Skip to main content

ಈ ಬರಹಗಳೇ ಹೀಗೆ..!

ಇಂದ venkatb83
ಬರೆದಿದ್ದುDecember 15, 2012
7ಅನಿಸಿಕೆಗಳು

ಈ ಬರಹಗಳೇ  ಹೀಗೆ..!

ಬರೆಯ ಹೊರಟರೆ  ಮಾಯವಾಗಿ

ಸುಮನಿದ್ದಾಗ  ಉಕ್ಕುಕ್ಕಿ ಬರುವ  ಶಬ್ದ ಪ್ರವಾಹ..!!

 

ಒಮ್ಮೊಮ್ಮೆ ಧಾರಾಕಾರ

ಕೆಲವೊಮ್ಮೆ  ಅಂಧಕಾರ

ಅನುಭವಿಸಿ ಬರೆಯೋದೇ?

ಅನುಭವದ್ದೇ ಬರೆಯೋದೇ?

 

ಅಕ್ಷರಗಳ -ಸುಳಿಯಲ್ಲಿ  ಸಿಕ್ಕು

ಗೊಂದಲದ ಪ್ರವಾಹದಿ  ಈಜಿ

ದಡ  ಸೇರಿದಾಗ  ಮೈ ಮನಕೆ ಮೆತ್ತಿದ

ಅಕ್ಷರಗಳ ಜೋಡ್ಸಿ  ಕೂಡಿಸಿ ಬರೆದಾಗ

ಹಲವು ಸಾಲಾಯ್ತು  -  ಪ್ರತ್ಯೇಕಿಸುವ  ಸವಾಲೂ ಆಯ್ತು..

 

ಕೆಲವು ರತ್ನ ಹಲವು ಹವಳ

ಮಗದಷ್ಟು  ಮುತ್ತು  ಮತ್ತಷ್ಟು  ಮರಳು .....

 

ಲೇಖಕರು

venkatb83

ಮಿಂಚು.........

ಈಗಿರುವುದು ತಂತ್ರಜ್ಞಾನದ /ತಂತ್ರಜ್ಞರ ತವರು,ನಮ್ಮ ಕರುನಾಡಿನ ಬೆಂಗಳೂರಲ್ಲಿ. ,ಹಾಗೊಮ್ಮೆ ನೆಟ್ ಸರ್ಚ್ ಮಾಡುತ್ತಿರುವಾಗ ಈ ವಿಸ್ಮಯ ನಗರಿ ನೋಡಿ ಇಲ್ಲಿಗೆ ಸೇರಿದೆ. ನಾನು ದಿನಂಪ್ರತಿ ಬರೆಯುವವನಲ್ಲ. ಸಮಯವಿದ್ದಾಗ ಒಂದೇ ಸಾರಿ ಮೂರ್ನಾಲ್ಕು ಬರಹ, ಪ್ರತಿಕ್ರಿಯೆ ಬರೆಯಬಲ್ಲೆ. ಸುತ್ತ-ಮುತ್ತ ನಡೆಯುವ ಕೆಲ ಘಟನೆಗಳು, ನನ್ನ ವಿಷಯಗಳಾಗಿ ಬರವಣಿಗೆಗಳಾಗಿ, ವಿಸ್ಮಯನಗರಿ ಒಡಲು ಸೇರುತ್ತವೆ.

ಅನಿಸಿಕೆಗಳು

ಮಂಕವಿ (ಪ್ರಮಾಣಿಸಲ್ಪಟ್ಟಿಲ್ಲ.) ಶನಿ, 12/22/2012 - 14:05

ಈ ಬರಹಗಳೆ

ಹೀಗೆ ಸರ್ ಯಾರು ಉಹಿಸಿದ ಹಾಗೆ  ಅವುಗಳ ಭಾವವೆ ಹಾಗೆ

praveen.kulkarni ಗುರು, 12/27/2012 - 18:39

ಸಪ್ತಗಿರಿಯವರಿಗೆ ನಮಸ್ಕಾರ,



ಈ ಬರಹಗಳು ಮಾಡುವ ಚೆಷ್ಟೇಗಳನ್ನ  ತುಂಬಾ ಸರಿಯಾಗಿ ಹಿಡಿದಿಟ್ಟಿದ್ದಿರಾ...ಇದು ಖಂಡಿತ ಎಲ್ಲ ಬರಹಗಾರರ ಭಾವನೆಯಾಗಿರುವುದು

venkatb83 ಶನಿ, 12/29/2012 - 18:18

ಪ್ರವೀಣ್ ಅವ್ರೆ  ನಿಮ್ಮನ್ನು ಈ ನಡುವೆ  ಅಲ್ಲೂ(ಸಂಪದ)ಇಲ್ಲೂ  ಬಹಳ ಮಿಸ್ ಮಾಡಿಕೊಳ್ಳುತ್ತಿರುವೆವು ....!!
ಹಾ..ಈ ಬರಹಗಳೇ ಹಾಗೆ---ಹೀಗೆ..!!
ಪ್ರತಿಕ್ರಿಯೆಗೆ ನನ್ನಿ 
ಶುಭವಾಗಲಿ..

