Skip to main content

!!! ಖರ್ಗೆ, ಈ ರಾಜ್ಯದ ಮುಖ್ಯಮಂತ್ರಿಯಾಗಲಿ,ದೀನ ದಲಿತರಿಗೊಂದು ನ್ಯಾಯ ಸಿಗಲಿ. !!!

ಇಂದ K.M.Vishwanath
ಬರೆದಿದ್ದುApril 12, 2013
noಅನಿಸಿಕೆ

P { margin-bottom: 0.08in; direction: ltr; color: rgb(0, 0, 0); }P.western { font-family: "Liberation Serif","Times New Roman",serif; font-size: 12pt; }P.cjk { font-family: "Droid Sans"; font-size: 12pt; }P.ctl { font-family: "Lohit Kannada"; font-size: 12pt; }

 

!!!
ಖರ್ಗೆ,

ರಾಜ್ಯದ ಮುಖ್ಯಮಂತ್ರಿಯಾಗಲಿ
,ದೀನ
ದಲಿತರಿಗೊಂದು ನ್ಯಾಯ
ಸಿಗಲಿ
.
!!!

 

ಬಹುದಿನಗಳಿಂದ
ಈ ದೇಶವು ತುಳಿತ್ತಕ್ಕೊಳಗಾದ
ಜನರನ್ನು ಮೇಲೆತ್ತುವ ಲೆಕ್ಕಾಚಾರ
ಮರೆತಿದೆ ಅನಿಸುತ್ತಿದೆ
.

ವಿಷಯ ನಮ್ಮ ಕರ್ನಾಟಕದ ಪಾಲಿಗೆ
ನಾವಿಂದು ವಿಚಾರ ಮಾಡಬೇಕಾದ ಅಗತ್ಯ
ಮತ್ತು ಅನಿವಾರ್ಯವಿದೆ
.
ಈಗಾಗಲೇ
ನಮ್ಮ ರಾಜ್ಯದ ರಾಜಕೀಯ ಹಳೆಯ
ಅಧ್ಯಾಯ ಮುಗಿದು ಈಗ ಹೊಸ ಅಧ್ಯಾಯದತ್ತ
ಸಿದ್ಧವಾಗುತ್ತಿದ್ದು
.
ಯಾರು
ಯಾವ ರೀತಿಯಲ್ಲಿ ಮುಂದೆ ಹೊಸ
ಗದ್ದುಗೆ ಏರಬೇಕು ಎನ್ನುವ ಲೆಕ್ಕಾಚಾರ
ಶುರುವಾಗಿದೆ
.
ಆದರೆ
ಯಾರು ಈ ಸಮಾಜಕ್ಕಾಗಿ ದುಡಿದು
ತುಡಿತಕ್ಕೆ ಹಿಂದಿನ ಮಗ್ಗುಲಲ್ಲಿ
ಮಡಿದು ಹೋದ ನಾಯಕರ ಜನಾಂಗ ಯಾವುದು
ಎಂದು ವಿಚಾರಿಸುವಲ್ಲಿ ನಪಾಸು
ಆಗುತ್ತಿದೆ
.
ಕಾರಣ
ರಾಜ್ಯ ರಾಜಕಾರಣದಲ್ಲಿಗ ಬರಿ
ಮುಂದಿನ ಮುಖ್ಯಮಂತ್ರಿ ಯಾರು ಯಾವ
ಜಾತಿಗೆ ಕೊಡಬೇಕು ಎನ್ನುವ
ಲೆಕ್ಕಾಚಾರದಲ್ಲಿ ತೊಡಗಿದ್ದಾರೆ
.

 

ನಮ್ಮ
ರಾಜ್ಯದಲ್ಲಿ ಈಗಾಗಲೇ ಅನೇಕ ಜನ
ಹಿರಿಯ ನಾಯಕರು ರಾಜಕೀಯದಲ್ಲಿದ್ದು
ಅವರ ಒಂದೊಂದು ಜಾತಿಗೆ ಒಂದು ದಂಡು
ಕಟ್ಟಿಕೊಂಡು ಅದರ ಬಲದಿಂದಲೇ
ರಾಜ್ಯ ಆಳಬೇಕು ಎನ್ನುವ ಲೆಕ್ಕಚಾರ
ಅವರದು
.
ಮತದಾರರನ್ನು
ಜಾತಿ ಆಧಾರದ ಮೇಲೆ ವರ್ಗಾವಣೆ
ಮಾಡಿ ಜಾತಿ ರಾಜಕಾರಣಕ್ಕೆ
ನಾಂದಿಯಾಗಿರುವುದು ನಮ್ಮ ಪ್ರಭುದ್ಧ
ಕರ್ನಾಟಕ
.

