Skip to main content

ಯಿಲಕ್ಸನ್ನು ಯೆರಡನೇ ಬಾಗ

ಇಂದ hdrevanna
ಬರೆದಿದ್ದುApril 29, 2013
noಅನಿಸಿಕೆ

ಇದರ ಮೊದಲ ಭಾಗ ಪ್ಯಾಟೆ ಐಕ್ಳಿಗೆ ಯಿಲೆಕ್ಸನ್ನು ಕ್ಯಾಂಡಿಡೇಟು ನಮುಸ್ಕಾರ


ಛೆ!! ಯಂತಾ ಕೆಲ್ಸ ಆಗಿ ವೋಯ್ತು ಬುದ್ದೀ! ಯಡ್ಡಿ ಮ್ಯಂಟ್ಲಾಗಿಬುಟ್ಟವ್ನೆ ಕನಪ್ಪ. ಮ್ಯಂಟ್ಲಾಗಿಬುಟ್ಟವ್ನೆ! ಅಲಲೇ ಸಿಕ್ಕಿ ಸಿಕ್ಕಿದವೆಲ್ಲ ಬ್ಯನ್ನಿಗೆ ಚಾಕಾಕಿದ್ರು ಅಂದ್ಕಂಡು ಸಿಕ್ಕಿಸಿಕ್ಕಿದಲ್ಲೆಲ್ಲ ವೋಗಿ ಬಡ್ಕತವ್ನಪ್ಪ. "ರಾಜ್ಯದ ಮುಕ್ಯ ಮಂತ್ರಿ ಆಗಿದ್ದೋವ್ನು ನೀನು. ಮಳ್ಳುನ್ ತರ ಅಸ್ಟೆಲ್ಲ ಯಾಕ್ಲಾ ಬ್ಯನ್ನಿಗೆ ತಿವಿಸ್ಕಂಡೆ?" ಅಂತ ಮುಕಕ್ಕೇ ಕೇಳಕ್ಕೆ ಒಂದು ಯಂಗ್ಸು ಗತಿಯಿಲ್ದಂಗಾಯ್ತಲ್ಲಪ.ಕಳೆದ ಯಿಲೆಕ್ಸನ್ನಿನಾಗೆ ನಂ ಕುಮ್ಮಿ ಕೈಕೊಟ್ಟಾ ಅಂತ ಸಿಕ್ಸಿದಲ್ಲೆಲ್ಲ ಗೊಣ್ಣೆಯಿಳಿಸ್ಕಂಡು ಊಊಊ ಅಂತ ಅತ್ಕಂಡು ತಿರುಗ್ದಾ. ಜನಾ "ಚೆ ಚೆ ಚೆ ಇದೇನಿದು ರಾಜ್ಕೀಯ ಹವ್ತಾರ? ಅಪ್ಪ ಮಕ್ಳು ಈ ಯಡ್ಡೀನ ತಿರುಬೋಕಿ ಮಂಗುನ್ನ ಮಾಡಿದ್ರಲೇ. ನಾವೇ ಜನುಗಳೇ ಈ ಅಪ್ಪ ಮಕ್ಳುನ್ನ ಇಚಾರ್ಸ್ಕಬೇಕು ಕಣಲೇ....ಮಾಡ್ತೀನ್ನೋಡು ಈ ಕುಮ್ಮಿಗೆ" ಅಂತ ಯಡ್ಡೀಗೆ ವೋಟಾಕಿದ್ರು. ಗೌಡಾಸ್ ಆಂಡ್ ಸನ್ಸ್ ಬ್ಯಾಡಲೇ ಅಂತ ಈ ಯಡ್ಡೀನ ತಗಂಬಂದು ಕೂರಿಸಿದ್ರು ಕನಪ್ಪ. ಆಗ ತೋರುಸ್ದಾ ನೋಡಿ ಈ ಯಡ್ಡಿ ಕರುನಾಟಕದ ವೋಟರ್ ಪ್ರಭುಗೆ ಇಸ್ವಾಸ. "ಯೇನಿದ್ರೂ ನಂಗೇ ಬೇಕು" ಅನ್ಕಂಡೇ ತಿರುಗ್ದಾ. ಥರುಟೀ ಫಾರುಟೀ ಸೈಟು ಕೂಡ ತನ್ನಕ್ಕನ್ ಯಸ್ರಿಗೆ ಬರಕಂಡಾ. ಕೇಸಲಿ ಸಿಗಾಬಿದ್ದು ಮುಕ್ಯಮಂತ್ರಿ ಸ್ತಾನ ಕಳುಕಂಡ. ಮದಲು ಸದುಗೌಡುನ್ನ ತಗಂಬಂದು ಲಿಂಗವಂತ್ರಿಗೆ ಬ್ಯನ್ನಿಗೆ ಚಾಕಾಕ್ದ. ಆಮ್ಯಾಕೆ ಅಂಗಡಿ ಶಟ್ರನ್ನ ತಗಂಬಂದು ಗೌಡ್ರಿಗೆ ಹಿಂದಿಂದಿಟ್ಟ. ಯೀಗ ಕೇಳಿಲ್ಲಂದ್ರೂ ರಸ್ತಿ ಪಕ್ಕ ನಿಂತ್ಕಂಡು ಕೂಗ್ಕತನೆ ನಿರಾಣಿ ಪರಾಣಿ ಯೆಲ್ಲ ಕೈಕೊಟ್ರು ಅಂತ. ಅಲ ಕುಮ್ಮಿ ಕೈಕೊಟ್ರೆ ಉಳಿದವ್ರಾದ್ರೂ ವೋಟಾಕ್ತರೆ. ಪರಾಣಿ ಕೈಕೊಟ್ರೆ ಯಾರಾಕ್ತರೆ? ಅದುಕ್ಕೆ ಬ್ಯನ್ನಿಗೆ ಚಾಕಾಸ್ಕಳಾದಿದ್ರೆ ನಂ ಕುಮ್ಮಿ ಹತ್ರ ಹಾಕಿಸ್ಕಳ್ಳೋ ಯಡ್ಡಿ. ಉರಿಮೂತಿ ಮಂಗುನ್ನ ತಂದು. ಅನಂತು ಬ್ಯನ್ನಿಗಾಕ್ದಾ ಅಂದ್ರೆ ಅವುನ್ಯಾವಗನ್ಲಾ ಸರೀಕೆ ಇದ್ದಿದ್ದು ಅನ್ನಲ್ವೇನಪ್ಪ ಊರ ಹಲ್ಮಂತಾ?

