Skip to main content

ಕುಂಗ್ ಫು ಹಸಲ್ (೨೦೦೪)-ಮಿಂಚಿನ ಓಟ-ಸಂಚಿನ ಕಿಕ್-ಪಂಚಿನ ಡೈಲಾಗ್...!!

ಇಂದ venkatb83
ಬರೆದಿದ್ದುMarch 2, 2013
noಅನಿಸಿಕೆ

ತೀರಾ ಸರಳವಾಗಿ ಆರಂಭವಾಗುವ ಈ ಚಿತ್ರ ನೋಡುವವರಿಗೆ ಆರಂಭದಲ್ಲಿ ಇದಕ್ಯಾಕೆ ಬಂದೆವೋ?ಅನ್ನಿಸದೆ ಇರದು-ಆದ್ರೆ ಕೆಲ ಹೊತ್ತಿನ ನಂತರ ಸಿನೆಮ ಚುರುಕಾಗಿ ಹಲವು ಕುತೂಹಲಕಾರಿ ಮಜಾ ಕೊಡುವ ಸನ್ನಿವೇಶಗಳು ಬರುವವು..ನೋಡಿ ಮುಗಿಸಿದ ಮೇಲೆ ಅಬ್ಬ್ಬಬ್ಬಾ ಏನ್ ಚಿತ್ರಾನಪ್ಪ! ಎನ್ನದೆ ಇರಲು ಸಾಧ್ಯವಿಲ್ಲ..!

ಕಥೆ-

೧೯೩೦ರಲ್ಲಿ ಆದ ವಿಪ್ಲವಗಳಿಂದ ಚೀನಾದ ಶಾಂಗೈನಲ್ಲಿ ಪರಿಸ್ತಿತಿಯ ಲಾಭ ಪಡೆವ ನಿಟ್ಟಿನಲ್ಲಿ ಜನ್ಮ ತಳೆವ ಹಲವು ಕ್ರಿಮಿನಲ್ ಸಂಘಟನೆಗಳು ಸಿರಿವನ್ತರನ್ನು ದೋಚಲು ಶುರು ಮಾಡುತ್ತವೆ-ಹಾಗೆ ಶುರು ಆದ ಸಂಘಟನೆಗಳಲ್ಲಿ ಒಂದು ಯಾಕ್ಸ್ ಗ್ಯಾಂಗ್ (ಕೈನಲ್ಲಿ ಕೊಡಲಿ ಹಿಡಿದು ಹೋರಾಡುವವರು)..ಅತಿ ಕ್ರೂರಿ ದುರುಳರು ಹಲವು ನೂರು ಸಂಖ್ಯೆಯಲ್ಲಿ ಸಂಘಟಿತರಾಗಿರುವವರು ...

ಆಗಾಗ ಪತ್ರಿಕೆಗಳಲಿ ಓದುವ ಹಾಗೆ ಇಲ್ಲೂ ಇಬ್ಬರು ಸೋಮಾರಿ ನಿರುದ್ಯೋಗಿ ಹುಡುಗರು ಯಾಕ್ಸ್ ಗ್ಯಾಂಗ್ ಹೆಸರು ಹೇಳಿಕೊಂಡು ಒಂದು ವಠಾರದ ಜನರನ್ನು ಬೆದರಿಸಿ ಸುಲಿವ ಯತ್ನ ಮಾಡುವರು ,ಆ ವಠಾರದ ಯಜಮಾನತಿ ಸದಾ ಬಾಯಲ್ಲಿ ಸಿಗರೇಟು ಹಿಡಿದು ಕೆಟ್ಟ ಕೆಟ್ಟ ಮಾತು ಆಡುತ್ತ ಗಂಡನನ್ನು ಮತ್ತು ವಥಾರದವರನ್ನು ಅಂಕೆಯಲ್ಲಿ ಇಟ್ಟುಕೊಂಡವಳು.

ಅವಳು ಬಾಯ್ದೆರೆದರೆ ಗುಡುಗು ಸಿಡಿಲು ಮಿಂಚು ಬಿರುಗಾಳಿ ಚಂಡಮಾರುತ ಎಲ್ಲಾ ಒಟ್ಟಿಗೆ ಬಂದಂತೆ ..!! ಅವಳ ಮಾತು ಚೀರಾಟ ಹಾರಾಟಕ್ಕೆ ಆ ವಠಾರದ ಮನೆಗಳ ಗಾಜು ಒಡೆದು ಪುಡಿ ಪುಡಿ ಆಗುವವು ಎಂದಾಗ ಅವಳ ಶಕ್ತಿ ಅರಿವಾಗಬಹ್ದು..!!

