Skip to main content

ಹೆಚ್ಚು ಪತ್ರಕರ್ತರಿದ್ದಷ್ಟು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಬಹುದು ಎನ್ನುವುದಾದರೆ ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದರಿಂದ ಜನಸಾಮಾನ್ಯರು ಹುಬ್ಬೇರಿಸುವಂತಾಗಿರುವುದಂತೂ ಸತ್ಯ. ಇದಕ್ಕೆ ಸಂಬಂಧಪಟ್ಟ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡಿರುವ ಹೇರಳವಾದ ಸದಸ್ಯತ್ವವೇ ಇದಕ್ಕೆ ಮೂಲ ಕಾರಣವೇ ಎಂಬ ಪ್ರಶ್ನೆಗಳು ಏಳುವುದು ಸಹಜವಾಗಿದೆ.

ಪ್ರತಿ ತಾಲ್ಲೂಕಿಗೆ ಇರಬೇಕಾದ ಪತ್ರಕರ್ತರು ರಾಜ್ಯ ಪತ್ರಿಕೆಗಳ ವರದಿಗಾರರನ್ನು ಹೊರತುಪಡಿಸಿ ಇಪ್ಪತ್ತಕ್ಕೂ ಹೆಚ್ಚು ಪತ್ರಕರ್ತರು ಒಂದೊಂದು ತಾಲ್ಲೂಕಾ ಕೇಂದ್ರಗಳಲ್ಲಿರುವುದು ಇದ್ಯಾವ ನ್ಯಾಯ ಎನ್ನಲಾಗುತ್ತಿದೆ. ಹೆಚ್ಚು ಪತ್ರಕರ್ತರಾಗಲು ವಿದ್ಯಾರ್ಹತೆಯ ಮಾನದಂಡಗಳು ಒಂದೆಡೆ ಇದ್ದರೆ ಮಾನದಂಡಗಳನ್ನೇ ಪರಿಗಣಿಸದೇ ಕನರ್ಾಟಕ ಯುನಿಯನ್ ಆಫ್ ವಕರ್ಿಂಗ್ ಜರ್ನಲಿಸ್ಟ್ ಸಂಘವು ಕೊಡುವ ಹೇರಳವಾದ ಗುರುತಿನ ಚೀಟಿ ಇದಕ್ಕೆ ಕಾರಣವೆನ್ನಲಾಗುತ್ತಿದೆ.

ಕೆಲವೊಂದು ಜಿಲ್ಲೆಗಳಲ್ಲಿ ಆರ್ಎನ್ಐ ಅನುಮತಿ ಪಡೆದಿರುವ ವಿವಿಧ ಭಾಷಾ ಪತ್ರಿಕೆಗಳು ನೂರಾರು ಸಂಖ್ಯೆಯಲ್ಲಿ ಕಂಡು ಬರುವಂತಿದ್ದರೂ ಚಾಲ್ತಿಯಲ್ಲಿರುವ ಸ್ಥಳೀಯ ಪತ್ರಿಕೆಗಳು ಬೆರಳೇಣಿಕೆಗಳಷ್ಟು ಮಾತ್ರ. ಒಂದೊಂದು ತಾಲೂಕಾ ಕೇಂದ್ರದಲ್ಲಿರುವ ಪತ್ರಕರ್ತರು ಪತ್ರಿಕೆಗಳಿಗಿಂತ ಹೆಚ್ಚು ಕಾಣುತ್ತಿರುವುದು ಇದ್ಯಾವ ಲೆಕ್ಕಾಚಾರವೆನ್ನಲಾಗುತ್ತಿದೆ. ವಿವಿಧ ಪಕ್ಷದ ರಾಜಕೀಯ ಮುಖಂಡರುಗಳು ಏರ್ಪಡಿಸುವ ಸಭೆ, ಸಮಾರಂಭ, ಪತ್ರಿಕಾಗೋಷ್ಠಿ, ಚುನಾವಣಾ ಸಂದರ್ಭಗಳಲ್ಲಿ ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಕಾಣಿಸಿಕೊಳ್ಳುತ್ತಾರೆಂದರೆ ಸೂಜಿಗದ ಸಂಗತಿಯಾಗಬಹುದು. ಪತ್ರಕರ್ತರ ಹುದ್ದೆಗೆ ಕಳಂಕವನ್ನು ತರುವ ಕೆಲವರು ಸಕರ್ಾರಿ ಕಚೇರಿಗಳಲ್ಲಿ ಹಫ್ತಾ ವಸೂಲಿ ದಂಧೆ ಕಾಯಕವನ್ನೇ ಮಾಡಿಕೊಂಡಂತಿದೆ.

