Skip to main content

"ಮತ್ತೊಮ್ಮೆ ಬರಬಾರದೇ?!"

ಇಂದ radhika bhat
ಬರೆದಿದ್ದುMarch 28, 2013
10ಅನಿಸಿಕೆಗಳು

ಪ್ರೀತಿಯ ಅಭಿ,

      ಎಲ್ಲಿದ್ದೀಯೋ?ನನ್ನ ಬಿಟ್ಟು ಹೇಗಿದೀಯೋ?ಈಗ್ಲೂ ಅದೇ ಹಳೆ ಬೀದಿಯ ಶಿವುನ ಗಾಡಿಯ ಮಸಾಲ್ಪುರಿ ತಿನ್ನೋದಿಕ್ಕೆ ಹೋಗ್ತಿದಿಯಾ?ಹಾಂ..!!ಅದಷ್ಟೇ ಬಿಡು ನೀನ್ ಸತ್ರೂ ಆ ಮಸಾಲೆ ಪುರಿ ತಿನ್ನೋದನ್ನ ನೀನ್ ಬಿಡಲ್ಲ ಅಂದಿದ್ದೀಯಲ್ಲಾ..!ಅಭೀ ಈ ಹುಚ್ಚಿ ಯಾಕೆ ಈ ಕಾಗ್ದ ಬರ್‍ದಿದಾಳೆ ಅಂತ ಯೋಚಿಸ್ತಿದೀಯ? ನಂಗೊತ್ತು ನಿಂಗೆ ಕಾಗ್ದ ಓದೋದಂದ್ರೆ ದೊಡ್ಡ ಶಿಕ್ಷೆ ಇದ್ದಂಗೆ ಅಂತ..ದೇವ್ರಾಣೆ ಹೇಳ್ತೀನಿ ನಿಂಗೆ ತೊಂದ್ರೆ ಕೊಡೋದಕ್ಕಂತೂ ಬರ್‍ದಿಲ್ಲಾ ಕಣೊ..ನಂಗೆ ಬರಿಬೇಕು ಅನಿಸ್ತು ಅದ್ಕೆ ಬರ್‍ದೆ.. ನಿಂಗಿಷ್ಟ ಇಲ್ಲಾಂದ್ರೆ ಈ ಕಾಗ್ದನ ಓದ್ಬೇಡ..

    ನಂಗೊತ್ತು ನೀನ್ ಒದೇ ಒದ್ತಿಯಾ ಅಂತ ಯಾಕಂದ್ರೆ ನೀನು ನನ್ನಂತಾ ಮುಂಗೋಪಿ ಅಲ್ಲಾ ನೊಡು.