ಯಾಕ್ಸ್ ಗ್ಯಾಂಗ್ ಹೆಸರು ಹೇಳಿಕೊಂಡು ಬೆದರಿಸಿ ಹೆದರಿಸಿ ಹಣ ಸುಲಿಯ ಬಂದ ಈ ಇಬ್ಬರ ಮುಖ ನೋಡಿ ಯಾಕ್ಸ್ ಗ್ಯಾಂಗ್ ಇರಲಿ ಪೋಲಿಗಳ ಗ್ಯಾನ್ಗಿಗೂ ಇವರು ಲಾಯಕ್ಕಿಲ್ಲ ಎಂದು ಎಣಿಸಿದ ಆಕೆ ಇಬ್ಬರನ್ನು ಹೊಡೆದು ಹೊರಗೆ ಅಟ್ಟುವಳು....

ಸರಿ ಸುಮಾರು ಅದೇ ಸಮಯದಲ್ಲಿ ಆ ವಠಾರದ ಪಕ್ಕ ಹಾದು ಹೋಗುತ್ತಿದ್ದ ನೈಜ ಯಾಕ್ಸ್ ಗ್ಯಾಂಗ್ ಮೆಮ್ಬರ್ಸ್ಗೆ ಈ ಸನ್ನಿವೇಶ ಕಾಣಿಸಿ ಕೇಳಿಸಿ ತಮ್ಮ ಗ್ಯಾಂಗ್ ಬಗ್ಗೆ ಭಯ ಭಕ್ತಿ ಇಲ್ಲದೆ ಮಾತಾಡುವ ಈ ಹೆಂಗಸಿಗೆ ಎಷ್ಟು ಧೈರ್ಯ?

ಅವಳಿಗೆ ಬುದ್ಧಿ ಕಲಿಸಬೇಕು ಎಂದು ವಠಾರದತ್ತ ಬರುವರು...

ಮೊದಲಿಗೆ ಅವಳನ್ನು ಮಾಮೂಲಿ ಬಜಾರಿ ಹೆಂಗಸು ಎಂದು ತಮ್ಮ ಗ್ಯಾಂಗ್ ಬಗ್ಗೆ ಹೇಳಿ ಹೆದರಿಸಿ ಒಳಗೆ ಹೋಗಿ ಬೆಲೆ ಬಾಳುವ ವಸ್ತುಗಳನ್ನು ತಂದು ಕೈಗೆ ಒಪ್ಪಿಸಲು ಹೇಳುವರು-ಅವಳು ಮರು ಮಾತಾಡದೆ ತನ್ನ ಮನೆಯೊಳು ಹೊಕ್ಕುವಳು ಬಾಗಿಲು ಮುಚ್ಚುವಳು-

ಗ್ಯಾಂಗ್ನವರು ಮತ್ತು ವಠಾರದ ಜನ ಅವಳ ಆ ವರ್ತನೆ ನೋಡಿ ನಗುವರು-ಕಣ್ ಮುಚ್ಚಿ ತೆರೆವುದರೊಳಗೆ ಸುಂಟರಗಾಳಿ ಬಿರುಗಾಳಿ ಸುನಾಮಿಯನ್ನು ಮೀರಿಸುವ ವೇಗದಲ್ಲಿ ಮೆಟ್ಟಿಲಿಳಿದು ವಿಪರೀತ ವೇಗದಲ್ಲಿ ಬಂದು ಅವಳು ಕೊಟ್ಟ ಹೊಡೆತಕ್ಕೆ ಆ ಗ್ಯಾಂಗ್ ಮುಖ್ಯಸ್ಥ ಹೋಗಿ ಒಂದು ಪೀಪಾಯಿಯಲ್ಲಿ ಸೊಂಟ ಮುರಿದುಕೊಂಡು ಬೀಳುವನು-ಅವನ ಇನ್ನಿತರ ಸಹವರ್ತಿಗಳು ಈ ಹಠಾತ್-ಅಚಾನಕ್ ಅತೀ ವೇಗದ ಹೊಡೆತ ನೋಡಿ ಇವಳು ಸಾಮಾನ್ಯಳಲ್ಲ-ಯಾರೋ ಟಫ್ ಹೆಂಗಸು ಎಂದು ಎಣಿಸಿ ತಮ್ಮ ತಮ್ಮ ಕೊಡಲಿಗಳನು ಎತ್ತಿಕೊಂಡು ಮುಂದೆ ಬರುವರು-ಆಗ ಅವಳು ಹಾಕುವ ಬೊಬ್ಬೆ-ಕಿರುಚಾಟಕ್ಕೆ ಆ ವಠಾರದ ಕಿಟಕಿ ಗಾಜುಗಳು ಒಡೆದು ಅಲ್ಲಿ ಭಯಂಕರ ಬಿರುಗಾಳಿ ಬೀಸೀ ಮಣ್ಣು ತೋರಿ ಬಂದು ಕಣ್ಣಲಿ ಬಿದ್ದು-ತಮ್ಮ ಮುಖ್ಯಸ್ಥನನ್ನು ಎತ್ತಿಕೊಂಡು ತಮ್ಮ ಅಡ್ಡಾ ಕಡೆ ಓಡುವರು ...