ಆರ್ಎನ್ಐ ಅನುಮತಿ ರದ್ದಾದ ಪತ್ರಿಕೆಗಳು ಸಾರ್ವಜನಿಕ ವಲಯದಲ್ಲಿ ಬಹಿರಂಗವಾಗಿ ಪ್ರಕಟವಾಗುವ ಸಂಖ್ಯೆ ಒಂದೆಡೆ ಇದ್ದರೆ, ಆರ್ಎನ್ಐ ಅನುಮತಿ ಇದ್ದರೂ ಆಥರ್ಿಕ ಮುಗ್ಗಟ್ಟನ್ನು ಎದುರಿಸುತ್ತಿರುವ ಪತ್ರಿಕೆಗಳಿಗೆ ವಾರಸುದಾರರಿಲ್ಲದಂತಾಗಿದೆ. ಹಲವೆಡೆ ಪ್ರೆಸ್ಸ್ ಪದ ದುರ್ಬಳಕೆ ಮಾಡಿಕೊಳ್ಳುತ್ತಿರುವ ಆಟೋ, ಜೀಪ, ದ್ವಿಚಕ್ರ ವಾಹನಗಳಿಂದ ಹಿಡಿದು ಮುಂತಾದ ವಾಹನಗಳ ಮೇಲೆ ರಾರಾಜಿಸುತ್ತಿರುವ ಪ್ರೆಸ್ಸ್ ಪದಬಳಕೆ ಒಣ ಪ್ರತಿಷ್ಠೆಯಾಗಿದೆ. ಸಂಬಂಧಪಟ್ಟ ಪೊಲೀಸ್ ಇಲಾಖೆಯ ಮೂಲಕ ಅನಾವಶ್ಯಕ ಪ್ರೆಸ್ಸ್ ಬಳಕೆಗೆ ಕಡಿವಾಣ ಹಾಕಬೇಕಾದ್ದು ಅವಶ್ಯವಾಗಿದೆ.

ರದ್ದಾದ ಪತ್ರಿಕೆಗಳು ರಾಜ್ಯದಲ್ಲೆಡೆ ಪ್ರಕಟವಾಗುವುದನ್ನು ಗಮನ ಹರಿಸಿ ಸಂಬಂಧಿಸಿದ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು. ನಕಲಿ ಪತ್ರಕರ್ತರಿಂದ ಸಾಮಾಜಿಕ ಸ್ವಾಸ್ಥ್ಯ ಕದಡುತ್ತಿದೆ. ಪತ್ರಿಕೋದ್ಯಮಕ್ಕೆ ಕಪ್ಪು ಚುಕ್ಕೆಯಾಗುವ ಪತ್ರಕರ್ತರ ಕಡಿವಾಣ ಹಾಕಬೇಕಾದ್ದು ತೀರಾ ಅವಶ್ಯವೆಂಬ ಮಾತು ಬುದ್ಧಿ ಜೀವಿಗಳಲ್ಲಿ ಚಚರ್ೆಗೊಳಪಟ್ಟಿದೆ.

