Skip to main content

ದಾಖಲೆ ನಿರ್ಮಿಸಿದ ದಬಾಂಗ್ ೨!

ಬರೆದಿದ್ದುDecember 27, 2012
3ಅನಿಸಿಕೆಗಳು

ಸಲ್ಮಾನ್ ಖಾನ್ ಚಿತ್ರಗಳು ಎಂದರೆ ಬಾಲಿವುಡ್ ನಲ್ಲಿ ಗೆಲ್ಲುವ ಕುದುರೆಯೇ ಸರಿ. ಡಿಸೆಂಬರ್ ೨೧ರಂದು ಬಿಡುಗಡೆ ಆದ ದಬಾಂಗ್ ಚಿತ್ರದ ಎರಡನೇ ಅವತರಣಿಕೆ ದಬಾಂಗ್ ೨ ಮೊದಲ ವಿಕೆಂಡ್ ಸುಮಾರು ೫೯ ಕೋಟಿ ಗಳಿಸಿ ಸಲ್ಮಾನ್ ಖಾನ್ ಅವರದ್ದೇ ಆದ್ ಏಕ್ತಾ ಟೈಗರ್ ದಾಖಲೆ ಮುರಿದಿದೆ. ದಬಾಂಗ್ ನ ಮುಖ್ಯ ಪಾತ್ರ ಚುಲ್ ಬುಲ್ ಪಾಂಡೆ ಜನಪ್ರಿಯತೆ ಗಳಿಸಿತ್ತು.ಅದೇ ಪಾತ್ರ ಮುಂದೆ ಇಟ್ಟುಕೊಂಡು ಸಲ್ಮಾನ್ ಖಾನ್ ಅಣ್ಣ ನಿರ್ದೇಶಿಸಿದ ದಬಾಂಗ್ ೨ ಚಿತ್ರ ಇದಾಗಿದೆ.

ಇದರಲ್ಲಿ ಕರೀನಾ ಕಪೂರ್ ಅವರ ಫೆವಿಕಾಲ್ ಹಾಡು ಕೂಡಾ ಜನಪ್ರಿಯವಾಗಿತ್ತು. ಈಗಾಗಲೇ ನೂರು ಕೋಟಿ ಆದಾಯ ದಾಟಿರುವ ಈ ಚಿತ್ರ ಏಕ್ತಾ ಟೈಗರ್ ನ ಇನ್ನೂರು ಕೋಟಿ ದಾಖಲೆ ಮುರಿಯುವದೇ ಕಾದು ನೋಡಬೇಕು.

ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಚಿತ್ರಗಳು ಗಳಿಕೆಯಲ್ಲಿ ದಾಖಲೆಯ ಮೇಲೆ ದಾಖಲೆ ನಿರ್ಮಿಸುತ್ತಿವೆ.

ನೀವು ದಬಾಂಗ್ ೨ ನೋಡಿದ್ದೀರಾ ಹೇಗನ್ನಿಸಿತು?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

K.M.Vishwanath ಶುಕ್ರ, 12/28/2012 - 13:42

ಸಲ್ಲು ಮಾಮಾ ಈಗಾಗಲೆ ಸಾಧನೆಗಳ ಸರದಾರ ಅಲ್ಲವಾ ಅದಕ್ಕಾಗಿ ಮತ್ತೆ ಸಾಧನೆ ಮಾಡುತ್ತಿರುವ

ಒಂದು ನನಗೆ ಅಸಯ್ಯ ಅನಿಸುವುದು ಈ ಚಿತ್ರರಂಗದಲ್ಲಿ ಅಂದರೆ

ಈ ೧ ೨ ೩ ವಿಚಾರ ಬಿಟ್ಟು ಬೇರೆ ಹೆಸರು ಕಥೆ ಸಿಗೋದಿಲ್ಲವಾ ಅಥವಾ ನಮ್ಮ ಹೊಸ ಕಥೆಗಾರರು ಇಲ್ಲವಾ? ಅಂತಾ