ಅವಳ ಮೊದಲಿನ ವರ್ತನೆ ನೋಡಿ ಹಲ್ಲು ಕಿಸಿಯುತ್ತಿದ್ದ ವಠಾರದ ಜನ ಇವಳ ದುರ್ಗಿ ಅವತಾರ ನೋಡಿ ಭಯ ಬಿದ್ದು ಮನೆಯೊಳು ಹೊಕ್ಕು ಬಾಗಿಲು ಹಾಕಿಕೊಳ್ಳುವರು-ಇವಳು ಸಾಮಾನ್ಯಳಲ್ಲ ಇವಳ ಪಾಡಿಗೋಗದೆ ಸುಮ್ಮನಿರೋದೆ ಲೇಸು ಎನ್ನುವರು...!!

ಇತ್ತ ತಮ್ಮ ಅಡ್ಡಾಕ್ಕೆ ಮುಖ್ಯಸ್ಥನನು ಹೊತ್ತುಕೊಂಡು ಬಂದು ಕೆಳಗೆ ಇಳಿಸಿ ಅದನ್ನು ನೋಡಿದ ಆ ಗ್ಯಾಂಗ್ನ ಸುಪ್ರೀಂ ಲೀಡರ್ ಆದದ್ದು ಏನು? ಯಾರು ಅದಕ್ಕೆ ಹೇಗೆ ಕಾರಣ ಎಂದು ತಿಳಿದು-

ಆ ಹೆಂಗಸಿನ ಬಳಿಗೆ ತಾನೇ ಹೋಗಿ ಅವಳ ವೀರಾವೇಶವನ್ನು ಮತ್ತು ಬಾಡಿಗೆಗೆ ಇರುವ ವಠಾರದ ಕೆಲ ಜನರಲ್ಲಿ ಹಲವು ಜನ ಸಾಮಾನ್ಯರಂತೆ ಇರುವ ಅಸಾಮಾನ್ಯ ಕುಂಗ್ ಫು ಯೋಧರನ್ನು ನೋಡಿ ಅವರೆಲ್ಲರನ್ನ ಮಣಿಸಲು ಆಗದು ಎಂದು ಯೋಚಿಸಿ ಅವಳಿಂದ ಪೆಟ್ಟು ತಿಂದು ಮರಳಿ ಅಡ್ಡಾಕ್ಕೆ ಬಂದು ಅವಳನ್ನು ಮತ್ತು ವಠಾರದ ಜನರನ್ನು ಸಾಯಿಸಲು ಅಪಾಯಕಾರಿ ಸಹೋದರರನ್ನು ಕರೆ ತರಿಸುವನು-ಈ ಸಹೋದರರೋ ಅಸಾಮಾನ್ಯರು-ಕಣ್ಣಿಗೆ ಗ್ಲಾಸ್ ಹಾಕಿದ -ಬರೀ ಹೆಜ್ಜೆ ಸಪ್ಪಳದಿಂದ ಯಾರು ಯಾವ ಕಡೆ ಬರುತ್ತಿರುವರು ಎಂದು ತಿಳಿದು ನೆಲ ಮೇಲೆ ಸ್ವಲ್ಪ ಬಾಗಿ ತಮ್ಮ ಕಾಲ ಮೇಲೆ ಕಾಲು ಹಾಕಿಕೊಡು (ಕೆಳಗೆ ಆಧಾರ ಇಲ್ಲದೆ)ಅದರ ಮೇಲೆ ಹಾರ್ಮೋನಿಯಂ ತರಹದ ವಾಧ್ಯ ನುಡಿಸುತ್ತ ಅದರ ತಂತಿಗಳಿಂದ ಆಯುಧಗಳನ್ನು ಎಸೆದು ಕ್ಷಣ ಮಾತ್ರದಲ್ಲಿ ಕೊಲುವ ತಾಕತ್ತು -ಬುದ್ಧಿಮತ್ತೆ ಇರುವವರು..

ಅವರಿಬ್ಬರೂ ಬಂದು ಕತ್ತಲಿನಲ್ಲಿ ಕುಳಿತು ವಾಧ್ಯ ನುಡಿಸುವರು-ಅದು ಕೇಳಿ ಎಚ್ಚೆತ್ತು ನೋಡುವ ಆ ಮಹಿಳೆ ಮತ್ತು ಇನ್ನಿತರ ಕುಂಗ್ ಫು ಯೋಧರಿಗೆ ಈ ಇಬ್ಬರು ಕಪ್ಪು ಬಂತೆ ಧರಿಸಿದ ಕಪ್ಪು ಕನ್ನಡಕ ಹಾಕಿದ ಯಾವದೇ ಅಧಾರ ಇಲದೆ ವಾಧ್ಯ ಮೀಟುತ್ತಿರುವ ಇವರು ಅಪಾಯಕಾರಿ ಆಗಂತುಕರು ಎಂದು ಎಣಿಕೆ ಆಗಿ-ಬೇಗನೆ ತಮ್ಮ ತಮ್ಮ ಆಯುಧ ಎತ್ತಿಕೊಂಡು ಅವರತ್ತ ನುಗ್ಗುವುದರೊಳಗೆ ಕ್ಶನ್ ಮಾತ್ರದಲ್ಲಿ ಇಬ್ಬರು ಸೂಪರ್ ಪವರ್ ಇರುವ ಕುಂಗ್ ಫು ಯೋಧರನ್ನು ಕ್ಷಣ ಮಾತ್ರದಲ್ಲಿ ತಮ್ಮ ತಂತಿ ವಾಧ್ಯದ ಆಯ್ಧಗಳಿಂದ ಕಚಕ್ ಕಚಕ್ ಎಂದು ರುಂಡ ಮುಂಡ ಬೇರೆ ಬೇರೆ ಮಾಡುವರು...

