Skip to main content

ಲೈಫ್ ಆಫ್ ಪೈ-2012-ದೇವರ ಹುಡುಕಾಟ -ಬದುಕಲು ಹೋರಾಟ.!!

ಇಂದ venkatb83
ಬರೆದಿದ್ದುDecember 24, 2012
2ಅನಿಸಿಕೆಗಳು

ಲೈಫ್ ಆಫ್ ಪೈ -2012 -ಎಲ್ಲಿಂದ ಎಲ್ಲಿಗೋ ಪಯಣ.!
ಈ ಲೈಫ್ ಆಫ್ ಪೈ -2012 ರ ಬಿಡುಗಡೆಯ ಚಿತ್ರವನ್ನು ಮಾಮೂಲಿ ಪರದೆಯ ಚಿತ್ರ ಮಂದಿರದಲ್ಲಿ ಹಿಂದಿ ಭಾಷೆಯಲ್ಲಿ ನೋಡಿದೆ...
ಭಾರತದ ಪಾಂಡಿಚೆರಿಯಲಿ ಖಾಸಗಿ ಜೂ ನಡೆಸುವ (ಈ ತರಹದ ಖಾಸಗಿ ಜೂ ನಡೆಸಲು ನಮ್ ದೇಶದ ಕಾನೂನಲ್ಲಿ ಅವಕಾಶವಿದೆಯೇ?)ಕುಟುಂಬ ಜೂ ನ ಕೆಲ ಪ್ರಾಣಿಗಳನ್ನು ಮಾರಾಟ ಮಾಡಿ ವಿದೇಶದಲ್ಲಿ (ಕೆನಡ)ಹೋಗಿ ನೆಲೆಸುವ ತೀರ್ಮಾನಕ್ಕೆ ಬಂದು ಕೆಲವು ಪ್ರಾಣಿಗಳ ಸಹಿತ ಒಂದು ಹಡಗು ಹತ್ತುವರು...
ಈ ಮಧ್ಯೆ ಭಾರತದಲ್ಲಿ ಹುಡುಗಿ ಒಂದನ್ನ ಪ್ರೇಮಿಸಿ ಆಗಷ್ಟೆ ಆ ಬಗ್ಗೆ ಹೇಳಿ ಅವಳೂ ಒಪ್ಪಿ ಖುಷಿಯಲಿರುವ ನಾಯಕನಿಗೆ ಈ ಅಗಲಿಕೆ ಸಹಿಸಲಾಗದ್ದು ,ಹಾಗಂತ ಹೋಗದೆ ಇರಲು ಸಾಧ್ಯವೋ ಇಲ್ಲ..!
ಮಾರ್ಗ ಮಧ್ಯೆ ಬಿರುಗಾಳಿ ಮಳೆ ಬಂದು ಇವರ ದೊಡ್ಡ ಹಡಗು ಪಲ್ಟಿ ಹೊಡೆದು ಪ್ರಾಣಿಗಳ ಸಮೇತ ಸಮುದ್ರಕ್ಕೆ ಬೀಳುವನು..ಈ ಅವಘಡದಲ್ಲಿ ತಾಯಿ-ತಂದೆ-ತಮ್ಮ ಅಗಲುವರು .
ಒಂದು ಲೈಫ್ ಬೋಟ್ನಲ್ಲಿ ತೇಲುತ್ತ ಹೋಗುವ ಇವನ ಜೊತೆ ಮೊದಲಿಗೆ ಒಂದು ಜೀಬ್ರ ಕಾಣಿಸುವುದು.ಆಮೇಲೆ ಒಂದು ಹೈನ ಪ್ರಾಣಿ-ಇಸ್ಟೇನಾ ಎಂದು ನಿಟ್ಟುಸಿರು ಬಿಡುವಾಗ ಧುತ್ತನೆ ಬಂಗಾಳದ ಹುಲಿ ಬೋಟಿನ ಒಳಗಿಂದ ಆಚೆ ಬರುವದು...


