Skip to main content

ಚೀನಾಕ್ಕೆ ತನ್ನ ಕೆಲಸ ಔಟ್ ಸೋರ್ಸ್ ಮಾಡಿ ಬೆಕ್ಕಿನ ವಿಡಿಯೋ ನೋಡುತ್ತಿದ್ದ ಅಮೇರಿಕದ ಪ್ರೋಗ್ರಾಮರ್ !!

ಬರೆದಿದ್ದುJanuary 19, 2013
4ಅನಿಸಿಕೆಗಳು

ಚೀನಾಕ್ಕೆ ತನ್ನ ಕೆಲಸ ಔಟ್ ಸೋರ್ಸ್ ಮಾಡಿ ಬೆಕ್ಕಿನ ವಿಡಿಯೋ ನೋಡುತ್ತಿದ್ದ ಅಮೇರಿಕದ ಪ್ರೋಗ್ರಾಮರ್ !! ಅಮೇರಿಕದ ಒಂದು ಕಂಪನಿಯ ನೆಟವರ್ಕ್ ಸುರಕ್ಷತೆಯನ್ನು ನೋಡಿಕೊೞುವ ಒಬ್ಬ ವಿಪಿಎನ್ ನೆಟವರ್ಕ್ ಲಾಗ್ ಚೆಕ್ ಮಾಡುವಾಗ ಶೆನ್ಯಾಂಗ್, ಚೀನಾದಿಂದ ಯಾರೋ ಆ ಕಂಪನಿಯ ನೆಟವರ್ಕ್ ಗೆ ಲಾಗಿನ್ ಆಗಿದ್ದು ಕಂಡು ಬಂತು.

ಅದಕ್ಕೆ ಬಾಬ್ ಅನ್ನುವ ಅಮೇರಿಕದ 40 ವರ್ಷದ ಪ್ರೋಗ್ರಾಮರ್ (ಹೆಸರು ಬದಲಾಯಿಸಿದೆ) ಕಂಪ್ಯೂಟರ್ ಬಳಸಲಾಗಿದೆ. ಬಹುಶಃ ಯಾವುದೋ ಮಾಲವೇರ್ ಬಳಸಿ ಹ್ಯಾಕರ್ ಗಳು ಹೀಗೆ ಮಾಡುತ್ತಿರಬಹುದು ಎಂದು ಊಹಿಸಿದರು.

ಆ ಪ್ರೋಗ್ರಾಮರ್ ಹಲವು ವರ್ಷಗಳಿಂದ ಅತ್ಯುತ್ತಮ ಪ್ರೋಗ್ರಾಮರ್ ಬಹುಮಾನ ಪಡೆದುಕೊೞುತ್ತಿದ್ದ. ಆ ಕಟ್ಟಡದಲ್ಲೇ ಅತ್ಯುತ್ತಮ ಪ್ರೋಗ್ರಾಮರ್ ಎನ್ನುವ ಖ್ಯಾತಿಗೆ ಒಳಗಾಗಿದ್ದ.

ಸರಿ, ಆತನ ದಿನಚರಿಯನ್ನು ಗಮನಿಸಿದಾಗ ಅವರಿಗೆ ಆಶ್ಚರ್ಯ ಕಾದಿತ್ತು!

