Skip to main content

ಸ್ಪೆಶಲ್ ಚಬ್ಬೀಸ್ -ಹಿಂದಿ ಚಿತ್ರ ( ೨೦೧೩ )-ಮಜಾ ಕೊಡುವ ಕಳ್ಳ-ಪೊಲೀಸ್ ಆಟ ...!!

ಇಂದ venkatb83
ಬರೆದಿದ್ದುFebruary 14, 2013
2ಅನಿಸಿಕೆಗಳು

ಸರ್ವೇ ಸಾಧಾರಣವಾಗಿ ಹಿಂದಿ ಸಿನೆಮಾಗಳನ್ನು ನೋಡುವವರು ಖಂಡಿತವಾಗಿ ಒಂದಾದರೂ ಅಕ್ಷಯ್ ಕುಮಾರ್ ಚಿತ್ರವನ್ನು ನೋಡಿರದೆ ಇರರು-ಹಾಗೆಯೇ ಅಕ್ಷಯ್ ಕುಮಾರ್ ಮೊದಲ ಅಕ್ಚನ್ ಚಿತ್ರಗಳು ನಂತರ ಹಾಸ್ಯ -ಪಾತ್ರಗಳಿಗೆ ಸೀಮಿತಗೊಂಡ ಬಗೆಗೂ ಗೊತ್ತಿರುತ್ತೆ... ಎಲ್ಲ ಟಾಪ್ ನಟರ ಹಾಗೆ ಏರು ಪೇರಿನ ವೃತ್ತಿ ಬದುಕಲ್ಲಿದ್ದ ಅಕ್ಷಯ್ ಕುಮಾರ್ ಅದೃಷ್ಟ ಖುಲಾಯಿಸಿದ್ದು ಸಿಂಗ್ ಇಸ್ ಕಿಂಗ್ ಚಿತ್ರ-ಆಮೇಲೆ ಬಂದ ಎಲ್ಲ ಚಿತ್ರಗಳೂ ಅಪಾರ ಹಣ ಗಳಿಸಿ ಮೊದಲ ೧೦೦ಕೋಟಿ ಕ್ಲಬ್ ನಲ್ಲಿನ ಒಬ್ಬ ನಟರಾದರು..

ಹೀಗೆ ಆಕ್ಷನ್ ನಂತರ ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತ ಹಾಸ್ಯಕ್ಕೆ ಸೀಮಿತಗೊಂಡ ಆಗಾಗ ಆಕ್ಷನ್ ಚಿತ್ರಗಳಲ್ಲಿ ನಟಿಸುವ ಇನ್ನೊಬ್ಬ ಯಶಸ್ವಿ ನಟ ಅಜಯ್ ದೇವಗನ್ ..

ಈ ಹಿಂದೆ ಅಕ್ಷಯ್ ತೆಗೆದ ಬಹುಪಾಲು ಚಿತ್ರಗಳು ಹಾಸ್ಯದ ಹಣೆ ಪಟ್ಟಿ ಹೊತ್ತ ನಾನ್ಸೆನ್ಸ್ ಚಿತ್ರಗಳು ಎಂದರೆ ಕೆಲವರಿಗೆ ಬೇಜಾರಗಬಹ್ದು...!! ಆದ್ರೆ ಈ ಸ್ಪೆಶಲ್ ಚಬ್ಬೀಸ್ ಚಿತ್ರವನ್ನು ಮಾತ್ರ ಯಾವದೇ ಮುಲಾಜಿಲ್ಲದೆ ನೋ ನಾನ್ಸೆನ್ಸ್ ಚಿತ್ರ ಎನ್ನಬಹುದು -