ನಿಂಗೆ ನೆನಪಿದ್ಯಾ ಅಭಿ, ನಮ್ ಪ್ರೀತಿ ಶುರುವಾಗಿದ್ದೂ ಜಗಳದಲ್ಲಿ..ಅತ್ತೆ ಮಗಳನ್ನೋ ಸಲಿಗೆಯಿಂದ ನನ್ನ ರೇಗಿಸ್ತಿದ್ದಿದ್ದು, ನನ್ನ ಗೊಂಬೆನಾ ಪಕ್ಕದ್ ಮನೆ ಬಾವಿಗೆ ಹಾಕಿ ಮಜಾ ತೆಗೊಂಡಿದ್ದು ನೆನಪಾದ್ರೆ ಈಗ್ಲೂ ನಂಗೆ ಕೊಪ ಬರುತ್ತೆ..ಅದ್ಕೆ ಅನ್ಸುತ್ತೆ ನೀನಂದ್ರೆ ನನ್ನ ಮನಸ್ಸಲ್ಲಿ ಕನ್ನಡ ಸಿನಿಮಾದ ವಜ್ರಮುನಿಯಾಗಿದ್ದೆ..ನಂತರ ಅದ್ಹೆಗೋ ಬೆಳೆದ ಸ್ನೇಹ ನಮ್ ಮನಸ್ಸಲ್ಲಿ ಆಲದ ಮರವಾಗಿ ಬೆಳ್ದಿತ್ತು.ನಿನ್ನ ಬಿಟ್ರೆ ನಂಗೆ ಯಾರೊಬ್ರೂ ಸ್ನೇಹಿತ್ರಿರಲಿಲ್ಲ...ಈವಾಗ್ಲೂ!ಆಗೆಲ್ಲಾ ನನ್ನ ಜಂಬದ್ ಕೋಳಿ ಅಂತಿದ್ರು ನೆನಪಿದ್ಯಾ?ನಂತ್ರದ ದಿನಗಳಲ್ಲಿ ನನ್ನ ಒಳ್ಳೆ ಸ್ನೇಹಿತನ ಸ್ನೇಹದ ಮಾತಿಗೆ ಪ್ರೀತಿಯ ರೆಕ್ಕೆ ಬಂದಿದ್ದು ಮೊದಲಿಗೆ ನಂಗೆ ಸಹಜವಾಗೇ ಕೋಪ, ಗಲಿಬಿಲಿಯನ್ನುಟು ಮಾಡಿದ್ರೂ ನಂತ್ರ ಅದ್ಹೇಗೋ ಆ ನಿನ್ನ ಪ್ರೀತಿಯ ಪಾಶಕ್ಕೆ ನಾನು ಸಿಲುಕಿದ್ದೆ..ನಮ್ಗೆ ತಿಳಿದಿತ್ತು.ನಮ್ಮ ಪ್ರೀತಿಗೆ ಯಾರೂ ಅಡ್ಡಿಯಾಗಲ್ಲ ಅಂತ..ನಂತರದ ದಿನಗಳಲ್ಲಿ ನಮ್ಮ ಪ್ರೀತಿ ಸುಂದರ ಕಾವ್ಯ ಸೃಷ್ಟಿಸಿತ್ತು.ಯಾವಾಗ್ಲೂ ನಾನು ಅದೇ ಬಾಲ್ಯದ ಗೆಳತಿಯಗಿ ನಿನ್ನೊಂದಿಗೆ ಜಗಳ ಆಡ್ತಿದ್ರೆ "ರಾಧಿ ನೀನ್ ಇದೇ ತರ ನಂಜೊತೆ ಜಗ್ಳ ಅಡಿದ್ರೆ ನಾನು ಆಚೆ ಮನೆ ಸವಿತಾನ ಕಟ್ಕೊಂಡು ಓಡೋಗ್ತೀನಿ" ಅಂತಿದ್ದೆ ನೆನಪಿದ್ಯಾ..ಪಾಪ ಅವ್ಳೆಷ್ಟು ಲೈನ್ ಹೊಡೀತಿದ್ಲು ನಿಂಗೆ..ಅದೇನ್ ದೊಡ್ ವಿಷ್ಯಾ ಅಲ್ಲಾ ಬಿಡು ಎಲ್ರೂ ಇಷ್ಟ ಪಡೋ ಕ್ಯಾರೆಕ್ಟರ್ ತಾನೆ ನಿಂದು..

