Skip to main content

ಮಾಡರ್ನ್ ಟೈಮ್ಸ್(೧೯೩೬)- ಚಾರ್ಲಿ ಚಾಪ್ಲಿನ್ ಚಿತ್ರ -ಹಸಿದ ಹೊಟ್ಟೆಯ ಪಾಡು-ಪರಿ ಪಾಟಲು ..!!

ಇಂದ venkatb83
ಬರೆದಿದ್ದುFebruary 3, 2013
4ಅನಿಸಿಕೆಗಳು

ಅಪ್ರತಿಮ ಕಲಾವಿದ -ತನ್ನ ವಿಚಿತ್ರ ಶೈಲಿಯ ಉಡುಗೆ ತೊಡುಗೆ-ಹ್ಯಾಟು-ಕೋಲು ,ಮೀಸೆ ಮತ್ತು ಸಾಧರಣ ಮುಖ ಚಹರೆಯಿಂದಲೇ ವಿಶ್ವದಾದ್ಯಂತ ಚಿಕ್ಕವರಿಂದ ದೊಡ್ಡವರು - ಹಿರಿಯರಿಗೂ ಚಿರ ಪರಿಚಿತ -ಪ್ರಿಯ ನಟ ಚಾರ್ಲೀ ಚಾಪ್ಲಿನ್ ಬಗ್ಗೆ ಕೇಳದವರು -ಅವರ ಒಂದಾದರೂ ಸಿನೆಮ- ಚಿತ್ರಗಳ ತುಣುಕುಗಳನ್ನು-ಅದೂ ಹೋಗಲಿ ಅವರ ಟ್ರೇಡ್ ಮಾರ್ಕ್ ಫೋಟೋಗಳನ್ನು ನೋಡದೆ ಇರುವವರು ಈ ಜಗತ್ತಲ್ಲಿ ಯಾರೂ ಇರಲಿಕ್ಕಿಲ್ಲ ಎಂದು ಖಂಡಿತವಾಗಿ ಹೇಳಬಹದು..!! ಮೂಕಿ ಯುಗ ಮುಗಿದು ಟಾಕಿ ಯುಗ ಶುರು ಆದ ಹೊಸತರಲ್ಲಿ ಮೂಕಿ ಸಿನೆಮ ಒಂದನ್ನು ತೆಗೆದ ಚಾರ್ಲೀ ಚಾಪ್ಲಿನ್ ಅದಕ್ಕೆ ಮಾಡರ್ನ್ ಟೈಮ್ಸ್ ಎಂದು ಹೆಸರು ಇಕ್ಕಿದ..


ಮೂಕಿ ಚಿತ್ರ ಎಂದಾದರೂ ಕೆಲವು ಕಡೆ ಅಲ್ಲಲಿ ಸಂಭಾಷಣೆಗಳು -ದ್ರುಷ್ಯಗಳ ಹಿಂದಿನ ಶಬ್ಧಗಳೂ ಇವೆ. ಗ್ರೇಟ್ ಡಿಫ್ರೆಶನ್ ಎಂದು ಕರೆವ ಆರ್ಥಿಕ ಹಿಂಜರಿತದ ಕಾಲದಲ್ಲಿ ನಡೆದಿರಬಹುದಾದ ಸನ್ನಿವೇಶಗಳನ್ನು-ಮನುಷ್ಯರ ಬದಲಾಗೀ ಮೆಶಿನುಗಳನ್ನು ಫ್ಯಾಕ್ಟರಿ -ಮನೆಗಳಲ್ಲಿ ಬಳಸಿದರೆ ಆಗಬಹುದಾದ ಅನಾಹುತಗಳು -ನಿರುದ್ಯೋಗ ಸಮಸ್ಯೆ -ಹಸಿವು -ಹಸಿದ ಜನರ ಹೋರಾಟ-ರಾಜಕೀಯ ಸಮಸ್ಯೆಗಳು ಜೊತೆ ಜೊತೆಗೆ ಪ್ರೀತಿ ಪ್ರೇಮ - ಪರಾರಿ ಇತ್ಯಾದಿ ಸುತ್ತ ಸುತ್ತುವ ಈ ಚಿತ್ರ ಮಾಡುವ ಮೋಡಿ ಅಂತಿಂಥದ್ದಲ್ಲ....!! ಇದನ್ನು ಸರಿ ಸುಮಾರು ೩೦೦ ಕ್ಕೂ ಹೆಚ್ಚು ಸಾರಿ ವೀಕ್ಷಿಸಿರುವ ನನಗೆ ಮತ್ತು ಇನ್ನಿತರರಿಗೂ ಈ ಚಿತ್ರ ಯಾವತ್ತೂ ಮತ್ತೆ ಮತ್ತೆ ನೋಡುವಂತೆ ಮಾಡದೆ ಇರದು.. ಚಿತ್ರದ ಕಥೆ: ======== ಫ್ಯಾಕ್ಟರಿ ಒಂದರಲ್ಲಿ ಸಾಧಾರಣ ವೇಗದಲಿ ಹೋಗುವ ಪ್ಲೇಟುಗಳಿಗೆ ಬೋಲ್ಟ್ ನ್ನು ಎರಡು ಕೈಗಳಲ್ಲಿ ಸ್ಪ್ಯಾನರ್ ಹಿಡಿದು ಫಿಟ್ ಮಾಡುವ ಕೆಲಸ ಮಾಡುವ ಚಾಪ್ಲಿನ್ ,ಆ ಫ್ಯಾಕ್ಟರಿ ಮಾಲೀಕನ ದುರಾಶೆ ಕಾರಣವಾಗಿ ಆ ಉತ್ಪಾದನೆಯಲಿ ಹೆಚ್ಚಳ ಮಾಡಲು ಹಾಗೆಯೇ ಯಂತ್ರಗಳನ್ನು ಇನ್ನಸ್ಟು ವೇಗವಾಗಿ ನಡೆಸಲು ಸೂಚಿಸುವ ಮೂಲಕ ಚಾಪ್ಲಿನ್ ಮತ್ತು ಇತರ ಸಹ ಕೆಲಸಗಾರರಿಗೂ ಕೆಲಸದ ಒತ್ತಡ ಹೆಚ್ಚಾಗಿ -ಆ   ಯಂತ್ರಗಳ     ವೇಗಕ್ಕೆ ಸರಿಯಾಗಿ ಕೆಲಸ ಮಾಡಲು ಆಗದೆ ಒಂಥರಾ (ವೇಗವಾಗಿ ಹೋಗುತ್ತಿರುವ ಬಸ್ಸು-ಇತ್ಯಾದಿ ವಾಹನ ನಿಲ್ಲುವ ಮೊದಲೇ ನಾವ್ ಧುತ್ತನೆ ಕೆಳಗೆ ಇಳಿದು ಅದರ ಹಿಂದೆಯೇ ಸ್ವಲ್ಪ ದೂರ ಅದರತ್ತ ಆಕರ್ಷಿತರಾಗಿ ವಾಲುವ ತೂರಾಡುವ ಹಾಗೆ !!)ಭಾವ ಆವರಿಸಿ ಹುಚ್ಹುಚ್ಚಾಗಿ ಆಡುತ್ತ ವರ್ತಿಸುತ್ತ ಒಮ್ಮೊಮ್ಮೆ ಆ ಯಂತ್ರದೊಳಗೆ ಹೋಗುವನು-ಸಹ ಕೆಲಸಗಾರರು ಇವನನ್ನು ಎಳೆದು ಹಾಕಿದರೂ ಮತ್ತೊಮ್ಮೆ ಅದರತ್ತ ಬಿದ್ದಾಗ ಇವನಿಗೇನೋ ಆಗಿದೆ ಎಂದು ಮೇಲ್ವಿಚಾರಕನಿಗೆ ಹೇಳಿ ಅವನಿಗೆ ಬೇರೆ ಕೆಲಸ ವಹಿಸುವ್ರು ..