ಇಡೀ ಚಿತ್ರದಲ್ಲಿ ಆವರಿಸಿ ಮಜಾ ಕೊಡುವ ಅಭಿನಯ ನೀಡಿ ಚಿತ್ರವನ್ನು ಸಹ್ಯವಾಗುವ-ನಕ್ಕು ಸುಸ್ತಾಗುವ-ಒಂದೊಳ್ಳೆ ಚಿತ್ರ ನೋಡಿದ ಫೀಲ್ ಬರುವ ಹಾಗೆ ಮಾಡುವವರು ಎಂದರೆ ಅಕ್ಷಯ್ ಕುಮಾರ್-ಅನುಪಮ್ ಖೇರ್ ಮತ್ತು ಮನೋಜ್ ಬಾಜಪೇಯಿ... ಈ ವೀಕೆಂಡ್ ಅಥವಾ ಯಾವುದೇ ಸಿನೆಮ ನೋಡಿ ಖುಷಿ ಕೊಡುವ ಚಿತ್ರ ನೋಡಬೇಕು ಎಂದಿದ್ದರೆ ಈಗಲೇ ನೋಡಿ ಈ ಚಿತ್ರವನ್ನು...!!

ನಿರುದ್ಯೋಗ -ಕೆಲಸ ಮಾಡೋಕು ರೆಡಿ ಇದ್ದು ಕೆಲಸ ಸಿಗದೇ ಸ್ವಲ್ಪ 'ತಲೆ ಓಡಿಸಿ ಐಡಿಯಾ ಮಾಡಿ ಕನ್ನ ಹಾಕುವ ಮಜಾ ಮಾಡುವ ಕಳ್ಳರ ಗುಂಪಿನ ಈ ಕಥೆ ಮಾಮೂಲಾಗಿ ನಾವ್ ಆಗಾಗ ಪತ್ರಿಕೆಗಳಲ್ಲಿ ಓದುವ ನ್ಯೂಸ್ ನಲ್ಲಿ ನೋಡುವ ಘಟನೆಗಳು ಸನ್ನಿವೇಶಗಳ ಬಗ್ಗೆಯೇ....!! ಮತ್ತು ಇದು ಆಗ ಈಗ ಮುಂದೆಯೂ ನಡೆವ ಪ್ರಕ್ರಿಯೆ.!!

ಕಥೆ:

ಚಿತ್ರದ ಆರಂಭ ಆಗುವುದು ಸಿಬಿಐಗೆ ಬೇಕಾದ ಸಿಬ್ಬಂದಿಗಳನ್ನು ನೇಮಕ ಮಾಡುವ ಸಂದರ್ಶನದ ಮೂಲಕ -ಸಂದರ್ಶಕರು ಅಕ್ಷಯ್ ಕುಮಾರ್ ಮತ್ತು ಅನುಪಮ್ ಖೇರ್..!!

ಅಲ್ಲಿ ಕೇಳುವ ಪ್ರಶ್ನೆ. ನೀವ್ ಸಿಬಿಐಗೆ ಯಾಕೆ ಸೆಲೆಕ್ಟ್ ಆಗೋಕೆ ಇಷ್ಟ ಪಡ್ತೀರ? ಅದ್ಕೆ ಅಭ್ಯರ್ಥಿ(ಹುಡುಗಿ)-ಈ ದೇಶದಲ್ಲಿ ಅನ್ಯಾಯ ಆಕ್ರಮ ಹಣ ಗಳಿಕೆ ಸಂಪತ್ತು ಹೆಚ್ಚುತ್ತಿದೆ -ಅದನ್ನು ಕಿತ್ತು ಹಾಕಬೇಕು..!

ಇದು ಕನ್ನಡದಲ್ಲಿ ಹೇಳಿದರೆ ಅಷ್ಟೇನೂ ಮಜಾ ಇಲ್ಲ-ಹಿಂದಿಯಲ್ಲಿ ಹೇಳೋದು ಹೀಗೆ "ಇಸ್ ದೇಶ್ ಮೇ ಕರಪ್ಚನ್ ಜ್ಯಾದ ಹುವಾ ಹೈ ಉಸ್ಕೋ ಉಕಾಡ್ನ ಹೈ ...!!"