ಇಲ್ಲಿಂದ ಅಸಲಿ ಕಥೆ ಶುರು....!!
ಭಲೇ ಮಜಾ...!!
ಆ ಲೈಫ್ ಬೋಟಿನಲ್ಲಿ ಇರಬೇಕೆಂದರೆ ಆ ಸದಾ ಕಿರುಚುವ ಹೈನ ಮತ್ತು ಅಪಾಯಕಾರಿ ಹುಲಿ ಜೊತೆ ಇರಬೇಕು,ಆ ಜೀಬ್ರ ತಿನ್ನಲು ಹುಲಿ ಮತ್ತು ಹೈನ ಮಧ್ಯೆ ಪೈಪೋಟಿ ..!
ಮೊದಲಿಗೆ ಹೈನಗೆ ಬಲಿ ಆಗುವುದು ಗೊರಿಲ್ಲಾ...!
ಆಮೇಲೆ ಹುಲಿಗೆ ಬಲಿ ಆಗುವದು ಜೀಬ್ರ..ತನ್ನ ಕಣ್ಣೆದುರೇ ನಡೆವ ಆ ದಾರುಣವನ್ನು ನಿಲ್ಲಿಸಲಾಗದ ಅಸಹಾಯಕತೆ ಹುಡುಗನದು-
ಅವನ ಹೆಸರು ಪೈ -ಅದೊಂತರ್ಹ ಶಾರ್ಟ್ ಕಟ್ ಹೆಸರು...
ಅವನ ಮೈಲುದ್ದದ ಪೂರ್ಣ ಹೆಸರು(Piscine Molitor Patel ) -ಹೇಳಲು ಕಷ್ಟ ಅಂತ ಮನೆ ಮಂದಿ ಇಟ್ಟ ಹೆಸರು ಪೈ.
ಅದನ್ನೇ ಶಾಲಾ ಕಾಲೆಜುಗಳಲಿ ತಮಾಷೆ ಮಾಡುವ ಸಹಪಾಠಿಗಳು ..!!
ಪೈ ಮಹತ್ವವನ್ನು ವಿವರಿಸುವ ಹುಡುಗನ ಪ್ರಯತ್ನಗಳ ದೃಶ್ಯ ಮನರಂಜನಕಾರಿ.!
ರಿಚರ್ಡ್ ಪಾರ್ಕರ್ ಹೆಸರಿನ ಹುಲಿ ಮತ್ತು ಪೈ ಸಹಬಾಳ್ವೆ-ಸಾಮರಸ್ಯ ಜೀವನದ ಕಥೆ ಇರುವ ಈ ಚಿತ್ರದ ಹುಲಿ ನಿಜವಾದದ್ದು ಅಲ್ಲ.!!ಅದು ಒಂದು ಗ್ರಾಫಿಕ್ ಹುಲಿ ಮತ್ತು ನಮ್ ದೇಶದ ಗ ಗ್ರಾಫಿಕ್ ತಂತ್ರಜ್ಞರು ಅದರ್ಲು ನಮ್ಮ ನಾಡಿನ ಧಾರವಾಡದ ಒಬ್ಬ ತಂತ್ರಜ್ಞನ ಕೆಲಸದ ಫಲ.!
ನಿಜವಾದ ಹುಲಿಯೋ ಅದರ ಮುಂದೆ ಏನೂ ಅಲ್ಲ..!!


