Skip to main content

ಬಾಗ್ ಬನ್(2003) ಮತ್ತು ಈ ಬಂಧನ(2007)- ಚಲನಚಿತ್ರಗಳು-ಬನ್ನಿ ಬದಲಾಗಲು ಇದೇ ಸುಸಮಯ..

ಇಂದ venkatb83
ಬರೆದಿದ್ದುDecember 22, 2012
noಅನಿಸಿಕೆ

ಸಾಮಾನ್ಯವಾಗಿ ನಮ್ ದೇಶದಲ್ಲಿ ಎಲ್ಲ ಭಾಷೆಯ ಚಿತ್ರಗಳು ರಿಲೀಸ್ ಆಗಿ ಬಹುತೇಕರು ಅವುಗಳನ್ನ ನೋಡುವರು - ಕೆಲವು ಉತ್ತಮ ಚಿತ್ರಗಳನ್ನು ನನ್ನ ಹಾಗೆ ತಪ್ಪಿಸಿಕೊಂಡ ಕೆಲವರಿಗಾಗಿ ಅವುಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಬರಹ ಸರಣಿ ಶುರು ಮಾಡಿದ ನಾ ಹಳೆಯ ಅತ್ಯುತ್ತಮ ಆಂಗ್ಲ ಚಿತ್ರಗಳ ಬಗ್ಗೆ ಬರೆಯುವ ಅನ್ನಿಸಿತು ... ಮೊದಲು ಬರೆದದ್ದು ಆ ತರಹದ ಕೆಲವು ... ಆದರೆ ಆಮೇಲೆ ನಮ್ಮ ದೇಶದಲ್ಲಿ ಹಲವು ಭಾಷೆಗಳಲ್ಲಿ ಆಂಗ್ಲ ಚಿತ್ರಗಳಿಗೆ ಮೀರಿಸಿದ ಅತ್ಯುತ್ತಮ ಚಿತ್ರಗಳು ಬರುವವು - ಅವುಗಳನ್ನೂ ಕೆಲ ಜನ ಮಿಸ್ ಮಾಡಿಕೊಂಡಿರಬಹ್ದು ಆ ತರಹದವುಗಳ ಬಗ್ಗೆ ಬರೆಯುವ ಎಂಬ ಆಲೋಚನೆ ಬಂದದ್ದೆ ಈ ಬರಹಕ್ಕೆ ಮತ್ತು ಇದರ ನನತರ ಬರುವ ಇನ್ನೊಂದು ಬರಹಕ್ಕೆ ಪ್ರೇರಣೆ ..!!

ಈ ಸಿನೆಮ ( ಬಾಗ್ಭನ್ ) ರಿಲೀಸ್ ಆದಾಗ ನಗರದಲ್ಲಿ ನಾ ಪೀ ಯೂ ಸಿ ಓದುತ್ತಿದ್ದೆ ... ಇದ್ಯಾವ್ದೋ ಪ್ಯಾಮಿಲಿ ಡ್ರಾಮ .... ಅಂತ ನೋಡದೆ ಇದ್ದೆ ...!!

ಸುಮಾರು ವರ್ಷಗಳು ಕಳೆದು ಚಲನ ಚಿತ್ರಗಳ ಬಗ್ಗೆ ವಿಶೇಷ ಆಸಕ್ತಿ ಹೆಚ್ಚಿ - ಉತ್ತಮ ಚಿತ್ರಗಳನ್ನು ನೋಡುವ ಅಂತ ನೆಟ್ನಲ್ಲಿ ಆ ತರಹದ ಚಿತ್ರಗಳ ಪಟ್ಟಿಗಾಗಿ ಹುಡುಕಿದಾಗ ಸಿಕ್ಕ ಚಿತ್ರಗಳ ಹೆಸರಲ್ಲಿ ಇದೂ ಒಂದು ...!

ಸ್ಸರಿ ಡೀವಿಡಿ ಖರೀದಿಸಿ ನೋಡಿದೆ ....

ಅಮಿತಾಬಚ್ಹನ್ - ಹೇಮಾ ಮಾಲಿನಿ ಜೋಡಿ ಮಾಡಿದ ಮೋಡಿ ನಾ ಹೇಗೆ ಹೇಳಲಿ ???

ಕಥೆ :

====

ನಾಲ್ವರು ಮಕ್ಕಳನ್ನು ಒಬ್ಬ ಸಾಕು ಮಗನನ್ನು ಹೊಂದಿದ ಅಮಿತಾಬ್ ಮತ್ತು ಹೇಮಾ ದಂಪತಿ ಆರಂಭದಲ್ಲಿ ಮಕ್ಕಳು - ಸಂಸಾರದಲ್ಲಿ ಭಲೇ ಖುಷಿಯಾಗಿರುತ್ತಾರೆ ..

ಆಫೀಸಿಗೆ ಹೊರಡುವ ಮೊದಲು ಬಂದ ನಂತರ ಅಮಿತಾಬ್ ನೋಡ ಬಯಸುವುದು ಎದುರುಗೊಳ್ಳ ಬಯಸುವದು ಪತ್ನಿಯನ್ನ ಮತ್ತು ಇದು ದಿನಂಪ್ರತಿ ಚಾಚೂ ತಪ್ಪದೆ ನಡೆಯುತ್ತದೆ ....