ಇತ್ಲಾಗೆ ಶಿವ್ಕುಮಾರು ನಂ ಸಿಂಧ್ಯನ್ನ ಯಿಂದೆ ಮುಂದೆ ಬಿಡುದೆ ಕಾಡ್ತವ್ನೆ. "ಮಾಟಾ ಮಾಡುಸ್ಬಿಟ್ಟವ್ರೆ, ಮಂತ್ರ ಆಕುಸ್ಬಿಟ್ಟವ್ರೆ" ಅಂತ ಬಡ್ಕಂತನೆ. ಅಲಲೇ ಮಾಟಾ ಮಂತ್ರುದಾಗೇ ಯೆಲ್ಲ ಇದ್ದಿದ್ರೆ ಕೊಳ್ಳೇಗಾಲ್ದಾಗ್ಯಾಕೆ ಜನಾ ಅಸ್ರು ಕಾರ್ಡು, ರೇಶನ್ನು, ಯಿಧವಾ ಯೇತನ, ಗಂಜಿ ಕೇಂದ್ರ ಅನ್ಕಂಡು ಲಾಟ್ರಿ ವಡೀತಿದ್ರಲೇ? ಅಲ್ಲಲೇ ಯೀ ಶಿವ್ಕುಮಾರುನ್ನ ಅವುನ್ ತಮ್ಮುನ್ನ ಕಣ್ಣೆತ್ತಿ ನೋಡುದ್ರೆ ಒಳಕೇಲಿ ಸ್ವಂಟಾ ಮುರುದೋಗುವಂಗೆ ಬಡ್ಸಾಕಿಬಿಡ್ತಾರೂ ಕನಪ್ಪ. ಯಾವೋನಿಗೆ ಬೇಕ್ಲ ಈ ಮಾಟಾ ಮಂತ್ರುದ್ ಉಸಾಬರಿ. ಈ ಶಿವಕುಮಾರಾನೇ ಅಗ್ನಿ ಸ್ರೂಧರಂಗೆ ಯೋಳಿ ಸಾರ್ವಜನಿಕ ಸಬೇನಾಗೇ ಸಿಂಧ್ಯಂಗೆ ಯಿಡಿಕಂಡು ಹರಹರಕು ಚಪ್ ಚಪ್ಲೀಲಿ ಬಡಿಸಿದ್ನಪ. ಆ ನೋವು ವೋದೀತೇನ್ಲ ಮರುತು ಸಿಂದ್ಯಂಗೆ? ಅಲ ಯೋಳದಿದ್ರೆ ಶಿವ್ಕುಮಾರು ತೆಪ್ಪಗಾಗಾದೇನರ ಯೋಳ್ಬೇಕು. ಇದೇನ್ಲ ಸಿವಾ ಮಾಟಾ ಮಂತ್ರಂತ?

