Skip to main content

ವಿಸ್ಮಯ ಮಕ್ಕಳ ಪುಸ್ತಕ - ಕನ್ನಡದ ಮಕ್ಕಳ ಪುಸ್ತಕ ಸರಣಿ

ಬರೆದಿದ್ದುApril 28, 2013
noಅನಿಸಿಕೆ

ಸುಮಾರು ಒಂದು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ಜಯನಗರದ ಸಪ್ನಾ ಪುಸ್ತಕ ಮಳಿಗೆಗೆ ನನ್ನ ಒಂದೂ ಕಾಲು ವರ್ಷ ವಯಸ್ಸಿನ ಮಗನಿಗೆ ಬಣ್ಣ ಬಣ್ಣದ ಪುಸ್ತಕ ಖರೀದಿಸಲು ಹೋಗಿದ್ದೆ. ಕನ್ನಡ ಮಕ್ಕಳ ಪುಸ್ತಕ ವಿಭಾಗದಲ್ಲಿ ಜನ ಖಾಲಿ ಖಾಲಿ. ಇಂಗ್ಲೀಷ್ ಪುಸ್ತಕ ಮಳಿಗೆಯ ಬಳಿ ನೊಣ ಮುತ್ತಿದಂತೆ ಜನ. ಅಷ್ಟೇ ಅಲ್ಲ ಇಂಗ್ಲೀಷ್ ಅಲ್ಲಿ ನೂರಾರು ವಿಭಿನ್ನ ರೀತಿಯ ಪುಸ್ತಕಗಳ ಆಯ್ಕೆ. ಕನ್ನಡದಲ್ಲಿ ಕೆಲವೇ ಕೆಲವು. ಮುದ್ರಣ ಗುಣಮಟ್ಟದಲ್ಲಿಯೂ ಇಂಗ್ಲೀಷ್ ನದ್ದೇ ಮೇಲುಗೈ ಅಷ್ಟೇ ಅಲ್ಲ ಬೆಲೆಯೂ ಕಡಿಮೆ.

ಬಹುಶಃ ಕನ್ನಡ ಪುಟ್ಟ ಮಕ್ಕಳ ಪುಸ್ತಕ ಎಲ್ಲಾ ಜನ ಖರೀದಿಸಿ ಖಾಲಿ ಆಗಿರಬೇಕು ಎಂದು ಕೊಂಡೆ. ಬೇರೆ ಪುಸ್ತಕ ಮಳಿಗೆಗಳಿಗೆ ಭೇಟಿ ಕೊಟ್ಟಾಗಲೂ ಇದೇ ಪರಿಸ್ಥಿತಿ.

ಆಗ ಬಹುಶಃ ಬೆಂಗಳೂರಿನ ಮಾರುಕಟ್ಟೆಯಲ್ಲಿ ಬೇಡಿಕೆ ಇರದಿರುವದೇ ಇದಕ್ಕೆ ಕಾರಣ ಇರಬಹುದು ಅಂದು ಕೊಂಡೆ. ಏನೆ ಇರಲಿ ನಾನೂ ಒಂದು ಕೈ ನೋಡಿ ಬಿಡೋಣವೆಂದು ಒಟ್ಟೂ ೭ ಕನ್ನಡ ಮಕ್ಕಳ ಪುಸ್ತಕ ಕಂಟೆಂಟ್ ಹಾಗೂ ವಿನ್ಯಾಸ ಆರಂಭಿಸಿದೆ ಜೊತೆಗೆ ಪ್ರಿಂಟರ್ ಗಳ ಜೊತೆ ಮಾತುಕತೆಯನ್ನೂ ಕೂಡಾ. ಪ್ರಿಂಟರ್ ಗಳ ಜೊತೆ ಮಾತುಕತೆ ಆರಂಭಿಸಿದ ಹಾಗೆ ವಾಸ್ತವತೆಯ ಅರಿವಾಗತೊಡಗಿತು. ನಾನೂ ಏಳೂ ಪುಸ್ತಕಗಳನ್ನು ಒಮ್ಮೆಗೆ ಮಾಡಿ ಆಫ್ ಸೆಟ್ ಮುದ್ರಿಸಿದರೆ ಹತ್ತಿರ ಹತ್ತಿರ ೨ ಲಕ್ಷ ಮುದ್ರಣ ವೆಚ್ಚವೇ ಆಗುತ್ತದೆ. ಅಕಸ್ಮಾತ್ ಕನ್ನಡದಲ್ಲಿ ಇಂತಹ ಪುಸ್ತಕಗಳಿಗೆ ಬೇಡಿಕೆ ಇರದೆ ಅವು ಮಾರಾಟವಾಗದಿದ್ದರೆ ಆ ನಷ್ಟ ಭರಿಸಲು ಬೇರೆ ದಾರಿ ಇಲ್ಲ.

ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮುದ್ರಿಸುವ ಇಳಿಯುವ ಮುನ್ನ ಬೆಲೆ ಹೆಚ್ಚಾದರೂ ಪರವಾಗಿಲ್ಲ ಆದರೆ ಕಡಿಮೆ ಸಂಖ್ಯೆಯಲ್ಲಿ ಎರಡೇ ಪುಸ್ತಕವನ್ನು ಮುದ್ರಿಸಿ ಮಾರುಕಟ್ಟೆಯಲ್ಲಿ ಪರೀಕ್ಷಿಸ ಬೇಕು ಅಂದುಕೊಂಡಿದ್ದೇನೆ. ಇದು ಯಶಸ್ವಿಯಾದರೆ ಮಾತ್ರ ಉಳಿದ ಪುಸ್ತಕಗಳು ಕನ್ನಡದಲ್ಲೇ ಮೂಡಿಬರಲಿವೆ. ಪುಸ್ತಕದ ಗುಣಮಟ್ಟ ಯಾವ ಆಂಗ್ಲ ಮಕ್ಕಳ ಪುಸ್ತಕಕ್ಕೂ ಕಡಿಮೆ ಇರದಂತೆ ಇರಲಿದೆ.

ಚೋಟಾ ಭೀಮ್, ಹ್ಯಾರಿ ಪಾಟರ್, ಸ್ಪೈಡರ್ ಮ್ಯಾನ್ ಪುಸ್ತಕ ಬೇಕು ಎಂದು ಹಠ ಮಾಡುವ ಇಂದಿನ ಪೀಳಿಗೆಯ ಮಕ್ಕಳು ನನ್ನ ಕನ್ನಡದಲ್ಲಿನ ಪ್ರಯತ್ನವನ್ನು ಇಷ್ಟಪಡುವರೆ? ಇದೊಂದು ಯಕ್ಷಪ್ರಶ್ನೆ. ಏನೆ ಇರಲಿ ಪ್ರಯತ್ನ ಪಡುವದರಲ್ಲಿ ತಪ್ಪೇನಿದೆ ಅಲ್ವಾ?

ಒಟ್ಟಿನಲ್ಲಿ ಹೇಳುವದಾದರೆ ಕನ್ನಡದ ಮಕ್ಕಳಿಗೆ ಇನ್ನೊಂದು ಆಯ್ಕೆಯನ್ನು ಕೊಡುವ ಉದ್ದೇಶದಿಂದ "ವಿಸ್ಮಯ ನಗರಿ ಪ್ರಕಾಶನ" (ಟ್ರೇಡ್ ಮಾರ್ಕ್) ಲಾಂಛನದಡಿ ವಿಸ್ಮಯ ಮಕ್ಕಳ ಪುಸ್ತಕಗಳಾದ "ಹಣ್ಣುಗಳು" ಹಾಗೂ "ಅಂಕೆಗಳು" ಮುದ್ರಣ ಮಾಡಿಸುತ್ತಿದ್ದೇನೆ. ಮೇ ೨೦೧೩ ಮೊದಲ ವಾರ ಪ್ರತಿಗಳು ಲಭ್ಯವಾಗುತ್ತವೆ.