ನಮ್ಮ
ಕರ್ನಾಟಕದ ರಾಜ್ಯ ರಾಜಕೀಯ ಇತಿಹಾಸ
ನೋಡಿದರೆ ಅನೇಕ ದಿನಗಳಿಂದ ನಮ್ಮ
ರಾಜ್ಯ ಆಳಿದ ಜನಾಂಗವೆಲ್ಲ ಬರಿ
ಮೇಲ್ಜಾತಿಯವರೆ ಇದ್ದಾರೆ
.
ಆದರೆ
ಇಲ್ಲಿಯವರೆಗೂ ಒಬ್ಬರು ಹಿಂದೂಳಿದ
ಜನರನ್ನು ಮುಖ್ಯಮಂತ್ರಿ ಮಾಡಬೇಕು
ಎನ್ನುವ ಮನಸ್ಸು ಯಾರಿಗೂ ಹೊಳಿದಿಲ್ಲ
ಬರಿ ನಾವು ಮೀಸಲಾತಿ ಕೊಡುತ್ತೀವಿ
,
ನಮ್ಮದು
ಬಡವರ ದೀನದಲಿತರ ಪಕ್ಷ ಎಂದು
ಹೇಳಿದರೆ ಸಾಲದು ಅದರಂತೆ ಯಾವ
ಪಕ್ಷವು ನಡೆದುಕೊಳ್ಳುತ್ತಿಲ್ಲ
ಎಂಬುವುದು ವಿಪರ್ಯಾಸ
.
ನಮ್ಮ
ರಾಜ್ಯ ರಾಜಕೀಯದಲ್ಲಿ ಒಬ್ಬ
ಹಿರಿಯಣ್ಣನ ಬಗ್ಗೆ ಬರೆಯುವ
ಮನಸ್ಸಾಗಿದೆ ಅವರೊಬ್ಬ ಪಕ್ಷದ
ನಿಷ್ಠಾವಂತ ವ್ಯಕ್ತಿ ಸಾಮಾನ್ಯ
ಕಾರ್ಯಕರ್ತನಾಗಿ ಇಂದು ದೇಶದ
ಕಾರ್ಮಿಕ ಸಚಿವರಾಗಿ ಮರೆಯುತ್ತಿದ್ದಾರೆ
.

ಮಾಹಾನ್ ನಾಯಕನ ಕೆಲಸಗಳನ್ನು
ನೋಡಿದರೆ ಈಗಾಗಲೇ ನಮ್ಮ ರಾಜ್ಯದ
ಮುಖ್ಯಮಂತ್ರಿ ಯಾಗಬೇಕಿತ್ತು
ಆದರೆ ದುರದೃಷ್ಠ ಈ ಜಾತಿ ರಾಜಕಾರಣ
ಅವರನ್ನು ಹಿಂದೆಳೆಯುತ್ತಿದೆ
.

 

ಅಂದು
ವಿಧಾನ ಸಭೆ ಚುನಾವಣೆಯ ಸಮಯ
ನಮ್ಮೂರಿನ ಹಿರಿಯರೆಲ್ಲ ಅಂದು
ರಾತ್ರಿ ಒಂದಡೆ ಸೇರಿದ್ದರು
.
ಮುಂದಿನ
ಚುನಾವಣೆಯ ಮಾತುಕತೆ ನಡೆದಿತ್ತು
.
ನಾನು
ತುಂಬಾ ಚಿಕ್ಕವನಾಗಿದ್ದರು
ದೊಡ್ಡವರಲ್ಲಿ ಕೂಡುವುದು ಅವರ
ಮಾತು ಕೇಳುವುದು ನನಗೆ ಹವ್ಯಾಸ
ನಾನು ಅದೇ ರಾತ್ರಿ ಆ ಸಭೆಯಲ್ಲಿ
ಕೂತು ಅವರ ಮಾತು ಆಲಿಸುತ್ತಿದ್ದೆ
.
ಅಲ್ಲಿ
ನೆರೆದ ಹಿರಿಯಲ್ಲಿ ಒಂದು ಮಾತು
ಹೇಳುತ್ತಿದ್ದರು
.
ಇಂದು
ನಾವೆಲ್ಲ ನಮ್ಮ ನಾಯಕ ಯಾವ ಪಕ್ಷ್ಯದಲ್ಲಿ
ಇದ್ದಾನೆಯೊ ಅವರಿಗೆ ನಮ್ಮ ಮತ
ಹಾಕಬೇಕು
.
ಅವರು
ನಮ್ಮ ನಾಯಕರಿದ್ದಾರೆ
.
ನಾವೆಲ್ಲ
ಅವರಿಗೆ ಬೆಂಬಲಿಸಬೇಕು
.
ಅವರು
ನಮಗಾಗಿ ನಮ್ಮ ಜನಕ್ಕಾಗಿ ಏನಾದರು
ಮಾಡೆ ಮಾಡುತ್ತಾರೆ
.
ಹಾಗಾಗಿ
ನಮ್ಮ ಮತ ಅವರಿಗೆ ಎಂದು ಎಲ್ಲರು
ಎದ್ದು ಬಂದು ಅಲ್ಲೆ ಅವರೆಲ್ಲರ
ನಡುವೆ ಇಟ್ಟಿರುವ ಜ್ಯೋತಿಗೆ
ಮುಟ್ಟಿ ಆಣೆ ಪ್ರಮಾಣ ಮಾಡುತ್ತಿದ್ದರು
.