ಅದ್ಕೆ ಅಕ್ಷಯ್ ಕೇಳೋದು-ತುಮ್ ಅಕ್ಹೇಲೆ ಉಕಾಡೋಗಿ ?

ಅದ್ಕೆ ಅವಳು -ಹಂ ಸಬ್ ಮಿಲ್ಕೆ ಸರ್...!!

ಈ ಸನ್ನಿವೇಶ ಅಷ್ಟೇನೂ ಮಜ್ವಾಗಿಲ್ಲ ಅನ್ನಿಸಬಹುದು ಆದರೆ ಚಿತ್ರದ ಆರಂಭದ ಈ ದೃಶ್ಯ ನಮಗೆ ಈ ಚಿತ್ರದ ಬಗ್ಗೆ ಒಂದು ಪೂರ್ವಭಾವಿ ತೀರ್ಮಾನಕ್ಕೆ ಬರುವ ಹಾಗೆ ಮಾಡುವುದು ಆದ್ರೆ ನಿಜ ಕಥೆ ಬೇರೆ ಇದೆ....!!

ಅದೇ ಈ ಚಿತ್ರದ ವಿಶೇಷತೆ..! ಅದಿಲ್ಲಿ ಹೇಳೋಲ್ಲ..! ನೋಡಿದರೇನೇ ಮಜಾ....!!

ಅನುಪಮ್ ಖೇರ್ನನ್ನು ತಮ್ಮ ನಾಯಕ-ಬಾಸ್ ಎಂದು ಮಾಡಿಕೊಂಡು ೪ ಜನರ(ಅಕ್ಷಯ್ ಕುಮಾರ್-ಅನುಪಮ್ ಖೇರ್-ಇನ್ನಿಬ್ಬರು ನಟರು) ತಂಡ ಸಿಬಿಐ - ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು ಆಕ್ರಮ ಸಂಪತ್ತು ಹೊಂದಿರುವರ ರಾಜಕೀಯ ನೇತಾರರು -ಆಭರಣ ವ್ಯಾಪಾರಿಗಳು-ದಲ್ಲಾಳಿಗಳು ಮುಂತಾದವರ ಆಫೀಸು ಮನೆ ಮೇಲೆ ರೇಡ್ ಮಾಡಿ ಅದಕ್ಕೆ ನೈಜ ಪೋಲೀಸರ ಸಹಾಯ ಪಡೆದು ರೈಡ್ನಲ್ಲಿ ಸಿಗುವ ಹಣ -ಆಭರಣ ಇತ್ಯಾದಿ ಸಮೇತ ಎಸ್ಕೇಪ್ ಆಗುವುದು ಈ ಚಿತ್ರದ ಕಥಾವಸ್ತು...!! ಬರೀ ಇಷ್ಟೇ ಆಗಿದ್ದರೆ ಇದೂ ೧೦ ರಲ್ಲಿ ೧೧ ಆಗುವ ಚಾನ್ಸ್ ಇತ್ತು...