ಅಮಿತಾಬ್ ನಿವೃತ್ತಿಯಾಗುವ ಸಮಯ ಹತ್ತಿರ ಬಂದು - ಇಷ್ಟು ದಿನ ಹೆಂಡತಿಯನ್ನ - ಮಕ್ಕಳನ್ನ ಕೆಲ ಘಂಟೆಗಳ ಮಟ್ಟಿಗೆ ಮಿಸ್ ಮಾಡಿಕೊಂಡದ್ದು ಸಾಕು ಇನ್ನು ಮೇಲಾರ ಹೆಂಡತಿ ಮಕ್ಕಳೊಡನೆ ಆರಾಮವಾಗಿರುವ ಎಂದು ಅಮಿತಾಬ್ ಯೋಚಿಸುವರು ಈ ಬಗ್ಗೆ ಹೆಂಡತಿಗೂ ಹೇಳುವರು .... ನಿವೃತ್ತಿ ನಂತರ ಹೇಗೆ ಸಮಯ ಕಳೆಯಬಹ್ದು ಎಂಬ ಬಗ್ಗೆ ಚರ್ಚೆ - ಕನಸುಗಳು ....

ಇಲ್ಲಿವರೆಗೆ ಎಲ್ಲವೂ ಸರಿ ..... ಆದರೆ .......

ಮಕ್ಕಳೊಡನೆ ಈ ವಿಷಯವಾಗಿ ಮಾತಾಡಿದಾಗ ಅವರ ವರ್ತನೆ - ಅಭಿಪ್ರಾಯ ಗಳೇ ಬೇರೆ ....:((

ಮೊದಲು ಖುಷಿಯಾಗಿ ಮಾತಾಡಿಸುತ್ತಿದ್ದ - ಅಕ್ಕರೆ ಮಮಕಾರ ತೋರುತ್ತಿದ್ದ ತಮ್ಮ ಮಕ್ಕಳು ಇವರಿಬ್ಬರನ್ನ ಹಾಲಲ್ಲಿ ಕೂರಿಸಿ ತಾವೆಲ್ಲ ಒಂದು ರೂಮೊಳು ಹೋಗಿ ತಂದೆ ತಾಯಿಯನ್ನ ಹೇಗೆ ? ಯಾರು ನೋಡಿಕೊಳ್ಳಬೇಕು ಎಂದು ಬಿಸಿ ಬಿಸಿ ಬಿಜಿ ಚರ್ಚೆ ನಡೆಸುವರು ......

ಮಕ್ಕಳ ಈ ವರ್ತನೆ ದಂಪತಿಗಳಿಗೆ ಆಲ್ ಇಂಡ್ಯ ಲೆವಲ್ಗೆ ಶಾಕ್ ಕೊಡುವದು ...:(((

ಬೇಜಾನ್ ಚರ್ಚಿಸಿದರೂ ಯಾರೊಬ್ಬರೂ ದಂಪತಿಗಳನ್ನು ತಮ್ಮೊಡನೆ ಇರಿಸಿಕೊಳ್ಳಲು ಸಜ್ಜಾಗಿಲ್ಲ ..:((

ಅದ್ಕೆ ಅವರವರು ಕೊಡುವ ಕಾರಣಗಳು :

ಮನೆ ಚಿಕ್ಕದು

ಈಗ ತಾನೇ ಸೆಟ್ಟಲ್ ಆಗಿರುವೆವು ...

ಈ ಹಳೆಯ ಕಾಲದ ದಂಪತಿಗಳು ನಮಗೆ ಸೆಟ್ ಆಗೋಲ್ಲ ...:((

ನಾವೇ ಯಾಕೆ ನೋಡಿಕೊಳ್ಳಬೇಕು ? ಅವರು ನಮಗಿಂತ ಹೆಚ್ಚಾಗಿ ನಿಮ್ಮನ್ನು ಚೆನ್ನಾಗಿ ಎತ್ತಿ ಆಡಿಸಿರುವರು ..... ಇತ್ಯಾದಿ ....:((

ಕೊನೆಗೆ ಎಲ್ಲರೂ ಜಗಳ ಸ್ಟಾಪ್ ಮಾಡಿ 6 ತಿಂಗಳುಗಳ ಕಾಲ ತಂದೆ ತಾಯಿಯನ್ನ ಒಬ್ಬೊಬ್ಬರ ಮನೆಯಲಿ ನೋಡಿಕೊಳ್ಳಲು ನಿರ್ಧರಿಸಿ ಆ ವಿಷಯವನ್ನು ದಂಪತಿಗಳಿಗೆ ಹಿಂಜರಿಯುತ್ತ ಹೇಳಿದಾಗ ದಂಪತಿಗಳಿಗೆ ಆಗುವ ಶಾಕ್ , ಕುಸಿವ ಕನಸಿನ ಗೋಪುರ , ಕಣ್ಣಾರೆ ನೋಡಬೇಕು ....

