Skip to main content

ಮೊದಲ ರಾತ್ರಿ..

ಇಂದ Jagannatha R N
ಬರೆದಿದ್ದುJanuary 28, 2013
6ಅನಿಸಿಕೆಗಳು

ಭಾರವೆನಿಸುತಿವೆ ಅವನ ಕೈಗಳು

ಅನುಮಾನ ಪಡುವಂತಾಗುತ್ತಿದೆ

ಅವನ ಸಂಭಾಷಣೆಗಳು..

ಇದು ಹೊಸತು ಅದು ಹಳತು

ಎಂದು ತಾಳೆ ಹಾಕುತಿರುವ

ಮನಸು  ತಿರುವಿ ಹಾಕುತಿದೆ

ಹಳೆಯ ಪುಟಗಳನು...ಇವನ ಆಕ್ರಮಣ ಅತಿಕ್ರಮಣ

ಹೊಸತೆನಿಸಿದೆ ಮತ್ತು ಹೊಲಸೆನಿಸಿದೆ.

ಕೇವಲ ಮುತ್ತಿಗಾಗಿ

ಅವನು ಪಟ್ಟ ಪ್ರಯತ್ನವೆಷ್ಟು..? ಎಂದು

ತಾಳೆಹಾಕುತಿದೆ ಅವಳ ಮನಸು

ಹಳೆಯ ಹುಡುಗನೊಂದಿಗೆ..

ಕೋರಿಕೆ ಇರದ ಗೂಳಿಯಂತ ದಾಳಿ ಇವನದು

ಕಾಣಿಕೆಯಾಗಿ ಕೇಳಿಕೊಳ್ಳುತ್ತಿದ್ದ ಪಾಳಿ ಅವನದು..ಗೆಳೆತನ, ಪ್ರೀತಿ ಮದುವೆ ಇವೆಲ್ಲವುಗಳ

ಮೂಲ ಉದ್ದೇಶ ಇದೊಂದೆ ಅಲ್ಲವೇ..?

ಎಂದು ಪ್ರಶ್ನಿಸುತಿರೋ ಇವಳು

ಎಂದೂ ಅವನಿಗೆ ಒಪ್ಪದೆ

ಇವನಿಗೆ ಚಾಚೂ ತಪ್ಪದೆ ಒಪ್ಪಿದೆ

ಮನ ನಿರಾಕರಿಸಲು ಸೋಲೊಪ್ಪಿದೆ

ನಿಜ ಜೀವನ ಇದೆ ಎಂದೆನಿಸಿದರೂ

ಇದು ಹೊಲಸು..ಆತ್ಮೀಯವಾಗಿ,

ಜಗನ್ನಾಥ ಆರ್.ಎನ್

ಲೇಖಕರು

ಅನಿಸಿಕೆಗಳು

praveen.kulkarni ಸೋಮ, 01/28/2013 - 20:53

ಆತ್ಮೀಯ ಜಗನ್ನಾಥ ಅವರೆ,

ಈ ಕವನವನ್ನು ಫೇಸಬುಕ್ನಲ್ಲಿ ಮೊದಲೆ ಒದಿದಂತಾಗಿದೆ.ಆದರೆ ಬೇರೆ ಯಾರದೋ ಹೆಸರಿನಲ್ಲಿ.ಆದರೆ ಕವನ ಮಾತ್ರ ತುಂಬಾ ಸುಂದರ ಹಾಗು ಸರಳವಾಗಿದೆ.

Jagannatha R N ಸೋಮ, 01/28/2013 - 22:09

ಮತ್ತೊಮ್ಮೆ ನನ್ನ ಕವನಕ್ಕೆ ಈ ರೀತಿಯ ಅಭಿಪ್ರಾಯ ಬಂದಿದೆ...

ಈ ಮೊದಲು ನನ್ನ ಕವನ "ಆಕೆ" ಯನ್ನು ಫೇಸ್ ಬುಕ್ ನಲ್ಲಿ ಮೊದಲೇ ಓದಿದ್ದೆ ಎಂದು ಅಭಿಪ್ರಾಯ ತಿಳಿಸಿದ್ದರು, ನಂತರ ಕವನ ಕದ್ದ ವ್ಯಕ್ತಿಗೆ ನೇರವಾಗಿ ನನ್ನ ಈ ಬ್ಲಾಗ್ ಲಿಂಕ್ ಕಳಿಸಿ ಉತ್ತರಿಸಿ ಎಂದ ಕೆಲವೇ ಕ್ಷಣಗಳಲ್ಲಿ ನನ್ನ ಕವನವನ್ನು ಅವರ

ಖಾತೆಯಿಂದ ಕಿತ್ತುಹಾಕಿದ್ದರು...ಮತ್ತೆ ಈಗ  praveen.kulkarni ಯವರಿಗೂ ನನ್ನ ಬ್ಲಾಗ್ ಲಿಂಕ್ http://malemugilu.blogspot.in/2013/01/blog-post.html ನೀಡುತ್ತಿದ್ದೇನೆ ಪರಿಶೀಲಿಸಿ...ನೀವು ಫೇಸ್ ಬುಕ್ ನಲ್ಲಿ ಎಲ್ಲಿ ಓದಿದ್ದು ಎಂದು ನೆನಪು ಮಾಡಿಕೊಂಡು ಆದರೆ ಆ ಲಿಂಕ್ ಕಳುಹಿಸಿ..