ಬೆಳಿಗ್ಗೆ ೯:೦೦ ರೆಡಿಟ್ಟ್ ಸರ್ಫ್ ಮಾಡುವದು, ಬೆಕ್ಕಿನ ವಿಡಿಯೋ ನೋಡುವದು

೧೧:೩೦ ಗಡದ್ದಾಗಿ ಊಟ

ಮಧ್ಯಾಹ್ನ ೧:೦೦ ಈಬೇ ಶಾಪಿಂಗ್ ವೆಬ್ ಸೈಟಲ್ಲಿ ಖರೀದಿ

೨:೦೦ ಫೇಸ್ ಬುಕ್ & ಲಿಂಕ್ಡ್ ಇನ್

೪:೩೦ ತಾನು ಕೆಲಸ ಮಾಡಿದ್ದೇನೆಂದು ಮ್ಯಾನೆಜ್ ಮೆಂಟ್ ಗೆ ಈಮೇಲ್

೫:೦೦ ಮನೆಗೆ ಹೋಗುವದು

ಅರೆರೆ ಬೆಳಿಗ್ಗೆಯಿಂದ ಆಟ ಆಡುತ್ತಿದ್ದ ಆತ ೪:೩೦ಗೆ ಸರಿಯಾಗಿ ಕೆಲಸ ಹೇಗೆ ಮುಗಿಸಿದ? ಆತನ ಕೆಲಸ ಅತ್ಯುತ್ತಮ ಗುಣಮಟ್ಟದ್ದಾಗಿತ್ತು ಕೂಡಾ. ಕೂಲಂಕಶವಾಗಿ ನೋಡಿದಾಗ ಆತ ತನ್ನ ಎಲ್ಲ ಕೆಲಸವನ್ನು ಚೀನಾದ ಡೆವೆಲಪರ್ ಬಳಿ ಮಾಡಿಸುತ್ತಿದ್ದ. ಆತನಿಗೆ ತನ್ನ ಸಂಬಳದ ೨೦% ನೀಡುತ್ತಿದ್ದ. ಹಲವು ವರ್ಷಗಳಿಂದ ಇದನ್ನು ನಡೆಸಿಕೊಂಡು ಬಂದಿದ್ದ. ಈ ಅಮೇರಿಕದ ಪ್ರೋಗ್ರಾಮರ್ ಅನ್ನು ಕೆಲಸದಿಂದ ಕಿತ್ತು ಹಾಕಲಾಯ್ತು. ಆತನ ವಿಚಾರಿಸಿದಾಗ ಆತ ಹೀಗೆ ಹಲವು ಕಂಪನಿಗಳಿಗೆ ಇದೇ ರೀತಿ ಮೋಸ ಮಾಡಿ ಅಲ್ಲಿಯೂ ಸಂಬಳ ಪಡೆಯುತ್ತಿದ್ದ ವಿಚಾರ ಬೆಳಕಿಗೆ ಬಂತು!! ಆದರೆ ಆತನ ಈ ವ್ಯವಹಾರ ಚೆನ್ನಾಗಿ ನಡೆಯುತ್ತಿತ್ತು. ಆ ಎಲ್ಲ ಕಂಪನಿಗಳ ಮೆಚ್ಚುಗೆ ಗಳಿಸಿದ್ದ!

ನೀವು ಏನಂತೀರಾ? ಆತ ಬುದ್ಧಿವಂತ ತಾನೇ?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಭಾನು, 01/20/2013 - 17:20

ಅವನು ಅತೀ ಬುದ್ಧಿವಂತ....!!
ಮೊದಲೇ ಚೀನಾದವರು ಹ್ಯಾಕ್ ಮಾಡುವುದರಲ್ಲಿ-ಅಮೆರಿಕಾಗೆ ಸೆಡ್ಡು ಹೊಡೆದು ತಲೆ ನೋವು ಆಗುರುವವರು-
ಇವನು ಹೋಗಿ ಹೋಗಿ ಆ ಚೀನದವರಿಗೆ ಔಟ್ಸೋರ್ಸ್ ಮಾಡಬೇಕ..//
ಅಮೇರಿಕದವರಿಗೆ ಜೀವವೇ ಬಾಯಿಗೆ ಬಂದ ಹಾಗಾಗಿರುತ್ತೆ..
ಏನೇನು ಕದ್ದರೋ ಎಂದು..!
ಈ ಮಾಹಿತಿ ವಿಷ್ಯ ಸುದ್ಧಿ ನನಗೆ ಗೊತ್ತಿರಲಿಲ್ಲ.
ತಿಳಿಸಿದ್ದಕ್ಕೆ ನನ್ನಿ

ಶುಭವಾಗಲಿ.

\|/

praveen.kulkarni ಗುರು, 01/24/2013 - 01:17

ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನ್ನ ಬರಹಕ್ಕೆ ತಮ್ಮ ಪ್ರತಿಕ್ರಿಯೆ ಪೂರಕವಾಗಿದೆ.ಎಲ್ಲಾ ಆದ ಮೇಲೆ ನಾವೆಲ್ಲಾ ಒಂದಾಗೊದಕ್ಕಿಂತ ನಮಗೆ ಎಲ್ಲೆಲ್ಲಿ ಈ ರೀತಿ ಘಟನೆಗಳು ಕಾಣಿಸುತ್ತವೆಯೋ ಅಲ್ಲೆಲ್ಲಾ ನಾವೆಲ್ಲಾ ಒಂದಾಗಿ ಆ ಘಟನೆಗಳು ಆಗದಂತೆ ತಡೆಯಬೇಕು.

ತುಂಬಾ ಮಜವಾದ ಘಟನೆ ಹಂಚಿಕೊಂದಿದಕ್ಕೆ ಧನ್ಯವಾದಗಳು ರಾಜೇಶ ಅವರೇ.

ರಾಜೇಶ ಹೆಗಡೆ ಭಾನು, 01/27/2013 - 07:33

ಪ್ರತಿಕ್ರಿಯೆಗೆ ಧನ್ಯವಾದಗಳು Smile

praveen.kulkarni ಭಾನು, 01/27/2013 - 13:13

ನನ್ನ ಪ್ರತಿಕ್ರಿಯೆಯಲ್ಲಿ ಮೊದಲ್ನೆ ಎರಡು ಸಾಲುಗಳನ್ನು ದಯವಿಟ್ಟು ತೆಗೆಯಿರಿ.ಅದು ಈ ಲೇಖನಕ್ಕೆ ಸಂಭಂದ ಪಟ್ಟಿಲ್ಲಾ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.