ಆದರೆ ನಿರ್ದೇಶಕ ನೀರಜ್ ಪಾಂಡೆ (ತೆಗೆದ ಒಂದೇ ಒಂದು ಯಶಸ್ವಿ ಮತ್ತು ವಿನೂತನ ಕಥಾ ವಸ್ತುವಿನ ಚಿತ್ರ -ಎ ವೆಡ್ ನೆಸ್ ಡೇ-೨೦೦೮ ಚಿತ್ರದ ನಿರ್ದೇಶಕ) ತಮ್ಮ ಹಿಂದಿನ ಚಿತ್ರದಂತೆ ಇಲ್ಲೂ ಚಿತ್ರವನ್ನು ವಿಭಿನ್ನವಾಗಿ ತೆಗೆದು ಅನಿರೀಕ್ಷಿತ ಅಂತ್ಯದ ಮೂಲಕ ಪ್ರೇಕ್ಷಕರನ್ನು ಸೆಳೆಯುವರು... ಹೀಗೆ ಸಿಬಿಐ -ಇನ್ಕಂ ಟ್ಯಾಕ್ಸ್ ಆಫೀಸರ್ಸ್ ಎಂದು ಗತ್ತಿನಲ್ಲಿ ಐಡಿ ಕಾರ್ಡ್ -ಸರ್ಚ್ ಪೇಪರ್ ತೋರಿಸುತ್ತ ನುಗ್ಗುವ ಈ ತಂಡ ತಮಗೆ ಬೇಕಾದ ಕಾಗದ ಪತ್ರ ಸೀಲ್ ಎಲ್ಲವನ್ನು ಆಯ್ಯಾಯ ಸನ್ನಿವೇಶಗಳಿಗೆ ತಕ್ಕಂತೆ ತಯಾರು ಮಾಡಿ ರೈಡ್ ಮಾಡಿ ಆಕ್ರಮ ಹಣವುಳ್ಳವರನ್ನು ದೋಚಿ -ಮಜಾ ಉಡಾಯಿಸುವರು ..!!

ಅದೊಮ್ಮೆ ಆಡಳಿತ ಪಕ್ಷದ ನೇತಾರರೋಬ್ಬನ ಮನೆಗೆ ರೈಡ್ ಮಾಡಿ ಅಪಾರ ಆಕ್ರಮ ಹಣ ಸಂಪತ್ತು ಸಿಕ್ಕಿ ಅದನ್ನು ತೆಗೆದುಕೊಂಡು ಹೊರಡುವರು-ಅವನಿಗೋ (ನೇತಾರ)ಇವರು ನಕಲಿ ಎಂದು ಗೊತ್ತಾಗುವುದು ಎಲ್ಲ ಮುಗಿದ ಮೇಲೆ-ಆದರೂ ಆ ಬಗ್ಗೆ ಪೊಲೀಸರಿಗೆ ಕಂಪ್ಲೇಂಟ್ ಕೊಡಲು ರೆಡಿ ಇಲ್ಲ ಕಾರಣ ಅದು ಅಕ್ರಮ ಸಂಪತ್ತು-ಅಲ್ಲದೇ ಆ ಬಗ್ಗೆ ಪೇಪರ್ನಲ್ಲಿ ಬಂದು ತನನ್ ವೋಟ್ಬ್ಯಾಂಕ್ ನಷ್ಟ ಆದರೆ ಎಂಬ ಭಯ-ಅಧಿಕಾರ ಇದೆ ಮುಂದೆ ಮತ್ತೆ ದೋಚಿದರೆ ಆಯ್ತು ಎಂಬ ಭಾವ...!!ಆದರೆ ಪೋಲೀಸು ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಲು ನೈಜ ಸಿಬಿಐ ಅಧಿಕಾರಿಗಳಿಗೆ ವರದಿ ನೀಡಿ ತನಿಖೆ ನಡೆಸಲು ಕೋರುವರು ಆಗ ಬರುವವರೆ- ದಕ್ಷ ಪ್ರಾಮಾಣಿಕ ಖಡಕ್ ಆದರೆ ಶಾಂತ ಸ್ವಭಾವದ ಸಿಬಿಐ ಅಧಿಕಾರಿ ಮನೋಜ್ ಬಾಜಪೈ ಈ ನಕಲಿ ಅಧಿಕಾರಿಗಳನ್ನು ಹಿಡಿಯಲು ಪ್ರಯತ್ನಿಸುವುದು ಈ ಕಳ್ಳ ಪೋಲೀಸ್ ಆಟದಲ್ಲಿ ಗೆಲ್ಲೊರ್ಯಾರು ಸೋಲೋರ್ಯಾರು?ಹೇಗೆ? ಯಾಕೆ? ಎನ್ನುವುದು ತೆರೆ ಮೇಲೆ ನೋಡಿಯೇ ಸವಿಯಬೇಕು ಆ ಮಜಾ..!