 


ಅದೊಮ್ಮೆ ಫ್ಯಾಕ್ಟರಿಯಲ್ಲಿ ಹೊಸತಾಗಿ ಕಂಡು ಹಿಡಿದ ಮನುಷ್ಯರಿಗೆ ಊಟ ತಿಂಡಿ ತಿನ್ನಿಸುವ ಜ್ಯೂಸ್ ಇತ್ಯಾದಿ ಕುಡಿಸುವ -ಬಾಯಿ ಒರೆಸುವ ರೋಬೋ ಯಂತ್ರವನ್ನು ಪರೀಕ್ಷಿಸಲು ಈ ಚಾಪ್ಲಿನನನ್ನು ಅದರ ಮುಂದೆ ಕೂರಿಸುವರು-ಯಂತ್ರದಲ್ಲಿ ಕೆಲವು ಗುಂಡಿಗಳಿದ್ದು ಅವುಗಲ್ಲಿ ಒಂದೊಂದೊಂದನ್ನು ಒತ್ತಿದಾಗ-ಸೂಪ್ -ಬ್ರೆಡ್-ಬೆಣ್ಣೆ-ಬಾಯಿ ಒರೆಸುವ ಬಟ್ಟೆ ಹೀಗೆ ಎಲ್ಲವೂ ಬರುವುದು..!! ಆದರೆ ಆ ಯಂತ್ರದಲ್ಲಿ ದೋಷ ಕಾಣಿಸಿ ಶಾರ್ಟ್ ಸರ್ಕ್ಯೂಟ್ ಆಗಿ ವಿಚಿತ್ರವಾಗಿ ವರ್ತಿಸುತ್ತ ಚಾಪ್ಲಿನ್ ಬಾಯಲಿ ಬೇಜಾನ್ ಬ್ರೆಡ್ಡು ಬಲವಂತವಾಗಿ ತುರುಕಿ ಹಿಂದೆಯೇ ಸೂಪು ಹುಯ್ದು ಹಿಂದೆಯೇ ಬಾಯಿ ಒರೆಸುತ್ತಾ ಯಾವನಿಗೋ ಅತ್ತಿತ ಕದಲಲು ಅವಕಾಶ ಇಲದೆ ಪಜೀತಿ ಪಾಡು ಅನುಭವಿಸುವನು-ಅದನ್ನು ನೋಡುತ್ತಿದ್ದ ಮಾಲೀಕ -ಆ ಯಂತ್ರ ಕಂಡು ಹಿಡಿದವರಿಗೆ ಈ ಚಾಪ್ಲಿನ್ ಬಗ್ಗೆ ಕಿಂಚಿತ್ತು ಕರುಣೆ ಇಲ್ಲ, ವರಿಗೂ ಅಸ್ತು ಕಷ್ಟ ಪಟ್ಟು ಕಂಡು ಹಿಡಿದ ಆ ಯಂತ್ರ ಕೆಲಸಕೆ ಬಾರದೆ ಹೊಯ್ತ?  ಎಂಬ ಚಿಂತೆ..:( ಮಾಲೀಕ ಆ ಯಂತ್ರ ಕಾರ್ಯ ಸಾದುವಲ್ಲ -ಮನುಷ್ಯರಿಗೆ ಅಪಾಯಕಾರಿ ಎಂದು ಹೇಳಿ ಅ ಯೋಜನೆಯನ್ನು ಕೈ ಬಿಡಲು ಹೇಳುವನು..!!


 


ಚಾಪ್ಲಿನ್ಗೆ ಬೇರೆ ಕೆಲಸ ವಹಿಸುವರು -ಆದರೆ ಚಾಪ್ಲಿನ್ ಹುಚ್ಹುಚ್ಚಾಗಿ ವರ್ತಿಸುತ್ತ ಕೆಲ್ಸಗಾರರಿಗೆ ತನ್ನ ತಮಾಷೆ ಮೂಲಕ ಬೇಜಾನ್ ಕಾಟ ಕೊಡುವನು -ಇವನ ಕಾರಣವಾಗಿ ಫ್ಯಾಕ್ಟರಿಯಲ್ಲಿ ಕೆಲಸ ಕಾರ್ಯ ನಿದಾನಗೊಂಡು -ಅದೊಮೆ ಕೆಲಸಗಾರರ ಮೇಲೆ ಮಾಲೀಕನ ಮೇಲೂ ಆಯಿಲ್ ಚಿಮ್ಮಿಸಿದ ಕಾರಣ ಇವನಿಗೆ ಹುಚ್ಚು ಹಿಡಿದಿದೆ ಎಂದು ತೀರ್ಮಾನಿಸಿ ಅವನನ್ನು ಹುಚ್ಚಾಸ್ಪತ್ರೆಗೆ ಕಳಿಸುವರು .. ಆಸ್ಪತ್ರೆಯಲ್ಲಿ ಕೆಲ ದಿನ ಇದ್ದು ಗುಣಮುಖನಾಗಿ ವಾಪಾಸ್ಸು ಬಂದು ನೋಡಿದರೆ ದೇಶದಲ್ಲಿ ಆರ್ಥಿಕ ಹಿಂಜರಿತ ನಿರುದ್ಯೋಗ ಹೆಚ್ಚಾಗಿ ಜನ ಬೀದಿಗಿಳಿದು ಪ್ರತಿಭಟಿಸುತ್ತಿರುವರು...ಹಾಗೆ ಪ್ರತಿಭಟಿಸುತ್ತ ಧ್ವಜ ಹಿಡಿದು ಹಿಂದೆ ಬರುತ್ತಿರುವ ಅಸಂಖ್ಯಾತ ಜನರ ಮುಂದೆ ಇವನಿಗೆ ಅರಿವಿಲ್ಲದೆ ಹೋಗುವಾಗ ಧುತ್ತನೆ ಪ್ರತ್ಯಕ್ಷ ಆದ ಪೊಲೀಸರು ಇವನೇ ಅವರ ಲೀಡರ್ ಎಂದು ಎಣಿಕೆ ಮಾಡಿ ಅರೆಸ್ಟ್ ಮಾಡಿ ಜೇಲಿಗೆ ಕಳಿಸುವರು ... ಅಲ್ಲಿ ಒಬ್ಬ ಧೈತ್ಯನೊಡನೆ ರೂಮು ಹಂಚಿಕೊಳ್ಳಬೇಕಾದ -ಅವನ ಜೊತೆ ಅವನ ಕೀಟಲೆ ಕಷ್ಟ ಅನುಭವಿಸಬೇಕಾದ ಪರಿಸ್ಥಿತಿ..! ಜೇಲಿನಲ್ಲಿ ಊಟ ಮಾಡುವಾಗ ಕಳ್ಳತನದಲ್ಲಿ ಸಾಗಿಸಲ್ಪಟ್ಟ ಕೊಕೇನ್ ಪುಡಿ ಹೊಂದಿದ್ದ ವ್ಯಕ್ತಿಯನ್ನು ಪರೀಕ್ಷಿಸಲು ಪೊಲೀಸರು ಬರುವಾಗ ಅವನು-ಉಪ್ಪು ತುಂಬಿದ್ದ ಬಾಟಲಿ ಖಾಲಿ ಮಾಡಿ ಅದರಲ್ಲಿ ಆ ಪುಡಿ ಹಾಕುವನು,ಬ್ರೆಡ್ ಸೂಪ್ ನಲ್ಲಿ ಉಪ್ಪು ಕಡಿಮೆಯಾಗಿದೆ ಎಂದು ಚಾಪ್ಲಿನ್ ಬೇಜಾನ್ ಕೊಕೇನ್ ಪುಡಿಯನ್ನು ಸುರಿದುಕೊಂಡು ತಿಂದು ಅದರ ಪ್ರಭಾವದಿಂದ ಹುಚ್ಹುಚ್ಚಾಗಿ ವರ್ತಿಸುತ್ತ ತನ್ನ ರೂಂ ಮೇಟ್ ಧಾಂಡಿಗನನ್ನು ಸಹಾ ಭಯಗೊಳಿಸುವನು.......!!