ಕೆಲವೆಡೆ ಹೆಸರಿಗೆ ಮಾತ್ರ ಪತ್ರಕರ್ತರೆನಿಸಿಕೊಳ್ಳಲು ಪತ್ರಿಕೆಗಳು ಹೆಚ್ಚಾದರೆ, ಇದಕ್ಕೆಲ್ಲ ಮೌನ ವಹಿಸಿರುವ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಮಾಧ್ಯಮ ಅಕಾಡೆಮಿಯವರು ಪ್ರತ್ಯೇಕ ಕಾನೂನು ರೂಪಿಸಲು ಮುಂದಾಗಬೇಕು. ಆಯಾ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸದಸ್ಯತ್ವ ಕುರಿತು ಪಾರದರ್ಶಕತೆ ಮೆರೆಯಬೇಕು. ಎಲ್ಲೆಡೆ ನಡೆಯುತ್ತಿರುವ ಅನ್ಯಾಯ ಸರಿಪಡಿಸಬೇಕು. ದಿನನಿತ್ಯ ಪ್ರಕಟವಾಗದೇ ಇರುವ ಪತ್ರಿಕೆಗಳ ಪತ್ರಕರ್ತರಿಗೆ ಸಂಘದಿಂದ ಸದಸ್ಯತ್ವ ನೀಡುವ ಬಗ್ಗೆ ತಡೆ ಹಿಡಿಸದರೆ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ನಿಯಂತ್ರಿಸಬಹುದು.

ಪತ್ರಕರ್ತರಾದವರು ಕನಿಷ್ಠ ವರದಿಗಳನ್ನು ಬರೆಯಬೇಕು, ವರದಿಗಳೇ ಸಿಗದಿದ್ದರೆ ಸುತ್ತಲಿನ ಪ್ರದೇಶದಲ್ಲಿರುವ ಮೂಲ ಸಮಸ್ಯೆಗಳ ಕುರಿತಾದರೂ ಬರೆಯಬೇಕೆಂಬ ನಿಯಮ ಕೆಲವು ಪತ್ರಿಕೆಗಳದ್ದಾಗಿದ್ದರೂ ಅದಕ್ಕೆ ಬದ್ಧರಾಗಿರದ ಪತ್ರಕರ್ತರೇ ಹಲವೆಡೆ ಹೇರಳವಾಗಿ ಚಿಲ್ಲರೆ ರಾಜಕೀಯ ಮಾಡಿಕೊಂಡು ಪತ್ರಿಕೋದ್ಯಮ ಹೆಸರಿನಲ್ಲಿ ಅನಾಚಾರಗಳನ್ನು ನಡೆಸುತ್ತಿದ್ದಾರೆ.ಯಾವುದೇ ತಾಲ್ಲೂಕಿಗೆ ಹೆಚ್ಚೆಂದರೆ ಹತ್ತು ಜನ ಪತ್ರಕರ್ತರಿರಬುದು. ಆದರೆ ಕೆಲವೆಡೆ ಪತ್ರಕರ್ತರ ಸಂಖ್ಯೆ 25ಕ್ಕೆ ಮೀರಿರುತ್ತದೆ. ರಾಜ್ಯ ಪತ್ರಿಕೆಗಳ ವರದಿಗಾರರನ್ನು ಬಿಟ್ಟರೆ, ಉಳಿದಂತೆ ಬೇರೆ ಭಾಷಾ ಪತ್ರಕರ್ತರು ಸೇರಿ, ಸ್ಥಳೀಯ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವವರಲ್ಲಿ 10ರಿಂದ 12 ಜನರಿರಬಹುದು.