ಚಿತ್ರ ನೋಡುವಾಗ ಪ್ರತಿ ಕ್ಷಣವೂ ಹಲವು ತಮಾಷೆಯ-ನಗೆ ಉಕ್ಕಿಸುವ ಸನ್ನಿವೇಶಗಳು ಬರುವವು-

----------------------------------------------------------------------------------------------------------------------

  1. ಆರಂಭದಲ್ಲಿ ಸಂದರ್ಶನದ ಸನ್ನಿವೇಶ -ಆಗ ಸಂದರ್ಶನ ನಡೆಸುವವರ-ಸಂದರ್ಶನಕ್ಕೆ ಬಂದವರ ನಡುವಿನ ಸಂಭಾಷಣೆ..
  2. ಇಡೀ ಚಿತ್ರದ ಹೈಲೈಟ್ ಆದ ೫೦ಜನ ಡೈನಾಮಿಕ್ ತರುಣ ತರುಣಿಯರು ಸೀ ಬಿ ಅಯ್ ಗೆ ಬೇಕು ಎಂದು ಓಪನ್ ಆಗಿ ಪೇಪರ್ನಲ್ಲಿ ಯಾಡ್ ಹಾಕಿ ಅದಕ್ಕೆ ಬರುವ ೧೦೦೬ ಜನ ನಿರುದ್ಯೋಗಿ ತರುಣರ ತಯಾರಿ-ಪೂಜೆ -ದೇವರ್ಗೆ ಬೇಡಿಕೆ ಇತ್ಯಾದಿ..ಅಂದೂ ಇಂದೂ ಮುಂದೂ ಈ ಸನ್ನಿವೇಶ ಇರುವುದೇ!.
  3. ನೇತಾರರ ಮನೆಯಲ್ಲಿ ರೈಡ್ ಆಗಿ ಮಾತು ಕಥೆ ನಡೆಸಿ ಸಮಸ್ಯೆ ಪರಿಹರಿಸುವ ಎಂದು ನೇತಾರ ಸೀ ಬಿ ಅಯ್ ಹೆಡ್ ಅನುಪಮ್ ಖೆರ್ಗೆ ಆಮಿಷ ಒಡ್ಡುವ -ಎಷ್ಟು ಕೊಡುವಿರಿ? ಎಂದಾಗ ೨ ಎನ್ನಲು -ಅನುಪಮ್ ಅವರು ಆ ನೇತಾರರ ಕೆನ್ನೆಗೆ ೨ ಬಾರಿಸಿ -ನಮಗೇ ಲಂಚ ಕೊಡುವಿರಾ? ಎಂದು ಹೇಳುವುದು...ಆಗ ನೇತಾರರ ಪಿ ಏ -ನೀವ್ ೨ ಎಂದು ಹೇಳಿದ್ದು ಒಳ್ಳೆಯದು, ಜಾಸ್ತಿ ಹೇಳಿದ್ದರೆ ಇನ್ನೂ ಹೊಡೆತಗಳು ಬೀಳುತ್ತಿದ್ದವು ಎನ್ನುವುದು...
