Skip to main content

"ಟೆಲಿಪತಿಯ ರಹಸ್ಯ"

ಇಂದ radhika bhat
ಬರೆದಿದ್ದುMarch 27, 2013
3ಅನಿಸಿಕೆಗಳು

 

            

ನಿಮ್ಮ ಆಪ್ತರು ನಿಮ್ಮನ್ನು ಮರೆತೇ ಬಿಟ್ಟಿದ್ದಾರೆಂದು ಚಿಂತಿಸುತ್ತಿದ್ದಾಗ ಅದೇ ಆಪ್ತರಿಂದ ಒಂದು ಫೋನ್ ಕಾಲ್ ಅಥವಾ ಒಂದು ಮೆಸೇಜ್ ಅಥವಾ ಅವರೇ ನಿಮ್ಮೆದುರು ಪ್ರತ್ಯಕ್ಷವಾದರೆ ಎಷ್ಟೊಂದು ಆಶ್ಚರ್‍ಯವಾಗುತ್ತದೆ ಅಲ್ಲವೇ? ಇಂತಹ ಸಂದರ್ಭಗಳು ಎಂದಾದರೂ ನಿಮಗೆ ಎದುರಾದದ್ದಿದೆಯೇ?ಆಗ ನಿಮಗಾದದ್ದು ಆಶ್ಚರ್‍ಯವೇ ಅಥವ ದಿಗ್ಬ್ರಮೆಯೇ? ಯೋಚಿಸಿದ್ದೀರಾ? ನನಗಂತೂ ಇದೊಂದು ಅದ್ಭುತವೇ ಅನಿಸಿಬಿಟ್ಟಿದೆ.

 

ಅಸಲಿಗೆ ಇದು ಕಾಕತಾಳೀಯವೇ..ಅಥವಾ ಇದೂ ಒಂದು ರೀತಿಯ ಸಂವಹನ ಮಾದ್ಯಮವೇ? ಕೆಲವು ವಿಜ್ಞಾನಿಗಳು ಈ ಅದ್ಭುತವನ್ನು "ಟೆಲಿಪತಿ'' ಎಂಬ ಹೆಸರಿನಿಂದ ಗುರುತಿಸಿ ಇದೊಂದು ಸಂವಹನ ಮಾಧ್ಯಮ ಎಂದು ಕರೆದಿದ್ದಾರೆ.

ಇಲ್ಲಿ ಯಾವುದೇ ಇಂದ್ರಿಯ ವಾಹಕಗಳಿಲ್ಲದೆ ಒಬ್ಬ ಮನುಷ್ಯನಿಂದ ಇನ್ನೊಬ್ಬ ಮನುಷ್ಯನಿಗೆ ನೇರವಾಗಿ ಸಂದೇಶಗಳು ರವಾನೆಯಾಗುತ್ತದೆ. ಇದೊಂದು ರೀತಿಯ ಪ್ರಕೃತಿ ಸಹಜವಾದಂಹ ಕ್ರಿಯೆ.

 

ಈ ಕ್ರಿಯೆಯನ್ನು ೧೮೨೨ರಲ್ಲಿ ಫೆಡ್ರಿಕ್.ಡಬ್ಲ್ಯು ಹೆಚ್. ಮೈರ್ ಎಂಬಾತ "ಟೆಲಿಪತಿ" ಎಂಬ ಹೆಸರಿನಿಂದ ಗುರುತಿಸಿದ. ಟೆಲಿಪತಿ ಎಂಬ ಶಬ್ದದ ಮೂಲಸ್ವರೂಪ ಗ್ರೀಕ್ ಪದಗಳಾದ "ಟೆಲಿ"ಹಾಗೂ ಹಾಗೂ ಪಥೇಯಿಯ ಎಂಬ ಶಬ್ದಗಳಿಂದ ಬಂದಿದೆ. "ಟೆಲಿ"ಅಂದರೆ "ರಿಮೋಟ್" 'ದೂರವರ್ತಿ' ಮತ್ತು ಪಥೇಯಿಯಾ ಎಂದರೆ ಪ್ರಭಾವಕ್ಕೊಳಗಾಗು ಎಂದರ್ಥ.

 

ಇಂಥಹ ಮನಸ್ಸಿಗೆ ಸಂಬಂಧಿಸಿದ ಅಸಮಾನ್ಯ ಸಂಗತಿಗಳ ಕುರಿತಾಗಿ ಅಧ್ಯಯಿಸುವುದಕ್ಕೆ "ಪ್ಯಾರಾ ಸೈಕಾಲಜಿ"ಎಂದು ಕರೆಯುತ್ತಾರೆ. ಈ ಅಧ್ಯಯನದ ಪ್ರಕಾರ ಟೆಲಿಪತಿಯ ಅನೇಕ ದೃಷ್ಟಾಂತಗಳ ಬಗೆಗೆ ಅಧ್ಯಯಿಸಲಾಗುತ್ತದೆ. ಆದರೆ ಇದುವರೆಗೆ ಪರಿಪೂರ್ಣವಾದಂತ ವ್ಯಾಖ್ಯೆ ನೀಡಲು ಇದುವರೆಗೆ ಆಗಿಲ್ಲ.