    ಕಳೆದ ವರ್ಷ ಈ ದಿನ ನೆನಪಿದ್ಯಾ ಕ್ಲಾಸ್‌ಗೆ ಚಕ್ಕರ್ ಹೊಡ್ದು ಎನ್.ಎಚ್.ಪಿ. ಲಿ ಪಾರ್ಟಿ ಮಾಡಿದ್ದು..ಮನೆಗೆ ಲೇಟ್ ಆಗ್ ಬಂದು ಅಮ್ಮನ್ ಕೈಲಿ ಉಗಿಸ್ಕೊಂಡಿದ್ದು..ನೀನು ನನ್ ಜೀವಾನೇ ಆಗಿ ಹೋಗಿದೀಯ ಅಭಿ ನೀನಿಲ್ದೆ ನಂಗೆ ಬದ್ಕೊದು ಕಷ್ಟ ಅನ್ನಿಸಿ ಬಿಟ್ಟಿದೆ..ಅವತ್ತು ನಮ್ಮಣ್ಣ, ನೀನು ಫ್ರೆಂಡ್ಸ್ ಎಲ್ಲಾ ಪಣಂಬೂರು ಬೀಚ್ ಹೊಗಲೇ ಬಾರ್‍ದಿತ್ತು ಕಣೋ..ನೀವು ಹೋಗೋವಾಗ ನಾನು ಬರ್‍ತೀನಿ ಅಂತ ಜಗಳ ಕಾದಿದ್ದೆ..ನಾನೂ ಬಂದಿದ್ರೆ..ನಿಂಜೊತೆನೆ ಬಂದ್ಬಿಡ್ತಾ ಇದ್ದೆ. ಈ ಒಂಟಿ ಜೀವ್ನ ನಂಗೆ ಬೇಡವಿತ್ತು ಅಭಿ..ನಿನ್ನ ಸಾವಿನ್ ಸುದ್ದಿ ಕೇಳಿ ಅಗ ನಾನು ನಾನಾಗಿರಲಿಲ್ಲ..ನಂಗೆ ನಂಬೋದಿಕ್ಕೆ ಆಗಿರಲಿಲ್ಲ ಈಗ್ಲೂನು ಆಗ್ತಿಲ್ಲ...ಅಭಿ ನಿಂಗೊತ್ತಾ..ನೀನು ಬಂದೇ ಬರ್‍ತಿಯಾ ಅಂತಾ ಮನೆ ಬಾಗಿಲ್ ಹತ್ರ

 ನಿಲ್ತಿದ್ದೆ..,ಅಲ್ಲಿಗೆ ಬರ್‍ತಿದ್ದಿದು ಈ ಹುಚ್ಚೀನ ನೋಡೋಕೆ ನನ್ನ ಸಹಪಾಠಿಗಳು...ನಾನು ಎಲ್ಲರ  ಬಾಯಿಗೆ ಆಹಾರವಾಗಿದ್ದೆ..ನಮ್ಮ ಶುದ್ಧ  ಪ್ರೀತಿ ಜನರ ಬಾಯಿಗೆ ಸಿಕ್ಕು ಹಳಸಲಾಗಿ ಹೋಗಿತ್ತು...ನಾನು ಶಿವುನ ಗಾಡಿಗೆ ಹೊಗಿ ನಿನ್ನ ಹುಡುಕ್ತಿದ್ದಾಗ ನಿನ್ನ ಬಳಿಗೆ ಕರ್‍ಕೊಂಡು ಹೋಗ್ತೀವಿ ಅಂಥಾ ನಂಬಿಸಿ ನನ್ನನ್ನ ಮಂಗಳೂರಿನ ಒಬ್ಬ ಸೈಕಿಯಾಟ್ರಿಲ್ಲಿಗೆ ಕರ್‍ಕೊಂಡ ಹೊಗಲಾಯಿತು...ಈಗ ನಾನು ಒಬ್ಬ ಮಾನಸಿಕ ರೋಗಿಯಾಗಿದ್ದೆ ಅಭಿ ಅದು ನಿನ್ನಿಂದ...ನಿನ್ನ ಸಾವಿಂದ...ನಿನ್ನ ನೆನಪಿಂದ ಹೊರ ಬರೋಕೆ ತುಂಬಾನೆ ಕಷ್ಟವಾಯ್ತು...ಈಗ ನಾನು ನೋಡೋರಿಗೆ ಒಬ್ಬ ನಾರ್ಮಲ್ ಹುಡ್ಗಿ..ನನ್ನ ಬಗ್ಗೆ ತಿಳ್ದೋರಿಗೆ..ಒಬ್ಬ ಮಾಜೀ ಹುಚ್ಚಿ..