 


ಆಮೇಲೆ ಎಲ್ಲರೂ ತಮ್ಮ ತಮ್ಮ ಕೋಣೆಗೆ ಮರಳುವಾಗ ಇವನೊಬ್ಬನೇ ಹಿಂದೆ ಉಳಿದಿರಲು- ರೂಮಿಗೆ ಹೋಗುತ್ತಿದ್ದ ಖೈದಿಗಳು ಕಾವಲುಗಾರರ ಮೇಲೆ ಮುಗಿ ಬಿದ್ದು ಹೊಡೆದು ಅವರ ಬಂದೂಕು -ಜೇಲಿನ ಬೀಗದ ಕೈ ಕಿತ್ತುಕೊಂಡು ಇನ್ನೇನು ಪರಾರಿ ಆಗಬೇಕು ಅಸ್ಟರಲ್ಲಿ ಈ ಚಾಪ್ಲಿನ್ ಆ ಬಾಗಿಲು ತಳ್ಳಿ ಒಳ ಬಂದು - ಇಲ್ಲಿ ಎನೊ ನಡೆಯುತ್ತಿದೆ ಎಂದು ಎಣಿಸಿ -ಚಿತ್ರ ವಿಚಿತ್ರವಾಗಿ ವರ್ತಿಸುತ್ತ ಹೇಗೇಗೋ ಹೊಡೆದಾಡಿ- ತಪ್ಪಿಸ್ಕೊಂಡು ಕೊನೆಗೆ ಆ ಖೈದಿಗಳು ಶರಣಾಗತರಾಗಿ ಮರಳಿ ಸೆಲ್ಲಿಗೆ ಹೋಗುವ ಹಾಗೆ ಮಾಡುವನು. ಇವನ ಈ ಧೈರ್ಯ -ಸಾಹಸಕ್ಕೆ ಇಂಪ್ರೆಸ್ಸ್ ಆದ ಜೇಲು ಅಧಿಕಾರಿಗಳು ಅವನನ್ನು ಜೇಲಿಂದ ಸನ್ನಡತೆ ಮೇಲೆ ಬಿಡುಗಡೆ ಮಾಡುವರು...ಹೆಂಗೋ ಊಟ ಬಟ್ಟೆ ಫ್ರೀ ಸಿಕ್ಕು ಹಾಯಾಗಿದ್ದ ಚಾಪ್ಲಿನ್ಗೆ ಹೊರ ಜಗತ್ತಿಗೆ ಬಂಡ ಕೂಡಲೇ ಮತ್ತೆ ಹಸಿವು ಬಟ್ಟೆ ಕೆಲಸದ ಚಿಂತೆ ಶುರು ಆಗಿ ಮರಳಿ ಹೇಗೆ ಜೇಲಿಗೆ ಹೋಗುವುದು ಎಂದು ಯೋಚಿಸುವನು...!! ಹಾಗೆ ಯೋಚಿಸುತ್ತ ಬರುವಾಗ ಒಬ್ಬ ಹುಡುಗಿ ಹಸಿವಿನಿಂದ ಬೇಕರಿಗೆ ಸಾಗಿಸುತ್ತಿದ್ದ ಬ್ರೆಡ್ಡು ನೋಡಿ ಅದನ್ನು ಕದ್ದು ಓಡುವಾಗ ಸಿಕ್ಕಿ ಬಿದ್ದು ಪೋಲೀಸರ ಕೈಗೆ ಸಿಕ್ಕಿ ಇನ್ನೇನು ಜೇಲಿಗೆ ಹೊಯ್ಯಬೇಕು ಅಸ್ತ್ರಲ್ಲಿ ಈ ಚಾಪ್ಲಿನ್ ಆ ಹುಡುಗಿಯನ್ನು ಕಾಪಾಡಲು ಮಾತು ತಾನು ಮರಳಿ ಜೇಲಿಗೆ ಹೋಗಿ ಊಟ ನಿದ್ರೆ ಬಟ್ಟೆಗೆ ಕೊರತೆ ಇಲ್ಲದಂತೆ ಹಾಯಾಗಿರಲು ಆಗುವುದು ಎಂದು ಯೋಚಿಸಿ- ತಾನೇ ಆ ಬ್ರೆಡ್ಡು ಕದ್ದದ್ದು ಎಂದು ಹೇಳುವನು-ಇವನ್ನು ಪೊಲೀಸರು ಕರೆದೊಯ್ಯುವಾಗ ಅದು ನೋಡಿದ್ದ ಇನ್ನೊಬ್ಬ ಅವನಲ್ಲ-ಇವಳೇ ಕದ್ದವಳು ಎಂದು ದೂರಿದಾಗ ಅವಳನ್ನು ಅರೆಸ್ಟ್ ಮಾಡಿ ಇವನನ್ನು ಬಿಡುವರು- ಆದರೆ ಜೇಲಿಗೆ ಹೋಗಲೇಬೇಕು ಎಂದು ತೀರ್ಮಾನಿಸಿದ್ದ ಚಾಪ್ಲಿನ್ ಒಂದು ಒಳ್ಳೆ ಹೋಟೆಲಿಗೆ ಹೋಗಿ ಭರ್ಜರಿ ತಿಂದು ತಿಂದದ್ದಕ್ಕೆ ಬಿಲ್ಲು ಕೊಡಲು ತನ್ನಲ್ಲಿ ಹಣ ಇಲ್ಲ ಎಂದಾಗ ಆ ಹೋಟೆಲ್ ಮಾಲೀಕ ಪೊಲೀಸರಿಗೆ ಹೇಳಿ ಇವನನ್ನು ಪೋಲೀಸರ ವಶಕ್ಕೆ ಕೊಡುವನು- ಆ ಹುಡುಗಿ ಮತ್ತು ಇವನು ಆ ಜೇಲಿಗೆ ಹೊಯ್ಯುವ ವಾಹನದಲ್ಲಿ ಮತ್ತೆ ಭೇಟಿ ಆಗುವರು-ಆ ವಾಹನ ದಾರಿ ಮಧ್ಯೆ ಪಲ್ಟಿ ಹೊಡೆದು ಅವನೂ ಇವಳೂ ತಪ್ಪಿಸಿಕೊಂಡು ಓಡುವರು ..


