Skip to main content

ದಿವ್ಯ ದೇಗುಲಗಳ ಮೆರವಣಿಗೆಃ ಶಾಲಾ ವಾಷಿ೯ಕೋತ್ಸವ-ಸ್ನೇಹ ಸಮ್ಮೇಳನಗಳೆಂದರೆ ಬರೀ ವೇದಿಕೆಯಲ್ಲ....

ಬರೆದಿದ್ದುJanuary 8, 2013
noಅನಿಸಿಕೆ

ಶಾಲಾ ವಾಷಿ೯ಕೋತ್ಸವ, ಶಾಲಾ ಸ್ನೇಹ ಸಮ್ಮೇಳನಗಳೆಂದರೆ ಕೇವಲ ಅಚ್ಚುಕಟ್ಟಾದ ವೇದಿಕೆ ಅಲ್ಲ. ಆ ಒಂದು ಸಂಸ್ಥೆಯು ನಡೆದುಕೊಂಡು ಬರುವ ದಾರಿಯಲ್ಲಿ ಕಲ್ಲುಮುಳ್ಳುಗಳನ್ನು ದಾಟಿ, ಹೂ ಹಾಸಿಗೆಯ ಮಾಗ೯ ಸೂಚಿ ಹುಡುಕುತ್ತಾ ಸಾಗುವುದು. ಸುಗಮವಾದ ದಾರಿಯ ಶೋಧ. ಸುಗಮವಾದ ಹಾದಿಯಲ್ಲಿ ಹಲವರನ್ನು ಕೊಂಡೊಯ್ಯುವ ಸಂಕಲ್ಪವನ್ನು ಮಾಡಿರುತ್ತದೆ. ವ್ಯವಸ್ಥಿತ ಮಾಗ೯ದಶ೯ನದಲ್ಲಿ ಮಕ್ಕಳ ಸವ೯ತೋಮುಖ ಬೆಳವಣಿಗೆಗೆ ಉತ್ತೇಜನ ನೀಡುವ ಕಲ್ಪವೃಕ್ಷ ಶಾಲೆಗಳಿರುತ್ತವೆ.

ಜನಸಾಮಾನ್ಯರ ಬದುಕಿನ ಮಧ್ಯೆ ಬಂದು ಹೋಗುವ ದಿವ್ಯ ದೇಗುಲದ ಮೆರವಣಿಗೆ ಶಾಲಾ ವಾಷಿಕೋತ್ಸವ ಹಾಗೂ ಸ್ನೇಹ ಸಮ್ಮೇಳನದ್ದಾಗಿರುತ್ತದೆ. ಈ ಮೂಲಕ ಉತ್ತಮ ಸಂದೇಶಗಳನ್ನು ತಲುಪಿಸುವುದ್ದೇ ಅದರ ಧ್ಯೇಯವಾಗಿರುತ್ತದೆ. ಶಾಲೆಯಲ್ಲಿ ಕಲಿತ ಮಕ್ಕಳ ಪ್ರತಿಭೆಯನ್ನು ಗುರುತಿಸುವುದು ಮತ್ತು ಅವರಲ್ಲಿರುವ ಆಸಕ್ತಿ ವೇದಿಕೆಗೆ ತರುವುದೇ ಕಾಯ೯ಕ್ರಮಗಳ ಹಿಂದಿರುವ ಉದ್ದೇಶ ಕೂಡ. ಇಂದಿನ ವಾಸ್ತವಿಕ ಸ್ಥಿತಿಯನ್ನು ನೋಡಿದಾಗ ಎಲ್ಲೆಡೆ ಶೈಕ್ಷಣಿಕ ಗುಣಮಟ್ಟ ಕುಸಿದಿದೆ ಎಂಬ ಆರೋಪಗಳು ಕೇಳಿ ಬರುವ ಹಿನ್ನೆಲೆಯಲ್ಲೂ ಕೂಡ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಉತ್ತಮವಾದ ಬೋಧನೆಗಳನ್ನು ನೀಡುತ್ತಾ, ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರ ಹಾಕುವಲ್ಲಿ ಸದಾ ಪ್ರಯತ್ನಿಸುವ ಮುಂಚೂಣಿಯಲ್ಲಿವೆ. ಇದಕ್ಕೆ ಸಾಕ್ಷಿಯಾಗಿ ಸಾಂಸ್ಕೃತಿಕವಾಗಿ ಪ್ರತಿಬಿಂಬಿಸುವ ಎಲ್ಲೆಡೆ ನಡೆಯುವ ಸಮಾರಂಭಗಳೇ ಸಾಕ್ಷೀಕರಿಸುತ್ತವೆ ಎಂದರೆ ತಪ್ಪಾಗಲಿಕ್ಕಿಲ್ಲ.