ಲೇಖಕರು

radhika bhat

ಹಂಸಧ್ವನಿ

ನಮ್ಮ ಹುಡುಕಾಟಗಳೇ ಹಾಗೆ.. ಇದಲ್ಲ ಅದು ಅದಲ್ಲ ಇದು..ಎಂದು ಹುಡುಕುತ್ತಾ ಹೋಗುತ್ತೇವೆ. ಕೈಗೆ ಬಂದಿದ್ದನ್ನ ದೂರ ತಳ್ಳುತ್ತಾ, ಯಾವತ್ತೋ ತಳ್ಳಿದ್ದಾಕ್ಕಾಗಿ ಮತ್ತೆ ಹಂಬಲಿಸುತ್ತಾ, ಇದು ನನ್ನದಲ್ಲ..ಇದು ನನ್ನದಲ್ಲ ಎಂದು ಗೊಣಗುತ್ತಾ ಮತ್ಯಾವುದನ್ನೊ ಹುಡುಕುತ್ತಾ ಹೊಗುವುದು..ಯಾವುದನ್ನು ನಿರಾಕರಿಸಿದ್ದೆವೋ ಅದರ ಜೊತೆಗೆ ಬಾಳಬೇಕಾಗಿ ಬರುವುದು.. ನಾನೂ ಹಾಗೆ..ಎಲ್ಲರ ಹಾಗೆ. ನನ್ನದಲ್ಲದ ಲೋಕದಲ್ಲಿ, ನಾಲ್ಕು ಗೊಡೆಗಳ ಮದ್ಯೆ, ಕಂಪ್ಯೂಟರ್ ಎದುರುಗಡೆ ನಿರಾಸಕ್ತಿಯಿಂದ ಕುಳಿತು, ಯಾರದೊ ಮೇಲಿನ ಕೊಪಕ್ಕೆ ಕೀಬೋರ್ಡ್ ಕುಟ್ಟುತ್ತಾ ತಿಂಗಳ ಸಂಬಳಕ್ಕೆ ದುಡಿದು ಜೀವನ ಕಳೆಯೊದು ಸಾದ್ಯವಿಲ್ಲದ ಮಾತು. ಇಂದಿನಿಂದ ನನ್ನ ಆಸಕ್ತಿಗಳಿಗೆ ಗುಬ್ಬಚ್ಚಿ ಗುಡು ಕಟ್ಟುವ ಬಯಕೆಯಾಗಿದೆ..ನನ್ನೊಂದಿಗೆ ಕೈಜೊಡಿಸಿ. ಈ ಮಂಜಿನ ಹಾದಿಯ ಪಯಣಿಗರಾಗಿ..
ಇಂತೀ ನನಸಾಗ ಬಯಸುವವಳು
ರಾಧಿಕಾ ಭಟ್
www.manjinahadi.blogspot.com

ಅನಿಸಿಕೆಗಳು

ತ್ರಿನೇತ್ರ ಗುರು, 03/28/2013 - 15:27

ಮಾಹಿತಿ ಚೆನ್ನಾಗಿದೆ ಆದರೆ ಅಪೂರ್ಣ ಎನಿಸಿತು. ಕೆಲವು ಉದಾಹರಣೆಗಳ ಮೂಲಕ ಓದುಗರ ಮನಮುಟ್ಟುವಂತೆ ಮಾಡಲು ಪ್ರಯತ್ನಿಸಿದಲ್ಲಿ ಇನ್ನೂ ಉತ್ತಮವಾಗಬಹುದಿತ್ತು. ಶುಭವಾಗಲಿ- ತ್ರಿನೇತ್ರ.

radhika bhat ಗುರು, 03/28/2013 - 22:12

ಅಪೂರ್ಣ ಲೇಖನಕ್ಕೆ ಪರಿಪೂರ್ಣತೆಯನ್ನು ಖಂಡಿತಾ ನೀಡುತ್ತೇನೆಂಬ ಭರವಸೆಯೊಂದಿಗೆ

ನಿಮ್ಮ ಅಭಿಪ್ರಾಯಗಳಿಗೆ ದನ್ಯವಾದಗಳು,

ವಿಶ್ವಾಸೀ,

ರಾಧಿಕಾ

ತ್ರಿನೇತ್ರ ಶುಕ್ರ, 03/29/2013 - 10:10

ಹೇಳಬೇಕೆಂದಿರುವುದನ್ನೆಲ್ಲಾ ಬರೆದರೆ ಲೇಖನ ತುಂಬಾ ಉದ್ದವಾಗಬಹುದೆಂದಿದ್ದರೆ ಅದನ್ನು ಭಾಗಗಳಾಗಿ ಪ್ರಕಟಿಸಬಹುದು ಧಾರಾವಾಹಿ ಯಂತೆ ಅಲ್ಲವೇ...!

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.