Skip to main content

ಪ್ರಶ್ನಾರ್ಥಕ..?

ಇಂದ Jagannatha R N
ಬರೆದಿದ್ದುDecember 26, 2012
2ಅನಿಸಿಕೆಗಳು

ಏನೊಂದು ಹೇಳದೆ
ನೀ ಹಾಗೇನೇ ಸಾಗಿದೆ..
ಏನೊಂದು ಕೇಳದೆ 
ನಾ ಹಾಗೇನೇ ಹೇಳಿದೆ..
ಕೇಳಿದರೆ ಕಾರಣ
ಬದಲಿಸುತಿರುವೆ ಮಾತು..


ಬಯಲಾಗುತಿರುವೆ ನಾ
ನಿನಗೆ ಸೋತು-ಸೋತು..
ನಮ್ಮಿಬ್ಬರ ನಡುವಲಿ  ಎಲ್ಲ ಹೇಳಿಕೊಂಡ
ನಾನೊಂದು ಈಗ ತೆರದ ಪುಸ್ತಕ..
ಏನನು ಹೇಳಲಾರದೇ ಸಾಗುತಿರುವ
ನೀನೊಂದು ಪ್ರಶ್ನಾರ್ಥಕ..?

ಇಲ್ಲಿಯವರೆಗೂ ಯಾವ ರಾಧೆಯ
ಕೂಗಿಗೂ ಹೂಗುಟ್ಟದ ಮೂಖ ನಾನು..
ಆದರೆ, 
ನೀ ಕರೆಯದೇ ಇದ್ದರೂ ನನಗೆ ನಾನೆ
ಹೂಗುಟ್ಟುಕೊಳ್ಳುತ್ತಿರುವ ಮೂರ್ಖ ನಾನು..
ಇದ ಅರಿಯದ ಹುಡುಗಿ ನೀನೋ..?
ಇಲ್ಲ ಅರಿತು ಎಲ್ಲ ಮರೆತು 
ಸಾಗುತಿರುವ ಜಾಣ ಹುಡುಗಿ ನೀನೋ..?
ತಿಳಿಯದು ಮನಕೆ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್

 

ಲೇಖಕರು

ಅನಿಸಿಕೆಗಳು

venkatb83 ಮಂಗಳ, 01/01/2013 - 16:36

??????????????????????

 

...!!


ಜಗನ್ನಾಥ್ ಅವ್ರೆ
ನೀವು ಬರಹಗಳನ್ನು ಅದರಲ್ಲೂ ಈ ಕವನಗಳನ್ನು ಬರೆವ ಶೈಲಿ ತುಂಬಾ ಚೆನ್ನಾಗಿದೆ..
ನಿಮಗೆ ಒಳ್ಲೇ ಹಿಡಿತವಿದೆ..
ಹೀಗೆಯೇ ಮುಂದುವರೆದರೆ  ಒಬ್ಬ ಒಳ್ಲೇ ಕವಿಯಾಗುವ ಎಲ್ಲ ಸುಲಕ್ಷಣಗಳು ಇವೆ..
ನೀವು ನಿಮ್ಮ ಕವನಗಳ ಕಂಪನ್ನು
 ಇಲ್ಲಿಯೂ ಪಸರಿಸುವಿರ?
ಇದೂ ಸಹ ಒಂದು ಕನ್ನಡದ  ಜಾಲ ತಾಣ- ಕಥೆ-ಕವನ-ಇತ್ಯಾದಿ ಬರಹಗಳಿಗೆ  ಅಪಾರ ಪ್ರೋತ್ಸಾಹ ನೀಡುವ ಸಹೃದಯರ  ತಾಣ...

ಶುಭವಾಗಲಿ..

ಹೊಸ ವರ್ಷದ  ಹಾರ್ದಿಕ ಶುಭಾಶಯಗಳು...

\|/

 

 

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಶುಕ್ರ, 01/04/2013 - 14:22

ತುಂಬ ಚೆನ್ನಾಗಿದೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.