ಛೆ .. ಛೆ ! ಇದೆಂತ ಭಂಡ ಮಕ್ಕಳು ? ಎಂಬ ಭಾವ ಬರದೆ ಇದ್ದೀತೆ ?

ಅಸ್ತು ವರ್ಷಗಳ ಕಾಲ ಜೊತೆಯಾಗಿದ್ದು ಬಾಳಿ ಬದುಕಬೇಕಾದ ಆ ಹಿರಿ ಜೀವಗಳನ್ನು ಬೇರೆ ಬೇರೆ ಮಾಡಿ 6 ತಿಂಗಳಿಗೊಮ್ಮೆ ಅಲ್ಲಿಂದ ಇಲ್ಲಿಗೆ - ಇಲ್ಲಿಂದ ಅಲ್ಲಿಗೆ ಬದಲಾಯಿಸುವ ಅವರಿಬ್ಬರನ್ನು ಬೇರೆ ಮಾಡುವುದಕ್ಕಿಂತ ' ಮಹಾಪಾಪ ' ಬೇರೆ ಇದ್ದೀತೆ ?

ದಿನಂಪ್ರತಿ ಹೆಂಡತಿಯೊಡನೆ ನವ ಯುವಕರನ್ನು ನಾಚಿಸುವಂತೆ ಮೀರಿಸುವಂತೆ ಸರಸ ಸಲ್ಲಾಪ - ನಡೆಸುವ ಪ್ರೀತಿಸುವ ಪತಿ ಅಮಿತಾಬ್ - ತನ್ನ ಹೆಂಡತಿಯ ಮುಖವನ್ನೇ ಸದಾ ನೋಡ ಬಯಸುವ ಅಮಿತಾಬ್ ಹೀಗೆ ಹೆಂಡತಿಯನ್ನು ಅಗಲಿ ಇರಲು ಸಾಧ್ಯವೇ ??

ಆ ಊಹೆಯೇ ಅಮಿತಾಬ್ ಅವರಿಗೆ ಭಯ ತರಿಸುವುದು - ಕೆಟ್ಟದ್ದು ಅನ್ನಿಸುವ್ದು .. ಆದ್ರೆ ಬೇರೆ ವಿಧಿ ಇಲ್ಲ ...:((

ಇದನ್ನು ಒಪ್ಪದ ಹೆಂಡತಿಯನ್ನ ಹೇಗೋ ಒಪ್ಪಿಸಿ ಆ ನಿರ್ಣಯಕ್ಕೆ ಸಮ್ಮತಿ ಕೊಡುವನು ...

ಈ ಒಪ್ಪಂದದಂತೆ ಒಬ್ಬರ ಮನೆಗೆ ಹೋಗಲು ಹೆಂಡತಿ ಗಂಡ ಅಗಲಿ ಬೇರೆ ಬೇರೆ ಕಾರಲ್ಲಿ ಕೂರುವಾಗ ಇಬ್ಬರಿಗೋ ಅಳು ಒತ್ತರಿಸಿ ಬರುವುದು ... ಈ ಜನುಮದಲ್ಲಿ ಮತ್ತೆ ನಾವ್ ಒಂದಾಗುವೇವೆ ಎಂಬ ಭಾವ ...

ಇದ್ಯಾವ್ದೂ ಬೇಡ ನಾವಿಬ್ಬರೇ ನಮ್ ಮನೆಯಲ್ಲಿ ಇರುವ ಎಂದು ಹಯುವ ಹೆಂಡತಿಗೆ ಸಮಾಧಾನ ಮಾಡಿ ಕಳುಹಿಸಿದ ಅಮಿತಾಬ್ ಇನ್ನೊಬ್ಬ ಮಗನ ಮನೆಗೆ ಹೊರಡುವರು ...

ಮೊದಲಿಗೆ ಎಲ್ಲವೂ ಸುಸೂತ್ರ - ಖುಷಿ - ಸಂತಸದ ದಿನಗಳು - ಸಮಸ್ಯೆ ಅಂದ್ರೆ ಹೆಂಡತಿ ಗಂಡ ಅಗಲಿ ಇರುವದು ... ಅದಕಾಗಿ ಗಂಡ ಹೆಂಡತಿ ಪತ್ರ ಬರೆವ್ದು - ಕಾಲ್ ಮಾಡುವದು ಮಾಡುತ್ತಾ ಆದಸ್ತು ಖುಷಿ ಆಗಿರಲು ಯತ್ನಿಸುವರು .....

ಕೆಲ ದಿನಗಳ ನಂತರ ಮನೆವ್ರ ವರ್ತನೆಯಲ್ಲಿ ಬದಲಾವಣೆ ಕಾಣಿಸಿ ಮಾತು ಮಾತಿಗೆ ಅಸಹನೆ - ಅಹಂಕಾರ - ದರ್ಪ ಹತಾಶೆ - ಯಾವಾಗ ಈ 6 ತಿಂದಳು ಮುಗಿಯುತ್ತೋ ಎಂಬ ಭಾವ ಕಾಣಿಸಿ ದಂಪತಿಗಳಿಗೆ ಅವರವರ ಜಾಗದಲ್ಲಿ ಆತಂಕ - ಕಾಡುವುದು ...

