Skip to main content

ಬೆಂಗಳೂರಲ್ಲಿನ ಪುಸ್ತಕ ಮೇಳಕ್ಕೆ ಒಂದು ಭೇಟಿ

ಬರೆದಿದ್ದುDecember 17, 2012
3ಅನಿಸಿಕೆಗಳು

ಪ್ಯಾಲೆಸ್ ಗ್ರೌಂಡ್ ಬೆಂಗಳೂರಲ್ಲಿನ ಪುಸ್ತಕ ಮೇಳಕ್ಕೆ ಹೋಗಿದ್ದೆ. ಕಾರನ್ನು ಪಾರ್ಕ್ ಮಾಡಿ ಸ್ಥಳಕ್ಕೆ ಬಂದಾಗ ತಾತ್ಕಾಲಿಕ ಕಟ್ಟಡದ ಮುಂದೆ ಪುನೀತ್ ರಾಜಕುಮಾರ್ ಅವರ ಎರಡು ಕಟೌಟ್ ಅವರೆಡರ ಮುಂದೆ "I Read Books ಮತ್ತೆ ನೀವು?" ಎಂದು ಬರೆದಿತ್ತು. ಎಲಾ ಕನಿಷ್ಟ ಒಂದು ಕಟೌಟ್ ಮುಂದಾದರೂ ಸಂಪೂರ್ಣ ಕನ್ನಡದಲ್ಲಿ "ನಾನು ಪುಸ್ತಕ ಓದುತ್ತೇನೆ. ಮತ್ತೆ ನೀವು?" ಎಂದು ಬರೆದಿರಬಾರದಿತ್ತೇ ಎಂದು ನಾನು ಮನದಲ್ಲೇ ಹಳಹಳಿಸುತ್ತಾ ಒಬ್ಬರಿಗೆ ಇಪ್ಪತ್ತು ರೂಪಾಯಿಯಂತೆ ಟಿಕೆಟ್ ತೆಗೆದುಕೊಂಡೆನು. ನಾವೆಲ್ಲ ಒಳಕ್ಕೆ ಹೋದವು.

ಅಲ್ಲಿಯೂ ಯಾವುದೇ ಸ್ಟಾಲ್ ಮೇಲೆ ಕನ್ನಡದಲ್ಲಿ ಹೆಸರು ಬರೆದಿರಲಿಲ್ಲ. ಇದೂ ಕೂಡಾ ಕನ್ನಡದ ಭವಿಷ್ಯದ ಮುನ್ಸೂಚನೆ. ಇರಲಿ ಬಿಡಿ. ಕನ್ನಡ ಪುಸ್ತಕದ ಸ್ಟಾಲ್ ಗೇನೂ ಕಡಿಮೆ ಇರಲಿಲ್ಲ. ಬೈರಪ್ಪ, ಕಾರಂತರು, ರವಿಬೆಳಗೆರೆ, ಮಾಸ್ತಿ, ಕುವೆಂಪು ಒಂದೇ ಎರಡೇ ಪುಸ್ತಕಗಳ ಸರಮಾಲೆ. ಇಂಗ್ಲೀಷ್ ಪುಸ್ತಕ ಪ್ರಿಯರಿಗೆ ಶೆರ್ಲಾಕ್ಸ್ ಹೋಮ್ಸ್ ನಿಂದ ಹಿಡಿದು ಸಿಡ್ನಿ ಶೆಲ್ಟನ್ ವರೆಗೆ ಎಲ್ಲ ಪುಸ್ತಕದ ರಸದೌತಣವೇ ಕಾದಿತ್ತು.

ಆದರೆ ಮಕ್ಕಳ ಆಕರ್ಷಕ ಕನ್ನಡ ಪುಸ್ತಕಕ್ಕೆ ಬರ ಇತ್ತು. ಇಂಗ್ಲೀಷ್ ಅಲ್ಲಿ ಚಕಮಕ ಹೊಳೆಯುವ ಮಕ್ಕಳನ್ನು ಎಳೆಯುವ ವರ್ಣರಂಜಿತ ಹೈ ಡೆಫಿನೇಶನ್ ಪುಸ್ತಕಗಳಿದ್ದರೆ ಕನ್ನಡದಲ್ಲಿ ಮಕ್ಕಳಿಗೆ ಬ್ಲ್ಯಾಕ್ ಅಂಡ್ ವೈಟ್ ಅಥವಾ ಕಡಿಮೆ ದರ್ಜೆಯ ಹಾಳೆಯಲ್ಲಿ ಮುದ್ರಿಸಿದ ಪುಸ್ತಕಗಳ ರಾಜ್ಯಭಾರ. ನನ್ನ ಮಗನಿಗೆ ಪುಸ್ತಕ ಆರಿಸುವಾಗ ಈ ಕೊರತೆ ನನಗೆ ಕಾಣಿಸಿತು. ಬಣ್ಣ ತುಂಬುವ ಡ್ರಾಯಿಂಗ್ ಪುಸ್ತಕಗಳಲ್ಲೂ ಕನ್ನಡದಲ್ಲಿ ತೀರಾ ಕಡಿಮೆ ಇತ್ತು. ಮಕ್ಕಳು ಇಂಗ್ಲೀಷ್ ಅಲ್ಲಿ ಅಪ್ಪ ಅಮ್ಮನ ಜೊತೆ ಟುಸ್ ಪುಸ್ ಎಂದು ಮಾತನಾಡುತ್ತಾ ಇಂಗ್ಲೀಷ್ ಪುಸ್ತಕ ಆರಿಸುತ್ತಿದ್ದರೆ ಕನ್ನಡ ಮಕ್ಕಳ ಪುಸ್ತಕಗಳು ಶಬರಿಯಂತೆ ಯಾರಾದರೂ ಮಕ್ಕಳು ನಮ್ಮನ್ನು ಆರಿಸುತ್ತಾರೋ ಎಂದು ಆಸೆಯಿಂದ ಕಾಯುತ್ತಿದ್ದವು. ಅಲ್ಲಿ ಇಲ್ಲಿ ಕನ್ನಡ ಮಕ್ಕಳ ಪುಸ್ತಕ ಖರೀದಿಸುವವರು ಇದ್ದರೂ ಅವರ ಪ್ರಮಾಣ ಕಡಿಮೆ.