ಅಲ್ದೇ ಅಂಗ್ಡಿ ಶಟ್ರು ಮ್ಯಂಟ್ಲಾಗಿಬಿಟ್ಟವ್ನೆ ಕನಪ್ಪ. ನಮ್ದೇ ಮುಂದಿನ ಅಧಿಕಾರಾ.. ನಾನೇ ಮುಖ್ಯಮಂತ್ರಿ ಅನ್ಕಂಡು ತಿರುಗುತಾವ್ನೆ. ಅಲ್ಲಲೇ ನೀವು ಅಧಿಕಾರುಕ್ಕೆ ಬಂದ್ರೂ ಹಲ್ಲುಬ್ಬ ಅನಂತು ಯೇನು ಹೂವಾ ಮಾರ್ಕಂಡು ಕುಂತಿರ್ತಾನಾ? "ಚೆಡ್ಡಿ ಅಂದ್ರೆ ಯಡ್ಡಿ ಯಡ್ಡಿ ಅಂದ್ರೆ ಚಡ್ಡಿ. ಉಳಿದವ್ರೆಲ್ಲ ಅವ್ನ ಮುಂದೆ ಪೊರಕೆ ಕಡ್ಡಿ" ಅನ್ನಂಗಿದ್ನಪ್ಪಾ ಯಡ್ಡಿ. ಅವುನ್ನೇ ತಗಂಡೋಗಿ "ಖಾ ಥೂ ವೋಗಲೇ ಮಂಗಾ. ನಿಂದು ಉರಿಮೂತಿ ತಗಂಡು ಬ್ಯಾರೇ ನೋಡ್ಕೋಗು. ಜೈಲುವಾಸಿ ಕಳ್ಳಾ. ಬೀರ್ದೇವ್ರ ಜಾತ್ರೇಲಿ ಪಿಕ್ ಪಾಕೀಟು ಮಾಢೋಗು!!" ಅಂತ ವೋಡಿಸ್ಬಿಟ್ಟ ಈ ಅನಂತು. ಅಂತದ್ರಲ್ಲಿ ಯಿಂಗೇ ಈ ಶಟ್ರು ಬಾಯಿಗ್ಬಂಧಾಗೆ ಮಾತಾಡಿಕಂಡಿದ್ರೆ ಅನಂತು ಶಟ್ರ ಖಾಕಿ ಚೊಣ್ಣಾನ ಕಿತ್ಕಂಡು ವೋಡಿಸಾದು ಗ್ಯಾರಂಟಿ. ಅಲಲೇ ಯಡ್ಡಿ ಯಿರುದ್ಧ ಇದ್ದಾಗ ಶಟ್ರ ಮುಕ್ಯಮಂತ್ರಿ ಮಾಡಕ್ಕೆ ಅಡ್ವಾಣಿಗೇ ಆಗಿಲ್ಲ. ಅಲ್ದೇ ಯಡ್ಡಿ ಯಿಂದೆ ಇದ್ದಾಗ ಶಟ್ರ ಮುಕ್ಯಮಂತ್ರಿ ಮಾಡದೇ ಇರಕ್ಕೂ ಅಡ್ವಾಣಿಗೇ ಆಗಿಲ್ಲ. ಅಂತದ್ರಲ್ಲಿ ಅಂತಾ ಯಡ್ಡಿನ ಯಿರುದ್ದ ಯಿಟ್ಕಂಡು ಚಡ್ಡಿಪಕ್ಸಾನಾ ಅಧಿಕಾರುಕ್ಕೆ ಯಾರು ಅಡ್ವಾಣಿ ತರುತಾನಾ ಇಲ್ಲ ಗುರಾಣಿ ತರುತಾನಾ?