ನಾನೀಗ ನಿನ್ನಾಸೆಯಂತೆ ಎಮ್.ಸಿ.ಜೆ ಮಾಡ್ತಾ ಇದೇನೆ...ಈಗ ಸತತ '೨೦' ಗಂಟೆ ದುಡಿಯುವ ವಿದ್ಯಾರ್ಥಿ..ನಿದ್ದೆ ಬರ್‍ತಿಲ್ಲಾ ನಂಗೆ..ಅದ್ಕೆ ಬರೀತೀನಿ..ತುಂಬಾನೆ..ಇವತ್ತು ಪ್ರೇಮಿಗಳ ದಿನ..ನಾನು ಯಾವ ಡ್ರೆಸ್ ಹಾಕ್ಲಿ..ನೀನ್ ಕೊಟ್ಟ ರೆಡ್ ಚೂಡಿ ಹಾಕ್ಲ..?ಹಾಃ..ಅದ್ನೇ ಹಾಕ್ತೀನಿ..ನಂಗೊತ್ತು ನೀನ್ ನನ್ನ ನೋಡೇ ನೋಡ್ತಿಯಾ ಅಂತ..ನಾನು ದಿನವೂ ನೋಡೋ ನಕ್ಷತ್ರಗಳ ಎಡೆಯಿಂದ..ಆದ್ರೂ ಅಭಿ ಆ ದಿನ ಇನ್ನು ಬರೋದಿಕ್ಕೆ ಸಾದ್ಯಾನೇ ಇಲ್ವ..?ಈಗ ನಂಗಿರೋದು ಅದೇ ಕತ್ತಲು,ಅದೇ ನಕ್ಷತ್ರಗಳ ಸಹಚರ್‍ಯ.ನೋಡಲ್ಲಿ ಒಡೆದ ರೇಡಿಯೋ ಹಾಡುತಿದೆ..

"ತಿಳಿ ನೀಲದಲ್ಲಿ ತಾ ನೀಲವಾಗಿ ಅವ ಹೋದ ದೂರ ದೂರ

ಬೆಳಗಿಹುದು ಇಲ್ಲಿ ಅವ ಬಿಟ್ಟ ಬೆಳಕು ಇನ್ನೊಮ್ಮೆ ಏಕೆ ಬಾರ...?"

ನಂಗೇ ಹೇಳಿ ಮಾಡಿಸಿದ ಹಾಗಿದೆ ಅಲ್ವೇ..?

                                                                    ಕಳೆದ ನೆನಪುಗಳೊಂದಿಗೆ ನತದೃಷ್ಟೆ..

                                                                              ರಾಧಿ..

 

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

ಪಿಸುಮಾತು ಶನಿ, 03/30/2013 - 08:54

ನಿಮ್ಮ ಅಭಿ ಬೇಗ ನಿಮಗೆ ಸಿಗಲಿ :)

K.M.Vishwanath ಸೋಮ, 04/01/2013 - 14:22

ಆತ್ಮಿಯರೆ 

ಈ ಲೇಖನ ಅತ್ಯಂತ ಹೃದಯಸ್ಪರ್ಷಿತವಾಗಿದೆ ಆ ಪುಣ್ಯಾತ್ಮ ಎಲ್ಲಿ ಈಗ ನಿಮ್ಮ ಒಲವು ಸತ್ಯವಿದ್ದರೆ ಖಂಡಿತಾ ಬರತಾನೆ 

K.M.Vishwanath ಸೋಮ, 04/01/2013 - 14:22

ಆತ್ಮಿಯರೆ 

ಈ ಲೇಖನ ಅತ್ಯಂತ ಹೃದಯಸ್ಪರ್ಷಿತವಾಗಿದೆ ಆ ಪುಣ್ಯಾತ್ಮ ಎಲ್ಲಿ ಈಗ ನಿಮ್ಮ ಒಲವು ಸತ್ಯವಿದ್ದರೆ ಖಂಡಿತಾ ಬರತಾನೆ 

radhika bhat ಧ, 04/03/2013 - 16:07

ಆ ಪುಣ್ಯಾತ್ಮ ಈಗ ಎಲ್ಲಿದ್ದಾನೆ ಎಂಬುದು ಕಥೆಯನ್ನು ಮತ್ತೊಮ್ಮೆ ಓದಿದರೆ ತಿಳಿಯುತ್ತೆ ಸರ್.. ಬರಹ ಓದಿದಕ್ಕೆ ದನ್ಯವಾದಗಳು.