 


ಒಂದು ದೊಡ್ಡ ಅಂಗಡಿಯಲ್ಲಿ ವಾಚ್ಮೆನ್ ಆಗಿ ಕೆಲಸಕೆ ಸೇರಿ ಅಲ್ಲಿ ರಾತ್ರಿಯಲ್ಲಿ ಇವಳನ್ನು ಕರೆಸಿಕೊಂಡು ಒಳ್ಳೊಳ್ಳೆ ತಿಂಡಿ ತಿನ್ನಿಸಿ ಅಲ್ಲಿಯ ಸುಪ್ಪತ್ತಿನ ಹಾಸಿಗೆ ಮೇಲೆ ಮಲಗಿಸುವನು-ಆದರೆ ರಾತ್ರಿ ಹಿಂದೊಮ್ಮೆ ಇವನ ಜೊತೆಗೆ ಇದ್ದ ಖೈದಿಗಳು ಈ ಅಂಗಡಿಗೆ ಕದಿಯಲು ಬಂದು ಅವರು ಯಾರೂ ಎಂದು ಚಾಪ್ಲಿನ್ಗೆ ಗೊತ್ತಾಗಿ ಅವರಿಗೆ ತಿನ್ನಲು ಕುಡಿಯಲು ಅನುವು ಮಾಡಿಕೊಡುವನು..ಆದರೆ ಮಾರನೆ ದಿನ ಕಳ್ಳತನ-ಇವನ ಬೇಜವ್ಬ್ಧಾರಿ ಎಲ್ಲ ಗೊತಾಗಿ ಮರಳಿ ಪೋಲೀಸರ ಕೈಗೆ ಸಿಗುವನು- ಕೆಲ ದಿನಗಳ ನಂತರ ಬಿಡುಗಡೆ ಆಗಿ ಅವಳು ತಾನ್ ಇರುವ ಮರದ ಪುಟ್ಟ ಮನೆಗೆ ಇವನನ್ನು ತಾ ತಯಾರು ಮಾಡಿದ ಕೇಕು-ಬ್ರೆಡ್ಡು ತಿನ್ನಲು ಆಹ್ವಾನಿಸುವಳು-ಅಲ್ಲಿ ಹೋಗಿ ಅದನ್ನು ಮೇಲೆ ಕೆಳಗೆ ನೋಡಿದಾಗ ಇದು ಬಂಕಿಂಗ್ ಹ್ಯಾಮ್ ಪ್ಯಾಲೇಸ್ ಅಲ್ಲ ಆದರೂ ಹಾಗೆ ಮಾಡಬಹದು ಎನ್ನುವಳು-ಅಲಿ ತಿಂಡಿ ತಿನ್ನುವಾಗ ಹಲವು ತಮಾಷೆ ಪ್ರಸಂಗಗಳು ನಡೆವವು..!! ಫ್ಯಾಕ್ಟರಿಗಳು ಮತ್ತೆ ಓಪನ್ ಆಗಿ ಇವನಿಗೆ ಕೆಲಸ ಸಿಕ್ಕೀ ಇವನ ಅಜಾಗರೂಕತೆ ಕಾರಣ ಇವನು ಒಮ್ಮೆ ಆ ಯಂತ್ರದಲ್ಲಿ ಸಿಕ್ಕಿ- ಇವನ ಬಾಸ್ ಯಂತ್ರದಲ್ಲಿ ಸಿಕ್ಕಿ ಆ ಯಂತ್ರ ನಿಲ್ಲಿಸಲು ಹಲವು ಪ್ರಯತ್ನ ಮಾಡಬೇಕಾಗುವುದು .. ಸಹ ಕೆಲಸಗಾರರು ಮುಷ್ಕರಕ್ಕೆ ಕರೆ ನೀಡಿ ಮತ್ತೆ ನಿರುದ್ಯೋಗ ಭೂತ ಕಾಡುವುದು-ಮತ್ತೆ ಬೀದಿಗೆ ಬೀಳಲ್ಪಟ್ಟು ಆಕಸ್ಮಿಕವಾಗಿ ಪೋಲೀಸು ಒಬ್ಬನಿಗೆ ತಾಗಿದ ಇಟ್ಟಿಗೆ ಎಸೆದವನು ಇವನೇ ಎಂದು ಇವನನು ಮತ್ತೆ ಅರೆಸ್ಟ್ ಮಾಡುವರು...!! ಕೆಲ ದಿನಗಳ ನಂತರ ಬಿಡುಗಡೆ ಆಗಿ ಆ ಹುಡುಗಿ ಎಲ್ಲೋ ಒಂದು ಹೋಟೆಲಿನಲ್ಲಿ ನೃತ್ಯಗಾತಿ ಆಗಿ ಕೆಲಸ ಮಾಡುತ್ತಿರುವಳು ಎಂದು ಗೊತಾಗಿ ಅವಳ ಕಾರಣವಾಗಿ ಇವನಿಗೂ ಅಲ್ಲಿ ಬೇರರ್ ಕೆಲಸ ಸಿಗುವುದು ಆದರೆ ಅನುಭವ ಇಲದೆ- ವೃತ್ತಿ ಬಗ್ಗೆ ಏನೇನೋ ತಿಳಿಯದ ಚಾಪ್ಲಿನ್ ಗ್ರಾಹಕರನ್ನು ಸಂತುಷ್ಟಗೊಳಿಸಲು ಹೆಣಗುವನು -ಹೋಟೆಲಿನ ಒಳಗಡೆ ಅಡುಗೆ ಕೊನೆಯಲ್ಲಿ ತಿಂಡಿ ತೀರ್ಥ ತರುವಾಗ-ಹೋಗುವಾಗ ಒಳಗೆ ಹೊರಗೆ ಎಂಬ ಬೋರ್ಡ್ ಸಹಾ ನೋಡದೆ ಎತ್ತೆತ್ತಲೋ ನುಗ್ಗುತ್ತಾ ಸಹ ಕೆಲಸಗಾರರಿಗೆ ಬೇಜಾನ್ ತೊಂದರೆ ಕೊಡುವನು..