ಅದೇಷ್ಟೋ ಕಾನ್ವೆಂಟ್ ಸ್ಕೂಲ್ ಗಳು, ಪ್ರಾಥಮಿಕ ಹಂತದ ಶಾಲೆಗಳಲ್ಲಿ ಇರುವ ಮಕ್ಕಳಿಗೆ ಶಿಕ್ಷಣವನ್ನು ನೀಡುವುದೇ ದುಸ್ಥರವೆನ್ನುವ ಕಾಲದಲ್ಲಿಯೂ ಸಹ ಮಕ್ಕಳ ಅನೇಕ ತುಂಟಾಟಗಳ ಮಧ್ಯೆ ತುಂಬಾ ಸಹನೆಯಿಂದ ಶಿಕ್ಷಕರು ಪಾಠವನ್ನು ಮಾಡಬೇಕಾಗುತ್ತದೆ. ಶಾಲಾ ಶಿಕ್ಷಕರು ಮಕ್ಕಳಿಗೆ ಪಾಠಗಳನ್ನು ಮಾಡುವಾಗಿನ ಪ್ರಯತ್ನ ಇದೆಯಲ್ಲ, ಅದು ನಿಜಕ್ಕೂ ಶ್ಲಾಘನೀಯ. ಬದುಕಿನ ಗಟ್ಟಿ ತಳಪಾಯವನ್ನು ಪ್ರಾಥಮಿಕ ಹಂತದಲ್ಲೇ ಸಿಗಲಿಲ್ಲವೆಂದರೆ ಮುಂದಿನ ಶಿಕ್ಷಣ ಅದೇಷ್ಟೋ ಅಂಧಕಾರದಲ್ಲಿ ಮುಳುಗಿ ಹೋಗಿರುತ್ತದೆ. ಬದುಕಿನ ಅಂಧಕಾರವನ್ನು ಅಳಿಸಿ ಹಾಕಲು ಮತ್ತು ಅಸಾಧ್ಯದ ಕೆಲಸವನ್ನು ಪ್ರೈಮರಿ ಸ್ಕೂಲ್ ಗಳೆಂಬ ಶಾಲೆಗಳಿಂದ ಮಾತ್ರ ಉತ್ತಮ ಶಿಕ್ಷಣ ಪ್ರಾಪ್ತವಾಗಲು ಸಾಧ್ಯ ಎಂಬುದು ನೆನಪಿಡಬೇಕು.

ಮಕ್ಕಳ ಸವ೯ತೋಮುಖ ಬೆಳವಣಿಗೆಯ ಮನ್ನಾಲೋಚನೆ ಇಟ್ಟುಕೊಂಡು ನೋಡಿದಾಗ ಶಿಕ್ಷಕರು ಎಳೆಯ ಮನಸ್ಸುಗಳಿಗೆ ಪಾಠ ಹೇಳುವುದು ಕೂಡ ಒಂದು ಅದ್ಭುತ ಕಲೆಯಾಗಿ ಉಳಿಯುತ್ತದೆ.  ಮಕ್ಕಳಲ್ಲಿರುವ ವಿಶೇಷವಾದ ಪ್ರತಿಭೆಯನ್ನು ಗುರುತಿಸುವ ಕೆಲಸಗಳು ಹೆಚ್ಚಾಗಬೇಕು. ಮಕ್ಕಳಲ್ಲಿರುವ ಪ್ರತಿಭೆ ಬೆಳಕಿಗೆ ತರಲೆತ್ನಿಸಬೇಕಾದ್ದು ಅವಶ್ಯವಾಗಿದೆ. ಇಂದಿನ ಮಕ್ಕಳು ಮುಂದಿನ ನಾಗರಿಕರಾಗಿ ಅವರ ಸಾಧನೆಯ ಬದುಕಿನುದ್ದಕ್ಕೂ ಮೈಲಿಗಲ್ಲಾಗಿ ಉಳಿಯುವ ಶಾಲೆಗಳು ಪ್ರಾಥಮಿಕ ಶಾಲೆಗಳಾಗಿರುತ್ತವೆ. ಆ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೆಲ್ಲಾ ಒಂದು ರೀತಿಯ ಶಿಲ್ಪಕಾರರಾಗಿ ನಮ್ಮೆಲ್ಲರ ಬದುಕನ್ನು ರೂಪಿಸಿರುತ್ತಾರೆ.