ಈ ಮಧ್ಯೆ ಹೆಂಡತಿ ಮಾತು ಕೇಳಿ ತಂದೆಗೆ - ತಾಯಿಗೆ ಬಯ್ಯುವ ಮಕ್ಕಳು - ಮೊಮ್ಮಕಳ ಅಕ್ಕರೆ - ಅವರ ಸ್ವೇಚ್ಹಾ ವರ್ತನೆ ಇವರಿಗೆ ಹಿಡಿಸದು ... ಆದರೆ ಹೇಳಿದರೂ ಕಿವಿಗೆ ಹಾಕಿಕೊಳ್ಳಲು ಯಾರು ಸಿದ್ಧರಿಲ್ಲ ..:((

ನೋವು ಹತಾಶೆ - ಅಗಲಿಕೆ ನುಂಗಿಕೊಂಡು ಬದುಕುವ ದಂಪತಿಗಳಿಗೆ ಈ ರೀತಿ ಬಾಳುವುದು ಇಷ್ಟವಾಗದೆ ತಾವಿಬ್ಬರೇ ಮೊದಲಿನ ಹಾಗೆ ಒಂದಾಗಿ ಕೊನೆವರ್ಗೆ ಬಾಳುವ ಎಂದು ತೀರ್ಮಾನ್ಸಿ ಆ ಬಗ್ಗೆ ಫೋನಲ್ಲಿ ಮಾತಾಡುವರು ... ಮತ್ತೊಬ್ಬ ಮಗನ ಹತ್ರ ಹೋಗುವ ಸಮಯ ಬಂದಾಗ ಆಟ ಮಕ್ಕಳು ಇವರನ್ನ ಕರೆದುಕೊಂಡು ಹೋಗಲು ಬರುವಾಗ ಇವರಿಬ್ಬರು ಯಾರಿಗೋ ಏನೂ

ಹೇಳದೆ ಕೇಳದೆ ತಾವಿಬ್ಬರು ಸೇರಲು ಹೊರಡುವರು ...

ಇತ್ತ ಮಕ್ಕಳು - ಇವರ ಇರುವಿಕೆ ಕಾಣದೆ - ತಪ್ಪಿಸಿಕೊಂಡರೋ ? ಅವ್ರಿಗೆ ಏನಾರ ಆಯ್ತೆ ನಮ್ಮ ತಲೆ ಮೇಲೆ ಬಂದ್ರೆ ಎಂಬ ಚಿಂತೆ ..:((

ಮಕ್ಕಳೆಲ್ಲ ತಮ್ಮ ತಮ್ಮಲ್ಲಿ ಕಚ್ಹಾಡುವರು .... ಕಾರಣ ... ನೀನೆ ಅಂತ .- ಅಲ್ಲ ನಾನ್ ಅಲ್ಲ ಅಂತ ......:(9

ದಂಪತಿಗಳಿಬ್ಬರು ಹಲವು ದಿನಗಳ ನಂತರ ಮೀಟ್ ಆಗಲು ಕಾತರಿಸುವ - ಒಬ್ಬರನ್ನೊಬ್ಬರು ನೋಡಿದಾಗ ಅವರಲ್ಲಿ ಆಗುವ ಸಂತೋಷ - ಉದ್ವೇಗ - ಕಣ್ಣಾರೆ ನೋಡಿಯೇ ಆನಂದಿಸಬೇಕು ...

ಆ ಕ್ಷಣದಲಿ ನೋಡುವವರ ( ಪ್ರೇಕ್ಷಕ - ವೀಕ್ಷಕ ) ಮನದಲಿ ಆಗುವ ಸಂತಸ - ಕಾತರ - ನಿರೀಕ್ಷೆ - ಉದ್ವೇಗ ಅವ್ರಿಗೆ ಗೊತ್ತು ..!!

ಆ ಸಂಮೊಹನಕಾರಿ ಸನ್ನಿವೇಶ ಮೊದಲಿಗೆ - ನೋಡುವ - ಒಟ್ಟಾಗುವ ಯುವ ಪ್ರೇಮಿಗಳನ್ನು ನಾಚಿಸುವಂತಿದೆ ...!!

