Skip to main content

ಅಂತೂ ಪ್ರಳಯದ ನಂಬಿಕೆ ಠುಸ್ಸಾಯ್ತು!

ಬರೆದಿದ್ದುDecember 23, 2012
2ಅನಿಸಿಕೆಗಳು

ಅದ್ಯಾವುದೋ ಮಾಯನ್ನರ ಕ್ಯಾಲೆಂಡರ್ ನಲ್ಲಿ ಡಿಸೆಂಬರ್ ೨೧ ೨೦೧೨ ಕೊನೆ ದಿನ ಅಂತೆ. ಅದಕ್ಕೆ ಆ ದಿನದ ನಂತರ ಪ್ರಪಂಚ ನಾಶ ಆಗುತ್ತೆ ಅಂತಾ ಮಾಧ್ಯಮಗಳು ಚರ್ಚೆ ಮಾಡಿದ್ದೇ ಮಾಡಿದ್ದು. ನಿಬಿರು ಅಂತಾ ಯಾವುದೋ ಗ್ರಹ ಬಡಿಯುತ್ತೇ. ಹಾಗಾಗುತ್ತೆ. ಹೀಗಾಗುತ್ತೆ. ಹಾಲಿವುಡ್ ಫಿಲಂ ಗಳ ಗ್ರಾಫಿಕ್ಸ್ ತೋರಿಸಿ ಅದೇ ನಿಜ ಎಂಬಂತೆ ಬಿಂಬಿಸಿ ಜನರನ್ನು ಹೆದರಿಸಿದ್ದೇ ಹೆದರಿಸಿದ್ದು. ಕೆಲವರಂತು ಲೋಹದ ಚೆಂಡು ಮಾಡಿಕೊಂಡು ಅದರಲ್ಲಿ ಅಡಗಿ ಕುಂತಿದ್ದು, ಕೆಲವರು ಬಂಕರ್ ಅಲ್ಲಿ ಅಡಗಿದ್ದರು. ಅಂತೂ ಈಗ ಅವೆಲ್ಲ ಠುಸ್ಸಾಗಿದೆ.  ೨೦೦೦ ಕ್ಕೆ ಪ್ರಳಯ ಆಗುತ್ತೆ ಎಂದು ಬರೆದಾಗ ತರಂಗ ಪತ್ರಿಕೆ ಬಿಸಿ ದೋಸೆಯಂತೆ ಮಾರಾಟವಾಗಿತ್ತು.

ಖಂಡಿತ ಪ್ರಳಯ ಆಗಲಿದೆ. ಮನುಷ್ಯನ ದುರಾಸೆಯಿಂದ ಪ್ರಕೃತಿಯ ನಾಶವಾಗಿ, ಜನಸಂಖ್ಯೆ ಜಾಸ್ತಿ ಆಗಿ, ಕಾಡಿನ ನಾಶವಾಗಿ ಮನುಷ್ಯ ಊಟಕ್ಕೆ ಆಹಾರಕ್ಕೆ ಗತಿ ಇಲ್ಲದಂತೆ ಸಾಯಲಿದ್ದಾನೆ. ಅದಕ್ಕೆ ಇನ್ನೂ ಸಾವಿರಾರು ವರ್ಷ ಬೇಕು. ಅದೇ ಪ್ರಳಯ ಎನ್ನಬಹುದು. ಈ ಗಣಿಯ ಅಗೆಯುವಿಕೆಯಿಂದ ಒಂದೊಮ್ಮೆ ಭೂಗರ್ಭದಿಂದ ಕೊತ ಕೊತ ಕುದಿಯುತ್ತಿರುವ ರಸ ಹೊರಬಂದರೂ ಆಶ್ಚರ್ಯವಿಲ್ಲ. ಅಂದರೆ ನಮ್ಮ ಜೀವನದ ನೆಮ್ಮದಿ ಅಲ್ಲೋಲ ಕಲ್ಲೋಲವಾಗಲು ಜಗತ್ತೇ ಪ್ರಳಯವಾಗಬೇಕಿಲ್ಲ. ಅತ್ಯಾಚಾರ, ಅನಾಚಾರ,  ಕೊಲೆ, ಅಪಘಾತ, ಹಿಂಸೆ ಜಾಸ್ತಿ ಆಗಿ ಮನುಷ್ಯನೇ ಪ್ರಳಯ ಸದೃಶವಾಗಿ ಮೆರೆಯುತ್ತಿರುವಾಗ ಇನ್ನೊಂದು ಪ್ರಳಯದ ಅವಶ್ಯಕತೆ ಇಲ್ಲ. ಏನಂತೀರಾ?