ನಿಯತ್ಕಾಲಿಕ, ಪಾಕ್ಷಿಕ, ಮಾಸಿಕ ಪತ್ರಿಕೆಗಳು, ಎಲೆಕ್ಟ್ರಾನಿಕ್ ಮೀಡಿಯಾ ವರದಿಗಾರರನ್ನು ಹೊರತುಪಡಿಸಿದರೆ ತಾಲ್ಲೂಕು ಕೇಂದ್ರಗಳಲ್ಲಿ 25ಕ್ಕೂ ಹೆಚ್ಚು ಇದ್ದರೆ ಯಾರೇ ಆಗಲಿ ಅನುಮಾನಿಸದೇ ಇರಲಾರರು. ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಎಲ್ಲೆಡೆ ಕಂಡು ಬರುತ್ತಾರೆ. ಪ್ರಸಾರವಾಗುವ ಪತ್ರಕರ್ತರಿದ್ದರೆ ನಿಜ. ಪ್ರಕಟವಾಗದೇ ಇರುವ ಪತ್ರಕರ್ತರಿದ್ದರೆ ಇದಕ್ಕೆಲ್ಲ ಯಾರು ಹೊಣೆ ಇವರನ್ನು ನಿಯಂತ್ರಿಸಲು ಸಂಸ್ಥೆಗಳೇ ಇಲ್ಲವಾಗಿದೆ. ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಈ ಬಗ್ಗೆ ಗಂಭೀರ ಚಿಂತನೆ ನಡೆಸಿ, ಇಂತಹ ಪರಿಸ್ಥಿತಿ ರಾಜ್ಯದ ಎಲ್ಲೆಡೆ ಇರುವುದನ್ನು ಪತ್ತೆ ಹಚ್ಚಿ ಕೂಡಲೇ ಕ್ರಮ ಕೈಗೊಳ್ಳಬೇಕು. ಮೂಲ ಪತ್ರಕರ್ತರಿಗೆ ತೊಂದರೆಯಾಗದಂಥ ನಿಟ್ಟಿನಲ್ಲಿ ಸದಸ್ಯತ್ವ ನೀಡಿ, ಉಳಿದವರ ಸದಸ್ಯತ್ವ ರದ್ದು ಪಡಿಸಲು ನಿರ್ಧರಿಸಿದರೆ ಸೂಕ್ತವಾಗುತ್ತದೆ.

ಯಾವುದೇ ರಾಜಕೀಯ ಸಭೆ, ಸಮಾರಂಭ, ಪತ್ರಿಕಾಗೋಷ್ಠಿಗಳಿಗೆ ಹೋಗಬೇಕಾದರೆ ಅಲ್ಲಿ ಪತ್ರಿಕೆಗಳೇ ಇಲ್ಲದ ಪತ್ರಕರ್ತರು ಹಾಜರಿರುವುದನ್ನು ಹೆಚ್ಚಾಗಿದೆ. ಮೂಲ ಪತ್ರಕರ್ತರ್ಯಾರು ಎಂಬುದು ಜನನಾಯಕರು ಗೊಂದಲದಲ್ಲಿ ಸಿಲುಕಿ ನಿಮ್ಮೊಳಗೆ ನಿಜವಾದ ಪತ್ರಕರ್ತರು ಯಾರು ಎಂಬಂಥ ಪ್ರಶ್ನೆಗಳು ಎದುರಿಸುವಂತಾಗಿದೆ. ಇದರಿಂದ ಅಧೀಕೃತವಾಗಿ ಪ್ರಕಟವಾಗುವ ಪತ್ರಿಕೆಗಳ ಪತ್ರಕರ್ತರ ಸಮಸ್ಯೆಗೆ ಕೇಳುವವರೇ ಇಲ್ಲದಂತಾಗಿದೆ. 

ವಿವಿಧ ಜಿಲ್ಲೆಗಳಿಂದ ಪ್ರಕಟವಾಗುವ ಪತ್ರಿಕೆಗಳು ಆರ್ಎನ್ಐ ಅನುಮತಿ ರದ್ದಾದ ದಿನ ಪತ್ರಿಕೆಗಳು ಸಕರ್ಾರಿ ಟೆಂಡರ್, ಜಾಹಿರಾತು ವೇಳೆ ಮಾತ್ರ ಪ್ರಕಟಗೊಳ್ಳುತ್ತವೆ. ಇಂತಹ ಪತ್ರಿಕೆಗಳತ್ತ ಹದ್ದಿನ ಕಣ್ಣಿಟ್ಟು, ಸಂಬಂಧಪಟ್ಟ ಇಲಾಖೆ ಜಿಲ್ಲಾಧಿಕಾರಿಗಳು ಅನಧಿಕೃತವಾಗಿ ಪ್ರಕಟವಾಗುವ ಆರ್ಎನ್ಐ ಅನುಮತಿ ರದ್ದಾದ ದಿನ ಪತ್ರಿಕೆಗಳ ಸರವರಾಜು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ಎಂಬುದು ಹಾಸ್ಯಾಸ್ಪದಕ್ಕೆ ಗುರಿಯಾಗುವುದರಲ್ಲಿ ಅಚ್ಚರಿಯಿಲ್ಲ.