ಅವರಿಬ್ಬರನ್ನು ಮಣಿಸಲು ಕೊನೆಗೆ ಆ ಹೆಣ್ಣು ಮತ್ತು ಅವಳ ಗಂಡ ಹಾಗೂ ಹಲವು ಜನ ಕುಂಗ್ ಫು ಯೋಧರು ಹರ ಸಾಹಸ ಮಾಡಬೇಕಾಗುವುದು ತಮ್ಮವರು ಹಲವರನ್ನು ಕಳೆದುಕೊಳ್ಳುವರು...

ಈ 2 ಅಪಾಯಕಾರಿ ಹಂತಕರಿಂದಲೂ ಅವಳನ್ನ್ನು ಸಾಯಿಸಲು ಆಗದ ಯಾಕ್ಸ್ ಗ್ಯಾಂಗ್ ಲೀಡರ್ ಇದಕ್ಕೆಲ್ಲ ಕಾರಣರಾದ ಆ ಇಬ್ಬರು ಹುಡುಗರನ್ನು ಎಳೆ ತರಿಸಿ ಅವರು ತಮ್ ಗ್ಯಾಂಗ್ ಹೆಸರು ಹೇಳಿಕೊಂಡು ಹಣ ಸುಲಿಯಲು ಹೋಗಿ ತಮ್ಮವರು ಪೆಟ್ಟು ತಿಂದು ಈಗ ತಮಗೆ ಅಪಮಾನ ಅವಮಾನ ನಸ್ಟ ಆಗಿದೆ ಎಂದು ಆ ಇಬ್ಬರ ರುಂಡ ಕತ್ತರಿಸಲು ಹೇಳುವನು-ಆಗ ಇಬ್ಬರಲ್ಲಿ ಒಬ್ಬ ಬಾಯ್ತೆರೆದು ತಮಗೆ ಹಸಿವು ಕೆಲಸ ಬೇಕು ಎಂದು ಒಂದು ವೇಳೆ ಕೆಲಸ ಕೊಟ್ರೆ-ಒಟ್ಟಾರೆ ಅವಳನ್ನು ಮಣಿಸಲು ಏನಾದರೂ ಸಹಾಯ ಮಾಡುವೆನು ಎನ್ನುವನು-ಅದು ಕೇಳಿ ಸುಪ್ರೀಂ ಲೀಡರ್ ಅವನಿಗೆ ಒಂದು ಟಫ್ ಕೆಲಸ ಮಾಡಲು ಹೇಳುವನು-

ಆ ಕೆಲಸ-

ಅತಿ ಭದ್ರತಾ ಜೈಲಿನಲ್ಲಿರುವ ಅಪಾಯಕಾರಿ ಕುಂಗ್ ಫು ಯೋಧ (ಸುಮಾರು ೬೦ರ ಮೇಲಿನ ವಯಸ್ಸು..!!)ನನ್ನು ಹೊರ ತರುವುದು...!!

ಆ ಜೇಲಿನ ಮ್ಯಾಪ್ ಮತ್ತು ಆಯುಧಗಳನ್ನು ಕೊಟ್ಟು ಅವನನ್ನು ಹೊಳಗೆ ಕಳಿಸುವರು ..ಕಷ್ಟ ಪಟ್ಟು ಒಳ ಸೇರಿ ಅವನನ್ನು ಹುಡುಕಿ ಹೊರ ಕರೆ ತರುವನು-ಅಡ್ಡಾಕ್ಕೆ ಬಂದು ಆ ವಯಸ್ಸಾದ ಕುಂಗ್ ಫು ಯೋಧ ಸೀಟಿನ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು ಕೇರ್ಲೆಸ್ ಆಗಿ ಕಿವಿಯ ಗುಗ್ಗೆ ತೆಗೆಯುತ್ತ ಕುಳಿತಿರುವನು-ಅದು ನೋಡಿದ ಗ್ಯಾಂಗ್ ಮೆಮ್ಬರ್ಗೆ ಉರಿವದು...

ಅಲ್ಲ್ಲಾ ..