 


ಇವನ ಮೇಲೆ ಗ್ರಾಹಕರು ನೀಡಿದ ದೂರು ಆರೋಪದ ಕಾರಣ ಇವನ ಉದ್ಯೋಗ ಬದಲಾಗಿ ನ್ರುತ್ಯಗಾರ ಹಾಡುಗಾರನ ಕೆಲಸ ಮಾಡ ಬೇಕಾಗುವುದು...!! ಆದ್ರೆ ಎಂದೂ ಹಾಡಿ ನೃತ್ಯ ಮಾಡಿ ಅಭ್ಯಾಸ ಇಲ್ಲದ ಚಾಪ್ಲಿನ್ಗೆ ಆ ಹುಡುಗಿ ಅವನು ಹಾಕಿದ ಶರ್ಟಿನ ಕಫ್ಸ್ನಲ್ಲಿ ಹಾಡಿನ ಸಾಲುಗಳನು ಬರೆದು ಅವಂಗೆ ಅದು ನೋಡಿಕೊಂಡು ಹಾಡಲು ಹೇಳುವಳು... ಆದರೆ ಇವನು ಸ್ವಲ್ಪ ಜೋರಾಗಿಯೇ ನೃತ್ಯ ಮಾಡುತ್ತಾ ದಿಗ್ಲಿನಿಂದ ಗ್ರಾಹಕರನ್ನು ನೋಡುತ್ತಾ ಕೈ ಬೀಸಲು ಆ ಕೈ ಕಫ್ಸ್ ಎತ್ತಲೋ ಬಿದ್ದು -ಕೈನತ್ತ ನೋಡಿದಾಗ ಅಲ್ಲಿ ಏನೂ ಕಾಣಿಸದೆ ಕಂಗಾಲಾಗಿ ಹಿಂದೆಯೂ ಹೋಗಲು ಆಗದೆ ಆ ಹುಡುಗಿಯತ್ತ ನೋಡಿದಾಗ ಅವಳು ಬಾಯಿಗೆ ಬಂದಿದ್ದು ಏನೋ ಒಂದು ಹಾಡು -ಹೇಗೋ ಕುಣಿ ಎಂದು ಸನ್ನೆ ಮಾಡಿದಾಗ ಏನೇನೋ ಹಾಗಿ ಹೇಗೇಗೋ ನೃತ್ಯ ಮಾಡಿ ಅದೂ ಜನರಿಗೆ ಇಷ್ಟ ಆಗಿ ಚಪ್ಪಾಳೆ ತಟ್ಟುವರು... ಇನ್ನೇನೂ ಎಲವೋ ಸುಖಾಂತ್ಯ ಎಂದು ನಿಟ್ಟುಸಿರು ಬಿಡುವಾಗಲೇ ಆ ಹುಡುಗಿಯನ್ನು ಹಿಂದೊಮ್ಮೆ ಪೋಲೀಸರ ಕೈನಿಂದ ತಪ್ಪಿಸಿಕೊಂಡ ಕಾರಣಕ್ಕಾಗಿ ಹುಡುಕುತ್ತಿದ್ದ ಪೊಲೀಸರು ಆ ಹೋಟೆಲಿಗೆ ಧಾವಿಸಿ ಅವಳನ್ನು ಅರೆಸ್ಟ್ ಮಾಡಲು ಬರುವಾಗ ಚಾಪ್ಲಿನ್ ಮಾತು ಅವಳು ಇಬ್ಬರೂ ಪೋಲೀಸರ ಕಣ್ಣು ತಪ್ಪಿಸಿ ಹೊರಗೆ ಓಡುವರು ....:(( ಕೊನೆಯಾಗದ ರಸ್ತೆಯೊಂದರಲ್ಲಿ ಜೊತೆಯಾಗಿ ಸಾಗುತ್ತಿರುವ ಚಾಪ್ಲಿನ್ ಮಾತು ಆ ಹುಡುಗಿಯ ದ್ರುಷ್ಯದೊಡನೆ ಚಿತ್ರ ಮುಗಿವದು....!


 


 


 


ಈ ಚಿತ್ರಕ್ಕೆ-ನಮ್ಮ ದೇಶ -ಮಹಾತ್ಮ ಗಾಂಧೀಜಿ -ಚಾಪ್ಲಿನ್ ಅವರಿಗಿದ್ದ ನಂಟು...!! >>>>ಐರೊಪ್ಯ ರಾಷ್ಟ್ರಗಳಲ್ಲಿ ಮಹಾ ಆರ್ಥಿಕ ಹಿಂಜರಿತದ ಕಾರಣ ಆಗಿದ್ದ ರಾಜಕೀಯ -ಸಾಮಾಜಿಕಾರ್ಥಿಕ ಬದಲಾವಣೆಗಳು ಮತ್ತು ಮಹಾತ್ಮ ಗಾಂಧೀಜಿ ಅವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಗಾಂಧೀಜೀ ಅವರು ಚಾಪ್ಲಿನ್ಗೆ ಈ ಯಂತ್ರೀಕರಣದ ಕಾರಣ ಕೆಲಸಗಾರರ ಮೇಲೆ ಆದ ಪರಿಣಾಮ -ನಿರುದ್ಯೋಗ ಹೆಚ್ಚಳ ಬಗ್ಗೆ ಗಮನ ಸೆಳೆದದ್ದು ಸಹಾ ಈ ಚಿತ್ರ ತೆಗೆಯಲು ಪ್ರೇರಣೆ ಸ್ಪೂರ್ತಿ ಆಯ್ತು.... ಚಿತ್ರವಿಡೀ ನೋಡಲು ಚೆನ್ನಾಗಿದ್ದು ಎಲ್ಲ ದೃಶ್ಯಗಳು ನೆನಪಲ್ಲಿ ಸದಾ ಉಳಿಯುವಂತವು-ಹೀಗಿರುವಾಗ ಕೆಲವು ದೃಶ್ಯಗಳನ್ನು ಈ ಚಿತ್ರದಲ್ಲಿ ಹೆಕ್ಕಿ ಇಲ್ಲಿ ಸೇರಿಸುವುದು ಸುಲಭ ಸಾಧ್ಯ ವಿಷಯವಲ್ಲ..!! ಆದರೂ ನೀವ್ ಎಂದಾದರೂ ನೋಡಿರಬಹುದಾದ ಮುಂದೆ ನೋಡಬಹುದಾದ ಅಮೋಘ ದೃಶ್ಯಗಳನ್ನು ಇಲ್ಲಿ ಹೆಕ್ಕಿ ಹಾಕಿರುವೆ..