ಬೋಟಿನ ಒಳಗೆ ಹುಲಿ ಜೊತೆ ಇರಲು ಸಾಧ್ಯವಾಗದು ಎಂದು ಒಂದು ಪುಟ್ಟ ರಾಫ್ಟ್ ಒಂದನ್ನು ತಯಾರಿಸಿ ಅದಕ್ಕೆ ಮತ್ತು ಬೋಟಿಗೆ ಒಂದು ಹಗ್ಗ ಕಟ್ಟಿ ಅದರಲ್ಲಿ ಕುಳಿತು ಆಗಾಗ ಹುಲಿ ಇರುವ ಬೋಟಿಗೆ ಬಂದು ತಿನ್ನುವ ತಿಂಡಿ -ನೀರು ಇತ್ಯಾದಿ ತೆಗೆದುಕೊಳ್ಳುವನು..
ಹುಲಿಗೆ ಹೈನ -ಜೀಬ್ರ ತಿಂದು ಇನ್ನು ಸಮಾಧಾನವಾಗಿಲ್ಲ.. ಆಗಾಗ ಇವನತ್ತ ನೋಡಿ ತಿನ್ನುವ ಹವಣಿಕೆ...! ಯಾವುದೇ ಸಹಾಯ ಸಿಗದೇ ಇತ್ತ ಆಹಾರ ನೀರು ಸಹಾ ಖಾಲಿ ಆಗುವ ಸಂಭವದ ಪರಿಸ್ಥಿತಿಯಲ್ಲಿ ಈ ಹುಲಿ ಜೊತೆ ಏಗುವ ಪರಿಸ್ತಿತಿ..!!
ಅವ್ನ ಜೊತೆಗೆ ತಂದ ಬ್ಯಾಗಲ್ಲಿ ಒಂದು ಸಹಾಯದ ಪುಸ್ತಕ ಸಿಗುವುದ್ -ಅದರಲ್ಲಿ ಇಂಥಾ ಅಪಾಯಕಾರಿ ಸ್ಥಿಟಿಯಲ್ಲಿ-ಸನ್ನಿವೇಶಗಳಲ್ಲಿ ಹೇಗೆ ವರ್ತಿಸಬೇಕು? ಹೇಗೆ ಮನೋ ದಾರ್ಡ್ಯ ಬೆಳೆಸಿಕೊಳ್ಳಬೇಕು ಕೂಲ್ ಕಾಂ ಆಗಿರಬೇಕು ಎಂಬ ಸಲಹೆಗಳು..
ಆ ಸಂದರ್ಭ ಭಲೇ ನಗು ತರಿಸುವ್ದೂ...
ಆ ಮಧ್ಯೆ ಮೀನುಗಳು ಹಿಡಿಯಲು ಹುಲಿ ನೀರಿಗೆ ಜಿಗಿದು ಇವನ ರಾಫ್ಟ್ ಕಡೆ ಬಂದಾಗ ಇವನು ಬೋಟಿಗೆ ಜಿಗಿವನು...ಅಲ್ಲಿ ಸಿಕ್ಕ ಒಂದು ಕೋಲು ಮೂಲಕ ಹುಲಿ ಪಳಗ್ಸಿ ತಾ ಹೇಳಿದ ಹಾಗೆ ಕೇಳುವ ಹಾಗೆ ಮಾಡುವನು...
ಅಲ್ಲಿಂದ ಹುಲಿ ಮತ್ತು ಇವನ ಮಧ್ಯೆ ಸ್ನೇಹ ಶುರು...!!