ನಾವ್ ಎಂದರೆ ಗಡ ಗಡ ನಡುಗುವ ಜನ ಇರುವರು-ತಾವ್ಯಾರು ಏನು ಹೇಗೆ ಎಂದು ತಿಳಿದು ತಾನು ಇಲ್ಲಿಗ್ ಬಂದದ್ದು ಯಾಕೆ ಎಂದೂ ತಿಳಿದೂ ಕಮಕ್ ಕಿಮಕ್ ಎನ್ನದೆ ಕಲ ಮೇಲೆ ಕಾಲು ಹಾಕಿ ಕೇರ್ಲೆಸ್ ಆಗಿ ಕಿವಿ ಗುಗ್ಗೆ ತೆಗೆವ ಈ ಮುದಿಯನಿಗೆ ಗುಂಡು ಹೊಡೆದು ಸಾಯಿಸಬೇಕು ಎಂದು ಅವನತ್ತ ಸರಿದು ಅವನಿಗೆ ಬೆದರಿಸುತ್ತ ಗುಂಡು ಹಾರಿಸ ಹೊಗುವಾಗ ಆ ಪಿಸ್ತೂಲ್ ಎಳೆದು ಆ ವ್ಯಕ್ತಿಯ ಕೈ ಮುರಿದು ಅ ಪಿಸ್ತೂಲ್ ತೆಗದುಕೊಂಡು ತನ್ನ ತಲೆಯತ್ತ ತಾನೇ ಗುಂಡು ಹಾರಿಸುವನು-ಅದು ತನ್ನತ್ತ ನುಗ್ಗ್ವ ಮೊದಲೇ ಅದನ್ನು ಕೇವಲ ಎರಡು ಬೆರಳುಗಳಿಂದ ಹಿಡಿವನು-ಕ್ಷಣ ಮಾತ್ರದಲ್ಲಿ ನಡೆದ ಆ ಧಿಗ್ಬ್ರಮೆ ಮೂಡಿಸುವ ಸನ್ನಿವೇಶ ನೋಡಿ ಎಲ್ಲರೂ ಧನ್ಗಾಗುವರು-ಈ ವೃದ್ಧ ನೋಡಲು ಭಲೇ ಸಾಧಾರನವಗೈ ಕಾಣಿಸಿದರೂ ಬಹಳ ಟಫ್ ಮತ್ತು ಅಪಾಯಕಾರಿ ವ್ಯಕ್ತಿ ಎಂದು ಮನಗಾಣುವರು ಹಾಗೆಯೇ ಅವನು ಜಾಸ್ತಿ ಮಾತಾಡೋಲ್ಲ-ಅವನದು 'ಯಾಕ್ಶನ್ ಸ್ಪೀಕ್ಸ್ ಲೌಡರ್ ದನ್ ವರ್ಡ್ಸ್'ನೀತಿ ಎಂದು ಊಹಿಸಿದ ಗ್ಯಾಂಗ್ ಲೀಡರ್-ಅವನಿಗೆ ಆ ಮಹಿಳೆಯನ್ನು ಸಾಯಿಸುವ ಕಾಂಟ್ರಾಕ್ಟ್ ಕೊಟ್ಟು ಆ ಮಹಿಳೆ ಮತ್ತು ಪತಿ ಇರುವ ಜಾಗ ತೋರಿಸುವನು.

ಈ ಅಪಾಯಕಾರಿ ವ್ಯಕ್ತಿಯನ್ನು ಧುತ್ತನೆ ಅಲ್ಲಿ ತಮ್ಮೆದುರು ಆ ಹೋಟೆಲಿನಲ್ಲಿ ನೋಡಿದ ಆ ಮಹಿಳೆ ಮತ್ತು ಪತಿ ನೋಡಲು ಸಾಧಾರಣವಾಗಿ ಕಾಣುವ ತಮ್ಮತ್ತ ನೋಡುತ್ತಾ ಪಂಥಾಹ್ವಾನ ಇಯ್ಯುತ್ತಿರುವ ಹಲ್ಲು ಕಿಸಿಯುತ್ತಿರುವ ಅಸಹ್ಯವಾಗಿ ಕಾಣುವ ಅವನು ಅಸಾಮಾನ್ಯ ಕುಂಗ್ ಫು ಯೋಧ ಎಂದು ಎಣಿಸುವರು -ಮತ್ತು ಕ್ಷಣ ಮಾತ್ರದಲ್ಲಿ ಅಲ್ಲಿ ಘೋರ ಹೊಡೆದಾಟ ನಡೆವುದು-ದಂಪತಿ ಮತ್ತು ವೃದ್ಧರ ಸಮಬಲದ ಹೋರಾಟಕ್ಕೆ ಆ ಹೋಟೆಲು ಪುಡಿ ಪುಡಿಯಾಗಿ ಜನ ಚೆಲ್ಲಾಪಿಲ್ಲಿಯಾಗಿ ಓಡುವರು ,ದಂಪತಿಗಳನ್ನು ಮುಗಿಸಿಯೇ ತೀರಬೇಕು ಎಂದು ಅದುವರೆಗೆ ಕೇವಲ ಕಾಂಟ್ರಾಕ್ಟ್ ತೆಗದುಕೊಂಡ ಕಾರಣ ಹೊಡೆದಾಡಿದ ಆ ವೃದ್ಧ ಕುಂಗ್ ಫು ಯೋಧ ಈಗ ಈ ದಂಪತಿಗಳನ್ನು ಅವರ ಶಕ್ತಿ ಯುಕ್ತಿಯನ್ನು ನೋಡಿ ಅದನ್ನು ತನ್ನ ವಯುಕ್ತಿಕ ಶಕ್ತಿಗೆ ಆದ ಅವಮಾನ ಅಪಮಾನ ಎಂದು ಅದಕ್ಕೆ ಅವರಿಬ್ಬರನ್ನು ಸಾಯಿಸಿ ಆ ಅವಮಾನ ಕೊನೆಗಾಣಿಸಬೇಕು ಎಂದು ಅವರಿಗಾಗಿ ಎಲ್ಲೆಡೆ ಹುಡುಕಾಡುವನು ..