ಕನರ್ಾಟಕಾದ್ಯಂತ ಹಲವು ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಪತ್ರಿಕೆಗಳು ಆರ್ಎನ್ಐ ಅನುಮತಿ ಪಡೆದಿರುವದನ್ನು ಕಂಡು ಬರುವಂತಿದ್ದರೂ, ಕೆಲವೆಡೆ ಯಾವುದೇ ದಿನ ಪತ್ರಿಕೆ ಪ್ರಕಟಗೊಳ್ಳುವುದಿಲ್ಲ. ಆದರೂ ಕೆಲವರು ಸ್ಥಳೀಯ ಪತ್ರಿಕೆಯ ಪತ್ರಕರ್ತರೆಂದು ಹೇಳಿಕೊಂಡು ಪ್ರತಿವರ್ಷ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸದಸ್ಯತ್ವ ನವೀಕರಣ ಮಾಡುಸುತ್ತಿರುವುದು ಜಿಲ್ಲಾ ಪ್ರತಿನಿಧಿಗಳು ಗಮನಿಸಬೇಕಾದ ಸಂಗತಿ.

ಪತ್ರಕರ್ತರೆಂಬ ಸೊಗಿನಲ್ಲಿ ದಿಕ್ಕು ತಪ್ಪಿಸುವ ಕಾರ್ಯ ನಡೆಸುತ್ತಿರುವ ಪ್ರಕಟವಾಗದೇ ಇರುವ ಪತ್ರಿಕೆಯ ಪತ್ರಕರ್ತರು ಹೆಚ್ಚಾಗಿದ್ದಾರೆ. ಜನನಾಯಕರಲ್ಲಿಯೂ ಸಹ ತಾನು ಪತ್ರಕನೆಂಬ ತಪ್ಪು ಸಂದೇಶಗಳನ್ನು ನೀಡಿ ಸ್ವಾರ್ಥಕ್ಕಾಗಿ ಮಾಧ್ಯಮದ ದಿಕ್ಕು ತಪ್ಪಿಸುವವರ ಅಜರ್ಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಮೂಲ ಪತ್ರಕರ್ತರನೇಕರು ಆಗ್ರಹಿಸುತ್ತಾರೆ.

 

     ಇದರಿಂದಾಗಿ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಸದಸ್ಯತ್ವದಿಂದ ಪತ್ರಕರ್ತರೆಂಬ ಬಿಗುಮಾನ ಪ್ರದಶರ್ಿಸುತಿದ್ದಾರೆ. ದುರಾಡಳಿತಕ್ಕಾಗಿ ಮಾಧ್ಯಮ ವಲಯ ದುರ್ಬಳಕೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಅಂಥವರ ಸದಸ್ಯತ್ವ ಕೂಡಲೇ ರದ್ದಾಗುವಂತೆ ಕ್ರಮ ಜರುಗಿಸಬೇಕು. ಎಲ್ಲೆಡೆ ಪ್ರೆಸ್ಸ್ ಪದ ದುರ್ಬಳಕೆ ವಾಹನಗಳ ಮೇಲೆ ರಾರಾಜಿಸುತ್ತಿರುವುದನ್ನು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಬೇಕಾಗಿದೆ.

     ತಾಲೂಕಾ ಸಕರ್ಾರಿ ಕಚೇರಿಗಳಲ್ಲಿ ಪತ್ರಕರ್ತರೆಂಬ ಮುಖವಾಡ ಹಾಕಿ, ಅಧಿಕಾರಿಗಳನ್ನು ಬ್ಲಾಕ್ಮೇಲ್ ದಂಧೆ ಆರಂಭಿಸಿರುವ ಕೆಲವರು ಮಾಧ್ಯಮ ಲೋಕಕ್ಕೆ ಕಪ್ಪು ಚುಕ್ಕೆಗಳಾಗುತಿದ್ದಾರೆ. ಇಂತಹ ಅವ್ಯವಹಾರದಲ್ಲಿ ತೊಡಗಿರುವ ಪತ್ರಕರ್ತರನ್ನು ಜಿಲ್ಲಾ ಕ.ಕಾ.ಪತ್ರಕರ್ತರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಗಮನ ಹರಿಸಬೇಕು.