ಒಂದು ನಿರ್ಮಾನುಷ ದ್ವೀಪಕ್ಕೆ ಬಂದು ಅಲ್ಲಿನ ಹಣ್ಣು -ಗೆಣಸು ಗೆಡ್ಡೆ ತಿಂದು ನೀರು ಕುಡಿದು -ಮರ ಹತ್ತಿ ಇವನು ಕುಳಿತರೆ -ಕೆಳಗೆ ಸುತ್ತ ಮುತ್ತ ಇರುವ ಪ್ರಾಣಿಗಳನ್ನು ಬೇಟೆ ಆಡಿ ತನ್ನ ಹಸಿವು ಇನ್ಗಿಸಿಕೊಳ್ಳುವ ಹುಲಿ...!!
ಆಮೇಲೆ ಮತ್ತೆ ಪ್ರವಾಸ ಮುಂದುವರೆಸಬೇಕಲ್ಲ,ಹುಲಿಯನು ಕರೆದು ಬೋಟ್ ನಲ್ಲಿ ಹೊರಡುವಾಗ ವಿಪರೀತ ಮಳೆ ಗಾಳಿ -ಭಯಕ್ಕೆ ಏನಾರ ಅಗಲಿ ಎಂದು ಕಣ್ಣು ಮುಚ್ಚಿ ಮಲಗಿ ಎದ್ದಾಗ ಯಾವ್ದೋ ತೀರ ಪ್ರದೇಶಕ್ಕೆ ಮನುಷ್ಯ ನಿವಾಸಗಳಿಗೆ ಹತ್ತಿರ ತಾನು ಬಿದ್ದು ಪಾಕದಲ್ಲಿ ಹುಲಿ ನಡೆದು ಬರುವದು ಹಾಗೆಯೇ ಇವನು ಕರೆದರೂ ಇವನಿಗೆ ತನಗೆ ಯಾವದೇ ಸಂಬಂಧ ಇಲ್ಲ ಎನ್ನುವ ಹಾಗೆ ಹೊರತು ಹೋಗಿ ಕಣ್ಮರೆ ಆಗುವದು... ಈ ಪೈ ನಿಶ್ಯಕ್ತಿಯಿಂದ ಮಲಗಿ ಎದ್ದಾಗ ಆಸ್ಪತ್ರೆಯಲ್ಲಿ ಇವನು-ಇವನ ಮುಂದೆ ಇಬ್ಬರು ತನಿಖಾ ಅಧಿಕಾರಿಗಳು- ಅವ್ರಿಗೆ ಏನು ನಡೆಯಿತು ಹೇಗೆ ನಡೆಯಿತು ಎಂದು ಹೇಳಬೇಕಿದೆ..!
ಒಂದು ನಿಜ ಕಥೆ ಹೇಳಿದರೆ ಅವರು ನಂಬರು..
ಸುಳ್ಳು ಕಥೆ ಸೃಸ್ಟಿ ಮಾಡಿ ಹೇಳಿದರೆ ಅದನ್ನು ನಂಬಲು ತಯಾರಿಲ್ಲ..:((
ಕೊನೆಗೆ ಯಾವುದನ್ನಾರ ನಂಬಲು ಹೇಳಿದಾಗ ನಿಜ ಕಥೆಯನ್ನೇ ಒಪ್ಪುವರು...ಪೈ ಜೀವನ ಕಥೆ ಇಲ್ಲಿಗೆ ಕೊನೆ...!!


