಐ ಸಿ ಹಗರಣ ಆಹಾರ ಧಾನ್ಯ ಹಗರಣ, ಇಸ್ರೋ ಹಗರಣ, ಹೀಗೆ ಒಂದೆ ಎರಡೆ ಅನೇಕ ರೀತಿಯಲ್ಲಿ ಜನರ ಕೊಳ್ಳೆ ಹೊಡೆದು ಸುಳ್ಳು ಭರವಸೆ ನೀಡಿ ಎಲ್ಲರನ್ನು ಬಡವರನ್ನಾಗಿ ಮಾಡಿ ತಾವು ತಾಯಿ ಮಗ ಮಾತ್ರ ಆರಾಮವಾಗಿ ಜೀವನ ಮಾಡುತ್ತಿರುವ ಇವರು ಹೆಸರಿಗೆ ಮಾತ್ರ ನಾನು ಅತ್ತೆಯ ಕನಸು ನೆನಸು ಮಾಡುತ್ತೀನಿ. ನಾನು ಅಪ್ಪನ ಕನಸು ನೆನಸು ಮಾಡುತ್ತೀನಿ ಎಂಬ ಗೊಡ್ಡು ಭರವಸೆಯನ್ನು ಜನರ ಮುಂದೆ ಇಡುತ್ತಾ ನಡೆದಿದ್ದಾರೆ. ಅಷ್ಟೆ ಈಗ ಮತ್ತೆ ನಮಗೆ ಅಧಿಕಾರ ಕೊಡಿ ಈ ದೇಶವನ್ನು ಇನ್ನಷ್ಟು ಕೊಳ್ಳೆ ಹೊಡೆದು ಮತ್ತೊಮ್ಮೆ ಈ ದೇಶ ಆಳುತ್ತೇವೆ ಎಂದು ಬೇಡಿಕೊಳ್ಳುತ್ತಿರುವ ಕೇಂದ್ರದ ಯು ಪಿ ಎ ಗೆ ನಮ್ಮ ಮತದಾರ ಹೇಗೆ ಬೆಂಬಲಿಸುವನೋ ತಿಳಿಯದು.  

ಅವರು ಹಂಗ, ಇವರು ಹಿಂಗ ಮತ್ತು ನಾವೆಲ್ಲ ಆಗಿದ್ದೀವಿ ನಡುವೆ ಮಂಗ. ಹೌದು ಈ ರಾಜಕೀಯ ವಿಷಯದಲ್ಲಿ ಯಾರಿಗೆ ನಂಬಬೇಕು ಯಾರಿಗೆ ಬಿಡಬೇಕು ತಿಳಿಯಾದಾಗಿದೆ ಸದ್ಯ ಅವರ ಕೆಲಸ ಇರುವುದರಿಂದ ನಮಗೆ ಕಾಲು ಬೀಳುತ್ತಿರುವ ಮತ್ತು ಅನೇಕ ಆಮಿಷ್ಯಗಳನ್ನು ಒಡ್ಡಿ ಅವರು ನಮಗಾಗಿಯೆ ಎಂಬ ಕಲ್ಪನೆ ಮೂಡುತ್ತಿದ್ದು ನಾವು ಅವರಿಗಾಗಿಯೆ ಜೀವಂತ ಇರುವೆವು ಎಂಬ ಕಲ್ಪನೆ ಮೂಡುತ್ತಿದೆ .  