 


ಕಾರ್ಯಕ್ರಮ ಮುಗಿದ ನಂತರ ನಾನು
ಈ ವಿಷಯ ಕುರಿತು ನಮ್ಮ ತಂದೆಗೆ
ಕೇಳಿದೆ
.

ವ್ಯಕ್ತಿ ಯಾರೂ ನಾವೇಕೆ ಅವರಿಗೆ
ಓಟು ಹಾಕಬೇಕು ಆಗ ಅಪ್ಪ ಹೇಳಿದ್ದು
ಇಷ್ಟು
.
ಅವರ
ಹೆಸರು ಮಾನ್ಯ ಮಲ್ಲಿಕಾರ್ಜುನ
ಖರ್ಗೆ ನಮ್ಮ ಜನಾಂಗದಲ್ಲಿ ರಾಜಕೀಯ
ಕ್ಷೇತ್ರದಲ್ಲಿ ಇರುವ ಬಹುದೊಡ್ಡ
ಚೇತನ ಅವರ ಅನೇಕ ಕೆಲಸಗಳಿಂದ
ನಾವೆಲ್ಲ ಪ್ರಭುದ್ದರಾಗಿದ್ದೇವೆ
.
ಅದಕ್ಕಾಗಿ
ನಾವು ಈಗ ಅವರಿಗೆ ಆರಿಸಿ ತರಬೇಕಾಗಿದೆ
.
ಎಂದರು.
ಹಾಗೆ
ನಾನು ಚಿಂತೆ ಮಾಡುತ್ತಾ ಕುಳಿತಾಗ
ಅವರು ಮಾತಾಡಿದ ಹಲವು ಮಾತುಗಳು
ಆಗಾಗ ತಲೆಗೆ ಹೊಳಿಯುತ್ತಿದ್ದವು
.
ಅವರು
ಅಂತಹ ವ್ಯಕ್ತಿಯೆ ಎಂಬ ಕಲ್ಪನೆ
ಮೂಡತೊಡಗಿತು
.
ಅವರ
ಬಗ್ಗೆ ಹಾಗೆ ಬರೆಯತೊಡಗಿದೆ
.
ನನ್ನ
ಮನಸ್ಸಿಗೆ ಬಂದಂತೆ ಅವರ ಬಗ್ಗೆ
ಬರೆಯುತ್ತಾ ಹೋದೆ ಕೆಲವು ಕವನಗಳಾದವು
ಮತ್ತೆ ಕೆಲವು ಲೇಖನಗಳಾದವು
.
ಮತ್ತೆ
ಅವರನ್ನು ಕೆಲವು ಕಾರ್ಯಕ್ರಮಗಳಲ್ಲಿ
ನೋಡಿದ ದೂರದರ್ಶನದಲ್ಲಿ ಪತ್ರಿಕೆಯಲ್ಲಿ
ಅವರ ಬಗ್ಗೆ ಓದಿದೆ ಅದರಿಂದ ಕೆಲವು
ಕವನಗಳ ಸಾಲು ಅವರ ಮೇಲಿನ ಪ್ರೀತಿ
ಜಾಸ್ತಿಯಾಯಿತು
.
ಅವರ
ಹಾದಿ ಹಿಡಿದು ಹೊರಟ ನನಗೆ ಈ ನಾಡಿನ
ಜನರಿಗೆ ಸೂಕ್ತ ನ್ಯಾಯ ಒದಗಿಸುವಲ್ಲಿ
ಹಗಲಿರುಳು ರಾಜಕೀಯವಾಗಿ ಕೆಲಸ
ಮಾಡುತ್ತಿರುವ ನಮ್ಮ ನಾಯಕನ ಬಗ್ಗೆ
ಎರಡು ಮಾತಿನಲ್ಲಿ ನನ್ನ ತೊದಲ
ನುಡಿಯಲ್ಲಿ ಹೇಳುವುದು ಕಷ್ಟ
ಸಾಧ್ಯ ಅವರೊಬ್ಬ ಮಾಹಾನ್ ಚೇತನ
ಅವರ ಜೀವನ ನನ್ನ ಚಿಕ್ಕ ಅನುಭವಕ್ಕೆ
ಹಿಡಿದಿಡುವುದು ಆಗಲಿಕ್ಕಿಲ್ಲಾ
ಆದರೆ ನಾನು ನನ್ನ ಶಕ್ತಿ ಮೀರಿ
ಪ್ರಯತ್ನ ಪಟ್ಟಿದ್ದೇನೆ
.
ಅವರ
ಬದುಕಿನ ಕೆಲವು ಮಾತುಗಳನ್ನು
ನನ್ನ ಯುವಕರಿಗೆ ದಾರಿದೀಪವಾಗಲಿ
ಎನ್ನುವಕಾರಣಕ್ಕೆ ಬೆಳಿಯುತ್ತಿರುವ
ಏಷ್ಟೋ ಯುವಕರು ಈ ಅವರಂತಹ ಪವಿತ್ರ
ರಾಜಕೀಯ ಮಾಡಲಿ ನಮ್ಮ ನಾಡಿನ ದೇಶದ
ಸೇವೆ ಮಾಡುವಂತಾಗಲಿ ಎನ್ನುವ
ಚಿಕ್ಕ ಹಂಬಲ ನನ್ನದು
.