ಈ ಮಧ್ಯೆ ಈ ಇಬ್ಬರು ಹುಡುಗರು ಅವಳ ನೈಜ ಶಕ್ತಿ ನೋಡಿ ದುಷ್ಟರ ಸಂಗ ಮಾಡಿ-ಇದ್ದು ಪ್ರಾಣ ಕಳೆದುಕೊಳ್ಳುವುದಕ್ಕಿಂತ ಇವಳ ಕಡೆ ಸೇರಿ ದುಷ್ಟರನ್ನು ಎದುರಿಸುವ ಎಂದು ಅವಳ ಗ್ಯಾಂಗ್ ಸೇರುವರು ,ಅವಳ ಕಾರಣವಾಗಿ ಹಲವು ಸಮರ ಕಲೆ ಕಲೆತು ದುಷ್ಟ ಯಾಕ್ಸ್ ಗ್ಯಾಂಗ್ ಮತ್ತು ಆ ಅಪಾಯಕಾರಿ ವೃದ್ಧ ಕುಂಗ್ ಫು ಯೋಧನನ್ನು ಎದುರಿಸಲು ಸಜ್ಜಾಗುವರು.

ಆ ಮಹಿಳೆ ಮತ್ತು ಪತಿಯನ್ನು ಈ ಹುಡುಗರನ್ನು ಕೊಲ್ಲುವ ಯಾಕ್ಸ್ ಗ್ಯಾಂಗ್ ಮತ್ತು ಅಪಾಯಕಾರಿ ವೃದ್ಧ ಕುಂಗ್ ಫು ಯೋಧ ಮತ್ತು ಅವರನ್ನು ಎದುರಿಸಲು ಸಜ್ಜಾದ ವಠಾರದ ಜನ..

ಯಾರು ಉಳಿವರು ?

ಹೇಗೆ?

ಅಲ್ಲಿ ಏನಾಗಲಿದೆ?

ಗುಡುಗು -ಸಿಡಿಲು-ಉಲ್ಖೆ -ಬೆಂಕಿ ಬಿರುಗಾಳಿ ಸುಂಟರಗಾಳಿ ಭೂಕಂಪ ಸುನಾಮಿ ಈ ಎಲವನ್ನು ಒಟ್ಟಾಗಿ ನೋಡಲು ಈ ಸಿನೆಮ ನೋಡಿ....!!

ಸಿನೆಮ ನೋಡಿದ ಮೇಲೆ ಬಹುಶ ಇದರ ಮುಂದಿನ ಭಾಗಗಳೂ ಬರುತ್ತಿರಲಿ ಎಂದು ಅನ್ನಿಸದೆ ಇದ್ರೆ ಹೇಳಿ......!!

ಇದರ ೨ನೇ ಭಾಗ ಸಿದ್ಧವಾಗುತ್ತಿದೆ.ಬರಲಿದೆ.ಇನ್ನಸ್ಟು ಅದ್ಭುತ ಹೊಡೆದಾಟದ ಸನ್ನಿವೇಶಗಳ ಜೊತೆ..

ಚಿತ್ರದಲ್ಲಿ ಆರಂಭದ ಮಹಿಳೆ ಮತ್ತು ಯಾಕ್ಸ್ ಹೊಡೆದಾಟದ ನಂತರ ಹಲವು ಅತ್ಯದ್ಭುತ ಹೊಡೆದಾಟದ ಸನ್ನಿವೇಶಗಳಿವೆ-ಅದು ನೋಡುವಾಗ ನಾವ್ ಕಳೆದುಹೊಗೋದು ಖಾತ್ರಿ...!!

ಬಹುಶ ಆ ತರಹದ ಸೂಪರ್ ಫಾಸ್ಟ್-ಸಖತ್ ಹೊಡೆದಾಟಗಳು ಬೇರಾವ ಸಿನೆಮಾಗಳಲ್ಲಿ ನಾ ನೋಡಿದ ನೆನಪಿಲ್ಲ..

ಕೆಲ ಅತ್ಯದ್ಭುತ ಹೊಡೆದಾಟದ ಸನ್ನಿವೇಶಗಳು...

