Skip to main content

ಹನಿಗಳು-2

ಇಂದ Jagannatha R N
ಬರೆದಿದ್ದುJanuary 12, 2013
noಅನಿಸಿಕೆ

ಪ್ರೀತಿ ಕಾರಣವಿಲ್ಲದೇ
ಹುಟ್ಟಿತು ಎಂದವಳು
ವಿದಾಯಕ್ಕೂ ನೀಡಲಿಲ್ಲ
ಕಾರಣ..
----------------
ಗೆಳತಿ
ನೆನ್ನೆಗಳ ನೆನಪು
ನಾಳೆಗಳ ಕನಸು
ಅದು ,
ನಿನ್ನ ಮನಸು...

---------------


ಬರಿಬೇಕು ಸಾಲು ಕವಿತೆ
ನಿನಗಾದರೂ..
ಇರಬೇಕು ನಿನ್ನಾ ಜೊತೆ
ಯಾವಾಗಲೂ...

--------------


ಬದಲಾಯ್ತು ಬದುಕ ದಾರಿ
ಅವಳಿಗಾಗಿ..
ನಾನಾಯ್ತು-ಅವಳಾಯ್ತು
ಸಾಕಿಷ್ಟು ಬದುಕಿಗಾಗಿ..

-----------------


ಏಕಾಂತದ ನಿಶ್ಚಲ..
ಸಾಂಗತ್ಯದ ಗೊಂದಲ..
ಏತಕೋ ತರಿಸಿವೆ ಬೇಸರ..
ಬೇಕಿದೆ ಬಿಡುಗಡೆ..
ಪದೇ-ಪದೇ ಕಾಡುತಿವೆ
ಅಡಿಗರ ಈ ಸಾಲುಗಳು
ಇರುವುದೆಲ್ಲವ ಬಿಟ್ಟು
ಇರದುದರೆಡೆಗೆ ತಡಿವುದೇ ಜೀವನ..
---------------------------
ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್


ಲೇಖಕರು

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.