ಯಿಂಗೆ ಯೆಲ್ಲಾರದೂ ವಂದು ಅಂದ್ರೆ ಅದುರ ಮಧ್ಯುದಾಗೆ ಈ ಗನಂಜಯ ಕುಮಾರಂದೇ ವಂದು. "ಯಡ್ಡೀ ಜೈಲಿಗೋಗಿದ್ದ ಥೂ" ಅಂತ ಯಾರೋ ಅಂದ್ರೆ ಈಯಪ್ಪ ಗನಂಜಯ ಕುಮಾರ ಯಶ್ಚಗಾನಾ ಮಾಡೋವ್ರ ತರ ಕೈ ಅಲ್ಲಡಿಸ್ಕಂಡು "ಹ ಹ ಹ ನಾವೇನು ಸಾಮಾನ್ಯರೇ, ಸದಾನಂದ ಗವುಡನ ಹಾಗೆ ಕೈಯಲ್ಲಿ ಕಿಲುಬು ಕಾಸಿಲ್ಲದ ಅಡ್ಡಕಸುಬಿಗಳೇ.... ಛಕ್ರವರ್ತಿ ಅಡ್ವಾಣಿಯವರಿಗೇ ಕ್ವಟ್ಟಿದೀವಿ ಮಂತ್ಲೀ ಮಂತ್ಲೀ ಕಪ್ಪ. ಅದಕ್ಕಾಗಿಯೇ ನಾವು ಸಾಮಂತರಾಗಿ ರಾಜ್ಯ ಹಾಳಿದ್ದು. ಹ ಹ ಹ ...." ಅಂತ ಛಪ್ಪನೈವತ್ತಾರು ನರ ಅಲ್ಲಾಡಿಸ್ಕಂಡು ತನ್ನ ಪಾಂಡ್ಸು ಪೌಡರಿನ ಕರಿವದನ ತೋರ್ಸಿ ಯೋಳೇ ಬಿಡೋದಾ? ಅಲ ಯಡ್ಡಿ ದೈನೇಸಿ ಮುಕಾ ಹಾಕ್ಕಂಡು ಅಡ್ವಾಣೀ ಕ್ಸಮೇ ಕೇಳ್ಬೇಕಾಯ್ತು. ಬೇಕಿತ್ತಾ? ನಾನಾಗಿದ್ರೆ ರೂಮಲ್ಲಾಕ್ಕಂಡು ನಾದಿರೋವ್ನು. ಈ ಮನೇ ಕೆಲ್ಸದವ್ರೆಲ್ಲ ನಾಲ್ಗೆ ಬಿಟ್ಕಂಡು ವೋಡಾಡ್ಕಂಡಿದ್ರೆ ಯಡ್ಡಿ ಕ್ಸಮೆ ಕೇಳ್ಬೇಕಾ? ಹಾ. ಅಲ್ಲಲೇ ಈ ಗನಂಜಯುನ್ನ ತಗಂಡೋಗಿ ವಳ್ಳೇ ಫೈನಾನ್ಸು ಡಿಪಾರ್ಮೆಂಟಿಗೆ ಸೆಂಟ್ರಲ್ ಮಿನಿಸ್ಟ್ರು ಮಾಡಿದ್ರೆ ಈಯಪ್ಪ ಆ ಐಶ್ವರ್ಯ ರೈಗೇ ಕಣ್ಣಕಿಬುಟ್ಟಿದ್ದ ಕನಪ್ಪ. ಆಯಮ್ಮ ಅಡುವಾಣಿಗೆ ವೋಗಿ ಅತ್ಕಂಡು ಈ ಗನಂಜಯುನ್ನ ದಿಲ್ಲೀಂದ ವದ್ದು ವದ್ದು ವೋಡಿಸಿದ್ರಲೇ. ಅದುಕ್ಕೇ ಇವುನಿಗೆ ಯೇನಾದ್ರೂ ಆಡುವಾಣಿನ್ನ ಕಂಡ್ರೆ ಆಗಲ್ಲ. ಬೋಸ್ಟನ್ನಲ್ಲಿ ಬಾಂಬಾಕಿದ್ರು ಅಂದ್ರೆ "ಆಡುವಾಣಿ ಇರುಬೋದ?" ಅಂತ ಪಕ್ಕದೋರನ್ನ ಕೇಳುತಾವ್ನೆ ಹಲ್ಮಂತ. ಯಿಂತ ನಾಲಕ್ಕು ಯಿಂಬಾಲಕರು ಯಿದ್ರೆ ಯಡ್ದೀಗೇಕ್ಲ ದುಸ್ಮನ್ ಬೇಕು.