----------------------------------------------------------

೧.ಯಾಕ್ಸ್ ಗ್ಯಾಂಗ್ ಮೆಮ್ಬರ್ನ ಎದುರಿಸುವ ಒಂಟಿ ಮಹಿಳೆ-ಕ್ಷಣ ಮಾತ್ರದಲ್ಲಿ ಹೊಡೆದು ಅವನನ್ನು ಪಿಪಾಯಿಯಲ್ಲಿ ಹಾಕಿದ -ಅದು ಕನಸೋ ನನಸೋ ಎಂದು ಯಾಕ್ಸ್ ಗ್ಯಾಂಗ್ ಮತ್ತು ವಠಾರದ ಜನ ನೋಡುವ ದೃಶ್ಯ..!!

೨.ಅದು ಕೇಳಿ ಸ್ವತಹ ತಾನೇ ಬಂದು ಅವಳ ಆರ್ಭಟ ಶಕ್ತಿ ಅನುಭವ ಪಡೆವ ಸುಪ್ರೀಂ ಗ್ಯಾಂಗ್ ಲೀಡರ್..ಅಲ್ಲಿ ನಡೆವ ತಮಾಷೆ ಹೊಡೆದಾಟ.

೩.ಅವಳನ್ನು ಕೊಳ್ಳಲು ಬಂದು ತಮ್ಮ ಕಾಲ ಮೇಲೆ ಹಾರ್ಮೋನಿಯಂ ತರಹದ್ದು ಇತ್ತು ನುಡಿಸುತ್ತಿರುವ ಆಗಂತುಕರ ಆಯುಧಕ್ಕೆ ಒಬ್ಬ ಧೀರ ಕುಂಗ್ ಫು ಯೋಧನ ಬದಲಿಗೆ ಆ ಜಾಗದಲ್ಲಿ ಅ ಕ್ಷಣ ಬಂದ ಬೆಕ್ಕು ೩ ತುಂಡಾಗಿ ಬೀಳುವುದು ಅದನ್ನು ಅದರ ನೆರಳಲ್ಲಿ ನೋಡುವ ಯೋಧ ತಿರುಗುವುದ್ರೊಳಗೆ ಅವನ ರುಂಡ ಮುಂಡ ಅವರ ಆಯುಧಗಳಿಂದ ಬೇರಬೇರೆ ಆಗೋದು...ಭಯಂಕರ ಮಾರಾರೆ..!!

೪.ಆ ಅಪಾಯಕಾರಿ ಸಹೋದರರು ಮತ್ತು ವಠಾರದ ಜನರ ಮಧ್ಯದ ಹೊಡೆದಾಟ ಹೋರಾಟದ ಸನ್ನಿವೇಶಗಳು

೫.ಅಸಂಖ್ಯಾತ ಯಾಕ್ಸ್ ಗ್ಯಾಂಗ್ ಮೆಮ್ಬರಸ್ನ ನೆಲದ ಮೇಲೆ ಮೆಟ್ಟಿಲುಗಳ ಮೇಲೆ ಗಾಳಿಯಲ್ಲಿ ಜಿಗಿಯುತ್ತಾ ಏಕಾಂಗಿಯಾಗಿ ಎದುರಿಸುವ ಒಬ್ಬ ತರುಣ ಕುಂಗ್ ಫು ಯೋಧ-ಈ ಹೊಡೆದಾಟದ ಸನ್ನಿವೇಶ ಮೈ ಜುಮ್ ಎನ್ನಿಸುವ ಹಾಗೆ ಮಾಡೋದು-ಮತ್ತು ಅಬಬ್ಬಾ-ಸೂಪರ್ ಸಖತ್ ಎನ್ನುವ ಉದ್ಘಾರವನ್ನು ನಮ್ಮಿಂದ ಹೊರಡಿಸುವುದು...!!

೬. ಯಾಕ್ಸ್ ಗ್ಯಾಂಗ್ ಅಡ್ಡಾದಲ್ಲಿ ಕೇರ್ಲೆಸ್ ಆಗಿ ಕುಳಿತ ವೃದ್ಧ ಕುಂಗ್ ಫು ಯೋಧ ಮತ್ತು ಅಲ್ಲಿ ನಡೆವ ತಮಾಷೆ ಎನ್ನಿಸುವ ಆದರೆ ಸೀರಿಯಸ್ ಸನ್ನಿವೇಶಗಳು -ಬುಲೆಟ್ನ ಕೈನಲ್ಲಿ ಹಿಡಿದು ಬಾಯಲ್ಲಿ ಹಾಕಿ ತಿನ್ನುವೂದು....!! ಸೂಪರ್....ಸೂಪರ್ರೋ ಮಾರರೆ.

೭.ವೃದ್ಧ ಯೋಧ ಮತ್ತು ದಂಪತಿಗಳ ಮಧ್ಯದ ಹೊಡೆದಾಟ-ಹೋಟೆಲಿನಲ್ಲಿ-ವಠಾರದಲ್ಲಿ ..ಅಬ್ಬಬ್ಬ್ಬಾ ಕಣ್ಣಾರೆ ನೋಡಬೇಕು...!!