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಭಾನು, 12/23/2012 - 20:04

"ಖಂಡಿತ ಪ್ರಳಯ ಆಗಲಿದೆ. ಮನುಷ್ಯನ ದುರಾಸೆಯಿಂದ ಪ್ರಕೃತಿಯ ನಾಶವಾಗಿ, ಜನಸಂಖ್ಯೆ ಜಾಸ್ತಿ ಆಗಿ, ಕಾಡಿನ ನಾಶವಾಗಿ ಮನುಷ್ಯ ಊಟಕ್ಕೆ ಆಹಾರಕ್ಕೆ ಗತಿ ಇಲ್ಲದಂತೆ ಸಾಯಲಿದ್ದಾನೆ. ಅದಕ್ಕೆ ಇನ್ನೂ ಸಾವಿರಾರು ವರ್ಷ ಬೇಕು. ಅದೇ ಪ್ರಳಯ ಎನ್ನಬಹುದು. ಈ ಗಣಿಯ ಅಗೆಯುವಿಕೆಯಿಂದ ಒಂದೊಮ್ಮೆ ಭೂಗರ್ಭದಿಂದ ಕೊತ ಕೊತ ಕುದಿಯುತ್ತಿರುವ ರಸ ಹೊರಬಂದರೂ ಆಶ್ಚರ್ಯವಿಲ್ಲ. ಅಂದರೆ ನಮ್ಮ ಜೀವನದ ನೆಮ್ಮದಿ ಅಲ್ಲೋಲ ಕಲ್ಲೋಲವಾಗಲು ಜಗತ್ತೇ ಪ್ರಳಯವಾಗಬೇಕಿಲ್ಲ. ಅತ್ಯಾಚಾರ, ಅನಾಚಾರ,  ಕೊಲೆ, ಅಪಘಾತ, ಹಿಂಸೆ ಜಾಸ್ತಿ ಆಗಿ ಮನುಷ್ಯನೇ ಪ್ರಳಯ ಸದೃಶವಾಗಿ ಮೆರೆಯುತ್ತಿರುವಾಗ ಇನ್ನೊಂದು ಪ್ರಳಯದ ಅವಶ್ಯಕತೆ ಇಲ್ಲ. ಏನಂತೀರಾ?"

 

 

>>>ನಿಜ ರಾಜೇಶ್ ಅವ್ರೆ...ಇವುಗಳ ಮುಂದೆ  ಆ ಪ್ರಳಯ ಏನೂ ಅಲ್ಲ..

ಪ್ರಕೃತಿ ಅಳಿವು- ಉಳಿವು-ಸಂರಕ್ಷಣೆ-ಇದೆಲ್ಲ ಯಾರೋ ಮಾಡುವ ಕರ್ತವ್ಯ  ನಮಗ್ಯಾಕೆ ಅದರ ಉಸಾಬರಿ ?ಎನ್ನುವ  ಜನ ಜಾಸ್ತಿ..!!
ಆದ್ರೆ ಇದೊಂತರ ಬೆಕ್ಕಿಗೆ ಘಂಟೆ  ಕಟ್ಟುವವರು ಯಾರು ತರಹದ  ಪ್ರಶ್ನೆ...!!
ಪ್ರಚಲಿತ  ಸಕಾಲಿಕ ವಿಷಯಗಳ ಬಗ್ಗೆ  ನೀವ್ ಬರೆವ ಬರಹಗಳು  ನನಗೆ ಇಷ್ಟ..
ನನ್ನಿ 
ಶುಭವಾಗಲಿ..
\|/
DIVAKARA ಧ, 12/26/2012 - 17:47

ತು೦ಬ ಸೊಗಸಾಗಿದೆ ಸರ್ 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.