ಮಕ್ಕಳ ವಿದ್ಯಾಭ್ಯಾಸಕ್ಕೆ ಬರೀ ಶಾಲೆಗಳನ್ನಷ್ಟೇ ಹೊಣೆಗಾರರನ್ನಾಗಿ ಮಾಡದೇ, ಮಕ್ಕಳ ವ್ಯಕ್ತಿತ್ವ ವಿಕಾಸದ ಬೆಳವಣಿಗೆಯಲ್ಲಿ ಪಾಲಕ, ಪೋಷಕರ ಪಾತ್ರವೂ ಅತ್ಯಮೂಲ್ಯವಾಗಿರುತ್ತದೆ. ನಮ್ಮ ಮಕ್ಕಳನ್ನು ಶಾಲೆಯಲ್ಲಿ ಏನು ಕಲಿಸಿದ್ದಾರೆ ಎನ್ನುವುದಕ್ಕಿಂತ ನಮ್ಮ ಕಂದಮ್ಮಗಳು ಏನು ಹೊಸದ್ದನ್ನು ಕಲಿತರು ಮತ್ತು ಎಂತಹ ವಿಚಾರಗಳು ಅವರ ತಲೆಯಲ್ಲಿ ತುಂಬಿಕೊಂಡಿವೆ...? ಅವರಿಗಾಗಿ ಇನ್ನೂ ಯಾವ ಕೊರತೆ ಇದೆ ಎಬುದನ್ನು ಮೊದಲ ಗುರುವಾಗಿ ತಂದೆ-ತಾಯಿ ಗುರುತಿಸಬೇಕಾಗುತ್ತದೆ. ಆ ನಂತರದಲ್ಲಿ ವಿದ್ಯಾ ಗುರುಗಳು ಕಲಿಸಿದ ಪಾಠವನ್ನು ತದೇಕ ಚಿತ್ತದಿಂದ ಮಕ್ಕಳು ಅಭ್ಯಾಸ ಮಾಡುತಿದ್ದಾರೋ ಇಲ್ಲ ಎಂಬುದು ಮೇಲಿಂದ ಮೇಲೆ ಪರಿಶೀಲನೆಗೊಳ್ಳಬೇಕು. ನಮ್ಮ ಮಕ್ಕಳು ನಮ್ಮಂತಾಗದೇ, ಅವರಲ್ಲಿ ವಿಶೇಷ ಪ್ರತಿಭೆಯನ್ನು ಕಾಣುವ ಕಾತುರತೆ ನಮ್ಮಲ್ಲಿರಬೇಕು. ಪ್ರತಿಭಾ ಪಾಂಡಿತ್ಯವನ್ನು ಪತ್ತೆ ಹಚ್ಚುವ ಕಾಯ೯ ನಡೆಯಬೇಕು. ಅವರವರ ಪ್ರತಿಭೆಗೆ ತಕ್ಕಂತೆ ಪ್ರೋತ್ಸಾಹಿಸುವ ಆಲೋಚನೆ ನಮ್ಮದಾಗಬೇಕು..

ಪಠ್ಯವನ್ನಲ್ಲದೇ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವವರನ್ನು ಪ್ರೋತ್ಸಾಹಿಸಬೇಕಾದ್ದು ಎಲ್ಲರ ಕತ೯ವ್ಯವಾಗಿದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಕ್ಷೇತ್ರದಲ್ಲಿ ಸಾಧಿಸುವ ಸಂಕಲ್ಪಕ್ಕೆ ಮುನ್ನುಡಿ ಬರೆದುಕೊಂಡಿರುತ್ತಾರೆ. ಮಾನವ ಜನ್ಮ ಅತಿ ಶ್ರೇಷ್ಠವಾಗಿರುವುದನ್ನು ನಾವು ಬದುಕಿರುವ ಮಧ್ಯದಲ್ಲಿಯೇ ಮನಗಾಣಬೇಕು. ವಿಭಿನ್ನವಾದುದ್ದನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡುವ ಚಿಂತಕರಾಗಬೇಕು. ಕೇವಲ ಹುಟ್ಟು ಸಾವನ್ನು ಕಂಡು ಮರೆಯಾಗಿ ಹೋಗುವುದಕ್ಕಿಂತ ಆ ಹುಟ್ಟು ಸಾವಿನ ಮಧ್ಯೆ ನಾವೇನು ಮಾಡಿದ್ದೇವು...! ಈ ಸಮಾಜಕ್ಕಾಗಿ ಏನು ಉಳಿಸಿ ಹೋಗುತಿದ್ದೇವೆ ಎಂಬ ವಿಚಾರಗಳು ಇದ್ದರೆ ಬದುಕು ಸಾಥ೯ಕವಾಗುತ್ತದೆ.