 


೧.ಚಾಪ್ಲಿನ್ ವೇಗವಾಗಿ ಚಲಿಸುವ ಯಂತ್ರದ ವೇಗದೊಡನೆ ಕೆಲಸ ಮಾಡಲು ಒದ್ದಾಡುವುದು.!ಅದರ ವೇಗಕ್ಕೆ ಸಮವಾಗುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಾ ಆ ಯಂತ್ರದೊಳಗೆನೆ ನುಗ್ಗುವುದು...!! ೨.ಆ ಯಂತ್ರಗಳು ಅವುಗಳ ವೇಗ-ಮಾಲೀಕನ ಆಶೆಬುರುಕತನ ಕಾರಣವಾಗಿ ಕೆಲಸ ಹೆಚ್ಚಿ ಬಿಡುವು ಕಡಿಮೆ ಆಗಿ ಮನ ಒಂಥರಾ ಚಲಿಸುತ್ತಿರುವ ಬಸ್ಸಿಂದ ಧುಮುಕಿ ಕೆಲ ದೂರ ಆ ಬಸ್ಸಿನ ಹಿಂದೆ ಆಕರ್ಷಣೆಗೆ ಒಳಗಾಗಿ ಓಡುವ ಹಾಗೆ ಆಗಿ ಯಂತ್ರದೊಳಗೆ ಹೋಗುವ -ಸಹೋದ್ಯೋಗಿಗಳು ಹೊರಗೆ ಎಳೆದು ಹಾಕುವ ದೃಶ್ಯ ೩.ಕಾರ್ಖಾನೆಯಲ್ಲಿನ ಆನ್ -ಆಫ್ ಲಿವರುಗಳನ್ನು ಉಲ್ಟಾ ಪಲ್ಟ ಮಾಡಿ ಇಡೀ ಉತ್ಪಾದನ ಹಂತ ಅದಲು ಬದಲಾಗಿ ಆಗ ನಡೆವ ತಮಾಷೆ.. ೪.ಆಯಿಲ್ ಪಿಚಕಾರಿಯನ್ನು ಕೈನಲ್ಲಿ ಹಿಡಿದು ಸಹೋದ್ಯೋಗಿಗಳ ಮಾಲೀಕನ ಮುಖಕ್ಕೇ ಮಸಿ ಬಳೆವ ದೃಶ್ಯ...


 


೫.ಜೇಲಿನಲ್ಲಿ ಧಾಂಡಿಗ ಖೈದಿ ಒಬ್ಬನೊಡನೆ ಕೋಣೆ ಹಂಚಿಕೊಂಡು ಅವನ ಕಷ್ಟ ಕೋಟಲೆ ಅನುಭವಿಸಬೇಕಾಗಿ ಬರುವ ಸಂದರ್ಭ..! ೬.ಜೇಲಿನಲ್ಲಿ ಊಟ ಮಾಡುವಾಗ ರಹಸ್ಯವಾಗಿ ಕೊಕೇನ್ ಪುಡಿ ಒಳ ತಂದಿದ್ದ ಖೈದಿ ಒಬ್ಬನ ತಪಾಸಣೆಗೆ ಪೊಲೀಸರು ಬರುವಾಗ ಅವನು ಉಪ್ಪಿನ ಬಾಟಲಿ ಓಪನ್ ಮಾಡಿ ಅದರಲ್ಲಿ ಕೊಕೇನ್ ಪುಡಿ ಸುರಿದು ಅದು ಉಪ್ಪೆನ್ದು ಭಾವಿಸಿ ಬೇಜಾನ್ ಬ್ರೆಡ್ಡಿಗೆ ಹಾಕಿಕೊಂಡು ತಿಂದ ಚಾಪ್ಲಿನ್ ಹುಚ್ಚುಚ್ಚ್ಚಾಗಿ ಆಡುತ್ತ್ತ ಆ ಧಾಂಡಿಗ ಖೈದಿಯೊಡನೆ ಜಗಳವಾಡಿ ಅವನನ್ನೇ ಅಂಜಿಸುವ ದೃಶ್ಯ..!! ೭.ಅಲ್ಲಿಂದ ಹೊರಟ ಖೈದಿಗಳು ತಮಮ್ ಸೆಲ್ಲಿಗೆ ಹೋಗುವಾಗ ಪೋಲೀಸರ ಬಂದೂಕು ಕಸಿದು ಜೇಲಿನ ಆಚೆ ಹೋಗಲು ಗೇಟ್ ಕೀ ಪಡೆದು ಇನ್ನೇನು ಹೊರಗೆ ಹೋಗಬೇಕು ಎಂದಾಗ ಚಾಪ್ಲಿನ್ ಕೊಕೇನ್ ಮತ್ತಿನಲ್ಲಿ ಅವರನ್ನು ಹೇಗೇಗೋ ಮಣಿಸಿ ಪೋಲೀಸರನ್ನು ರಕ್ಷಿಸುವ ದೃಶ್ಯ ..


 


೮.ಅವನ ಸನ್ನಡತೆ ಕಾರಣವಾಗಿ ಅವನನ್ನು ಬಿಡುಗಡೆ ಮಾಡಲಾಗಿದೆ ಎಂದಾಗ ಮುಖ ಮ್ಲಾನವದನವಾಗಿ ಮುಂದೆ ಊಟ ಬಟ್ಟೆಗೆ ಇರಲು ಜಾಗಕ್ಕೆ ಏನು ಮಾಡುವುದು ಎಂದು ಯೋಚಿಸುವ ದೃಶ್ಯ...ಸೂಪರ್..!! ೯.ಹೇಗಾದರೂ ಮತ್ತೆ ಜೇಲಿಗೆ ಸೇರಲು ಹುಡುಗಿ ಕದ್ದ ಬ್ರೆಡ್ಡು ತಾನೇ ಕದ್ದಿದ್ದು ಎಂದು ಸುಳ್ಳು ಹೇಳಿ ಪೋಲೀಸರ ಜೊತೆಗೆ ಹೋಗುವ- ಜೇಲಿನ ವಾಹನ ಪಲ್ಟಿ ಆಗಿ ಆ ಹುಡುಗಿ ಮತ್ತು ಇವನು ತಪ್ಪಿಸಿಕೊಂಡು ಓಡುವ ದೃಶ್ಯ.. ೧೦.ಹುಡುಗಿಯ ಮನೆಗೆ (ಕಟ್ಟಿಗೆ ತುಂಡುಗಳ ಪಟ್ಟಿಗಳ ಮನೆ)ಊಟ ಮಾಡಲು ಆಗಮಿಸಿ ಆ ಮನೆಯ ಹೆಬ್ಬಾಗಿಲು ತಲೆಗೆ ಬಡಿಸಿಕೊಳ್ಳುವ -ಊಟ ಮಾಡುವಾಗ ಇವನು ಕೂತ ಚೇರು ನೆಲದ ಮೇಲಿನ ಕಟ್ಟಿಗೆ ಬಿರುಕುಗಳಲಿ ಸಿಕ್ಕು ಹೊಯ್ದಾಡುವ -ಈ ಮನೆ ಬಂಕಿಂಗ್ ಹ್ಯಾಮ್ ಅರಮನೆ ಅಲ್ಲ-ಆದರೆ ಹಾಗೆ ಭಾವಿಸಬಹುದು-ಇರಬಹದು ಎಂದು ಹುಡುಗಿ ಹೇಳುವ ದೃಶ್ಯ...