 

ರಾಜಕೀಯ
ದೃವತಾರೆ
ಖರ್ಗೆಜಿ
.
ಭಾರತ
ಮಾತೆಯ ಮಡಿಲಲ್ಲಿ ಅನೇಕ ರಾಜಕೀಯ
ಮುತ್ಸದ್ದಿಗಳು
,
ಸಾಮಾಜಿಕ
ಪರಿವರ್ತಕರು
,
ಶೈಕ್ಷಣಿಕ
ಸುಧಾರಕಾರಾಗಿ ಆಗಿ ಆಳಿ ಹೋಗಿದ್ದಾರೆ
.
ಅವರೆಲ್ಲರಲ್ಲಿ
ಡಾ
.ಮಲ್ಲಿಕಾರ್ಜುನ
ಖರ್ಗೆಜಿಯವರು ರಾಜಕೀಯ ಮುತ್ಸದ್ದಿಗಳು
,
ಸಾಮಾಜಿಕ
ಪರಿವರ್ತಕರು
,
ಶೈಕ್ಷಣಿಕ
ಅಧಮ್ಯ ಸುಧಾರಕರಾಗಿ ಇಂತಹ ಬಹುಮುಖ
ವ್ಯತ್ಕಿತ್ವವುಳ್ಳ ಖರ್ಗೆಜಿಯವರ
ತುಂಬಾ ಕಷ್ಟ ಆದರೂ ನಾಡಿನ ಶೋಷಿತ
ಜನವರ್ಗಗಳ ಪ್ರಶ್ನಾತೀತ ನಾಯಕ
ನೇರ ನುಡಿ
,
ಗಡಸುಧ್ವನಿ,
ಎತ್ತರದ
ನಿಲುವು
,ಅಜಾನುಬಾಹು,
ಆನೆಯ
ನಡಿಗೆ
,ಕರುಣಾ
ಹೃದಯ
,ಸೌಜನ್ಯಶೀಲ
ಮೂರ್ತಿ
,ದೀನದಲಿತರ
ರಕ್ಷಾಕವಚ
,ಕರ್ಮಯೋಗಿ,
ಪ್ರಬುದ್ಧ
ವಿಚಾರವಂತರು
,ಅಭಿಮಾನ
ಮತ್ತು ಸ್ವಾಬಿಮಾನದ ಖಣಿ
,
ದಿವ್ಯಚೇತನ,ಅಭಿನವ
ಅಂಬೇಡ್ಕರ
,ಇಂದು
ರಾಜ್ಯ ರಾಷ್ಟ್ರಮಟ್ಟದಲ್ಲಿ ಅತಿ
ಎತ್ತರದ ವ್ಯಕ್ತಿತ್ವವುಳ್ಳ ಈ
ಮಾಹಾನ್ ನಾಯಕನ ಬಗ್ಗೆ ಎಷ್ಟು
ಬರೆದರು ಕಡಿಮೆ
.
ಕಾರಣ
ಸಾಮಾನ್ಯ
ಕಾರ್ಮಿಕನ
ಮಗನಾಗಿ
ಹುಟ್ಟಿ
ಕೇಂದ್ರ
ಸರ್ಕಾರದ
ಕಾರ್ಮಿಕ
ಇಲಾಖೆಯ
ಸಚಿವರಾದ
ಸನ್ಮಾನ್ಯ
ಶ್ರೀ
ಮಲ್ಲಿಕಾರ್ಜುನ
ಖರ್ಗೆಯವರು
.