 

     ತಪ್ಪಿತಸ್ಥರ ಅಜರ್ಿಗಳನ್ನು ಕುಲಂಕೂಷವಾಗಿ ಪರಿಶೀಲಿಸಿ ಪತ್ರಕರ್ತರಲ್ಲದವರನ್ನು, ಪತ್ರಿಕೆಗಳೇ ಇಲ್ಲದ ಪತ್ರಕರ್ತರ ಅಜರ್ಿಗಳನ್ನು ತಿರಸ್ಕರಿಸಿ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ಮೂರ್ನಾಲ್ಕು ವರ್ಷಗಳಿಂದ ರಾಜ್ಯ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ಸಿಗದೇ ಪರದಾಡುವಂತಾಗಿದೆ. ಪತ್ರಕರ್ತರಲ್ಲದವರಿಗೆ ಸದಸ್ಯತ್ವ ನೀಡುತ್ತಿರುವುದು ಅನುಭವ ವಿದ್ಯಾರ್ಹತೆ, ದಿನಪತ್ರಿಕೆಗಳ ಪ್ರಕಟವಾಗುವ ಮತ್ತು ಪ್ರಸಾರ ಸಂಖ್ಯೆ ಪರಿಗಣಿಸದೇ ಇರುವುದು ಕೂಡ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗಿದೆ. ಸದಸ್ಯತ್ವ ನವೀಕರಣದ ಸಂದರ್ಭದಲ್ಲಿ ಆಯಾ ಜಿಲ್ಲಾ ಕನರ್ಾಟಕ ಕಾರ್ಯನಿರತ ಪತ್ರಕರ್ತರ ಸಂಘ ಈ ಬಗ್ಗೆ ಗಂಭೀರ ಚಿಂತನೆ ನಡೆಸುವುದೇ ಎಂಬುದನ್ನು ಕಾದು ನೋಡಬೇಕಾಗಿದೆ.

ವೀರಣ್ಣ ಮಂಠಾಳಕರ್

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

praveen.kulkarni ಗುರು, 01/10/2013 - 00:41

ವೀರಣ್ಣ ಅವರೇ,

ದಯವಿಟ್ಟು  ಒಮ್ಮೆ ಪರಿಶೀಲಿಸಿ,ನೀವು ಬರೆದದ್ದು ಓದಲಾಗುತ್ತಿಲ್ಲ ,ಮೇಲಾಧಿಕಾರಿಗಳ ಗಮನಕ್ಕೆ ತನ್ನಿ 
veeranna manthalkar ಶುಕ್ರ, 01/11/2013 - 13:43

ಪ್ರವೀಣ ಕುಲಕಣಿ೯ ಅವರೆ,

ಈ ಮೇಲ್ಕಂಡ ಲೇಖನ ನುಡಿಯಲ್ಲಿ ಟೈಪ್ ಮಾಡಿರುವುದಾಗಿದೆ. ಮೇಲಧಿಕಾರಿಗಳು ಇದನ್ನು ಓದಲು ಬರುವಂತೆ ಕನ್ವಟ೯ ಮಾಡಿಕೊಂಡರೆ ಉತ್ತಮವೆನಿಸುತ್ತದೆ. ಅದಕ್ಕಾಗಿ ಅವರಲ್ಲಿ ಮನವಿಸುವೆ.

SRINATHSBHOOMI ಶನಿ, 03/16/2013 - 10:06

ಅನಿಸಿಕೆಗಳೇ ಅಲ್ಲದೆ, ಪರಿಹರಿಸುವ ಸೂಚನೆಗಳಿಗಾಗಿ ಕಾಯುತ್ತಿದ್ದೇನೆ ಗೆಳೆಯರೇ

  • 918 views