ನಮ್ಮ ದೇಶದ ರಾಜಕೀಯ ಅತ್ತೆಗೊಂದು ಕಾಲವಿತ್ತು ಈಗ ಸೊಸೆಗೊಂದು ಕಾಲ ಬಂದಿದೆ ಮುಂದೆ ಅದು ತಾಯಿಗೊಂದು ಕಾಲ ಮತ್ತು ಮಗನಿಗೊಂದು ಕಾಲ ಆಗುವ ನಿರೀಕ್ಷೆಯಿದೆ. ಅಲ್ಲಿ ತಾಯಿ ಮಗ ಆಳುತ್ತಿರುವವರು ಇದು ಹೇಗೆ ಪ್ರಜಾಪ್ರಭುತ್ವ ಎನ್ನುವುದು ತಿಳಿಯದಾಗಿದೆ. ದೇಶದ ರಾಜಕೀಯ ವ್ಯವಸ್ಥೆ ಹದಗೆಟ್ಟು ಹುದುಗಿಹೋಗಿದೆ. ಅವರಿಬ್ಬರು ಯಾರ ಪರವೇಯಿಲ್ಲದೆ ಈ ದೇಶದ ಜನರನ್ನು ಕೊಳ್ಳೆ ಹೊಡೆದು ಮೊಸಳೆ ಕಣ್ಣೀರಿಡುವ ಕೆಲಸಕ್ಕೆ ಮುಂದಾಗಿದ್ದಾರೆ ಎನ್ನುವುದು ಅನೇಕ ನಿದರ್ಶನಗಳು ಹೇಳುತ್ತವೆ .  

ಇನ್ನು ನಮ್ಮ ಕನ್ನಡ ಮಾತೆಯ ಸ್ಥಿತಿಗತಿಗೆ ಬಂದರೆ ನಮ್ಮ ಜನರರನ್ನು ಹೇಗೆ ಕೊಳ್ಳೆ ಹೊಡೆದರು ಎನ್ನುವ ಲೆಕ್ಕಚಾರಕ್ಕೆ ಅನೇಕ ರೀತಿಯಲ್ಲಿ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಈ ಕರ್ನಾಟಕದಲ್ಲಿನ ರಾಜಕೀಯ ನೋಡಿದರೆ ಹೇಸಿಗೆ ಬರುವಂತಹದ್ದು ಜನರ ಬದುಕು ಬದಲಿಸುತ್ತೀವಿ ಅಂತಾ ಅಧಿಕಾರ ಹಿಡಿದ ಭಾರತೀಯ ಜನತಾ ಪಾರ್ಟಿ ತನ್ನ ಐದು ವರ್ಷದ ಇತಿಹಾಸದಲ್ಲಿ ಬರಿ ಜಗಳ , ಜೈಲು, ಹೋರಾಟ ,ಚೀರಾಟ, ಸದನದಲ್ಲಿ ಕೋಲಾಹಲ, ಪಕ್ಷ್ಯದಿಂದ ಪಕ್ಷಕ್ಕೆ ಹಾರಾಟ , ಒಬ್ಬರನ್ನು ಇನ್ನೊಬ್ಬರ ಮೇಲ ಎತ್ತಿಕಟ್ಟುವುದು, ಹಲವು ರೀತಿಯ ಹಗರಣ, ಡಿ ನೋಟಿಫೀಕೇಷನ್, ಭೂ ಹಗರಣ, ಅಶ್ಲೀಲ, ಹೀಗೆ ಅನೇಕ ರೀತಿಯ ರಾಜಕಾರಣ ಮಾಡಿ ಹಲವು ಜನರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ ವಿಶೇಷವಾದ ಆಡಳಿತ ನೀಡಿದರು.  

ಕರ್ನಾಟಕದಲ್ಲಿ ಬಿ.ಜೆ.ಪಿ.ಸರ್ಕಾರ ರಚನೆಯಾಗಿದ್ದು ಅರವತ್ತು ವರ್ಷದಲ್ಲೇ ಪ್ರಥಮವಾಗಿದ್ದು ಇತಿಹಾಸ ರಚನೆಯ ಕಾಲವದು . ಸಂವಿಧಾನದಲ್ಲೆ ಪ್ರಥಮ ಎರಡು ಉಪಮುಖ್ಯಮಂತ್ರಿ ಸ್ಥಾನಗಳು ನೀಡಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ . ಸಧನದ ಕಲಾಪ ವೇಳೆಯಲ್ಲೆ ಜಗದ ಜನತೆಯ ಚಿಂತೆ ಮರೆತು ಬ್ಲೂ ಫಿಲ್ಮಂ ನೋಡಿದ ಸರ್ದಾರರು ಈ ಪಕ್ಷದಲ್ಲಿ ಕಂಡುಬಂದರು . ರೈತನ ಮೇಲೆ ಆಣೆ ಮಾಡಿ ಅಧಿಕಾರ ಹಿಡಿದ ಹಿಡಿದ ಸರ್ಕಾರ ಕೊನೆಗೆ ರೈತರನ್ನೆ ಗುಂಡಿಕ್ಕಿ ಕೊಂದಿದ್ದು ಅರವತ್ತು ವರ್ಷದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ಈ ಸರ್ಕಾರದ್ದು.