 

ಬೀದರ
ಜಿಲ್ಲೆಯ ಭಾಲ್ಕಿ ತಾಲೂಕಿನ ಚಿಕ್ಕ
ಗ್ರಾಮ ವರವಟ್ಟಿ ಕೃಷಿ ಕಾರ್ಮಿಕ
ಶ್ರೀ ಮಾಪಣ್ಣ ಮತ್ತು ಸಾಹೇಬವ್ವರವರ
ಪುತ್ರನಾಗಿ ಜುಲೈ
21
ಕ್ಕೆ
1942
ರಲ್ಲಿ
ಜನ್ಮ ತಾಳಿದರು
.
ತಮ್ಮ
ಪ್ರಾಥಮಿಕ ಶಿಕ್ಷಣ ಮುಗಿಸುವ
ಮುನ್ನವೆ ತಾವು ಹುಟ್ಟಿದ ಊರು
ವರವಟ್ಟಿ ಬಿಟ್ಟು ಮಾಪಣ್ಣ ರವರು
ಗುಲಬರ್ಗಾ ಕಡೆಗೆ ಹೋಗಬೇಕಾಯಿತು
ಎಕೆಂದರೆ ಅಂದು ನಿಜಾಮರ ಆಡಳಿತ
ವ್ಯವಸ್ಥೆ ಹಾಗೆಯಿತ್ತು
.

 

ತಾನು
ಓದಲಾರದೆ ಪಟ್ಟ ಕಷ್ಟ ನನ್ನ ಮಕ್ಕಳು
ಪಡಬಾರದು ಎಂಬ ಅದಮ್ಯ ಬಯಕೆ ಮಾನ್ಯ
ಮಾಪಣ್ಣ ರವರದು ಅದಕ್ಕಾಗಿ ಮಕ್ಕಳಿಗೆ
ಶಾಲೆ ತುಂಬಾ ಕಷ್ಟವಾದರು ಇಷ್ಟದಿಂದಲೇ
ಕಲಿಸಿದರು
.
ತನ್ನ
ಮಕ್ಕಳು ರಾಜ್ಯ ರಾಷ್ಟ್ರಮಟ್ಟದಲ್ಲಿ
ಮಿಂಚಬೇಕು ಸಾಹೇಬರಾಗಬೇಕು ಎಂಬ
ಹಿರಿದಾದ ಬಯಕೆ ಅವರಲ್ಲಿತ್ತು
.

 

ಕಷ್ಟದಲ್ಲಿಯೆ
ಬೆಳಿದ ಮಾನ್ಯ ಖರ್ಗೆಯವರು
1959
ರಲ್ಲಿ
ಎಸ್ ಎಸ್ ಎಲ್ ಸಿ ಪಾಸಾದರು
.
ಆಗಲೇ
ಈ ಬಡತನವ ನೋಡಿ ಮಾನ್ಯ ಖರ್ಗೆಯವರು
ಶಾಲೆ ಬಿಡುವ ನಿರ್ಧಾರಕ್ಕೆ
ಬರುತ್ತಾರೆ ಆಗ ತಂದೆಯ ಆಸೆಯಂತೆ
ಸರಕಾರಿ ಪದವಿ ಕಾಲೇಜಿನಲ್ಲಿ ಓದು
ಮುಂದು ವರೆಯುತ್ತೆ
.
ತಮ್ಮ
ಮುಂದಿನ ವಿದ್ಯಭ್ಯಾಸವನ್ನು
ಉಸ್ಮಾನಿಯ ವಿವಿಯಲ್ಲಿ ಮುಂದುವರೆಸಿ
ಉತ್ತಮವಾಗಿ ಪಾಸಾದರು
.

 

ಈಗಾಗಲೇ
ನಾಯಕನ ಗುಣಗಳನ್ನು ತನ್ನ ರಕ್ತದಲ್ಲಿಯೆ
ಇದ್ದ ಮಾನ್ಯರು ಈ ದೇಶದ ರಾಜಕೀಯಕ್ಕೆ
ಬಂದಿದ್ದು ತುಂಬಾ ವಿಚಿತ್ರ ಅವರು
ಮೊದಲು ಆರ್ ಪಿ ಐ ಪಕ್ಷದ ಕಾರ್ಯಕರ್ತನಾಗಿ
ಸಾಮಾಜಿಕ ಸಮಸ್ಯೆಗಳತ್ತ ಅವುಗಳನ್ನು
ಹೇಗೆ ಹೋಗಲಾಡಿಸುವುದು ಎಂಬ ವಿಷಯ
ಕುರಿತು ಜನಜಾಗೃತಿ ಮೂಡಿಸುತ್ತ
ಹೋದರು ಅವಾಗಲೇ ಈ ರಾಜಕೀಯದ ನಾಯಕನಾಗಿ
ಹೊರಬಂದರು
.