ವಿಶ್ವಾಸಿ ರಾಧಿಕಾ

ಆ ಪುಣ್ಯಾತ್ಮ ಈಗ ಎಲ್ಲಿದ್ದಾನೆ ಎಂಬುದು ಕಥೆಯನ್ನು ಮತ್ತೊಮ್ಮೆ ಓದಿದರೆ ತಿಳಿಯುತ್ತೆ ಸರ್.. ಬರಹ ಓದಿದಕ್ಕೆ ದನ್ಯವಾದಗಳು.

ವಿಶ್ವಾಸಿ ರಾಧಿಕಾ

ತ್ರಿನೇತ್ರ ಶುಕ್ರ, 04/05/2013 - 16:30

ಕಥೆ ಓದಿಯೂ ಕೂಡಾ ಈ ರೀತಿ ಅರ್ಥವಾಗದವರೂ ಇರುತ್ತಾರೆಂದರೆ...?

ನವೀನ್ ಚ೦ದ್ರ ಸೋಮ, 04/08/2013 - 16:36

ಅನಿಸಿಕೆಗಳನ್ನು ನೋಡಿ ನನಗೆ ಒಂದು ರೀತಿಯಲ್ಲಿ ದಿಗಿಲಾಯ್ತು!  ಮತ್ತೆ ಬರುತ್ತಾನೆ ಎಂದಾಗ ಇದೇನೂ ಅನಿಸಿತು, ಮತ್ತೆ ಓದಿದೆ

 ಅಭಿ ಸತ್ತಿರುವ ವಿಷಯ ಅವರಿಗೆ ತಿಳಿದಿಲ್ಲ ಎಂದು ಕಾಣಿಸುತ್ತೆ,, ಏನೇ ಆಗಲಿ ಮನಸ್ಸು ಒಬ್ಬರನ್ನು ಅಚ್ಹಿಕೊಂಡರೆ ಸಾಕು, 

ಅವರಿಂದ ಬಿಡಿಸಿಕೊಳುವುದು ತುಂಬಾ ಕಷ್ಟ.. ಆ ಒಂದು ದಡವನ್ನು ನೀವು ದಾಟಿ ಬಂದಿದ್ದೀರಾ,,, ನೆನೆಪಿನಂಗಳದಲಿ ನೋವು-ನಲಿವಿನ

ನೆನೆಪಿನ ಬುತ್ತಿಯನ್ನು ಬಿಚ್ಹಿ ಅದರಲ್ಲಿರುವ ಪ್ರತಿಯೊಂದನ್ನು ಸ್ವೀಕರಿಸಲೇಬೇಕು, ಮನಮುಟ್ಟುವ ಲೇಖನ,,

ನವೀನ್ ಚಂದ್ರ

ತ್ರಿನೇತ್ರ ಶುಕ್ರ, 04/05/2013 - 16:35

ಅಥೆ ಕಲ್ಪನೆಯಾಗಿರಲಿ ಯಾ ಅನುಭವವಾಗಿರಲಿ ಒಟ್ಟಿನಲ್ಲಿ ಓದಿಸಿಕೊಂಡು ಹೋಗುವ ಎಲ್ಲಾ ಗುಣಗಳನ್ನು ಹೊಂದಿದೆ.....


ಮತ್ತೆ ಬಾರಲಾರದ ಲೋಕಕ್ಕೆ ಹೊರಟು ಹೋಗಿರುವ ಆ ವ್ಯಕ್ತಿ ಅದುಹೇಗೆ ಮತ್ತೆ ವಾಪಸ್ ಬರಲು ಸಾಧ್ಯ...? ಹೂಂ ಮತ್ತೊಮ್ಮೆ.... ಅಂದರೆ ಪುನರ್ಜನ್ಮ ಪಡೆದು ಬರಬಹುದೆಂದು ಆಶಿಸೋಣವೇ...!