\|/

praveen.kulkarni ಗುರು, 01/03/2013 - 01:36

ಸಪ್ತಗಿರಿಯವರೇ ಮೊನ್ನೆಯಷ್ಟೇ(12/12/12) ರಂದು ನಾನು ಅಪ್ಪನಾದ್ದರಿಂದ ಸಿಕ್ಕಷ್ಟು ಸಮಯ ನನ್ನ ಮಗಳಿಗೆ ಕೊಡುತ್ತಿದ್ದೇನೆ...ಆದರೂ ಬಿಡುವು ಮಾಡಿಕೊಂಡು ಆಗಾಗ ನಿಮ್ಮ ಹಾಗೂ ವಿಸ್ಮಯನಗರಿಯ ಹಾಗೋ ಅಲ್ಲಿನ ಬರಹಗಳನ್ನು ಓಡುತಿದ್ದೇನೆ.ತುಂಬಾ ಖುಷಿಯಾಗುತ್ತೆ ನಿಮ್ಮ ಬರಹಗಳನ್ನು ಹಾಗು ಅದಕ್ಕಿಂತ ಮಿಗಿಲಾಗಿ ನೀವು ಬರಹಗಳಿಗೆ ಕಾಮೆಂಟ್ ಹಾಕುವ ಶೈಲಿಯನ್ನ ಓದುವಾಗ..ಆದಷ್ಟು ಬೇಗ ಮತ್ತೆ ನಿಮ್ಮೆಲ್ಲರನ್ನು ಸೇರುವೆ...

venkatb83 ಶನಿ, 01/05/2013 - 19:42

 

 

 

 

 

ರಾಜೇಶ್ ಅವರೇ- ನಿಮ್ಮ ಪ್ರತಿಕ್ರಿಯೆಗೆ ನನ್ನಿ ..

ನಾ ಸಹಾ ಈ ಮಧ್ಯೆ ನೆಟ್ನಿಂದ ಕೆಲ ದಿನ ದೂರ ಇದ್ದೆ..ಈಗಸ್ಟೆ  ನಿಮ್ಮ  ಪ್ರತಿಕ್ರಿಯೆ ನೋಡಿದೆ.

ನೀವು 12-12-12 ರಂದು ಮಗುವಿನ ತಂದೆ ಆದದ್ದು -ಆ ವಿಶೇಷದ ದಿನ ಹುಟ್ಟಿದ  ನಿಮ್ಮ ಮಗುವಿಗೆ  -ವಿಶೇಷ ಎಂದು ಹೆಸರು ಇಕ್ಕಿಲ್ಲ ತಾನೇ..?

ನಿಜಕ್ಕೂ ಅದು ವಿಶೇಷ ದಿನ ಮತ್ತು  ಸಂತಸ ನೀಡುವ  ವಿಷ್ಯ.

  ನಿಮಗೆ ಶುಭಾಶಯಗಳು..

ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

ಶುಭವಾಗಲಿ..

\|/

 

praveen.kulkarni ಭಾನು, 01/06/2013 - 12:41

ಸಪ್ತಗಿರಿಗಳೇ, 

ಅಪ್ಪನಾಗಿದ್ದು ನಾನು ರಾಜೇಶ್ ಅವರಲ್ಲ :) ,ಅನಾಯಾಸವಾಗಿ ರಾಜೇಶ್ ಅವರನ್ನು ತಂದೆಯಾಗಿಸಿದ್ದಿರಾ :)ತುಂಬಾ ದಿನಗಳ ನಂತರ ನೆಟ್ ಗೆ ಭೇಟಿ ಕೊಟ್ಟಿದ್ದಿರಾ ಅದಕ್ಕೆ ಹೀಗೆ ಅನ್ನಿಸುತ್ತೆ.
venkatb83 ಭಾನು, 01/06/2013 - 15:15

;()))

ಪ್ರವೀಣ್ ಅವರೆ

ಧಾವನ್ತದಲ್ಲಿ ಪ್ರತಿಕ್ರ್ಯಿಸುವಾಗ ಆದ ಈ ಪ್ರಮಾದ ಈಗ ಅರಿವಿಗೆ ಬನ್ತು..!!

ರಾಜೆಶ್ ಅವರು ಸಹಾ ಆಗಲೆ ಮಗುವಿನ ತ೦ದೆ ಆದ ಬಗ್ಗೆ ಎಲ್ಲೊ ಬರೆದದ್ದು ಓದಿದ ನೆನಪು...!

 

ಶುಭವಾಗಲಿ..

 

\।/

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.