ಎ೪ ಗಾತ್ರದ ದಪ್ಪ ಪುಟ ಇರುವ ಎಲ್ಲಾ ಪುಟಗಳನ್ನು ಲ್ಯಾಮಿನೇಟ್ ಮಾಡಲಾದ ಬಹುವರ್ಣದ ಉತ್ತಮ ಗುಣಮಟ್ಟದ ಈ ಪುಸ್ತಕ ಒಂದರ ಬೆಲೆ ೮೦ರೂ ಮಾತ್ರ. ಸದ್ಯಕ್ಕೆ ಈ ಪ್ರತಿಗಳನ್ನು ನನ್ನಿಂದ ನೇರವಾಗಿ ಮಾತ್ರ ಖರೀದಿಸಬಹುದು.

ಸಧ್ಯಕ್ಕೆ ನೀವು ಬೆಂಗಳೂರಿನ ಬಸವನಗುಡಿ, ಜಯನಗರ ಹತ್ತಿರದಲ್ಲಿದ್ದು ಆರ್ಡರ್ ನೀಡಿದರೆ ಅಥವಾ ಅಲ್ಲಿಂದ ತೆಗೆದುಕೊಂಡು ಹೋಗಬಲ್ಲಿರಾದರೆ ಈ ಮೂಲ ಬೆಲೆಗೆ ಹಾಗೂ ಹಣವನ್ನು ನೇರವಾಗಿ ಪುಸ್ತಕ ದೊರೆತ ಮೇಲೆ ಕೊಡಬಹುದು. ಬೇರೆ ಕಡೆಗೆ ಸಾಗಣಿಕೆ ವೆಚ್ಚ ನೀಡಬೇಕಾಗಿ ಬರಬಹುದು. ನಿಮಗೆ ಪುಸ್ತಕ ನೋಡಿ ನಂತರ ಖರೀದಿಸಬೇಕೋ ಬೇಡವೋ ನಿರ್ಧರಿಸಬೇಕಿದ್ದರೆ ಕೂಡಾ ನನ್ನನ್ನು ಸಂಪರ್ಕಿಸಿ.

ಆಸಕ್ತರು rajeshhegde8 ಏಟ್ hotmail.com ವಿಳಾಸಕ್ಕೆ ಈಮೇಲ್ ಕಳುಹಿಸಿ ಅಥವಾ ೯೮೪೫೮೮೮೨೫೪(9845888254) ಗೆ ಎಸ್ ಎಂ ಎಸ್ ಮಾಡಿ. ನಿಮ್ಮ ಹೆಸರು, ಸ್ಥಳ, ಮೊಬೈಲು ನಂಬರ್, ಪುಸ್ತಕದ ಹೆಸರು, ಪ್ರತಿಗಳ ಸಂಖ್ಯೆ (ಏನನ್ನೂ ಬರೆಯದಿದ್ದರೆ ಒಂದೇ ಕಾಪಿ ಎಂದು ಭಾವಿಸಲಾಗುವದು). ಬಹುಶಃ ಕರ್ನಾಟಕದಾದ್ಯಂತ ಕೂರಿಯರ್ ಮಾಡಲು ಅರವತ್ತು (೬೦) ರೂ ಖರ್ಚು ಆಗಬಹುದು.

ಈಗ ಮುದ್ರಿತವಾಗುತ್ತಿರುವ ಪುಸ್ತಕಗಳ ವಿವರಗಳು ಹೀಗಿವೆಃ

ವಿಸ್ಮಯ ಮಕ್ಕಳ ಪುಸ್ತಕ : ಹಣ್ಣುಗಳು, ಏ೪ ಗಾತ್ರದ ೧೦ ಮುದ್ರಿತ ಬಹುವರ್ಣದ ದಪ್ಪನೆಯ ಪುಟಗಳು, ಬೆಲೆ ೮೦ ರೂ

ಮೊದಲ ಎರಡು ಪುಟದ ಮುನ್ನೋಟ(ಕೆಳಗಿನ ಚಿತ್ರ) ನೆನಪಿಡಿ ಇಲ್ಲಿನ ಚಿತ್ರದ ಗುಣಮಟ್ಟ ಪುಸ್ತಕಕ್ಕಿಂತ ಕಡಿಮೆ ಇದೆ.