  4. ಪೋಲೀಸರ ತನಿಖೆ ಬೆನ್ನ ಹಿಂದೆ ಬಿದ್ದಿರುವುದು ಗೊತ್ತಾದಮೇಲೂ ತಮ್ಮ ದೋಚುವಿಕೆ ಮುಂದುವರೆಸುವ ತಂಡದ ಚಾಣಾಕ್ಷತೆಯ ಸನ್ನಿವೇಶಗಳು.
  5. ಅನುಪಮ್ ಖೇರ್ ಪತ್ನಿಯರು-ಮಕ್ಕಳು (ಹಲವು ಜನ)ಅವುಗಳ ಭವಿಷ್ಯಕ್ಕಾಗಿ ತಾನು ಇದೇ ಕೊನೆಯ ಕಳ್ಳತನ ಎಂದು ಹೇಳುವ ಸನ್ನಿವೇಶ ಅದಕ್ಕೆ ಅಕ್ಷಯ್ ಕರಾರುವಾಕ್ಕಾಗಿ ಎಷ್ಟು ಸಾರಿ ಈ ಹಿಂದೆಯೂ ಹೀಗೆಯೇ ಅನುಪಮ್ ಹೇಳಿದ್ದರು ಎಂದು ನೆನಪಿಸುವುದು...!
  6. ದಲ್ಲಾಳಿಗಳ ಆಫೀಸು ರೇಡ್ ಮಾಡಲು ಹೋಗಿ ಅಲ್ಲಿ ಯಾವುದೋ ಅಂಗಡಿಗೆ ನುಗ್ಗಿ ಇವರ ಆಗಮನ ನೋಡಿಯೂ ತಲೆ ಕೆಡಿಸಿಕೊಳ್ಳದ ಆ ಜನರ ವ್ಯವಹಾರದ ನಡೆ ನೋಡಿ ಅಕ್ಷಯ್ ನಾವ್ ಸೀ ಬಿ ಅಯ್ ಜನ ರೇಡ್ ಎಂದು ಈ ಅನುಪಮ್ಗೆ ರೇಡ್ ಪೇಪರ್ ಕೊಡು ಎಂದಾಗ ಅನುಪಮ್ ಕೈಗೆ ಸಿಕ್ಕ ಜೇಬಲ್ಲಿನ ಯಾವ್ಯ್ದೋ ಖರೀದಿ ಮಾಡಿದ ರಸೀತಿ ಕೊಡುವುದು..! ಆಗ ಅಕ್ಷಯ್ ಆದಿಯಾಗಿ ಎಲ್ಲರೂ ತಾವೇ ಪೆಂಗರಾಗಿ ಸುಮ್ಮನೆ ಹುಸಿ ನಗೆ ನಕ್ಕು ಈ ಅಂಗಡಿ ಅಲ್ಲ ಪಕ್ಕದ್ದು ಎಂದು ಬೇರೊಂದು ಅಂಗಡಿಗೆ ರೇಡ್ ಮಾಡಿ ಅವರ ಕೈನಲ್ಲೇ ಎಲ್ಲ ಹಣ ಕಾಸು ಕಾರಿಗೆ ಸಾಗಿಸಿ ಪರಾರಿ ಆಗುವ ದೃಶ್ಯ...
  7. ಮನೋಜ್ ಬಾಜಪಯ್ ಮತ್ತು ಅಕ್ಷಯ್ ಬಾರ್ನಲ್ಲಿ ಮೀಟ್ ಆಗಿ- ಕೈ ಕುಲುಕಿ ಮಾತಾಡಿ ಅಕ್ಷಯ ದುಬಾರಿ ಸೆರೆ ಕುಡಿವುದು-ಮನೋಜ್ ಅತಿ ಕಡಿಮೆ ಬೆಲೆಯ ಸೆರೆ ತೆಗದುಕೊಂಡು ಸೋಡಾ ಹಾಕಿದರೆ ಅದಕ್ಕೂ ಚಾರ್ಜಾ? ಎಂದು ಬೇರರ್ನ ಕೇಳುವ -ನಂತರ ಅಕ್ಷಯ್ ಗೆ ನೀವ್ ಏನು ಮಾಡುವುದು ಎಂದಾಗ ಅಕ್ಷಯ್-ನಾನು ಇಂಪೋರ್ಟ್ ಎಕ್ಸ್ಪೋರ್ಟ್ ಎಂದು ಹೇಳಿ ಹೊರಡುವುದು- ಆಗ ಇವನ ಬಗ್ಗೆ ಗೊತ್ತಿದ್ದೂ ಚೆಕ್ ಮಾಡಲು ಮನೋಜ್ ಬಾಜಪಯ್ ತನ್ ಜೇಬಿಂದ ೧೦೦ರ ನೋಟು ತೆಗೆದು ನೆಲಕ್ಕೆ ಬೀಳಿಸಿ ಇದು ನಿಮದೇ ಎಂದಾಗ ಅಕ್ಷಯ್ ಹೌದು ಎಂದು ಆ ನೋಟ್ ತೆಗೆದುಕೊಂಡು ಹೋಗುವ ಅದು ನೋಡಿ ನಗುವ ಮನೋಜ್ ಬಾಜಪಯ್ ..
  8. ಇಡೀ ಚಿತ್ರದ ಸನ್ನಿವೇಶಗಳಲ್ಲಿ ಅತಿ ನಗೆ ಉಕ್ಕಿಸುವ -ಕೊನೆಯ ರೇಡ್ ಅದೂ ಮುಂಬೈಯ ಅತಿ ದೊಡ್ಡ ಆಭರಣ ಅಂಗಡಿ ಮೇಲೆ-ಅದರ ಓನರ್ ದೇವರ್ಗೆ ಪೂಜೆ ಮಾಡಿ ಹಿಂದೆ ತಿರುಗಿ ನೋಡಲು ಎದುರಿಗೆ ನಿಂತ ಜನ ಸೀ ಬಿ ಅಯ್ ನೋರು ಎಂದು ತಿಳಿದು ಕೈ ಕಾಲು ಗಡಗಡ ನಡುಗಿ-ಆಗ ಮನೋಜ್ ಬಾಜಪಯ್ -ಇವರು ಹೀಗೆ ಮಾಡಿಯೇ ಅಂಥವರಿಗೆ ಕೆಲಸ ಸಲೀಸಾಗುವುದು ಎನ್ನುವುದು.
  9. ಒಂದು ದೊಡ್ಡ ಬಸ್ಸಲ್ಲಿ ೫೦ ಜನ ನಕಲಿ ಸೀ ಬಿ ಅಯ್ ನವರನ್ನು ಕೂರಿಸಿ ಆ ಬಸ್ಸು ಆ ದೊಡ್ಡ ಆಭರಣ ಅಂಗಡಿ ಮುಂದೆ ನಿಂತು ಎಷ್ಟೊತ್ತಾದರೂ ಒಬ್ಬರೂ ಕೆಳಗೆ ಇಳಿಯದೆ ಇರಲು-ಅದು ಕೇಳುವ ಮನೋಜ್ ಬಾಜಪಯಿಗೆ- ತಾವ್ ನಕಲಿ ಆಫೀಸರ್ಸ್ ಎಂದು ಗೊತ್ತಿರದ ಒಬ್ಬ ತರುಣ -ತಮ್ಮ ಬಾಸ್ ಆಜ್ಞೆಗ ಕಾಯ್ತಿರುವೆವು ಎನ್ನುವುದು ..!!
  10. ನಿಸ್ಸಂಶಯವಾಗಿ ಚಿತ್ರದ ಕೊನೆಯ ದೃಶ್ಯ-ನಾವೇನೋ ಎಣಿಸೋದು ಅಲ್ಲಿ ಆಗೋದೇ ಬೇರೆ...!!