 

ಅಂದು
ಧರ್ಮರಾವ್ ಅಫಜಲಪೂರಕರ್ ಅವರ
ಪರಿಚಯಾಯಿತು ಅಂದಿನಿಂದ ಇಂದಿನವರೆಗೂ
ರಾಜ್ಯ ದೇಶ ಕಾಂಗ್ರೇಸ್ ನ ನಿಷ್ಠವಂತ
ಕಾರ್ಯಕರ್ತನಾಗಿ ಹಲವು ಹೊಸ
ಕೆಲಸಗಳಿಗೆ ನಾಂದಿ ಹಾಡಿದ ಶ್ರೇಯಸ್ಸು
ಮಾನ್ಯರಿಗೆ ಸಲ್ಲುತ್ತದೆ
.
1969
ರಲ್ಲಿ
ಗುಲಬರ್ಗಾ ಜಿಲ್ಲಾ ಕಾಂಗ್ರೇಸ್
ಸಮಿತಿಯ ಜಿಲ್ಲಾ ಅದ್ಯಕ್ಷರಾಗಿ
ಅಂದಿನಿಂದ ಇಂದಿನವರೆಗೂ ರಾಜ್ಯ
ಅಧ್ಯಕ್ಷರಾಗಿ ವಿರೋಧ ಪಕ್ಷದ
ಅಧ್ಯಕ್ಷರಾಗಿ ಹಲವು ಖಾತೆಗಳ
ಸಚಿವರಾಗಿ ಅವರು ಮಾಡಿದ ಅನೇಕ
ಸಾಧನೆಗಳು ಕಣ್ಣಮುಂದೆ ಕಂಗೋಳಿಸುತ್ತವೆ
.

 

ಇವರು
ಸರ್ಕಾರದಲ್ಲಿ ಇರುವಾಗ ಕೂಡಾ
ಪುಸ್ತಕ ಬರೆದ ಮಹಾನ್ ನಾಯಕ
"
ಮಣ್ಣಾದ
ನೀರಿಕ್ಷೆ ಸುಳ್ಳಾದ ಭರವಸೆ
"
ಇವರು
ವಿರೋಧ ಪಕ್ಷದಲ್ಲಿದ್ದಾಗ ಬರೆದು
ಸಧನದ ಗಮನ ಸೆಳೆದರು
.
ಕಾವೇರಿ
ಜಲ ವಿವಾದಕ್ಕೆ ಸಂಬಂಧಿಸಿದಂತೆ
"
ಕಾವೇರಿ
ಒಪ್ಪಂದ ಕರ್ನಾಟಕ್ಕೆ ಮಾರಕ
"
ಎಂಬ
ಗ್ರಂಥ ಪ್ರಕಟಿಸಿ ಮನಸೆಳೆದರು
.

 

ಅಬಿವೃದ್ಧಿಯ
ಹರಿಕಾರ ಇವರು ಹಲವು ಕಛೇರಿಗಳು
ಒಂದೆ ಸೂರಿನಡೆಗೆ ಇರಬೆಕು ಎನ್ನುವ
ಆಸೆಯಿಂದ ಗುಲಬರ್ಗಾದ್ಲಲಿ ಮಿನಿ
ವಿಧಾನಸೌಧ ನಿರ್ಮಾಣ ಮಾಡಿದವರು
.
ಅಲ್ಲಿಯೆ
ಪೋಲಿಸ್ ತರಬೇತಿ ಕೇಂದ್ರ ತೆಗೆದಿದ್ದು
ಮಾನ್ಯರೆ ಎನ್ನುವುದು ಮರೆಯುವಂತಿಲ್ಲ
.
ಈಗ
ಸದ್ಯ ಕೇಂದ್ರ ಕಾರ್ಮಿಕ ಮಂತ್ರಗಳಾದ
ಮೇಲೆ ದಕ್ಷಿಣ ಭಾರತದಲ್ಲಿಯೆ
ದೊಡ್ಡದಾದಂತಹ ಇ
.ಎಸ್..
ಆಸ್ಪತ್ರೆ
ನಿರ್ಮಾಣ ಹಂತದಲ್ಲಿದೆ ಇಲ್ಲಿಯೆ
ಕೇಂದ್ರಿಯ ವಿವಿ ಸ್ಥಾಪನೆಗೆ
ಅಡಿಗಲ್ಲು ಏರಿಸಿದ ಮಾಹಾನ್
ವ್ಯಕ್ತಿ ಇವರು
.

 

ಇನ್ನು
ಹೈದ್ರಾಬಾದ್ ಕರ್ನಾಟಕ
371
ಕಲಂ
ಜಾರಿಯಾಗಿ ಈ ಭಾಗದ ಜನರ ಆಶೊತ್ತರಗಳು
ಈಡೇರಲು ಪ್ರಮುಖ ಕಾರಣ ಮಾನ್ಯ
ಖರ್ಗೆಯವರೆ ಜಾತಿ ಭೇದವ ಮರೆತು
ಹಗಲಿರಳು ಶ್ರಮಿಸಿದರು ತಾವು
ಕೇಂದ್ರದಲ್ಲಿ ಮಂತ್ರಿಯಾದರೆ
ಇದನ್ನು ಸಾಧಿಸಿಯೆ ತೀರಬಹುದು
ಎನ್ನು ಲೆಕ್ಕಚಾರದಲ್ಲಿ ಅವರು
ಕೇಂದ್ರ ಮಂತ್ರಿಯಾದ ಕೆಲವೇ
ದಿನಗಳಲ್ಲಿ ಈ ಸಂತೋಷ ಈ ಭಾಗದ
ಜನರಿಗೆ ಕೊಟ್ಟ ಮಹಾನ್ ನಾಯಕ
ಖರ್ಗೆ
.
ಹೀಗೆ
ಅನೇಕ ಸಾಧನೆಗಳ ಸರದಾರ ಇವರು ಇಂದು
ಎಪ್ಪತ್ತರ ವಯಸ್ಸಲ್ಲೂ ದಣಿವರೆಯದೆ
ಜನಸೇವೆಗಾಗಿ ತನ್ನ ಕಾರ್ಯದಲ್ಲಿ
ಕಪ್ಪು ಚುಕ್ಕೆ ಮೂಡದಂತೆ
ನಡೆಯುತ್ತಿದ್ದಾರೆ
.
ತಮ್ಮ
ಬೆಂಬಲಕ್ಕೆ ನಿಂತ ಅನೇಕರನ್ನು
ಕೈಹಿಡಿದು ಎತ್ತುತ್ತಿದ್ದಾರೆ
.

 

ಆದರೆ
ಇಂತಹ ಸೋಲಿಲ್ಲಿದ ಸರದಾರನಿಗೆ
ಇನ್ನು ನಮ್ಮ ರಾಜ್ಯದ ಮುಖ್ಯಮಂತ್ರಿ
ಪಟ್ಟ ಕಟ್ಟುವಲ್ಲಿ ನಮ್ಮ ಕಾಂಗ್ರೇಸ್
ಹೈ ಕಮಾಂಡ್ ರಾಜ್ಯ ಕೆಲವು ದುಷ್ಠ
ಶಕ್ತಿಗಳಿಂದ ದೂರವಾಗಿಲ್ಲ
ಅನಿಸುತ್ತಿದೆ
.
ಎಂದೋ
ಗದ್ದುಗೆ ಏರಬೇಕಾದ ಖರ್ಗೆಯವರು
ಇಂದು ನಾಳೆಯೆಂಬ ಲೆಕ್ಕಚಾರದಲ್ಲಿ
ಇದ್ದಾರೆ ಆದರೆ ಯಾವತ್ತು ನನಗೆ
ಅಧಿಕಾರ ಕೊಡಿ ಎಂದು ಹೋದವರಲ್ಲ
ಎಲ್ಲಾ ಅಧಿಕಾರಗಳು ಅವರನ್ನು
ಅರೆಸಿ ಬಂದವು ಬಂದ ಅಧಿಕಾರವನ್ನು
ಅಚ್ಚುಕಟ್ಟಾಗಿ ನಿರ್ವಹಿಸಿದ
ಅಪ್ಪಟ ರಾಜಕಾರಣಿ ಈ ಖರ್ಗೆ
.

 

ಹಲವು
ರಾಜಕೀಯ ಧೂರಿಣರಲ್ಲಿ ಕೆಲವರು
ಮಾತ್ರ ಜನಸೇವೆಯನ್ನು ಬಹುನಿಷ್ಠಯಿಂದ
ಮಾಡುತ್ತಾರೆ
.

ರಾಜಕೀಯದಲ್ಲಿ ಮುಕ್ತ ಹಾಗೂ ಉತ್ತಮ
ರಾಜಕಾರಣಿಗಳನ್ನು ಹಗಲಲ್ಲಿ ದೀಪ
ಹಚ್ಚಿ ಹುಡುಕುವ ಸ್ಥಿತಿ
ನಿರ್ಮಾಣವಾಗಿದೆ
.