ವಿಸ್ಮಯ ಮಕ್ಕಳ ಪುಸ್ತಕ : ಅಂಕೆಗಳು, ಏ೪ ಗಾತ್ರದ ೧೦ ಮುದ್ರಿತ ಬಹುವರ್ಣದ ದಪ್ಪನೆಯ ಪುಟಗಳು, ಬೆಲೆ ೮೦ ರೂ

ಮೊದಲ ಎರಡು ಪುಟದ ಮುನ್ನೋಟ(ಕೆಳಗಿನ ಚಿತ್ರ) ನೆನಪಿಡಿ ಇಲ್ಲಿನ ಚಿತ್ರದ ಗುಣಮಟ್ಟ ಪುಸ್ತಕಕ್ಕಿಂತ ಕಡಿಮೆ ಇದೆ.

ನೆನಪಿಡಿ ಇದು ಪ್ರಾಯೋಗಿಕ ಹಂತ. ನನಗೆ ಹೊಸ ರೀತಿಯ ಕೆಲಸ ಇದು. ಸಧ್ಯಕ್ಕೆ ನನ್ನದೇ ವಿನ್ಯಾಸ. ಯಶಸ್ವಿಯಾದರೆ ವೃತ್ತಿಪರ ವಿನ್ಯಾಸ ಕಾರರನ್ನು ಬಳಸಿ ಇನ್ನೂ ಉತ್ತಮ ಗೊಳಿಸುತ್ತೇನೆ. ನಿಮ್ಮ ಸಹಕಾರ ಬೇಕು. ನೆನಪಿಡಿ ನಾನು ಈ ಪುಸ್ತಕವನ್ನು ಹೆಚ್ಚು ಕಡಿಮೆ ಅದಕ್ಕೆ ವೆಚ್ಚವಾಗುವ ಬೆಲೆಯಲ್ಲೇ ಕೊಡುತ್ತಿದ್ದೇನೆ. ಇದಕ್ಕೆ ರಿಯಾಯಿತಿ ನೀಡಲು ಸಾಧ್ಯವಿಲ್ಲ.

ಆಸಕ್ತರು rajeshhegde8 ಏಟ್ hotmail.com ವಿಳಾಸಕ್ಕೆ ಈಮೇಲ್ ಕಳುಹಿಸಿ. ನಿಮ್ಮ ಹೆಸರು, ವಿಳಾಸ, ಮೊಬೈಲು ನಂಬರ್, ಪುಸ್ತಕದ ಹೆಸರು, ಪ್ರತಿಗಳ ಸಂಖ್ಯೆ (ಏನನ್ನೂ ಬರೆಯದಿದ್ದರೆ ಒಂದೇ ಕಾಪಿ ಎಂದು ಭಾವಿಸಲಾಗುವದು). ನೀವು ಪುಸ್ತಕದ ಅಂಗಡಿ ಇಟ್ಟುಕೊಂಡಿದ್ದರೆ ಅಥವಾ ಪುಸ್ತಕ ಡೀಲರ್ ಆಗಿದ್ದರೆ ಈ ಪುಸ್ತಕ ವಿತರಣೆಯಲ್ಲಿ ಆಸಕ್ತಿ ಇದ್ದರೂ ಸಂಪರ್ಕಿಸಿ.

ಈ ಬಗ್ಗೆ ನಿಮ್ಮ ಗೆಳೆಯರಿಗೂ ತಿಳಿಸಿ, ಫೇಸ್ ಬುಕ್ ಅಲ್ಲಿ ಶೇರ್ ಮಾಡಿ ಹಾಗೂ ಖರೀದಿಸಿ ಬೆಂಬಲಿಸಿ.

ನಿಮ್ಮ ಸಲಹೆ, ಅನಿಸಿಕೆಗಳಿಗೆ ಸ್ವಾಗತ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.