 ಒಬ್ಬ ಮುಖ್ಯಮಂತ್ರಿ ಸ್ವತ: ಸರ್ಕಾರ ಇರುವಾಗಲೆ ಭೂಕಬಳಿಕೆ ಹಗರಣದಲ್ಲಿ ಸಿಕ್ಕು ಜೈಲು ಸೇರಿದ್ದು ಅರವತ್ತು ವರ್ಷದಲ್ಲೇ ಪ್ರಥಮ. ಹೆಸರು ಹೇಳಬೇಕಾದ ಅಗತ್ಯವಿಲ್ಲ . ತಮ್ಮದೆ ಆದ ಶಾಸಕರು ಸರ್ಕಾರವನ್ನು ಉರುಳಿಸುವ ಪ್ರಯತ್ನದಲ್ಲಿ ರಾಜ್ಯ ಬಿಟ್ಟು ಬೇರೆ ರಾಜ್ಯ ಸೇರಿದ್ದು ಅರವತ್ತು ವರ್ಷದಲ್ಲೇ ಪ್ರಥಮ ಇಂಥಹ ಅಧಮ ಶಾಸಕರನ್ನು ನೀಡಿದ್ದು ಬಿಜೆಪಿ . ಒಬ್ಬ ದಿಟ್ಟ ,ಜನಮೆಚ್ಚಿದ,ಭ್ರಷ್ಟಾಚಾರ ವಿರೋಧಿ,ಮುಖ್ಯಮಂತ್ರಿಯನ್ನು ಕಾರಣವಿಲ್ಲದೆ ಕಿತ್ತೆಸೆದ ಬಿ.ಜೆ.ಪಿ. ಹೈ ಕಮಾಂಡ ಅರವತ್ತು ವರ್ಷದಲ್ಲೇ ಪ್ರಥಮ. ರಾಷ್ಟ್ರೀಯಾ ಸೇವಾ ಸಂಘದ ಕೈಯಲ್ಲಿ ರಿಮೋಟ್ ಕಂಟ್ರೋಲ್ ಕೊಟ್ಟ ಬಿ.ಜೆ.ಪಿ.ಸರ್ಕಾರ ಅದು ಹೇಳಿದಂತೆ ಕುಣಿದು ಹದಗೆಟ್ಟಿತು.