ಭ್ರಷ್ಠಾಚಾರವು ಬಹು ತಾಂಡವ
ಆಡುವಂತಹ ಸ್ಥಿತಿಯಲ್ಲಿ ಎಲ್ಲರು
ಕಳ್ಳರೆ ಎನ್ನುವ ನಿರ್ಧಾರಕ್ಕೆ
ಬರುವ ದೃಷ್ಠಾಂತ ಎದುರಾಗಿದೆ
.
ಆದರೆ
ಇವೆಲ್ಲವನ್ನು ಮೆಟ್ಟಿನಿಂತ ಮೇರು
ರಾಜಕಾರಣಿ ಎಂದರೆ ಮಾನ್ಯ ಖರ್ಗೆಯವರು
ಅವರ ಆದರ್ಶ ರಾಜಕೀಯ ಬದುಕು ಎಲ್ಲರಿಗೂ
ಮಾದರಿಯಾಗಿದೆ
.
ಅಂತಹ
ಒಬ್ಬ ಧೀಮಂತ ನಾಯಕ ಈ ರಾಜ್ಯದ
ಚಿಕ್ಕಾಣಿ ಹಿಡಿದು ಮುಖ್ಯಮಂತ್ರಿಯಾದರೆ
ಅನೇಕ ಹೊಸ ಯೋಜನೆಗಳಿಗೆ ಮರೆಗು
ಬರುತ್ತದೆ
.
ಅವರ
ರಾಜಕೀಯ ನಡೆ ಉಳಿದ ಯುವಕರಿಗೆ
ಮಾದರಿಯಾಗುತ್ತದೆ
.
ಕಾಂಗ್ರೇಸ್
ಇಲ್ಲಿಯವರೆಗೂ ತನ್ನ ಅಸ್ತತ್ವ
ಉಳಿಸಿಕೊಂಡು ಎಲ್ಲರಿಗೂ ಸಮಬಾಳು
ಸಮಪಾಲು ಎಂಬ ಮಂತ್ರದೊಂದಿಗೆ
ಹೆಜ್ಜೆ ಇಟ್ಟಿದೆ ಅದನ್ನು
ಮುಂದುವರೆಸುತ್ತಾ ಅವರನ್ನು ಈ
ರಾಜ್ಯದ ಜನತೆಯ ಪ್ರಮುಖ ಸೇವೆ
ಮಾಡಲು ಅವಕಾಶ ಕೊಡಬೇಕು
.

 

ತನ್ನ
ರಾಜಕೀಯದಲ್ಲಿ ಎಂದಿಗೂ ಸೋಲೆ
ಕಾಣದ ಇವರು ಜನರ ಆಶೋತ್ತರಗಳನ್ನು
ಬಲ್ಲವರು ಹೇಗೆ ಮಾಡಿದರೆ ರಾಜ್ಯ
ಬೆಳಿಯುವುದು ದೇಶ ಮುಂದುವರೆಯುವುದು
ಎನ್ನು ಲೆಕ್ಕಚಾರದ ಜನ ಇವರು
ಎಲ್ಲರಿಗೂ ಸಮಬಾಳು ಸಮಪಾಲು ಸಿಗಲಿ
ಎನ್ನವಂತೆ ಹಗಲು ಇರುಳು ದುಡಿಯುತ್ತಿರುವ
ಚೇತನ ಮಾನ್ಯ ಖರ್ಗೆಯವರು
.
ನಮ್ಮ
ರಾಜ್ಯ ರಾಜಕೀಯ ಇನ್ನಾದರು ಅವರ
ಸೇವೆಗೆ ತಕ್ಕ ಬೆಲೆ ಕೊಡಲಿ ನಮ್ಮ
ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು
ಕೊಡಲಿ ಎಂಬುವುದೆ ಈ ಚಿಕ್ಕವನ
ಆಸೆ
.
ಮೀಸಲಾತಿ
ಬರಿ ಪುಸ್ತಕದ್ಲಲಿ ಉಳಿಯದೆ
ಕಾರ್ಯರೂಪಕ್ಕೆ ಬರಲಿ
.

 

 

 

 

 

 

 

 

ಕೆ.ಎಂ.ವಿಶ್ವನಾಥ
(ಮಂಕವಿ)
ಮರತೂರ.

ಯುವ
ಬರಹಗಾರರು
.

" ರಾಜ್ಯ
ರಾಷ್ಟ್ರಕವಿ ಕುವೆಂಪು ಕಾವ್ಯ
ಪುರಸ್ಕೃತರು
.”

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.