ಸದ್ಗುಣದ ವಿಚಾರಗಳು ಸಾಧನೆಗೆ ಹಲವು ಮಾಗ೯ಗಳನ್ನು ತೋರುವಂತೆ, ದುಗು೯ಣದ ವಿಚಾರಗಳಿದ್ದರೆ ಪಾತಾಳಕ್ಕೆ ನಮ್ಮನ್ನು ದೂಡುವುದರೊಂದಿಗೆ ನಾವು ಹುಟ್ಟಿದ್ದೇವು. ಬದುಕಿದ್ದೇವೆಂಬ ಯಾವುದೇ ಸಾಕ್ಷಿಗಳು ಬಿಟ್ಟು ಹೋಗುವುದಿಲ್ಲ. ನಾವು ಈ ಭೂಮಿಯ ಮೇಲೆ ಹುಟ್ಟಿ, ಬಾಳಿ ಬದುಕಿದ್ದೇವೆ ಎಂದು ಸಮಾಜ ಹೇಳುವಂಥ ಕೆಲಸ ಮಾಡಬೇಕು. ಕೇವಲ ಹೊಟ್ಟೆ, ಬಟ್ಟೆ, ಸಂಸಾರವೇ ಜೀವನವಾಗುವುದಿಲ್ಲ. ಅದಕ್ಕೆ ಹೊರತಾಗಿಯೂ ಅದ್ಭುತವಾದ ಜೀವನ ಕಾಣುವಂತಾದಾಗ ಮಾತ್ರ ಹುಟ್ಟಿ ಬದುಕಿರುವುಕ್ಕೂ ಸಾಥ೯ಕವಾಗುತ್ತದೆ.

ಆ ಸಾಥ೯ಕತೆಯನ್ನು ಸದುಪಯೋಗವಾಗಲು ನಮ್ಮಲ್ಲಿರುವ ಪ್ರತಿಭೆಯನ್ನು ವೇದಿಕೆಗಳ ಮೂಲಕ ಹೊರ ಹಾಕಬೇಕು. ಇತರರಲ್ಲಿರುವ ವಿಶೇಷತೆಯ ಗುಣಗಳು ಅನುಸರಿಸುವುದರೊಂದಿಗೆ, ಸ್ವಂತಿಕೆಯನ್ನು ಬೆಳೆಸಿಕೊಂಡಿರುವ ಮಕ್ಕಳಲ್ಲಿರುವ ಕಲೆಗಳಿಗೆ ಪ್ರೋತ್ಸಾಹಿಸಬೇಕು. ಚಿಗುರುವ ಎಲೆಗಳಿಗೆ ನೀರೆರೆಯುವ ಕಾಯ೯ ಮಾಡಬೇಕೆ ಹೊರತು ಚಿವುಟುವ ಕೆಲಸ ಮಾಡದೇ, ಶಿಕ್ಷಣ ಸಂಸ್ಥೆಗಳು ಮತ್ತು ಶಾಲಾ ಶಿಕ್ಷಕರು ಆ ಜವಾಬ್ದಾರಿಯಲ್ಲಿ ನಿರತರಾಗಿರುತ್ತಾರೆ. ಎಲ್ಲೆಡೆ ಹೆಚ್ಚು ಹೆಚ್ಚು ಸಾಂಸ್ಕೃತಿಕ ಸಮಾರಂಭ ಮತ್ತು ಮಕ್ಕಳ ಕಲಾ ಪ್ರದಶ೯ನ ಚಟುವಟಿಕೆಗಳು ನಡೆಸಲು ಸಕಾ೯ರಿ, ಅರೆ ಸಕಾ೯ರಿ ಸಂಘ-ಸಂಸ್ಥೆಗಳು ಮುಂದಾಗಬೇಕು. ಪ್ರತಿಭೆಗೆ ಸಾಕ್ಷಿಯಾಗಿ ಸಾಧನೆಯ ಮೆಟ್ಟಿಲುಗಳೇ ಕಲಾತ್ಮಕವಾದ ಬದುಕಾಗಿ ರೂಪುಗೊಳ್ಳಬೇಕು. ಅಂದಾಗ ಮಾತ್ರ ನವ ಸಮಾಜ ನಿಮಾ೯ಣದ ಕನಸು ನನಸಾಗಿಸಲು ಇನ್ನಷ್ಟು ಪ್ರಯತ್ನಿಸಬಹುದು.

ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಎಂಬುದಿರುತ್ತದೆ. ಆ ಅಭಿವ್ಯಕ್ತಿ ಸ್ವಾತಂತ್ರವನ್ನು ಕಸಿದುಕೊಳ್ಳದೇ ಆಸಕ್ತಿದಾಯಕ ಉತ್ತಮವಾದ ಬೆಳವಣಿಗೆಗೆ ಸಹಕರಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯವೆಂದಾಕ್ಷಣ ಸ್ವೇಚ್ಛಾಚಾರದ ಬದುಕಲ್ಲ. ಅಥ೯ಪೂಣ೯ವಾಗಿ ಉಪಯೋಗಿಸಿಕೊಳ್ಳುವ ಒಂದು ಮಾಧ್ಯಮ ಅದು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಬಲಿಯಾಗದಂತೆ ಕಟ್ಟೆಚ್ಚರ ವಹಿಸಬೇಕು. ಎಲ್ಲಾ ಶಾಲಾ ಆಡಳಿತ ಮಂಡಳಿ ಸದಸ್ಯರುಗಳು ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಉತ್ತಮ ಕಾಯ೯ ಯೋಜನೆಗಳು ರೂಪಿಸಬೇಕು. ಇದರಿಂದ ವಾಷಿ೯ಕೋತ್ಸವದ ನೆಪದಲ್ಲಿ ನಡೆಯುವ ಪ್ರತಿಭಾ ಪ್ರದಶ೯ನಗಳಿಂದ ಅನೇಕ ಪ್ರತಿಭಾವಂತ ವಿದ್ಯಾಥಿ೯ಗಳು ಹೊರಹೊಮ್ಮುಲು ಸಾಧ್ಯವಾಗುತ್ತದೆ.  ಆ ನಿಟ್ಟಿನಲ್ಲಿ ಶಾಲಾ ಮಂಡಳಿ ಮತ್ತು ಶಿಕ್ಷಕ ಸಿಬ್ಬಂದಿಗಳು ಪ್ರತಿಭಾವಂತರನ್ನು ಗುರುತಿಸುವ ಕಾಯ೯ ಮುಂದೊರೆಸಿಕೊಂಡು ಹೋಗುವಂತಾಗಲಿ.