 ಕೇಂದ್ರದ ಬಿ.ಜೆ.ಪಿ. ವರಿಷ್ಠರನ್ನು ನಡುಗಿಸಿ ರಾಜ್ಯದ ರಾಜಕೀಯ ಚುಕ್ಕಾಣಿ ಹಿಡಿದ ಒಬ್ಬ ವ್ಯಕ್ತಿ ಅರವತ್ತು ವರ್ಷದಲ್ಲೇ ಪ್ರಥಮ ಹೈಕಮಾಂಡಗೆ ವ್ಯಕ್ತಿತ್ವವೆ ಇಲ್ಲದಂತೆ ಮಾಡಿದ ಶ್ರೇಯಸ್ಸು ಬಿಜೆಪಿಗೆ ಸಲ್ಲುತ್ತದೆ. ತನ್ನ ಆರು ಅಂಗ ಸಂಸ್ಥೆಗಳು ಮತ್ತು ಏಳು ಮಂದಿ ನಾಯಕರಿಗೆ ಯಡಿಯೂರಪ್ಪ ಸರ್ಕಾರ ಅಂದಾಜು 50 ಕೋಟಿ ರೂಪಾಯಿ ಬೆಲೆಬಾಳುವ ಜಮೀನನ್ನು ನೀಡಿದ್ದು ಅದನ್ನು ಸಾಮಾನ್ಯ ಜನರ ಆಸ್ತಿ ಕೊಳ್ಳೆ ಹೊಡೆದರು. ಚೆಲ್ಲಾಪಿಲ್ಲೆಯಾಗಿ ಹರಡಿರುವ ಭ್ರಷ್ಠಾಚಾರ ಅರವತ್ತು ವರ್ಷದಲ್ಲೇ ಪ್ರಥಮ. ದೇಶದ ಎದುರು ರಾಜ್ಯದ ಜನತೆ ತಲೆ ತಗ್ಗಿಸುವಂತೆ ಹೊರತಂದಿರುವ ಆಪರೇಷನ್ ಕಮಲ ಅರವತ್ತು ವರ್ಷದಲ್ಲೇ ಪ್ರಥಮ. ಮಂಗಗಳಂತೆ ಪಕ್ಷದಿಂದ ಪಕ್ಷಕ್ಕೆ ಹಾರಾಡುವ ಕೆಲಸ ಶುರುವಾಯಿತು. ವಿಧಾನ ಸೌಧದ ಸಚಿವರೊಬ್ಬರು ಸ್ನೇಹಿತನ ಹೆಂಡತಿಯೊಂದಿಗೆ ಅನೈತಿಕ ಚಟುವಟಿಕೆ ಅರವತ್ತು ವರ್ಷದಲ್ಲೇ ಪ್ರಥಮ. ಈಡಿ ದೇಶವೆ ತಲೆ ತಗ್ಗಿಸುವಂತಹ ಕೆಲಸವಾಯಿತು. ಸರ್ಕಾರದಲ್ಲಿದ್ದ ಸಚಿವರೊಬ್ಬರು ನರ್ಸ್ ಜೊತೆಗೆ ಓಪನ್ ಕಿಸ್ ಅರವತ್ತು ವರ್ಷದಲ್ಲೇ ಪ್ರಥಮವಾಗಿ ರಾಜಕೀಯ ದಾಖಲೆ ನಿರ್ಮಿಸಿದರು 

 ಇಂತಹ ಆಡಳತ ನೀಡಿದ ಈ ಎರಡು ರಾಜಕೀಯ ಪಕ್ಷಗಳು ಮತ್ತೆ ಈಗ ಬಿರುಸಿನ ಪ್ರಚಾರದಲ್ಲಿ ತೊಡಗಿಸಿಕೊಂಡಿವೆ ಮನೆ ಮನೆಗೆ ತಿರುಗಿ ಮತ ಕೇಳುವ ಕೆಲಸದಲ್ಲಿ ನಿರತರಾಗಿದ್ದಾರೆ. ತಿಪ್ಪೆ ಗುಂಡಿಗಳಲ್ಲಿ ತಿರುಗಿ ಎಲ್ಲರ ಮನಗೆಲ್ಲಲು ನೋಡುತ್ತಿದ್ದಾರೆ . ಸಾಮಾನ್ಯ ಜನರಲ್ಲಿ ಹಲವು ಭರವಸೆಗಳ ಮಾಹಾಪೂರ ಹರಸುತ್ತಿದ್ದಾರೆ. ದೊಡ್ಡ ದೊಡ್ಡ ಜಾಹಿರಾತು ನೀಡಿ ಜನರನ್ನು ಮರಳು ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಎಲ್ಲಿ ನೋಡಿದರು ಬರಿ ಆಡಂಬರದ ವಿಚಾರಗಳನ್ನು ಮಾತನಾಡಿ ತಾವು ಈ ಹಿಂದೆ ಯಾವ ಭ್ರಷ್ಠಚಾರ ಮಾಡಿಲ್ಲ ಉತ್ತಮ ಆಡಳಿತ ನೀಡಿದ್ದೇವೆ ಎಂಬ ಕಲ್ಪನೆ ಮೂಡಿಸುವಲ್ಲಿ ಯಶಸ್ವಿಯಾಗುವ ಆಸೆ ಮೂಡಿಸಿಕೊಳ್ಳುತ್ತಿದ್ದಾರೆ . ಮತದಾರನ ಮನಸ್ಸಿನ ಮೇಲೆ ಆಗ ಬರೆ ಎಳಿದ ಇವರು ಈಗ ಮತ್ತೆ ಮೋಸದ ಜಾಲದಲ್ಲಿ ಬಿಳಿಸಿ ಅವರ ಹಕ್ಕುಗಳಿಗೆ ಚ್ಯೂತಿ ಬರುವ ಕೆಲಸ ಈ ಪಕ್ಷಗಳು ಮಾಡುತ್ತಿವೆ.  

