Skip to main content

ಶಿವಾ ಟ್ರೈಯಾಲಾಜಿ ವರ್ಸಸ್ ಎಸ್ ಎಲ್ ಭೈರಪ್ಪರ ಪರ್ವ

ಬರೆದಿದ್ದುApril 18, 2013
1ಅನಿಸಿಕೆ

ಸುಮಾರು ಎರಡು ವರ್ಷಗಳ ಹಿಂದಿನಿಂದ ನಡೆದ ಮಾತು. ಪ್ರತಿದಿನ ಆಫೀಸಿನ ಬಸ್ಸಿನಲ್ಲಿ ಕೆಲವರ ಕೈಲಿ ಸುಮಾರು ಐನೂರು ಆರುನೂರು ಪುಟ ಇರಬಹುದು. ಅಷ್ಟು ದಪ್ಪದ ಪುಸ್ತಕ. ಕುತೂಹಲದಿಂದ ಓದುತ್ತಿದ್ದಾರೆ.

ಇಮ್ಮಾರ್ಟಲ್ಸ್ ಆಫ್ ಮೆಲುಹಾ, ನಾಗಾಸ್ ಹಾಗು ಇತ್ತೀಚೆಗೆ ಓತ್ಸ್ ಆಫ್ ವಾಯು ಪುತ್ರ. ಬೇರೆ ಪುಸ್ತಕ ಓದುವದು ಕಾಣ ಸಿಗುತ್ತಾದರೂ ಅದು ಬಲು ಅಪರೂಪ. ಆಫೀಸು, ಕ್ಯಾಂಟೀನು, ಬಸ್ಸು ಎಲ್ಲಿ ನೋಡಿದರೂ ಅದರ ಕಥೆಯ ಚರ್ಚೆ.

ಸಪ್ನಾ ಬುಕ್ ಸ್ಟಾಲ್ ಗೆ ಹೋದರೂ ಅಲ್ಲಿ ಅದರ ದೊಡ್ಡ ಬ್ಯಾನರ್. ಏನಪ್ಪಾ ಇದು ಸಮಾಚಾರ. ನೋಡೆ ಬಿಡೋಣ ಎಂದು ಇತ್ತೀಚೆಗೆ ವಿಕಿಪಿಡಿಯಾದಲ್ಲಿ ಈ ಮೂರು ಪುಸ್ತಕದ ವಿವರ ಓದಿದರೆ ನಮ್ಮ ಎಸ್. ಎಲ್. ಭೈರಪ್ಪನವರು ಪರ್ವದಲ್ಲಿ ಮಹಾಭಾರತ ನಿಜವಾಗಿ ಹೇಗೆ ನಡೆದಿರಬಹುದು ಎಂಬುದರ ಬಗ್ಗೆ ಚಿಂತನೆ ನಡೆಸಿದ ಹಾಗೇ ಅಮೀಶ ತ್ರಿಪತಿಯು ಶಿವ ದೇವರ ಹುಟ್ಟನ್ನು ಕಲ್ಪಿಸಿದ್ದಾನೆ.

ಇದರಲ್ಲಿ ಶಿವ ಎಂಬುವವನು ಟಿಬೆಟಿನಿಂದ ನೇಪಾಳಕ್ಕೆ ವಲಸೆ ಬಂದ ವ್ಯಕ್ತಿ. ಅಮೀಶ ತ್ರಿಪತಿ ಪ್ರಕಾರ ಪುರಾಣ, ನಂಬಿಕೆಗಳೆಲ್ಲ ಹಿಂದೆ ನಿಜವಾಗಿ ನಡೆದ ಘಟನೆಗಳ ಉತ್ಪ್ರೆಕ್ಷಿತ ನೆನಪುಗಳು ಮಾತ್ರ.

ಪ್ರಶ್ನೆ ಅದಲ್ಲ. ಇಷ್ಟು ಜನಪ್ರಿಯಗೊಂಡ ಪುಸ್ತಕ ಹಿಡಿಯಲು ಅಲರ್ಜಿ ಇರುವವರಿಗೂ ಓದಿಸಿಕೊಂಡು ಹೋದ ಈ ಹೊತ್ತಿಗೆ ಹಿಂದಿ, ಗುಜರಾತಿ, ತೆಲುಗು ಹಾಗೂ ಮರಾಠಿಗಳಲ್ಲಿ ಹೀಗೆ ಹಲವು ಭಾಷೆಗಳಲ್ಲಿ ಬಂತು. ಕನ್ನಡದಲ್ಲಿ ಯಾಕೆ ತಕ್ಷಣ ಬರಲಿಲ್ಲ? ಇಂದು ಕನ್ನಡಿಗ ಈ ಪುಸ್ತಕ ಓದಬಯಸಿದರೆ ಒಂದೇ ಇಂಗ್ಲೀಷ್ ಅಲ್ಲಿ ಓದಬೇಕು. ಅಥವಾ ಹಿಂದಿ, ತೆಲುಗು, ತಮಿಳಲ್ಲಿ ಒದಬೇಕು.

ಈ ಪುಸ್ತಕಕ್ಕೆ ನೀಡಿದ ಮಾರ್ಕೆಟಿಂಗ್ ಕೂಡಾ ಗಮನಾರ್ಹ.