SATHISH GOWDA S ಶನಿ, 04/06/2013 - 23:35

ಸಾವಿರ ಸಾವಿರ ನೆನಪುಗಳು ಸಾಯುವ ತನಕ ಬರುವುದು ಖಚಿತ...!


ನಿಮ್ಮ ಈ ಕಥೆ ನಿಜವಾಗಿಯು ಕಾಲ್ಪನಿಕವಲ್ಲ,,,, ಅಥವಾ ಕಲ್ಪನೆಯಾದರು,,,,  


ಆ ಕಥೆಯಲ್ಲಿ ಬರುವ ನಿಮ್ಮ ಪಾತ್ರಕ್ಕೆ, ತು೦ಬಾನೆ ಬೆಲೆ ಇದೆ, ಏಕೆ೦ದರೆ  ನಿಮ್ಮ ಆ ಪ್ರೀತಿಗೆ, ನಿಮ್ಮ ಆ ನೋವಿಗೆ, ಬೆಲೆಕಟ್ಟಲಾಗದು..  • B'cs That is True Love (Never End)

 


                                                                                        ಪರಿಚಯವಿಲ್ಲದ ಗೆಳೆಯ ಸತೀಶ್ ಎಸ್ ಗೌಡ


              

Sreekantha.Y ಶನಿ, 05/11/2013 - 19:57

ರಾಧಿಕಾರವರೆ ನಿಮ್ಮ ಈ ಪ್ರೀತಿ ಸದಾಕಾಲ ಶಾಶ್ವತವಾಗಿರಲಿ, ನಿಮ್ಮ ಭಾವನೆಗಳು ಸಾಗರದ ಅಲೆಗಳು ಅಂಚಿಗೆ ಮುತ್ತಿಕ್ಕುವಂತಿವೆ, ನಿಮ್ಮ ಈ ಭಾವನೆಗಳು ಅದ್ಬುತವಾಗಿವೆ.

 

ಇಂತಿ ವಿಸ್ಮಯ ನಗರಿಯ ಸ್ನೇಹಿತ,

ಶ್ರೀಕಾಂತ್.

chinna ಮಂಗಳ, 03/25/2014 - 15:10

miss Radika avre jivnane hage kanri,navu yavudanna tumba ista padutivo ade namge tumba nov kodutte or naminda kaledu hogutte,ede life namge nav ista pattattaddu ella sikittu andre namge devr yake beku e novadru elli irtittu alva.jivandalli hegego irbeku ankotivi but adeno agutte.navu hag irbeku hig irbeku ankotivi devru nammanna hegego ero hage madtane.adru navu jivandalli tumba dairyadinda baro kastagalanna eduristivi alwa.adre en madodu namage spurti agirore nammanna bittu hogirovaga navu en sadisi en madodu.nan jivandallu nin tarane but swalpa different story of my life.nim huduga papa sattoda but nam hudugi nan kannedure idru nammanna care madalla.avaligoskara nan jivnane tyaga madidru avlo.ellanu maretu maduve agi nanna nenapu kuda avlge illa.dinakke 24 ganteli kanista paksha 3 gante matadtidolu dinalu msg madtiddolu ega avala msg illa phone illa.ella ondu kanasu annotara agide gotta adru nanu avlge yavattu kettadu bayasolla yakandre ake channagi irli antane alwa nan bayasiddu.nanna maretrene ake channagi irtale andre adakinta olledu enide pa.avlu elle irli channagirli.hige nam jivna nivu maretu bidri adu ondu kanasu mareyoke agde hodru nenaskobedi pls.jivna istakke mugidilla radika avre nammanta esto natadrusta premigalidare avrge navu dari deepa agbeku.avru nam tara nov pattu jivnane bejar agi esto premigalu sattidare.sayodrinda ago upayoga hedigalu anno patta.iddu jayisabeku ade jivna.ega namma ashe akakshe sattu sunnavagive adre bereyavigoskaranadru navu baduk beku alwa.

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.