ಇನ್ನು ಮತದಾರ ಹೇಗೆ ಈ ವಿಷಯ ಸ್ವೀಕರಿಸಿ ಯಾರಿಗೆ ಮಣಿ ಹಾಕುವನೊ ತಿಳಿಯದಾಗಿದೆ. ಪಕ್ಷಗಳು ಹತ್ತಾರು ಚಿಹ್ನೆಗಳು ಹತ್ತಾರು ಯಾರು ಯಾವ ಪಕ್ಷದಲ್ಲಿ ಇದ್ದಾರೆ ಎಂಬ ಕಲ್ಪನೆ ಇಲ್ಲದಂತಾಗಿದೆ ಏಕೆಂದರೆ ಇವತ್ತು ಬಿಜೆಪಿಯಲ್ಲಿದ್ದವರು ನಾಳೆ ಕೆಜೆಪಿ ಮುಂದೆ ಕಾಂಗ್ರೇಸ್ ಜೆಡಿಎಸ್ ಅದರಿಂದ ಕೂಡ ಮತದಾರ ಸ್ವಲ್ಪ ಗೊಂದಲದಲ್ಲಿ ಇದ್ದಾನೆ. ಮತದಾರ ಈಗಾಲಾದರು ಎಚ್ಚತ್ತು ತನ್ನ ಹಕ್ಕು ಅರಿತು ಯಾರಿಗೆ ಮತ ನೀಡಿದರೆ ನಮ್ಮ ನಾಡು ನುಡಿ ಉಳಿಯುತ್ತದೆ ಎಂಬ ವಿಚಾರ ಮಾಡಿ ಮತ ನೀಡಿದರೆ ಉತ್ತಮ ಸರ್ಕಾರ ರಚನೆಯಾಗಿ ಹೊಸದೊಂದು ನಾಡು ನುಡಿಯ ಚಿಂತನೆ ಮಾಡಲು ಸಾದ್ಯವಾಗುತ್ತದೆ . ಇಲ್ಲವಾದಲ್ಲಿ ಮತ್ತೆ ಈ ನಾಡಿನ ರೈತರ , ಬಡವರ ಸ್ಥಿತಿಗತಿ ಹಾಗೆ ಉಳಿದು ಈ ರಾಜಕೀಯ ವ್ಯಕ್ತಿಗಳ ಹೊಟ್ಟೆ ಮಾತ್ರ ಉಬ್ಬುತ್ತಾ ಹೋಗುವುದರಲ್ಲಿ ಎಳ್ಳು ಕಾಳಿನಷ್ಟು ಸಂಶಯವಿಲ್ಲ ಮತದಾರ ಪ್ರಭುವಿನ ಈ ಬಾರಿಯ ರಾಜಕೀಯ ಲೆಕ್ಕಚಾರ ಹೊರಬಿದ್ದ ಮೇಲೆಯೆ ಅರ್ಥವಾಗುತ್ತದೆ. ಇಂದು ನಮ್ಮ ಫೂಟ್ ಮುಟ್ಟಿ , ನೋಟ್ ಕೊಟ್ಟು , ಅಧಿಕಾರ ಹಿಡಿದವರು. ಮುಂದೆ ಕೋಟಿ ಹಣ ಲೋಟಿ ಹೊಡೆದು ನಮ್ಮನ್ನೆಲ್ಲ ತಮ್ಮ ಬೂಟಿನ ಸಮ ಮಾಡುವರೆನೊ ಎನ್ನುವ ಭಯ ಕಾಡುತ್ತಿದೆ. ಈಗ ಕಾದು ನೋಡಬೇಕಷ್ಟೆ........ 

ಕೆ.ಎಂ.ವಿಶ್ವನಾಥ (ಮಂಕವಿ ) ಮರತೂರ.

ಲೇಖಕರು, " ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ " ಪ್ರಶಸ್ತಿ ಪುರಸ್ಕೃತರು .

9620633104
mankavi143@gmail.com
www.mankavi.weebly.com

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.