http://malemugilu.blogspot.in/2013/01/blog-post.html

praveen.kulkarni ಸೋಮ, 02/04/2013 - 21:48

ಆತ್ಮೀಯ ಜಗನ್ನಾಥ್ ಅವರೇ,ತುಂಬಾ ಹುಡುಕಿ ನೋಡಿದೆ ಆದರೆ ಯಾರ ಪ್ರೊಫೈಲ್ ಅಲ್ಲಿ ಈ ನಿಮ್ಮ ಕವನ ಬಂದಿತ್ತು ಎನ್ನುವುದು ಸಧ್ಯ ಸಿಗುತ್ತಿಲ್ಲ.ಆದರೆ ಸಿಕ್ಕಾಗ ಖಂಡಿತ ತಿಳಿಸುವೆ

K.M.Vishwanath ಶುಕ್ರ, 02/01/2013 - 15:18

ಈ ಬರವಣಿಗೆ ಕದಿಯೋ ಕದಿಮರಿಗೆ ಲಗಾಮಿಲ್ಲದೆ ಓಡುತ್ತಿದೆ 

ಚಿಂತೆಬೇಡಾ ಸರ್ ಬರೆಯುವದು ಮುಂದುವರೆಸಿ ತುಂಬಾ ಅರ್ಥಪೂರ್ಣ ಭಾವಪೂರ್ಣ ಕವನಗಳಿವು 

venkatb83 ಶುಕ್ರ, 02/01/2013 - 18:34

ನೀವು ಕವನ  ಬರೆವ ಅದಕ್ಕೆ ಆಯ್ದುಕೊಳ್ಳುವ ವಿಷ್ಯ ವಸ್ತು -ಅದನ್ನು ಅಕ್ಷರ ರೂಪಕ್ಕೆ ಇಳಿಸುವ ಪರಿ ಸೂಪರ್...
ಫೋಟೋ ನೋಡಿದರೆ  ಇನ್ನೂ ಚಿಕ್ಕ ವಯಸ್ಸೇ..!! ಆದರೆ ಕಾವ್ಯ ಕೃಷಿಯಲ್ಲಿ  ಅಮೋಘ ಪ್ರತಿಭೆ ಎಂದು ಹೇಳಿದರೆ ಮುಜುಗರ ಪಡಬೇಡಿ..
ಕಥೆ-ಕವನ-ಬರಹ ವಿಭಾಗಗಳಲ್ಲಿ  ಚೆನ್ನಾಗಿ ಬರೆಯಲು  ಅಪಾರ ಶ್ರಮ ಅಗತ್ಯ ಇದೆ-ನಿಮ್ಮ ಬರಹಗಳನ್ನು ಗಮನಿಸಿದಾಗ  ನೀವ್ ಪಟ್ಟ ಶ್ರಮ ಅರಿವಾಗುತ್ತಿದೆ ..
ನಮಗೋ ಈ ತರಹದ ಕವನಗಳನ್ನು ಬರೆಯಲು ಕಸ್ತನಾವ್ ಏನೋ ತೋಚಿದ್ದು ಗೀಚುವವರು  ಅಸ್ಟೆ ...!
ನಿಮ್ಮಿಂದ ಮತ್ತಸ್ತು ಕವನಗಳನ್ನು  ನಿರೀಕ್ಷಿಸುವೆ.
>>>ನಿಮ್ಮ ಕವನಗಳನ್ನು (ಇನ್ನಿತರರ ಕವನಗಳನ್ನು ಫೋಟೋ ಶಾಪ್ನಲ್ಲಿ ಎಡಿಟ್ ಮಾಡಿ  ಅವುಗಳನ್ನು ಕೆಲ ಚಿತ್ರಗಳ ಜೊತೆ ಸೇರಿಸಿ) ಫೆಸ್ಬುಕ್ಕಲ್ಲಿ  ಕೆಲವರು ಹಾಕುತ್ತಿರುವುದು  ಇಲ್ಲಿ ಓದಿದೆ ನನಗೆ ನೆನಪಿರುವ ಹಾಗೆ ಫೆಸ್ಬುಕ್ಕಲ್ಲಿ ನಿಮ್ಮ ಯಾವುದೇ ಕವನಗಳನ್ನು ನಾ ನೋಡಿಲ್ಲ..
ಅದ್ಯಾಗ್ಗು ಒಳ್ಳೆಯದ್ದು- ಈ ತರಹದ  ಬರಹಗಳನ್ನು ಎಲ್ಲೆಡೆ ಪ್ರಚುರ ಪಡಿಸಬೇಕು -ಆದರೆ ಅದಕ್ಕೆ ಮೂಲ ಬರಹಗಾರರ  ಹೆಸರು ಹಾಕಿ ಕ್ರೆಡಿಟ್ ಕೊಡಬೇಕು ಇಲ್ಲವಾದರೆ  ಅದು ಕೃತಿ ಚೌರ್ಯ ಅಲ್ಲದೆ ಮತ್ತೇನು???
ಅದು ಬರೆದವರಿಗೂ ಬೇಸರ ಆಗುವುದು ಸಹಜ...
ಇದೆಲದರ ಬಗ್ಗೆ ನೀವ್ ಯೋಚಿಸಬೇಡಿ -ನಿಮ್ಮ ಬರಹ ಕೃಷಿ ಮುಂದುವರೆಯಲಿ.
ಶುಭವಾಗಲಿ..
\।/
Jagannatha R N ಸೋಮ, 02/04/2013 - 14:17

ವೆಂಕಟ್ ರವರೆ ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ತುಂಬಾ ಧನ್ಯವಾದಗಳು...ಸುವಿಸ್ತಾರವಾಗಿ ಬರೆದು ನಿಮ್ಮ ಅನಿಸಿಕೆಗಳನ್ನು ತಿಳಿಸಿದ್ದೀರಿ..

ಆತ್ಮೀಯವಾಗಿ,

ಜಗನ್ನಾಥ.ಆರ್.ಎನ್

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.