ಸನ್ನಿವೇಶಗಳು
==========
1.ದೇವರ ಹುಡುಕಾಟ-3 ಧರ್ಮಗಳ ಬಗ್ಗೆ ಅರಿಯುವ-3 ನ್ನು ಒಪ್ಪುವ ಹಾಗೆ ಬಾಳುವ ಪೈ...!!
2.ಜೂ ಮತ್ತು ಪ್ರಾಣಿಗಳನ್ನು ಮಾರಿ ವಿದೇಶಕ್ಕೆ ಹೋಗಿ ನೆಲೆಸುವ ಎಂಬ ತಂದೆಯ ಆಜ್ಞೆಯ ಸಂಧರ್ಭ -ಹೆಂಡತಿ ಮಕ್ಕಳ ಪ್ರಾಣಿಗಳನ್ನು ಅಗಲುವ ನೋವು
3.ಅದೇ ತಾನೇ ಪ್ರೀತಿಸಿದ ಹುಡುಗಿಗೆ ಪ್ರೀತಿ ಹೇಳಿಕೊಳ್ಳಲು ಆಗದೆ ಚಡಪಡಿಸುವ-ಅವಳೇ ಹೇಳುವ ಹಿಂದೆಯೇ ತಂದೆಯ ಆಜ್ಞೆಯಿಂದ ಆಗುವ ಅಗಲಿಕೆ..
4.ಹುಲಿ ಮತ್ತು ಪೈ ನ ಮೊದಲ ಭೇಟಿ -ತಮ್ ಜೂ ನಲಿ
5. ಏನಾರ ಸಂದೇಹ ಇದ್ದಾರೆ ಅದ್ನ ಆಗಲೇ ನಿವಾರಿಸುವ -ಯವ್ಯಾವದ್ರ ಬಗ್ಗೆ ಏನೇನೋ ಹೇಳುವ ಪೈ ತಂದೆ -ತಾಯಿಯ ವಿರೋಧದ ದೃಶ್ಯಗಳು..
6.ಸಮುದ್ರ ಪ್ರಯಾಣದಲ್ಲಿ ಹಡಗು ಮುಳುಗಿ ಪ್ರಾಣಿಗಳ ಸಮೇತ ಕೆಲವೇ ಕ್ಷಣಗಳಲಿ ನೀರಿಗೆ ಬಿದ್ದು ತಂದೆ ತಾಯಿ ಅಣ್ಣನ ಕಳೆದುಕೊಳ್ಳುವ ದೃಶ್ಯ..
7.ಏಕಾಂಗಿಯಾಗಿ ಅಪಾಯಕಾರಿ ಪ್ರಾಣಿಗಳು -ಹೈನ -ಹುಲಿ ಮಧ್ಯೆ ಜೀವಿಸುವ ಕ್ಷಣಗಳು..
8.ಕಣ್ಣ ಮುಂದೆಯೇ ಹೈನ ದಿಂದ ಗೊರಿಲ್ಲಾ ಭೇಟೆ -
ಹುಲಿಯಿಂದ ಹೈನ ಮತ್ತು ಜೀಬ್ರ ಸ್ವಾಹ.. ಅದು ನೋಡಿ ಪೈ ಪಡುವ ಭಯದ ದೃಶ್ಯಗಳು..
9.ತಾ ಬದುಕಲು ಹುಲಿಗೆ ನಿತ್ಯ ಆಹಾರ ಬೇಕು ಅಂತ ಮೀನುಗಳನ್ನು ಹಿಡಿದು ಹುಲಿ ಬಾಯಿಗೆ ಎಸೆವ ದೃಶ್ಯಗಳು...!
10..ದೊಡ್ಡ ದೊಡ ಮೀನುಗಳು ಪೈ ಮೊರೆ ಕೇಳಿಸಿದಂತೆ ತಾವಾಗೆ ಗುಂಪು ಗುಂಪಾಗಿ ಹುಲಿ ಬಾಯಿ ಕಡೆ ಜಿಗಿವ ದೃಶ್ಯ..!!
11. ವ್ಹೇಲ್ ಒಂದು - ಎರಡು ಸಾರಿ ನೀರಿಂದ ಹೊರ ಬಂದು ಇವನ ಸುತ ಸುತ್ತುವ ಆ ಕ್ಷಣದಲ್ಲಿ ಆಕಾಶ ಮತ್ತು ನೀರಿನಲಿ ಬೆಳಕಿನ ಚಿತ್ತಾರ...
12.ಹುಲಿ ಪಳಗಿಸುವ-ತಾನೂ ಮತ್ತು ಹುಲಿ ಆಹಾರ ಇಲದೆ ಇರುವ ಸ್ವಲ್ಪ ನೀರನ್ನೇ ಹಂಚಿಕೊಳ್ಳುವ ದೃಶ್ಯ..
13.ದ್ವೀಪ ಸಿಕ್ಕು ಲ್ಲಿ ಆಹಾರ ನೀರು ಸಿಕ್ಕಿ ಇಸ್ತವಿಲ್ಲದ ಇಸ್ತದೊಡನೆ ಮರಳಿ ಹೋಗುವ ಸಂದರ್ಭ..
14.ಏನೂ ಸಂಬಂಧ ಇಲ್ಲ ಎಂಬಂತೆ ತಿರುಗಿಯೂ ನೋಡದೆ ಹುಲಿ ಕಾಡಲಿ ಮರೆ ಆದಾಗ ಪೈ ಗೆ ಆಗುವ ಆಘಾತ ಅಚ್ಚರಿ...!!
15.ನಿಜ ಕಥೆ-ಸುಳ್ಳು ಕಥೆ ತನಿಖಾಧಿಕಾರಿಗಳಿಗೆ ಹೇಳುವ ಸಂದರ್ಭ...