ಮನೋಜ್ ಬಾಜಪಾಯಿ ಇಂಗು ತಿಂದ ಮಂಗ ಆಗೋದು...!

ಅದು ತೆರೆ ಮೇಲೆ ನೋಡಿ ಸವಿಯಬೇಕು...!!

ನಿಸ್ಸಂಶಯವಾಗಿ ಇದು ನೋಡಿ ಎಂಜಾಯ್ ಮಾಡಬಹುದಾದ ಚಿತ್ರ-ಈ ನಡುವೆ ಬಂದ ಚಿತ್ರಗಳಲ್ಲಿ ಎದ್ದು ಕಾಣುವಂತ ಚಿತ್ರ..

ಮತ್ತು ಅದಾಗಲೇ ಎಲ್ಲ ಪತ್ರಿಕೆ ದೃಶ್ಯ ಮಾಧ್ಯಮಗಳಿಂದ ಭೇಷ್ ಪಡೆದ -ಗಲ್ಲಾ ಪೆಟ್ಟಿಗೆ ಲೂಟಿ ಹೊಡೆದ ಹೊಡೆಯುತ್ತಿರುವ-ಹಲವು ಪ್ರಶಸ್ತಿ ಪುರಸ್ಕಾರ ಪಡೆಯಬಹುದಾದ ಚಿತ್ರ..

ಮೊನ್ನೆ ಮೊನ್ನೆ ಬಂದ ಒಹ್ ಮೈ ಗಾಡ್ ಮತ್ತು ಕಿಲಾಡಿ ೭೮೬ ನಂತರ ಅಕ್ಷಯ್ ಕುಮಾರ್ ಅವರಿಂದ ಮತ್ತೊಂದು ಫೀಲ್ ಗುಡ್ ಚಿತ್ರ-ಈಗ ಸಲ್ಮಾನ್ ಮತ್ತು ಅಕ್ಷಯ್ ಮಧ್ಯೆ ಯಾರು ನಂಬರ್ ಒನ್ ಎಂಬ ಸ್ಪರ್ಧೆ...!!

ನೋಡಿ ಎಂಜಾಯ್ ಮಾಡಿ...

ಶುಭವಾಗಲಿ..

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

praveen.kulkarni ಶುಕ್ರ, 02/15/2013 - 12:20

ಸಪ್ತಗಿರಿಗಳೇ,

ತುಂಬಾ ವಿಸ್ತ್ರತವಾಗಿ ಹಾಗು ಅಚ್ಚುಕಟ್ಟಾಗಿ ಈ ಚಿತ್ರದ ವಿಮರ್ಶೆ ನೀಡಿದ್ದಿರಿ.ಬಹುಶ ಕನ್ನಡದಲ್ಲಿ ಈ ರೀತಿ ಹಿಂದಿ ಚಿತ್ರದ ವಿಮರ್ಶೆ ನೀಡುವವರು ತುಂಬಾ ವಿರಳ.ಅಕ್ಷಯ ಕುಮಾರ ಅವರು ರಾಜೇಶ ಖನ್ನಾ ತರಹ ಒಂದರ ಹಿಂದೊಂದು ಹಿಟ್ ಚಿತ್ರಗಳನ್ನು ಕೊಡುತಿದ್ದಾರೆ.ಈ ಚಿತ್ರದ ಪ್ರೊಮೊಶನ್ ಅಷ್ಟಾಗಿ ಮಾಡದ ಕಾರಣ ಹಾಗು ಯಾವುದೇ ಅಬ್ಬರವಿಲ್ಲದೆ ಚಿತ್ರ ಬಿಡುಗಡೆಯಾಗಿರೋ ಕಾರಣ ನಾನು ಈ ಚಿತ್ರ ಅಷ್ಟಾಗಿ ಓಡುವುದಿಲ್ಲ ಎಂದೇ ಭಾವಿಸಿದ್ದೆ.ಆದರೆ ಈ ವಾರ ನೋಡುವಾ...
ಎನ್ ಸತೀಶ್ ಶನಿ, 02/16/2013 - 11:53

ನಿಮ್ಮ ಚಿತ್ರ ವಿಮರ್ಶೆ ಓದಿದ ಮೇಲೆ ಚಿತ್ರವನ್ನು ನೋಡಬೇಕಿನಿಸುತ್ತಿದೆ ನಿಮ್ಮ ವಿಮರ್ಶೆ ಚಿತ್ರವನ್ನು ಕಣ್ಣೆದುರಿಗೆ ನೋಡಿದಂತಾಗುತ್ತದೆ ಧನ್ಯವಾಗಳೊಂದಿಗೆ

.....ಸತೀಶ್

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.