ಲೇಖಕರು

veeranna manthalkar

ವೀರ ಸಂಕಲ್ಪ

ಸುಮಾರು ಹದಿನೈದು ವಷ೯ಗಳಿ0ದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯನ್ನಿಟ್ಟುಕೊಂಡು ಕಥೆ, ಕವನ, ಹನಿಗವನಗಳು, ವಿವಿಧ ಪ್ರಕಾರದ ಲೇಖನಗಳು ಬರೆಯುತಿದ್ದೇನೆ.ಅಂದಹಾಗೆ ನಾನು ಸಾಹಿತ್ಯದಲ್ಲಿ ಒಂದಿಷ್ಟು ಅಬಿರುಚಿ ಉಳ್ಳವನಾಗಿರುವುದರಿಂದ ಮೂರು ಸ್ವರಚಿತ ಕವನ ಸಂಕಲನ ಪ್ರಕಟಿಸಿದ್ದೇನೆ. ಒಂದು ಸಂಪಾದನೆ ಹಾಗೂ ಸಂಕಲ್ಪ ಎಂಬ ಸಾಹಿತ್ಯೀಕ ಪತ್ರಿಕೆ ನನ್ನದೇ ಸಂಪಾದಕತ್ವದಲ್ಲಿ 2005 ರಲ್ಲಿ ಪ್ರಾರಂಭಿಸಿದ್ದೆ. ಸಾಹಿತ್ಯದಲ್ಲಿನ ಆಸಕ್ತಿ ಕಡಿಮೆಯಾಗದೇ ಮತ್ತೆ ಮತ್ತೆ ಏನನ್ನಾದರೂ ಬರೆಯುವ ಹಂಬಲದಿಂದ ಇತ್ತೀಚೆಗಷ್ಟೆ ಗಾಂಧಿ ಆಗ್ಬೇಕಂದುಕೊಂಡಾಗ ಎಂಬ ಕವನ ಸಂಕಲನ ಪ್ರಕಟಿಸಿದ್ದೇನೆ. ನವೆಂಬರ್ 14, 2010 ರಂದು ಪುಸ್ತಕದ ವಿಮಶೆ೯ ಕೂಡ ಕನ್ನಡಪ್ರಭದಲ್ಲಿ ಬಂದಿತು. ಬದುಕಿನ ಬೆನ್ನೇರಿ ಎಂಬ ಒಂದು ಕಥಾ ಸಂಕಲನ ಪ್ರಕಟವಾಗಿದೆ. ಮಹತ್ವದ ಬರವಣಿಗೆಯಲ್ಲಿ ಅಂದರೆ, ಹಸಿವು ಎಂಬ ಕಾದಂಬರಿ ರಚನೆಯಲ್ಲಿ ಇದೀಗ ತೊಡಗಿಸಿಕೊಂಡಿದ್ದೇನೆ. ಕೆಲವೊಂದು ಬಿಡಿ ಲೇಖನಗಳು ಬರೆದು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದೇನೆ. ಜೇನುಗೂಡು ಎಂಬ ಅಂಕಣ ಬರಹಗಳ ಸಂಕಲನ ಪ್ರಕಟಣೆಯ ಹಂತದಲ್ಲಿದೆ. ನನ್ನ ವಿಶೇಷವಾದ ಆಸಕ್ತಿ ಚುಟುಕು ಸಾಹಿತ್ಯದಲ್ಲಿ ಇರುವುದರಿಂದ ಇತ್ತೀಚೆಗೆ ಬೀದರ ಜಿಲ್ಲೆಯ ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ಚುಟುಕು ಸಿರಿ ಗೌರವ ಪ್ರಧಾನ ಮಾಡಿದ್ದಾರೆ. ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲವಾದರೂ, ಎಲ್ಲೋ ಒಂದೆಡೆ ಏನೋ ಸಾಧಿಸಿದ ಸಂತ್ರಪ್ತಿ ಕಂಡಿದ್ದೇನೆ. ಸಾಹಿತ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವುದಕ್ಕೆ ಉತ್ಸುಕನಾಗಿದ್ದೇನೆ. ಆದರೆ ಹೇಳದೇ ಬರುವ ಕೆಲವೊಂದು ಅಡೆತಡೆಗಳು ಉತ್ಸಾಕ್ಕೆ ಕುಗ್ಗಿಸುತವೆ. ಮತ್ತೆ ಮತ್ತೆ ಮೇಲೇಳುವ ಪ್ರಯತ್ನವಂತೂ ಮಾಡುವ ಸಂಕಲ್ಪ ಹೊಂದಿದ್ದೇನೆ. ಅಕಸ್ಮಿಕವಾಗಿ ಕಂಪ್ಯೂಟರ್ ಲೇಕವನ್ನು ಪ್ರವೇಶಿಸಿ ಯಾವುದೇ ತರಬೇತಿ ಇಲ್ಲದೇ ಅಕ್ಷರ ಜೋಡಣೆ ಕಲಿತಿದ್ದೇನೆ. 25 ಕ್ಕೂ ಹೆಚ್ಚು ವಿವಿಧ ಲೇಖಕರ ಅನೇಕ ಪ್ರಕಾರದ ಪುಸ್ತಕಗಳಿಗೆ ಅಕ್ಷರ ಜೋಡಣೆ ಮಾಡಿಕೊಟ್ಟಿದ್ದೇನೆ. ಹಸಿದ ಖಾಲಿ ಹೊಟ್ಟೆಯನ್ನು ತುಂಬಿಸಿಕೊಳ್ಳಲು ಅಕ್ಷರ ಜೋಡಣೆ ನನ್ನ ಬದುಕಿಗೆ ಆಸರೆಯಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.