ಆಮೇಲೆ ಅಮಿತಾಬ್ ತಮ ಪತ್ನಿಯನ್ನ ಅವರಿಗೆ ಇಸ್ತವಾದ ಸ್ಥಳ ಹೋಟೆಲ್ಗೆ ಕರೆದೊಯ್ದು ತಮ್ಮ ದುಡ್ಡಲ್ಲಿ ( ಅಮಿತಾಬ್ ಆ ಮಧ್ಯೆ ಮನೆಯಲ್ಲಿನ ಆ ಅಸಹನೀಯ ಮೌನ - ಮಾತು ಕಥೆ ಮರೆಯಲು ಬೇರೊಂದು ಪಾರ್ಟ್ ಟೈಮ್ ಜಾಬ್ ಹುಡುಕಿ ಕೊಂಡಿರುತ್ತಾರೆ ಅದೇ ಸಂಪಾದನೆ ) ಊಟ ಮಾಡಿಸಿ ಬರುವಾಗ ಕಾರ್ ನೋಡಿ ನೋಡಿ ಖುಷಿ ಪಡಬೇಕು - ಅದು ಕೊಳ್ಳಲು ಕಾಸೆಲ್ಲಿದೆ ಅಂತ ಮುನ್ನಡೆವಾಗ ಆ ಕಾರು ಮಾರಲು ನಿಯೋಜಿಸಲ್ಪಟ್ಟ ನೌಕರ ಇವರಿಗೆ ದುಂಬಾಲು ಬಿದ್ದು ಅಟ್ಲೀಸ್ಟ್ ಓಡಿಸಿ ನೋಡಿ ಎಂದು ಪುಸಲಾಯಿಸುವನು ....!!

ಕಾರಲ್ಲಿ ಕೂತು ಸುಮಾರು ಹೋಗಿ ಬರುವ ದಂಪತಿಗಳಿಗೆ ಈ ಕಾರು ಬುಕ್ ಮಾಡಲೇ ? ಎಂದಾಗ ಶಾಕ್ ....!

ನಾವ್ ಬರೀ ಟೆಸ್ಟ್ ಡ್ರೈವ್ ಅದೂ ನೀ ಹೇಳಿದ್ದಕ್ಕೆ ಮಾಡಿದ್ದು ನೋಡಿದ್ದು ಎಂದರು ಕೇಳದೆ ಅಮಿತಾಬ್ ಮೇಲೆ ಹಲ್ಲೆ ಮಾಡುವಾಗ ' ಅನಿರೀಕ್ಷಿತ ' ವ್ಯಕ್ತಿ ಪ್ರವೇಶ ... ಅಮಿತಾಬ್ ಎಷ್ಟು ಮಹಾನೀಯರು , ಹೇಗೆ ಎಂದೆಲ್ಲ ಹೇಳಿ ಅವರು ಇಷ್ಟ ಪಟ್ಟ ಆ ಕಾರನ್ನೇ ನೀಡಿ ತನ್ನ ಮನೆಗೆ ಕರೆದೊಯ್ಯುವನು .....

ಆಮೇಲೆ ದಂಪತಿಗಳಿಗೆ ತಮ್ಮ ಮಕ್ಕಳು ಎಷ್ಟು ಸ್ವಾರ್ಥಿಗಳು - ಈ ' ಮನುಷ್ಯ ಎಷ್ಟು ನಿಸ್ವಾರ್ಥಿ - ಕರುಣಾಮಯಿ - ನಿಜವಾದ ಮಗ ಎಂಬ ಭಾವ ಮೂಡುವುದು ..

ಅಲ್ಲಿಂದ ಮುಂದೆ ಅಮಿತಾಬ್ಗೆ ಶುಕ್ರ ದೆಸೆ ..!!

ಮಕ್ಕಳಿಗೆ ಶನಿ ಕಾಟ ಶುರು .... !

ಆದರೆ ಇಲ್ಲಿಗೆ ಕಥೆ ಮುಗಿದಿಲ್ಲ .!! ಸಿನೆಮ ಇನ್ನು ..... ಬಾಕಿ ಇದೆ ..!!

ಮತ್ತೆ ಮಕ್ಕಳು - ದಂಪತಿ ಒಟ್ಟಾಗುವರೇ ?

ಮುಂದೆ ಏನಾಗಲಿದೆ ?

ಅಂತ್ಯ ಏನು

ಎಂಬ ಕುತೂಹಲವೇ ?

ಅದಕಾಗಿ ಚಿತ್ರ ನೋಡಿ .....!!

>>>> ಈ ಚಿತ್ರ ಅದಾಗಲೇ ಕನ್ನಡದಲ್ಲಿ ಡಾ : ವಿಷ್ಣುವರ್ಧನ್ ಮತ್ತು ಜಯಪ್ರದ ತಾರಾಗಣದಲ್ಲಿ ' ಈ ಬಂಧನ ' ಹೆಸರಲಿ ಬಂದಿದೆ .....

ಹಿಂದಿ ಚಿತ್ರಕ್ಕೆ ಯಾವ ಮಟ್ಟದಲ್ಲೂ ... ಕಡಿಮೆ ಇಲ್ಲ .

ಒಂದೇ ಬೇಜಾರಿನ - ಸಂಗತಿ ಎಂದರೆ ...

ಆ ಹಿಂದಿ ಚಿತ್ರದಲ್ಲಿ ಮಕ್ಕಳ ಪಾತ್ರಗಳಿಗೆ ' ಧಾರವಾಹಿ ' ನಟರನ್ನ ತೆಗೆದುಕೊಂಡಿದ್ದರು ..