 

venkatb83 ಶನಿ, 12/29/2012 - 18:17

ರಾಜೇಶ್  ಅವ್ರೆ ಈ ಚಿತ್ರವನ್ನು  ನಿನ್ನೆ ರಾತ್ರಿ ನೋಡಿದೆ...ಮೊದಲ ಭಾಗಕ್ಕೆ  ಹೋಲಿಸಿದರೆ  ಸಪ್ಪೆ ಅನ್ಸುತ್ತೆ.....!!
ಇಲ್ಲಿ ಜೋಕ್  ಗೆ ಹೆಚ್ಚು ಆದ್ಯತೆ ನೀಡಿರುವರು... ಮಲೈಕಾ  ಮುಂದೆ ಈ ಕರೀನಾ ಏನೂ ಅಲ್ಲ ಅಂತ ಪ್ರೂವ್ ಆಯ್ತು...!!
ಸಲ್ಮಾನ್ ಸೋನಾಕ್ಷಿ ನಟನೆಗೆ ಫುಲ್ ಮಾರ್ಕ್ಸ್..
ಆದರೆ ಕಥೆಯೇ ಇಲ್ಲ..ಅಲ್ಲದೆ ನಮ್ಮ ಖ್ಯಾತ ಖಳ  ನಟ ಪ್ರಕಾಶ್ ರೈ  ಅವ್ರಿಗೆ   ಆ ಪಾತ್ರ ಮಾಡಬೇಕು ಅಂತ ಯಾಕೆ ಅನ್ನ್ಸಿತೋ  ಗೊತ್ತಿಲ್ಲ. ಅವರನ್ನು  ಸರ್ಯಾಗಿ ಉಪಯೋಗಿಸಿಕೊಂಡಿಲ್ಲ ..:((
ಅರ್ಬಾಜ್ ಖಾನ್ ನಿರ್ದೇಶನ ಸಪ್ಪೆ ಅನ್ನಿಸಿತು...
ಇದೇನೋ ದಾಖಲೆ  ಮುರಿಯಬಹ್ದು-ಮಾಡಬಹುದು...ಆದರೆ  ಪ್ರೇಕ್ಷಕರನ್ನು  ಖುಷಿ ಪಡಿಸುವಲ್ಲಿ ವಿಫಲ  ಆಗಿದೆ ಅನ್ಸುತ್ತೆ.....
ಶುಭವಾಗಲಿ..
\|/
ರಾಜೇಶ ಹೆಗಡೆ ಭಾನು, 12/30/2012 - 21:59

ಹೌದಾ? ನಾನಿನ್ನೂ ನೋಡಿಲ್ಲ. ನೋಡಬೇಕು.


ಇತ್ತೀಚೆಗೆ ಚಲನಚಿತ್ರಗಳ ಬಗ್ಗೆ ವೀಕ್ಷಕರ ನಿರೀಕ್ಷೆ ಬದಲಾಗಿದೆ ಎಂಬುದು ನನ್ನ ಅನಿಸಿಕೆ. ಸಾಮಾನ್ಯವಾಗಿ ಮಲ್ಟಿಪ್ಲೆಕ್ಸ್ ಗಳಲ್ಲಿ ಚಿತ್ರದ ಬೆಲೆ ೩೫೦ ರಿಂದ ೮೦೦ರವರೆಗೆ ಇರುತ್ತೆ. ಅಲ್ಲಿ ದೃಶ್ಯ ವೈಭವ ಹಾಗೂ ಮನೋರಂಜನೆಗೆ ಪ್ರಾಶಸ್ತ್ಯ. ೨ಗಂಟೆ ಬೋರಾಗಬಾರದು. ಹಾಲಿವುಡ್ ಚಿತ್ರಗಳು ಇಂತಹ ಚಿತ್ರ ತಯಾರಿಕೆಯಲ್ಲಿ ಮೇಲುಗೈ. ದಶಕಗಳ ಹಿಂದೆ ಟಿವಿಯ ಸ್ಪರ್ಧೆ ಎದುರಿಸುವ ನಿಟ್ಟಿನಲ್ಲಿ ಹಾಲಿವುಡ್ ಜನರ ಆಕರ್ಷಿಸಲು ಬದಲಾಯಿತು. ದೊಡ್ಡ ತೆರೆಯಲ್ಲಿ ಹೆಚ್ಚು ಖುಷಿ ಕೊಡುವ ವಿಶುವಲ್ ಇಫೆಕ್ಟ್ಸ್ ವಿರಾಜಿಸಿದವು.ಬಾಲಿವುಡ್ ಹಾಗೂ ತಮಿಳು/ತೆಲುಗು ಚಿತ್ರರಂಗಗಳು ಈಗ ಇದಕ್ಕೆ ಬದಲಾಗುತ್ತಿವೆ. ಆದರೆ ನಮ್ಮಲ್ಲಿ ಕಥೆಗೆ ಬದಲಾಗಿ ಹೀರೋ ವೈಭವೀಕರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವದು ವಿಷಾದಕರ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.