ತಾತಪ್ಪ ಕ್ರುಸ್ಣ ಮಾತಾಡವ್ನೆ ಕನ್ಲ. ಯಿಟು ದಿನಾ ಮುಚಿಕಂಡು ಯಿದ್ದ. ಯೀಗ ಗ್ಯದ್ದೇ ಬಿಡುತೀವಿ ಅಂತ ಮುದುಕಂಗೆ ಅರಳು ಮರುಳಾಗೈತೆ. ಅದುಕ್ಕೇ ನಾನೂ ಯಿವ್ನಿ ಮುಕ್ಯಮಂತ್ರಿ ರೇಸಿನಾಗೆ ಅಂತ ಸೋನಿಯಾಗೆ ಹಿಂಟು ಕ್ವಡುತವ್ನೆ. "ಸಿಂಗಾಪುರ ಪ್ರದಾನಿಗೆ ಸ್ವಾಗತ" ಅಂತ ಬಾಸ್ಣ ಮಾಡೋ ಫಾರಿನ್ನು ಮಿನಿಸ್ಟ್ರೇ ಅಂತ ಇವುಂಗೆ ಯೋಳುದ್ರೆ "ಪ್ರಧಾನಿ ಸಿಂಗಗೆ ಸುಸ್ವಾಗತ" ಅನ್ನೋದು "ಚೀನಾ" ಅಂದ್ರೆ "ಯಾರು ಮೀನಾ" ಅನ್ನೋದು "ಕೆನಡಾ ಮುಕ್ಯ ದೇಸ" ಅಂದ್ರೆ "ಅಂಗೇನಿಲ್ಲ ನಾನು ಕನಡ ಬಿಟ್ಟು ಇಂಗ್ಲೀಸು ಗೌಡನಾಗೇ ಬದುಕಿಲ್ವ?" ಅನ್ನೋದು ಮಾಡಿಕ್ಕಂಡು ಹಚಾ ಹಾಕಿಸ್ಕಂಡವ್ನೆ. ಅಲ ತಾತಾಕ್ರುಸ್ಣನ್ನ ವೋಡಿಸ್ದಾಗ ನಂ ಕುಮ್ಮಿ ತಾನೇನರ ಫಾರಿನ್ನು ಮಿನಿಸ್ಟ್ರಾಗಬೋದ ಅಂತ ಕೇಳಿಕ್ಕಂಡು ವೋಗಿದ್ದ. ಸೋನಿಯ "ಅಂತ ಬರಗಾಲೇನು ಬಂದಿಲ್ಲ. ಬಂದ್ರೆ ತಪ್ದೇ ತಮ್ಮುನ್ನ ಕರುಸ್ಕತೀವಿ. ಈಗ ಟೈಮು ವೇಸ್ಟು ಮಾಡ್ದೆ ಯದ್ದೋಗಿ" ಅಂತ ಯೋಳಿ ಕಳುಸಿದ್ಲಪ. ನಂ ಕುಮ್ಮಿ ದಾರಿಗೆ ಸುಂಕಿಲ್ಲಾಂತ ಸಾಬಿ ಜಮೀರನ್ನ ಹಾಕ್ಕಂಡು ದಿಲ್ಲೀಲಿ ತಿರುಗಾಡಕ್ಕೆ ವೋಗಿದ್ನಪ. ಆದ್ರೆ ಆಮ್ಯಾಕೆ ದಿಲ್ಲೀಲಿ ಯಾರಾರ ರೇಪು ಮಾಡ್ಲಿ ತೋರಿಸ್ತೀವಿ ಅಂತ ರೇಪು ಮಾಡೋವ್ರಿಗೆ ಇಕ್ಕಕ್ಕೆ ಜನ ಕಾಯ್ತಿರೋದು ನೋಡಿ ದಿಗಿಲಾಗಿ ವಾಪಾಸು ಚಟ್ಟಂತ ಬಂದ್ಬಿಟ್ನಪ. ನಾನೂ "ಸರೀ ಮಾಡ್ದೆ ಬಿಡಪ್ಪ" ಅಂದೆ. "ನಮ್ದೆಲ್ಲ ಬಣ್ಣಾ ನೋಡಿ ಸಾಕಿರೋ ನಾಯೀನೇ ನಮುಗೇ ಬಗುಳತ್ತೆ. ಅಂತುದ್ರಲ್ಲಿ ಗುರುತಿಲ್ದಿರೋ ದಿಲ್ಲಿ ಜನಾ ಬಿಡುತವ್ರಾ? ಅದುಕ್ಕೆ ಸರೀ ಮಾಡ್ದೆ ಬಿಡಪ್ಪ" ಅಂದೆ. ಖುಸ್ಸಾಗಿ ಬಿಟ್ಟ ಕುಮ್ಮಿ.