 


೧೧.ಆ ಮನೆಗೆ ದೂರದಲ್ಲಿರುವ ನೀರಿನ ತೊರೆಯಲಿ ಈಜಲು ಹೋಗಿ ಜಂಪ್ ಮಾಡಿ ತಲೆಗೆ ಹೊಡೆಸಿಕೊಳ್ಳುವ ದೃಶ್ಯ--ಇದು ಇದುವರೆಗೆ ನಾ ನೋಡಿದ ಯಾವುದೇ ಚಿತ್ರಗಳಲ್ಲಿ ಇಲದಿದ್ದ ಅಮೋಘ ದೃಶ್ಯ..ಆ ನೀರೋ ಬರೀ ಮಂಡಿಯವರೆಗೆ ಇರುವುದು ಆದರೆ ಚಾಪ್ಲಿನ್ ಅದು ಆಳವಾದ ಪ್ರದೇಶ ಎಂದು ಓಡಿ ಬಂದು ನೀರಿಗೆ ಜಂಪ್ ಮಾಡುವನು..!!ಈ ದೃಶ್ಯವನ್ನು ಬಹುಶ ಒಂದು ಬಾರಿ ಆದರೂ ನೋಡದ ಯಾರಾದರೂ ಇರುವರೇ? ಎನುವುದು ನನ್ನ ಸಂದೇಹ.. ೧೨.ಬಯಲಲ್ಲಿ ಕೂತು ಹಸಿವಾಗಿ ಮೃಷ್ಟಾನ್ನ ಭೋಜನ ತಿಂದ ಹಾಗೆ ಹಗಲು ಹೊತ್ತಲ್ಲಿ ಭರ್ಜರಿ ಕನಸು ಕಾಣುವ ದೃಶ್ಯ...!! ೧೩.ದೊಡ್ಡ ಮಾಲ್ನಲ್ಲಿ ವಾಚ್ಮೆನ್ ಆಗಿ ಕೆಲ್ಸಕ್ಕೆ ಸೇರಿ ತನ್ನ ಹುಡುಗಿಗೆ ತಿನ್ನಲು ಮಲಗಲು -ಮತ್ತು ಕಳ್ಳರಿಗೆ ಸಹಾಯ ಮಾಡಿ ಕುಡಿದು ಮತ್ತಿನಲ್ಲಿ ಹೇಗೇಗೋ ತೂರಾಡುತ್ತ ಲಿಫ್ಟ್ಗೆ ಹೋಗಿ ಬೀಳುವ ದೃಶ್ಯ... ೧೪.ಕೆಲಸ ಗಿಟ್ಟಿಸಿ ಗ್ರಾಹಕರನ್ನು ಸಂತುಷ್ಟಗೊಳಿಸಲು ಆಗದೆ ಬೇರರ್ ಹುದ್ದೆಯಿಂದ ಹಾಡುಗಾರ ನೃತ್ಯಗಾರ ಆಗಿ ಬದಲಾಗಿ -ಅಂಗಿಯ ತೋಳಿನ ಮುಂದೆ ಕಫ್ಸ್ ಮೇಲೆ ಹಾಡು ಬರೆದುಕೊಂಡು ಅದು ನೋಡಿ ಹಾಡುತ್ತ ಕುಣಿಯಲು ಹೋಗಿ ಗ್ರಾಹಕರನ್ನು ನೋಡಿ ದಿಗಿಲಾಗಿ ಭಯಗೊಂಡು ಜೋರಾಗಿ ಕೈ ಬೀಸಿ ಆ ಕೈ ಕಫ್ಸ್ ದೂರ ಹಾರಿ -ಏನೂ ತೋಚದೆ ಪೆಂಗನಂತೆ ನೋಡುವ ದೃಶ್ಯ... >>>>ಸಿನೆಮ- ಹಾಸ್ಯ - ಚಿತ್ರಗಳು ನಟ ಎಂದಾಗ ಮೊದಲು ನೆನಪಿಗೆ ಬರುವ ಹೆಸರೇ ಚಾರ್ಲಿ ಚಾಪ್ಲಿನ್.. ತನ್ನ ವಿಶೇಷ ಶೈಲಿ ಬಟ್ಟೆ ಬರೆ-ನೋಟ-ನಟನೆ ಕಾರಣವಾಗಿ ಜಗತ್ತಿನ ಎಲ್ಲೆಡೆ ಎಲ್ಲರ ಮನಗೆದ್ದ ಬಹುಶ ಒಬ್ಬನೇ ನಟ ಅನ್ನಿಸುವದು.. ಅಂದು ಇಂದು ಮುಂದೂ ಚಾಪ್ಲಿನ್ನನ್ನು ಹಲವು ಜನ ಕಾಪಿ ಮಾಡುತ್ತಿರುವರು .ಆದರೂ ಒರಿಜಿನಲ್ಲು ಒರಿಜಿನಲ್ಲೇ..! ಬಹುತೇಕ ಮೂಕಿ ಚಿತ್ರಗಳನ್ನು ತೆಗೆದು (ಟಾಕಿ ಬಂದ ಮೇಲೂ ತನ್ನ ಶೈಲಿ ತ್ಯಜಿಸಲು ಒಪ್ಪದೇ)ಜನರ ಮನ ಸೆಳೆದ ನಟ ಚಾಪ್ಲಿನ್ ವಯುಕ್ತಿಕ ಜೀವನದ ನೋವು ನಲಿವುಗಳನ್ನು ಮರೆತು ತೆರೆ ಮೇಲೆ ಸಾಮಾನ್ಯ ಜನರ ಬದುಕು- ಬವಣೆ -ಆಶೆ -ಆಕಾಂಕ್ಷೆ -ನಿರೀಕ್ಷೆಗಳನ್ನು ತೋರಿಸಿದವನು.. >>>>ಚಾಪ್ಲಿನ್ನ ಒಂದಾದರೂ ಚಿತ್ರಗಳನ್ನು ದೃಶ್ಯಗಳನ್ನು ಯಾರಾದರೂ ನೋಡದೆ ಇರುವರು ಎಂದು ನನಗನ್ನಿಸುತ್ತಿಲ್ಲ..ಅದ್ಯಾಗ್ಗೂ ಅದ್ರಲ್ಲಿ ನೀವೊಬ್ಬರಾಗಿದ್ದರೆ ಇದೆ ಸುಸಮಯ ನೀವ್ ಚಾಪ್ಲಿನ್ ಚಿತ್ರಗಳನ್ನು ಮನೆ ಮಂದಿ ಸಮೇತ ಮುಜುಗರವಿಲದೆ ನೋಡುತ್ತಾ ನಕ್ಕು ನಕ್ಕು ಸುಸ್ತಾಗಲು... ಇನ್ನೇಕೆ ತಡ...!! ನೋಡಿ ಎಂಜಾಯ್ ಮಾಡಿ....