16.ಅಪಾಯಕಾರಿ ಸಂದರ್ಭಗಳಲ್ಲಿ ಹೇಗೆ ವರ್ತಿಸಬೇಕು ಎಂಬ ಪುಸ್ತಕದ ಸಾಲುಗಳು-ಅವು ಓದಿ ಪೈ ಪ್ರತಿಕ್ರಿಯಿಸುವ ಸಂದರ್ಭ...!!
ಪೈ ಪಾತ್ರಧಾರಿಯಾಗಿ ಯುವ ನಟ-ಸೂರಜ್ ಶರ್ಮ ಮತ್ತು ಪ್ರೌಢ ಪೈ ಆಗಿ ಹಾಲಿವುಡ್ ಫೇವರೀಟ್ ನಟ ನಮ್ ದೇಶದ ನಟ ಇರ್ಫಾನ್ ಖಾನ್ ಅವರದು ಸಖತ್ ಅಭಿನಯ..ಹಿಂದಿಯಲ್ಲಿ ನೋಡಿದ್ದರಿಂದ ಅಲ್ಲಲ್ಲಿ ನಗೆ ಉಕ್ಕಿಸುವ ಪಂಚಿಂಗ್ ಸಂಭಾಷಣೆಗಳು ಇದ್ದವು -ಸಿನೆಮ ಮಂದಿರದಲ್ಲಿ ಎಲ್ಲರೂ ಬಿದ್ದು ಬಿದ್ದು ನಕ್ಕಿದ್ದು ಆಯ್ತು..:()))
ಈಗಾಗಲೇ ಹಲವು ಪ್ರಶಸ್ತಿಗಳನ್ನು ಗಳಿಸಿ ವಿಪರೀತ ದುಡ್ಡು ಬಾಚಿದ ಈ ಚಿತ್ರ ಮುಂದಿನ ಆಸ್ಕರ್ ಪ್ರಶಸ್ತಿಗಳ ಪಟ್ಟಿಯಲಿ ಇತರ ಚಿತ್ರಗಳಿಗೆ ಪ್ರಬಲ ಸ್ಪರ್ಧೆ ಒಡ್ಡಿ ಹಲವು ಪ್ರಶಸ್ತಿಗಳನ್ನು ಬಾಚುವುದು ಗ್ಯಾರಂಟಿ....!
>>>>ಮನೆ ಮಂದಿ ಸಹಿತ ಯಾವದೇ ಮುಜುಗರ ಇಲ್ಲದೆ ಕೂಲ್ ಆಗಿ ನೋಡಿ ಎಂಜಾಯ್ ಮಾಡಬಹುದಾದ ಸಿನೆಮ...
ನೋಡಿ ಎಂಜಾಯ್ ಮಾಡಿ...(3 ಡಿ ಆದರೆ ಇನ್ನೂ ಚೆನ್ನ.!!)
ಈ ಚಿತ್ರ ಮತ್ತು ತಲಾಶ್ ಬಗ್ಗೆ ಈಗ ಬರೆಯಲು ಕಾರಣ-
ಈ ಎರಡೂ ಚಿತ್ರಗಳು ಚಿತ್ರಮಂದಿರದಲ್ಲಿ ಈಗಲೂ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು ನೀವು ಈ ಸಮಯಕ್ಕೆ ನೋಡಬಹ್ದು ಎಂದು...!!
==========================================================================================================
ವೀಡಿಯೊ ಟ್ರೇಲರ್ : http://www.youtube.com/watch?v=mZEZ35Fhvuc

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ಪಿಸುಮಾತು ಗುರು, 01/03/2013 - 19:17

ನಾನೂ ಈ ಚಿತ್ರವನ್ನು ನೋಡಿದೆ. ಅದ್ಬುತವಾಗಿದೆ. 

venkatb83 ಶನಿ, 01/05/2013 - 19:39

 

 

ಶ್ರೀ ಪತಿ  ಅವರೇ 

ಚಿತ್ರದ ಬಗ್ಗೆ ಹೆಚ್ಚಿಗೆ ಏನೂ ಹೇಳದೆ ಕ್ಲುಪ್ತವಾಗಿ  ಹೇಳಿದಿರಲ್ಲ..!!

 ನಿಮ್ಮ  ಪ್ರತಿಕ್ರಿಯೆಗೆ  ನನ್ನಿ /...

 

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶುಭವಾಗಲಿ..

\|/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.