ಯಿಂಗೇ ಚುನಾವ್ಣೆ ನಡೀತಿದೆ. ನೀವಂತೂ ವೋಟು ಆಕಕ್ಕೆ ಬರಾಂಗಿಲ್ಲ. ಆದ್ರೆ ವೋಟೆಲ್ಲ ಆದ ಮ್ಯಾಕೆ ಶನ್ವಾರ ಬಾನ್ವಾರ ಫ್ರೀಡಮ್ಮುಪಾರ್ಕಿಗೆ ಬಂದು ಅಣ್ಣಾ ಅಜಾರೆ ಮಾಡ್ತೀರಪ್ಪ. ಯೇನೋ ... ವಳ್ಳೇದಾಗ್ಲಪ ನಿಮುಗೆಲ್ಲ. ನೀವಿದ್ದುಕ್ಕೇ ನಾವಿಂಗೆ ಬದುಕಿದ್ದಿವಿ. ನೀವಿರೋಗಂಟ ಬದುಕಿರ್ತೀವಿ. ಈ ಅಳ್ಳಿಮುಕ್ರಿಗೆಲ್ಲ ವಂದು ವೋಟಿಗೆ ಸಾವ್ರ ಕ್ವಡಬೇಕು. ನೀವಾದ್ರೆ ವೋಟಾಕಕ್ಕೇ ಬರಲ್ಲ. ಬರ್ದಿದ್ದಕ್ಕೆ ಸಾವ್ರ ಕಾರ್ಣ ಬ್ಯಾರೆ ಕ್ವಡತೀರ. ನಿಮ್ಮ ವಟ್ಟೆ ತಣ್ಣಗಿರ್ಲಪ್ಪ.

ಲೇಖಕರು

hdrevanna

ಯಿಂದಿಲ್ಲ, ಮುಂದಿಲ್ಲ, ಅದಲ್ದೇ ಮೂರುಯಿಲ್ಲ. (ನಾ,ಮಾ ಮತ್ತು ಮ)

ಬರೆಯೋರ್ ಕಂಡ್ರೆ ಭಾಳಾ ಪಿರೂತಿ. ಅದುಕ್ಕೆ ಆಗಾಗ ಮಾತಾಡ್ಸಿಕಂಡು ವೋಗದು...

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.