 


 


==========================================================================================================


 


ಯೂಟೂಬ್ ಪೂರ್ತಿ ಚಿತ್ರ :


http://www.youtube.com/watch?v=wGNYyG8F7WY

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ರಾಜೇಶ ಹೆಗಡೆ ಮಂಗಳ, 02/05/2013 - 22:30

ನಮಸ್ಕಾರ ವೆಂಕಟೇಶ ಅವರೇ,

ಚಾರ್ಲಿ ಚಾಪ್ಲಿನ್ ಅವರ ಮಾಡರ್ನ್ ಟೈಮ್ಸ್ ನಾನೂ ಸಹ ನೋಡಿದ್ದೇನೆ. ಹೊಟ್ಟೆ ಹುಣ್ಣಾಗಿಸುವ ಈ ಮೂಕಿ ಚಿತ್ರ ಈ ಕಾಲಕ್ಕೂ ಅನ್ವಯವಾಗುತ್ತದೆ. ಅದರಲ್ಲೂ ರೋಬೋಟ್ ಊಟ ತಿನ್ನಿಸುವ ದೃಶ್ಯ ಅಂತೂ ನೋಡಿ ನಕ್ಕು ನಕ್ಕು ಸಾಕಾಯ್ತು! ಕುಟುಂಬ ಸಮೇತ ನೋಡಿ ನಲಿಯುವ ಚಿತ್ರ. ಇಂದು ಸಾಮಾನ್ಯವಾಗಿ ನಾನು ಹೆಚ್ಚಿನ ಬ್ಲ್ಯಾಕ್ ಅಂಡ್ ವೈಟ್ ಫಿಲಂ ನೋಡುವದಿಲ್ಲ. ಚಾರ್ಲಿ ಚಾಪ್ಲಿನ್ ಚಿತ್ರಗಳು ಮಾತ್ರ ಇದಕ್ಕೆ ಅಪವಾದ.

ಆಗಿನ ಕಾಲದಲ್ಲಿಯೇ ನಿರ್ದೇಶಕರು ಹಾಸ್ಯದೊಂದಿಗೆ ಸಮಸ್ಯೆಗಳನ್ನು ತೋರಿಸಿದ ರೀತಿ ಅಮೋಘ. ಚಾರ್ಲಿ ಚಾಪ್ಲಿನ್ ಅಭಿನಯ ಕೂಡ ಅತ್ಯುತ್ತಮ.

ನಿಮ್ಮ ವಿಮರ್ಶೆ ಕೂಡಾ ವಿವರವಾಗಿದ್ದು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ.

venkatb83 ಧ, 02/06/2013 - 18:22

ನೀವ್ ಹೇಳೋದು ನಿಜ -ಆಧುನಿಕ ಚಿತ್ರಗಳಿಗಿಂತ ಹಳೆಯ ಕಪ್ಪು ಬಿಳುಪು ಚಿತ್ರಗಳು ಚೆನ್ನ -ಆದರೆ ಲ್ಲಾ ಚಿತ್ರಗಳು ಹಿಡಿಸಲಿಕ್ಕಿಲ್ಲ...ಅಪವಾದ ಎಂದರೆ  ಚಾಪ್ಲಿನ್ ಮತ್ತು ರಾಜ್ ಕುಮಾರ್ ಅವರ ಚಿತ್ರಗಳು....ಹಾಗೆಯೇ ಇನ್ನಿತರ ಕೆಲವೇ ಕೆಲವು ಆಂಗ್ಲ ಚಿತ್ರಗಳು...
ಅವುಗಳ ಬಗ್ಗೆ ಮುಂದೊಮ್ಮೆ ಬರೆವೆ...
ಪ್ರತಿಕ್ರಿಯೆಗೆ ನನ್ನಿ  ..
ಶುಭವಾಗಲಿ..
\।/
ರಮೇಶ್ ಕಾಮತ್ ಗುರು, 02/07/2013 - 22:10

ಸಪ್ತಗಿರಿ ಯವರೆ ತಮ್ಮ ಈ ಚಿತ್ರಲೇಖನಕ್ಕೆ ನಾನು ಸಂಪದದ ಪುಟದಲ್ಲಿ ಈಗಾಗಲೆ ಪ್ರತಿಕ್ರಿಯೆ ಬರೆದಿರುವೆ. ತಮ್ಮ ತಾಳ್ಮೆಯುಕ್ತ ಲೇಖನಗಳಿಗೆ ನನ್ನ ಹ್ಯಾಟ್ಸ ಆಫ್. ನನಗೆ ನಾಲ್ಕು ಅಕ್ಷರ ಬರೆಯುವಷ್ಟರಲ್ಲಿ ಮನಸ್ಸು ವಿಛಲಿತಗೊಳ್ಳತ್ತೆ. ..ವಂದನೆಗಳು

venkatb83 ಶುಕ್ರ, 02/08/2013 - 13:59

ಹಿರಿಯರೆ ನೀವು ವಿಸ್ಮಯನಗರಿಯಲ್ಲಿಯೂ ಸದಸ್ಯರಾಗಿದ್ದು ನೋಡಿ ಸ೦ತಸವಾಯ್ತು..

ಬರ್ಹಗಳನ್ನು ಈ ಮೊದಲು ಸಲೀಸಾಗಿ ಬರೆಯುತ್ತಿದ್ದೆ..ಒ೦ದೊ೦ನ್ದು ದಿನ ೩-೪ ಬರಹ ಬರೆದದ್ದು ಇತ್ತು,ಆದ್ರೆ ಈ ಮಧ್ಯೆ ಕೆಲ್ಸದ ಒತ್ತಡ-ಎನು ಬರೆಯಲೂ -ಎನೂ ಹೊಳೆಯದೆ ಮನ ಖಾಲಿ ಆಗಿದೆ...!!

ಅದಕ್ಕೆ ಈ ಚಿತ್ರಗಳ ಕುರಿತು ಬರೆಯಲು ಶುರು ಮಾಡಿದ್ದು...

 

ಪ್ರತಿಕ್ರಿಯೆಗೆ-ನಿಮ್ಮ ಅಭಿಮಾನಕ್ಕೆ ನನ್ನಿ

ಶುಭವಾಗಲಿ..

 

\।/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.