೮.ಅಂತ್ಯದ ಹೊಡೆದಾಟ-ದಂಪತಿಗಳು-ವೃದ್ಧ ಯೋಧ ಮತ್ತು ತರುಣ ಜೋಡಿಯ ಫೈಟ್ಸ್ ನೆಲ-ಆಕಾಶ -ಅಲ್ಲಿ ಇಲ್ಲಿ ಎಲ್ಲೆಲ್ಲು ಸಿಡಿಲು ಗುಡುಗು ಬಿರುಗಾಳಿ ಆರ್ಭಟ...

ಸೀಟಿನ ತುದಿಯಲಿ ಕುಳಿತು ಬೆರಳು ಕಚ್ಚುತ್ತಾ ನೋಡುವ ಹಾಗೆ ಮಾಡೋದು ಖಾತ್ರಿ...!!

ಅಂತ್ಯದಲ್ಲಿ ದುಷ್ಟ ಸಂಹಾರ -ಶಿಸ್ತ ರಕ್ಷಣೆಯೂ ಆಗೋದು-ಅದು ನೋಡಿ ಹೊರಗೆ ಬರುವಾಗ ನಮಗೆ ಗುಡುಗು-ಸಿಡಿಲು-ಬೆಂಕಿ ಬಿರುಗಾಳಿ-ಸುಮಾನಿ ಭೂಕಂಪ ಇತ್ಯಾದಿ ಎಲ್ಲದಕ್ಕೂ ಸಾಕ್ಷಿ ಆಗಿ ಅದು ಅನುಭವಿಸಿದ ಹಾಗೆ ಅನ್ನಿಸುವುದು...!!

ನೋಡಲು ಭಲೇ ಸಾಧಾರಣವಾಗಿ ಕಾಣುವ ಆ ವೃದ್ಧ ಮತ್ತು ತರುಣ-ದಂಪತಿಗಳ ಅಸಾಮಾನ್ಯ ಶಕ್ತಿ ಯುಕ್ತಿ ಕಂಡ ಮೇಲೆ ನಮಗೆ ಅನ್ನಿಸೋದು-

ಮುಖ ನೋಡಿ ಮೊಳ ಹಾಕಬೇಡ....!! ಅಂತ..

ನಿಜ ನಿಜ.....!!

ಒಂದು ಸಖತ್ ಯಾಕ್ಶನ್ ಚಿತ್ರ ನೋಡುವ ಮನಸು ಇರುವವರು ನಿಂಜಾ (೨೦೦೯) ಮತ್ತು ಈ ಕುಂಗ್ ಫು ಹಸಲ್(೨೦೦೪) ನೋಡಿ ..

ಆಮೇಲೆ ಮತ್ತೆ ಮತ್ತೆ ನೋಡುತ್ತಲೇ ಇರುವಿರಿ..!!

>>>ಈ ಚಿತ್ರವನ್ನು ಮತ್ತು ನಿಂಜಾ (೨೦೦೯) ಚಿತ್ರವನ್ನು ನೀವ್ ಈಗ ಆಗ ನೋಡದೆ ಇದ್ದು ಮುಂದೆಯೂ ನೋಡದೆ ಇದ್ರೆ ಅತ್ಯದ್ಭುತ ಎರಡು ಸೂಪರ್ ಹೊಡೆದಾಟದ ಚಿತ್ರಗಳನ್ನು ಮಿಸ್ ಮಾಡಿಕೊಂಡು ಆಮೇಲೆ ಯಾವತ್ತೋ ಕೊರಗುವಿರಿ...!!

ಡೋಂಟ್ ಮಿಸ್ ಇಟ್ ....!!

ಇನ್ನು ಹತ್ತು ಹಲವು ಅದ್ಭುತ ಯಾಕ್ಶನ್ ಚಿತ್ರಗಳು ಇವೆ-ಅವುಗಳ ಬಗ್ಗೆ ಬರೆಯುವುದರೊಳಗೆ ದಿನ ನಿತ್ಯ ಮತ್ತಸ್ತು ಹೊಸ ಹಳೆಯ ಯಾಕ್ಶನ್ ಚಿತ್ರಗಳು ನನ್ನ ಪಟ್ಟಿಯಲ್ಲಿ ಸೇರಿ ಅದು ಮುಗಿಯದ ಕಥೆ ಆಗುತ್ತಿದೆ..ಆ ಚಿತ್ರಗಲೆಲ್ಲವನ್ನು ಒಟ್ಟಿಗೆ ಪಟ್ಟಿ ಮಾಡಿ ಸಂಕ್ಷಿಪ್ತವಾಗಿ ಮುಂದೊಮ್ಮೆ ಹಾಕುವೆ...!!

ಶುಭವಾಗಲಿ...

==========================================================================================================

ಟ್ರೇಲರ್ :

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.