ಮಗನಿಗೆ ಚಿನ್ನು ಎಂಬ ಕನ್ನಡ ಹಾಡಿನ ಡಿವಿಡಿ, ನನಗೆ ಸುಭಾಷ್ ಕಣ್ಮರೆ - ಒಂದು ದುರಂತದ ಅಧ್ಯಾಯ ಹಾಗೂ ಎಂ. ರಾಮಮೂರ್ತಿಯವರ ಒಂದಿಷ್ಟು ಪತ್ತೇದಾರಿ ಕಥೆಗಳ ಪುಸ್ತಕಗಳನ್ನು ತೆಗೆದುಕೊಂಡೆ. ಎನ್ ನರಸಿಂಹಯ್ಯ ಅವರ ಪುಸ್ತಕಕ್ಕೆ ಹುಡುಕಿದರೂ ಸಿಗಲಿಲ್ಲ. ಕನಿಷ್ಟ ಮುದ್ರಿಸದಿದ್ದರೆ ಹೋಗಲಿ ಅಂತರ್ಜಾಲದಲ್ಲಾದರೂ ಲಭ್ಯ ಇರುವಂತೆ ಇದ್ದರೆ ಆಸಕ್ತರು ಇವರ ಪುಸ್ತಕ ಓದುತ್ತಿದ್ದರು. ಏನೇ ಆಗಲಿ ಹತ್ತು ಹಲವು ಪುಸ್ತಕಗಳನ್ನು ಕಣ್ತುಂಬಿಕೊಂಡು ಖುಷಿಯಿಂದ ನಾವು ಮನೆಯತ್ತ ಹೊರಟೆವು.

ನೀವೂ ಪುಸ್ತಕ ಮೇಳಕ್ಕೆ ಹೋಗಿದ್ದೀರಾ? ನಿಮ್ಮ ಅನುಭವ ಏನು ಹೇಳ್ತೀರಾ?

 

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಧ, 12/19/2012 - 14:21

ಪ್ರಿಯ ರಾಜೇಶ್ ಅವ್ರೆ 

ಒಂದೂ  ಕನ್ನಡದಲ್ಲಿ ಇರಲಿಲ್ಲ:(((

ಪುಸ್ತಕ ಮೇಳ  ಯಶಸ್ವಿ ಎಂದು ಓದಿದೆ...!!
ನಾ ಯಾವತ್ತು ಭೇಟಿ ಇತ್ತಿಲ್ಲ  ಆದ್ರೆ  ಪುಸ್ತಕಗಳನ್ನು  ಸ್ವಪ್ನ  ಬುಕ್ ಸ್ಟಾಲ್ನಲಿ ಖರೀದಿಸುವೆ.
ಕನ್ನಡಕ್ಕೆ ಬಂದ  -ತಂದ  ದುಸ್ಥಿತಿ  ಚೆನ್ನಾಗಿ  ಮನಗಾಣಿಸಿರುವಿರಿ ...
ಯಾರೊಬ್ಬರ ಗಮನವೂ ಅತ್ತ ಹರಿಯದಿರುವುದು (ಕನ್ನಡ ಹೋರಾಟಗಾರರು..) :((
ಚಿತ್ರಗಳನ್ನು  ಸೇರಿಸಿದ್ದರೆ ಚೆನ್ನಿತ್ತು/...
ಹೊಸ ಬರಹಗಳನ್ನು  -ಜೊತೆಗೆ ಚಿತ್ರಗಳನ್ನು  ಸೇರಿಸಲು ಆಗುತ್ತಿಲ್ಲ..(ವಿಸ್ಮಯನಗರಿಯಲ್ಲಿ ಇತ್ತೀಚಿಗೆ )...
ಹಲವು ಬರಹಗಳನ್ನು ಬರೆದು -ಸೇರಿಸಲು ಕಾಯ್ತಿರುವೆ..!
>>>ಆಗಾಗ  ನಾವ್ ಅರಿಯದ  ನೋಡದ  ವಿಷಯಗಳ ಬಗ್ಗೆ  ಬರಹ ಬರೆದು  ನಮಗೆ ಜ್ಞಾನ ಹೆಚ್ಚುವ ಹಾಗೆ ಮಾಡುತ್ತಿರುವಿರಿ... ನನ್ನಿ 
ಶುಭವಾಗಲಿ..
\|/
ಮೇಲಧಿಕಾರಿ ಧ, 12/19/2012 - 22:16