ಇಂದು ಡಿಜಿಟಲ್ ಪ್ರಿಂಟಿಂಗ್ ಹಾಗೂ ಈ ಬುಕ್ ಕ್ರಾಂತಿಯಿಂದಾಗಿ ಸಾವಿರಾರು ಪುಸ್ತಕ ಒಮ್ಮೆಗೇ ಮುದ್ರಣ ಮಾಡಬೇಕಿಲ್ಲ.

ಪೋತಿ.ಕಾಂ ಮೊದಲಾದ ಸೆಲ್ಫ್ ಪಬ್ಲಿಶಿಂಗ್ ಕಂಪನಿಗಳು ನಿಮ್ಮ ಪುಸ್ತಕದ ಪಿಡಿಎಫ್ ಕೊಟ್ಟರೆ ಕಡಿಮೆದರದಲ್ಲಿ ಒಂದೇ ಪ್ರತಿ ಬೇಕಾದರೂ ಮುದ್ರಿಸಿಕೊಡುತ್ತವೆ. ಇಂತಹ ಯುಗದಲ್ಲಿ ಕನ್ನಡ ಪಬ್ಲಿಶಿಂಗ್ ಕಂಪನಿಗಳು ಇಂತಹ ಜನಪ್ರಿಯ ಪುಸ್ತಕಗಳನ್ನು ಆಗಲೇ ಕನ್ನಡಕ್ಕೆ ಭಾವನುವಾದ ಮಾಡಿ ಮಾರುಕಟ್ಟೆಗೆ ಬಿಡಬೇಕು ಅನ್ನುವದು ನನ್ನ ಅನಿಸಿಕೆ. ಅದೇ ರೀತಿ ಕನ್ನಡದ ಪುಸ್ತಕಗಳ ಮಾರ್ಕೆಟಿಂಗ್ ನಡೆಯಬೇಕು. ಇಂದಿನ ಯುವ ಪೀಳಿಗೆಗೆ ಓದಬೇಕು ಅನ್ನಿಸುವ ಹಾಗೆ ಬರೆಯಬೇಕು. ಬಹುಶಃ ರವಿಬೆಳಗೆರೆ ಅವರ ಪುಸ್ತಕ ಬಿಟ್ಟರೆ ಬೇರೆ ಪುಸ್ತಕಗಳ ಬಗ್ಗೆ ಈ ತರಹದ ಮಾರ್ಕೆಟಿಂಗ್ ನಾನು ನೋಡಿಲ್ಲ.

ಕನ್ನಡ ಪುಸ್ತಕಗಳನ್ನು ಕೊನೆಯ ಫ್ಲೋರ್ ನ ಮೂಲೆಯಲ್ಲಿ ಇಟ್ಟು ಸನ್ಮಾನಿಸುವದು ನಮ್ಮ ಪುಸ್ತಕ ಮಳಿಗೆಗಳ ಹವ್ಯಾಸ. ಇದಕ್ಕೆ ಮಾರುಕಟ್ಟೆಯ ಕಾರಣವೂ ಇರಬಹುದು. ಉದಾಹರಣೆಗ ಶಿವಾ ಟ್ರೈಯಾಲಜಿಯ ಪುಸ್ತಕಗಳು ೪೦ಕೋಟಿಗೂ ಹೆಚ್ಚು ಗಳಿಸಿವೆ. ಆ ಲೇಖಕನಿಗೆ ೫ ಕೋಟಿ ಹಣ ಮುಂದಿನ ಪುಸ್ತಕಗಳಿಗೆ ಪ್ರಕಾಶಕರು ನೀಡಿದ್ದಾರಂತೆ. ಕನ್ನಡದಲ್ಲಿ ಒಬ್ಬ ಬರಹಗಾರ ಈ ತರಹದ ಕನಸು ಕಾಣಲು ಸಾಧ್ಯವಿದೆಯೇ?

ಕನ್ನಡ ಪುಸ್ತಕರಂಗ ಇನ್ನಷ್ಟು ವ್ಯವಹಾರಿಕ ಯಶಸ್ಸು ಗಳಿಸಿ ಲೇಖಕರಿಗೆ ಅದರಲ್ಲಿ ಪಾಲು ಸಿಗಬೇಕು. ಇಲ್ಲದಿದ್ದರೆ ಇಂಗ್ಲೀಷ್ ಅಲ್ಲಿ ಕನ್ನಡಿಗ ಮೊದಲು ಬರೆದು ನಂತರ ಕನ್ನಡಕ್ಕೆ ಬೇರೆಯವರ ಬಳಿ ಅನುವಾದಿಸುವ ಕಾಲ ದೂರ ಇಲ್ಲ.

ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಏನು?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

K.M.Vishwanath ಗುರು, 04/18/2013 - 17:10

ನಿಮ್ಮ ಮಾತು ಸತ್ಯ ಈ ಪುಸ್ತಕ ಓದಿಯಾದರು ನಮ್ಮ ಲೇಖಕರು ಬರೆಯಲಿ ಯುವಕರು ಬರೆಯಲಿ ಬರೆಯುವವರಿಗೆ ಪ್ರಕಾಶಕರು ಪ್ರೋತ್ಸಹಿಸಲಿ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.