Skip to main content

ಕೆಂಪು ದೀಪದಲ್ಲೊಂದು ಅಳಲು..

ಇಂದ Jagannatha R N
ಬರೆದಿದ್ದುFebruary 4, 2013
3ಅನಿಸಿಕೆಗಳು

ಇಲ್ಲಿ ಎಲ್ಲವೂ
ಕಳೆದು ಹೋದ ಮುಖಗಳೇ
ಎನೋ ನೆನೆಯುವವು.
ಯಾಕೋ ನಲಿಯುವವು


ಸುಮ್ಮನೆ ಕುಳಿತು ಕಳೆಯುತ್ತಿದ್ದರೆ ಕಾಲ
ಮಾಲೀಕಳ ಗದರಿಕೆಗೆ ಎಚ್ಚರವಾಗಿ
ಬೀರುವವು ವ್ಯವಹಾರಿಕ
ನಸು-ನಗೆ
ವಿವಿಧ ಬಗೆ
ಬರುವ ಗಿರಾಕಿಗಳಿಗೆ...

ಬಯಲಾಗಿ ಇಟ್ಟಿರುವ ದೇಹಕ್ಕೆ ಸಿಕ್ಕಾಗ ವಿರಾಮ
ಮುಂದುವರೆಯುವುದು ಮಂಥನ
ಮತ್ತದೆ ಪ್ರಶ್ನೆಗಳಿಗೆ
ಇಟ್ಟಿದ್ದ ಕಾಮಾ,

ಗಂಡ, ಮಕ್ಕಳು, ಸಂಸಾರ, ಸಿನಿಮಾ, ಸುತ್ತಾಟ
ಎಲ್ಲವೂ ತನ್ನ ವಾರಿಗೆ ಗೆಳತಿಯರ
ಬದುಕು ನೆನೆದಾಗ
ಲಗ್ಗೆಯಿಡುವ ಪ್ರಶ್ನೆಗಳಿಗೆ ಉತ್ತರವೆಂಬಂತೆ
ಊಹೆ ಕಲ್ಪನೆಯಲ್ಲೇ ನಿರ್ಮಿಸಿಕೊಂಡ
ಕನಿಸಿನ ಬದುಕೊಂದಿಗೆ
ದೂಕುವವು ಕಾಲ ಸದಾ..

ವಾಸ್ತವಕೆ ಕಡಿವಾಣವುಂಟೆ ಎಂಬಂತೆ
ಹೊಳೆದ ಆಕಾಂಕ್ಷೆಗಳಿಗೆ ಬೀಳುವುದು ಪೂರ್ಣವಿರಾಮ
ಬಂದಿರುವ ಗಿರಾಕಿಗಳ ಕೊಡಪಾನ
ತುಂಬಿದಂತ ಆಸೆಗಣ್ಣುಗಳಿಂದ
ಇಷ್ಟೇನಾ ನನ್ನ ಬದುಕು ಎನ್ನುವ
ನಿರ್ವಿಕಾರ ಒಂಟಿ ಪ್ರಶ್ನೆಯೊಂದಿಗೆ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

ಲೇಖಕರು

ಅನಿಸಿಕೆಗಳು

praveen.kulkarni ಸೋಮ, 02/04/2013 - 21:45

ಜಗನ್ನಾಥ ಅವರೇ,

ಕೆಂಪು ದೀಪಗಳ ಬೆಳಕಿನಡಿಯಲ್ಲಿ ಚಿಗುರುವ ಮುನ್ನವೆ ಮಾಸುವ ಹೃದಯಗಳ ಬವಣೆಯನ್ನು ಬಲು ಕಾಳಜಿಯಿಂದ ಬರಿದು ಮಾಡಿದ್ದಿರಿ.ವಂದನೆಗಳು

mmshaik ಮಂಗಳ, 02/05/2013 - 09:29

ಚೆನ್ನಾಗಿದೆ..ಇನ್ನೂ ಫೀಲ್ ಬರಬೇಕಾಗಿತ್ತು..ಒೞೆಯ ಪ್ರಯತ್ನ.

venkatb83 ಧ, 02/06/2013 - 18:21

ಈ ಬರಹ ಕೆಂಪು ದೀಪದ  ಸಮಸ್ತ ಹುಡುಗೀರ  ಬದುಕು ಬವಣೆ ದರ್ಶನ ಮಾಡಿಸಿತು..

ಅದೇನೂ ಎಲ್ಲರೂ ಬಯಸಿ ಪಡೆದ ಮಾಡುವ ವೃತ್ತಿ ಅಲ್ಲ.ಅವರಿಗೆ ಪರ್ಯಾಯ ಉದ್ಯೋಗ  ಕಲ್ಪಿಸುವ -ಜೀವನ ಅವಕಾಶ ಕಲ್ಪಿಸುವಲ್ಲಿ ಸರಕಾರಗಳು ಯಾವತ್ತೋ ಯೋಚಿಸಿದ ಹಾಗಿಲ್ಲ..ಇದ್ದರೂ ಅದು ತೋರಿಕೆಗೆ ಮಾತ್ರ...
ದಿನ ನಿತ್ಯ ಕಾಣೆ ಆಗುವ ಹಲ ಹುಡುಗೀರು ಹೋಗಿ ಸೇರೋದು ಈ ನರಕವನ್ನೇ..:(((
ನಿಮ್ಮ ಬರಹ  ಬೇರೆಲ್ಲ ವಿಷ್ಯ ವಸ್ತು ಬಿಟ್ಟು ಧುತ್ತನೆ ಅವರತ್ತ  ತಿರುಗಿದ್ದು  ಅಚ್ಚರಿ..!
ಶುಭವಾಗಲಿ..
\।/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.