ನಮಸ್ಕಾರ ವೆಂಕಟೇಶ್ ಅವರೇ,


ಈ ಮುಂದಿನ ಕೊಂಡಿ ಭೇಟಿ ಕೊಡುವದರ ಮೂಲಕ ವಿಸ್ಮಯದಲ್ಲಿ ಲೇಖನ ಸೇರಿಸಬಹುದು. ಈಗ ಪಿಸುಮಾತು, ಕವನ, ವಿಮರ್ಶೆ, ಮಾಹಿತಿ, ಸಮಾಚಾರಗಳಿಗೆ ಪ್ರತ್ಯೇಕ ಅರ್ಜಿ ಇಲ್ಲ. ಒಂದೇ ಅರ್ಜಿ ಅಲ್ಲಿಯೇ ಲೇಖನದ ಬಗೆಯನ್ನು ಸೂಚಿಸಬಹುದು.


http://vismayanagari.com/node/add/article


ಚಿತ್ರ ಸೇರಿಸಲು ಲೇಖನದ ಮುಖ್ಯ ಭಾಗದ ಎಡಿಟರ್ ಕೆಳಗೆ ಚಿತ್ರ ಎಂಬ ಬಾಕ್ಸ್ ಇದೆ. ಅಲ್ಲಿ ಚಿತ್ರವನ್ನು ಬ್ರೌಸ್ ಮಾಡಿ ಸೇರಿಸಬಹುದು. ನಂತರ ಕಳುಹಿಸು ಬಟನ್ ಕ್ಲಿಕ್ ಮಾಡಿ.


ಹೀಗೆ ನೀವು ಹತ್ತು ಚಿತ್ರದವರೆಗೆ ಸೇರಿಸಬಹುದು. ವಿಸ್ಮಯ ನಗರಿ ಆಟೋಮ್ಯಾಟಿಕ್ ಆಗಿ ಮೊದಲ ಚಿತ್ರ ತೋರಿಸುತ್ತದೆ. ನೀವು ಇನ್ಸರ್ಟ್ ಬಟನ್ ಬಳಸಿ ನಿಮ್ಮ ಲೇಖನದಲ್ಲಿ ಉಳಿದ ಚಿತ್ರ ಸೇರಿಸಬಹುದು. ಅಥವಾ ಮೇಲಧಿಕಾರಿಗಳು ನಂತರ ಮಾಡರೇಟಿಂಗ್ ಮಾಡುವಾಗ ಸೇರಿಸುವರು. ಇದಕ್ಕೆ ವಿಡಿಯೋ ಮಾಡುವ ಪ್ಲಾನ್ ಇದೆ. Smile ಇನ್ನೂ ಏನಾದ್ರೂ ತೊಂದರೆ ಇದ್ರೆ ತಿಳಿಸಿ.


ವಂದನೆಗಳೊಂದಿಗೆ


ಮೇಲಧಿಕಾರಿ


--ವಿಸ್ಮಯನಗರಿ.ಕಾಂ

venkatb83 ಶನಿ, 12/22/2012 - 17:04

ಪ್ರಿಯ ನಿರ್ವಾಹಕ ಮಿತ್ರ ರಾಜೇಶ್ ಅವ್ರೆ-

ನಿಮ್ಮ ಮಾರುತ್ತರವನ್ನು ಈಗ ನೋಡಿದೆ..
ಈಗಸ್ಟೆ  ಒಂದು ಬರಹವನ್ನು(ಬಾಗ್ ಬನ್  ಚಿತ್ರದ ಬಗ್ಗೆ) ಸೇರಿಸಿದೆ -ಒಂದು ಮುಖ್ಯ ಚಿತ್ರವನ್ನು  ಸೇರಿಸಲಸ್ತೆ  ಸಾಧ್ಯ ಆಯ್ತು..
(ನಾ ಹಲವು ಚಿತ್ರಗಳನ್ನು ಸೇರಿಸಿದ್ದರೂ) ಬರಹ ಪೂರ್ತಿ ಬಂದಿದೆ.(ಲಿಂಕ್ ಬಿಟ್ಟು)..
ಇದೇನೂ ತೊಂದರೆಯಲ್ಲ..
ಶುಭವಾಗಲಿ..
\|/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.