ಅದನ್ನೇ ಕನ್ನಡದಲ್ಲೂ ಯಥಾವತ್ತಾಗಿ ' ಇವರೂ ' - ನಮ್ಮವರು ಪಾಲಿಸಬೇಕೆ ....:((

ಕೆಲವು ಸನ್ನಿವೇಶಗಳು :

==============

1. ಅಮಿತಾಬ್ - ಹೇಮಾ ಮಾಲಿನಿ ಒಟ್ಟಿಗೆ ಮುಖ್ಯ ದ್ವಾರ ತೆಗೆವ ದೃಶ್ಯ - ಆ ಸಮಯದಲಿ ಇಬ್ಬರ ಭಾವ

2. ಮಕ್ಕಳು ಯಾರೊಡನೆ ತಾವಿರಬೇಕು ಎಂದು ಜೋರಾಗಿ ವಾದದಿ ತೊಡಗಿರುವ ಆ ಸಮಯದ ದಂಪತಿಗಳ ತಳಮಳ - ಆತಂಕ

3. ತಾವಿಬ್ಬರು ಬೇರೆ ಬೇರೆ ಆಗಬೇಕಾಗಿ ಬಂದ ಸಂದರ್ಭದಲ್ಲಿ ಮೂಕವಾಗಿ ಮುಖ ನೋಡುತ ಕಣ್ಣೀರು ಹಾಕುವ ದೃಶ್ಯ .. ಆ ಅಗಲಿಕೆ

4. ಅಮಿತಾಬ್ ಕನ್ನಡಕ ಹೊಡೆದು ಹೋಗಿ ( ಮೊಮ್ಮಗ ಬೀಳಿಸಿ ) ಮಗನಿಗೆ ಅದನ್ನು ಬದಲಿಸಿ ತರಲು ಹೇಳಿದಾಗ ಅವನಿಗೆ ಅದಕ್ಕೆ ಸಮಯವೇ ಸಿಗೋಲ್ಲ ....:((

ಹೊಡೆದ ಕನ್ನಡಕದಲ್ಲಿ ನೋಡುವ ಅಮಿತಾಬ್ ನಟನೆ

5. ಕನ್ನಡಕವನ್ನು ಸರಿ ಮಾಡಿಸಿ ಕೊಡುವ ಮೊಮ್ಮಗ ( ತಂದೆ ತಾಯಿ ಕೊಟ್ಟ ಪಾಕೆಟ್ ಮನಿ ಮೂಲಕ )- ಆ ಸಮಯದಲ್ಲಿ ಮೊಮ್ಮಗ - ತಾತನ ನಟನೆ ...

6. ಮಗನಿಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಸ್ವತಹ ತಾನೇ ಕೈಯಾರೆ ಉಣಿಸುವ ಕೊಡುವ ಊಟದ ಡಬ್ಬಿ ಹಿಡಿದು ತಾಯಿ ಆಫೀಸಿಗೆ ಬಂದಾಗ ಸಿಡುಕುವ ಮಗ - ಹೇಮಾ ಮಾಲಿನಿ ಆಘಾತ ..

7. ಸರ ಕಳೆದಿದೆಯೆಂದು ಮನೆಯಲ ಹುಡುಕಿ - ಕೊನೆಗೆ ನಿಮ್ಮ ತಾಯಿಯೇ ಕದ್ದಿರಬಹ್ದು ಎಂದು ಹೆಂಡತಿ ಹೇಳಿದ್ದು - ತಾಯಿಗೆ ಹೇಗೆ ಕೇಳುವುದು ಎಂಬ ಮಗನ ದುಗುಡ -

ಅದು ಗೊತ್ತಾಗಿ ಹೇಮಾ ಮಾಲಿನಿ ತಾ ಅದನ್ನು ಕದ್ದಿಲ್ಲ್ಲ - ತೆಗೆದುಕೊಂಡೂ ಇಲ್ಲ - ಅದರ ಅವಶ್ಯಕತೆಯೂ ತನಗಿಲ್ಲ ಎನ್ನುವುದು - ಮಗ ಹೆಂಡತಿ ಕಣ್ಣೀರು ತನಗೆ ಬೇಜಾರು ಮೂಡಿಸಿ ಕೋಪ ತರಿಸಿತು ಎಂದಾಗ ಹೆಂಡತಿ ಕಣ್ಣೀರು ಕಾಣಿಸಿತು - ತಾಯಿ ಕಣ್ಣೀರು - ಕರುಳು ಆರ್ತನಾದ ನಿನಗೆ ಕೇಳಿಸಲಿಲ್ಲವೇ ? ಎಂಬ ದೃಶ್ಯದ ಸನ್ನಿವೇಶ ... ಆ ಕ್ಷಣದಿ ನಮ್ಮ ಕಣ್ಣಲ್ಲೂ ಕಣ್ಣೀರು ಪಕ್ಕಾ ...

