Skip to main content

ಅಮ್ಮ ನೀ ನನ್ನ ಉಸಿರು !

ಇಂದ K.M.Vishwanath
ಬರೆದಿದ್ದುFebruary 13, 2013
noಅನಿಸಿಕೆ

‎" ಹುಡುಗಿ ಪ್ರೀತಿಗಿಂತ ತಾಯಿ ಪ್ರೀತಿ ಮೇಲು " 

ಈ ಬಾರಿ ನಾನು ಪ್ರೇಮಿಗಳ ದಿನವನ್ನು " ಅಮ್ಮ ನೀ ನನ್ನ ಉಸಿರು " ಎನ್ನುವ ಅಮ್ಮನ ಪ್ರೀತಿಯ ಮೇಲೆ ಬರೆಯುತ್ತಿರುವ ಕವನ ಸಂಕಲನದೊಂದಿಗೆ ಆಚರಿಸುತ್ತೀದ್ದೇನೆ 

ಅದರ ಒಂದು ಚಿಕ್ಕ ಕವನ ನಿಮಗಾಗಿ 

ಅಮ್ಮ ನೀ ನನ್ನ ಉಸಿರು !
ಮರಿಯಲಾರೆ ನಿನ್ನ ಹೆಸರು !

ಪ್ರತಿ ರಕ್ತ ಕಣ ಕಣದಲ್ಲೂ ನೀನೆ !
ನೀ ನಿಲ್ಲದೆ ನಾನೆನು ಇಲ್ಲಾ !
ನಿನ್ನಿಂದಲೆ ತಾನೆ ಪ್ರಸಿದ್ಧ ನನ್ನ ಹೆಸರು !

ಅಮ್ಮ ಎಂದರೆ ಸಾಕು ನೋವು ಮಾಯ !
ಅವಳ ಮಡಿಲೆ ಬಲು ಸುಂದರ !
ಅಲ್ಲಿದ್ದರೆ ಆ ಸ್ವರ್ಗವೆ ಭಾರ !

ಅವಳ ಪ್ರೀತಿಯೆ ಸುಂದರ !
ಕೈಯಲ್ಲಿ ಹಿಡಿದಂತೆ ಚೆಂದಿರ !
ಅಂದದ ಕೈಯಲ್ಲಿ ಊಟವ ಬಡಿಸುವಳು !
ತೋರಿಸುತ ಚೆಂದಿರ !

ನಿನ್ನ ಪ್ರೀತಿಯೊಂದಿದ್ದರೆ ಸಾಕು !
ನೂರು ಲೋಕವೆ ಯಾಕೆ ಬೇಕು !
ಹೃದಯ ತುಂಬಿ ಹರಸು ನನ್ನನ್ನು !
ಅಮ್ಮ ನೀ ನನ್ನ ಉಸಿರು !

ಕೆ.ಎಂ.ವಿಶ್ವನಾಥ .......

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.