8. ದೀಪಾವಳಿಯಲ್ಲಿ ಅಡುಗೆ ಏನು ? ಊಟ ಏನು ಮಾಡಿದಿರಿ ? ಎಂದು ಹೆಂಡತಿ ಕೇಳಿದಾಗ - ಏನೂ ಇಲ್ಲದಿದ್ದರೂ ಯಾಕೆ ಬೇಜಾರು ಮಾಡುವದು ಎಂದು ಅಮಿತಾಬ್ - ಏನೋ ತಿನ್ನುತ್ತಿರುವ ಹಾಗೆ ಶಬ್ದ ಮಾಡುವದು - ಆ ನಟನೆ ಹೆಂಡತಿಗೆ ಗೊತ್ತಾಗಿ ಕ್ರುದ್ಧಳಾಗುವುದು - ಅಸಹಾಯಕತೆಯಿಂದ ಚಡಪಡಿಸುವುದು ... ಆ ದೃಶ್ಯ ಕರುಳು ಹಿಂಡುವುದು ..

9. ಹೋಳಿ ಹಬ್ಬದ ಸಂದರ್ಭ - ಮತ್ತು ಪ್ರೇಮಿಗಳ ದಿನಾಚರಣೆ ಸಂದರ್ಭದಲ್ಲಿ ಮೊದಲು ಹೆಂಡತಿ ಮಕ್ಕಳು ಜೊತೆ - ಬೇರೆಯಾದ ನಂತರ ಯುವಕ ಯುವತಿ - ಪ್ರೇಮಿಗಳ ಜೊತೆ ಹಾಡು ಹಾಕುತ್ತ ಹೆಜ್ಜೆ ಹಾಕುವ ಅಮಿತಾಬ್ - ಈ ಸನ್ನಿವೇಶಗಳು ಯುವ ನಟರನ್ನು ನಾಚಿಸುವನ್ತಿವೆ .. ಶಿಳ್ಳೆ ಹಾಕಲೇಬೇಕು ...!

10. ದಂಪತಿಗಳು ಮರಳಿ ಒಂದಾಗುವ -' ಅನಿರೀಕ್ಷಿತ ' ವ್ಯಕ್ತಿ ಮನೆ ಸೇರುವ -

ಆ ವ್ಯಕ್ತಿಯ - ಅವನ ಹೆಂಡತಿಯ ಮಮತೆ - ಕೃತಜ್ನತೆ - ಸತ್ಕಾರ - ಗೌರವ ದೃಶ್ಯಗಳು ..

11. ಅಮಿತಾಬ್ ಕೆಲಸ ಮಾಡುತ್ತಿದ್ದ ( ಪಾರ್ಟ್ ಟೈಮ್ ) ಆ ಸ್ಥಳವನ್ನು ಬಿಟ್ಟು ಹೊರಡಲು ಅಮಿತಾಬ್ ಸಿದ್ಧರಾದಾಗ ಅವರ ಅಗಲಿಕೆ ಭರಿಸದೆ - ಹಾಗ್ಯೂ ದಂಪತಿಗಳ ಪುನರ್ಮಿಲನಕ್ಕೆ
ಧಕ್ಕೆ ತರದೇ ಇರಲು ಮಾಲೀಕ - ಗೆಳೆಯ ( ಪರೇಶ್ ರಾವಲ್ ಮತ್ತು ದಂಪತಿ ಹಾಗೂ ಯುವಜನತೆ ) ಕಣ್ಣೀರು ಹಾಕಿ ಬೀಳ್ಕೊಡುವ ದೃಶ್ಯ

12. ಪ್ರೇಕ್ಷಕರಿಗೆ - ಮಕ್ಕಳಿಗೆ ಶಾಕ್ ನೀಡುವ ಅಮಿತಾಬ್ - ಕೊನೆಯಲ್ಲಿ ....!!

>>> ಚಿತ್ರ ಹಿಂದಿಯಲಿ - ಕನ್ನಡದಲ್ಲಿ ನೋಡದೆ ಮಿಸ್ ಮಾಡಿಕೊಂಡಿದ್ದರೆ
ಇದೇ ಸುಸಮಯ .... ನೋಡಿ ... ಫೀಲ್ ಆಗಿ ... ಬದಲಾಗಿ ...ಅಮಿತಾಬ್ ಮತ್ತು ಹೇಮಾ ಮಾಲಿನಿ ಬಹುತೇಕ ಚಿತ್ರಗಳಲ್ಲಿ ಈ ಮೊದಲೇ ನಟಿಸಿರುವರು - ಆದ್ರೆ ಅವರ ಚಿತ್ರಗಳಲಿ ಇದು ಮೊದಲ ಸಾಲಲ್ಲಿ ನಿಲ್ಲುವ ಚಿತ್ರ ...

ಅಮಿತಾಬ್ - ಹೇಮಾ ಮಾಲಿನಿ ಜೋಡಿ ( ಇದೇ ಮಾತು , ಕನ್ನಡ ಚಿತ್ರ ಮತ್ತು ವಿಷ್ಣುವರ್ಧನ್ - ಜಯಪ್ರದ ನಟನೆಗೆ ಹೇಳಬಹ್ದು ) ತೆರೆ ಮೇಲೆ ನೋಡೋಕೆ ಕಣ್ಣಿಗೆ ಹಬ್ಬ - ಅವರ ದುಖ ಸುಖ - ಖುಷಿ ಆ ಕ್ಷಣದಲ್ಲಿ ನಮ್ಮದೂ ಹೌದು ...

ಈ ವಯಸ್ಸಲ್ಲಿ ಅಮಿತಾಬ್ ಯಾವ ಯುವ ನಟರಿಗೂ ಕಮ್ಮಿ ಇಲ್ಲ -

ಇದೇ ಮಾತು ಹೇಮಾ ಮಾಲಿನಿ ಅವರಿಗೂ ಅನ್ವಯಿಸುವ್ದು ...

ಕೊನೆ ಕುಟುಕು ...!!

============

>>> ಇದು ಚಿತ್ರ ಮಾತ್ರ - ಹೀಗೆಲ್ಲ ಆಗಲು ಸಾಧ್ಯವಿಲ್ಲ - ಎಲ್ಲೋ ಕೆಲವರು ಆ ರೀತಿ ಇರಬಹುದು ಎಂದು ಎಂದುಕೊಂಡರೂ -

ಹಿರಿಯ ನಾಗರೀಕರಿಂದ ತುಂಬಿ ತುಳುಕುತ್ತಿರುವ ಅನಾಥಾಶ್ರಮಗಳು - ವೃದ್ಧಾಶ್ರಮಗಳು - ನೆಮ್ಮದಿ ನಿಲಯಗಳು - ಅಲ್ಲಿನವರ ನೋವು ದುಖ ದುಮ್ಮಾನದ ವಿಷಯಗಳು

ಬೇರೆಯದೇ ಕಥೆ ಹೇಳುತ್ತಿವೆ ...:(((

ರಕ್ತ ಹಂಚಿಕೊಂಡು ಹುಟ್ಟಿದ ಮಕ್ಕಳು - ಮಾತಾ ಪಿತರ ಬಗ್ಗೆ ಈ ಅಸಡ್ಡೆ - ಅನಾಧಾರ - ತಾತ್ಸಾರ - ತೋರ್ಸಿ ಅವರ ಬದುಕು ತಾತ್ವಾರ ಮಾಡುತ್ತಿರುವುದು ನಾವೆಲ್ಲಾ ದಿನ ನಿತ್ಯ ಕಣ್ಣಾರೆ ನೋಡುತ್ತಾ ಕೇಳುತ್ತ ಇರುವ ದೃಶ್ಯ -

ಯಾಕೆ ಹೀಗೆ ?

ಎಲ್ಲಿ ಏನು ತಪ್ಪಿದೆ ?

ಇದಕೆ ಪರಿಹಾರ ಏನು ?

ಈ ವಿಷಯದಲ್ಲಿ ವಿದ್ಯಾವಂತರೂ - ಅವಿದ್ಯಾವಂತರು - ಉಪದೇಶ ಪಂಡಿತರೂ ಸಮರೆ ....:(

ಹಿರಿಯರ ಬಗ್ಗೆ ಆದರ - ಅಭಿಮಾನ - ಗೌರವ - ಸಮ್ಮಾನ ನೀಡಬೇಕು ಎಂದು ಮಕ್ಕಳಿಗೆ ಚಿಕ್ಕ ವಯಸ್ಸಲ್ಲೇ ಪಾಲಕರು ತಿಳಿ ಹೇಳುವ ಈ ದೇಶದಲ್ಲಿ - ಅದನ್ನು ಮರೆತು ಹೀಗಾಡುವ ಮಕ್ಕಳನ್ನು ( ಬಹುಪಾಲು ಗಂಡಸರೇ - ಮತ್ತು ಪಾಲನೆ - ಪೋಷಣೆ - ಆಸ್ತಿ ಹಕ್ಕು ಜೊತೆ ಅವರಿಗೆ ಸೇರಿದ್ದು ) ಕಂಡು ಮನ ಮರುಗುವುದು ... ವ್ಯಥೆ ತರುವುದು ...:(((

ಈ ಚಿತ್ರವನ್ನು ಒಂದು ಸಾರಿ ನೋಡಿದವರು ಬದಲಾಗದೆ ಇರರು ...

ಉತ್ತಮ ಸಂದೇಶದ ಅತ್ತ್ಯುತ್ತಮ ತಾರಾಗಣದ ಚಿತ್ರ ...

ಸಕಾಲಿಕ -

ಯಾವತ್ತೂ ಸಲ್ಲುವ ಚಿತ್ರ ...

ನೋಡಿ ....

ನನ್ನ ಐ ಎಂ ಡಿ ಬಿ ಬರಹ :

http://www.imdb.com/title/tt0337578/reviews-36

ಐ ಎಂ ಡಿ ಬಿ :

http://www.imdb.com/title/tt0337578/

ಪೂರ್ತಿ ಸಿನೆಮ ಯೂಟೂಬ್ನಲ್ಲಿ ಅಧಿಕೃತವಾಗಿ :

http://www.youtube.com/watch?v=2XnA1YT1KPY

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.