Skip to main content

ಆ ಕೊಲೆ ಹೇಗೆ ಮಾಡಿದರು ಅಂತಾ ತೋರಸ್ತೀವಿ(ಕಲಸ್ತೀವಿ) ಒಂದು ಬ್ರೆಕ್ ನ ನಂತರ"

ಇಂದ K.M.Vishwanath
ಬರೆದಿದ್ದುDecember 12, 2012
2ಅನಿಸಿಕೆಗಳು

ನಾವು ಭಾರತೀಯರು ಮುಂದುವರಿಯುತ್ತಿದ್ದೇವೆ ಅಲ್ಲವೆ? ಇದು ಸತ್ಯವಾದ ಮಾತು ಪ್ರತಿಯೊಂದು ರಂಗದಲ್ಲೂ ಯಶಸ್ವಿ ಸಾಧಿಸಿ ಮುನ್ನುಗ್ಗುತ್ತಿದ್ದೇವೆ. ಯಾರನ್ನು ಕೇಳದೆ ಸಾಗುತ್ತಿದ್ದೇವೆ. ಎಲ್ಲಾ ಕ್ಷೇತ್ರಗಳಿಗಿಂತ ವಿಭಿನ್ನವಾಗಿ ನನಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿರುವದು ಈ ಸಮೂಹ ಮಾದ್ಯಮ ಕ್ಷೇತ್ರ. ಇಷ್ಟೊಂದು ಮುಂದುವರೆಯುವ ಅವಶ್ಯಕತೆ ಇದೆಯೆ ಅತಿಯಾದ ಮುಂದುವರಿಕೆ ನಮಗೆ ಮಾರಕವಾಗಿ ಕಾಣುತ್ತಿದೆಯೆ ಈ ಮಾದ್ಯಮಗಳ ಕುರಿತು ಹೀಗೊಂದು ಚಿಂತನೆ ಅವಶ್ಯಕತೆ ಇದೆ ಬನ್ನಿ ಒಮ್ಮೆ ಹೀಗೆ ಚಿಂತಿಸೂಣ .

ಈಗ ಸದ್ಯಕ್ಕೆ ನಮ್ಮ ರಾಜ್ಯದ ಬಗ್ಗೆ ಮಾತ್ರ ಯೋಚಿಸುವುದಾದರೆ ಕರ್ನಾಟಕದಲ್ಲಿ ಈಗ ಸದ್ಯಕ್ಕೆ ದಿನ ಪತ್ರಿಕೆಗಳು ತುಂಬಿ ತುಳುಕುತ್ತಿವೆ .ಮೊನ್ನೆ ನಾನು ಒಬ್ಬ ಪೇಪರ್ ಮಾರುವವನ ಅಂಗಡಿಗೆ ಬೇಟಿಕೊಟ್ಟಿದ್ದೆ ಅಲ್ಲಿ ಹೋದ ತಕ್ಷಣ ವಿಚಿತ್ರ ಅನುಭವ , ಆ ಅಂಗಡಿಯಲ್ಲಿ ನಮ್ಮ ರಾಜ್ಯದ ಎಲ್ಲಾ ಪ್ರತಿಷ್ಠಿತ ಪತ್ರಿಕೆಗಳು ಇದ್ದವು . ನನಗೆ ತಿಳಿಯದಾಯಿತು ಯಾವ ಪತ್ರಿಕೆ ಆರಿಸಿಕೊಳ್ಳಲಿ ಎಂದು ಅಲ್ಲಿರುವ ಪತ್ರಿಕೆ ಒಂದೆ ಎರಡೆ ದಿನ ಪತ್ರಿಕೆ,ವಾರಪತ್ರಿಕೆ,ಮಾಸಪತ್ರಿಕೆ ಅದರ ಜೊತಗೆ ಎಷ್ಟೊಂದು ಪುರವಣಿಗಳು. ಅವುಗಳ ವಿಚಿತ್ರವಾದ ತಲೆಬರಹ ಬೇರೆಬೇರೆಯಾಗಿದ್ದರು ಅವುಗಳ ತಾತ್ಪರ್ಯ ಮಾತ್ರ ಒಂದೆ ಆಗಿದೆ. ಎಲ್ಲಾ ಪತ್ರಿಕೆಗಳು ಒಂದೆ ವಿಷಯವನ್ನು ಆ ದಿನಕ್ಕೆ ಬೇರೆ ರೀತಿಯಲ್ಲಿ ತಲೆಬರಹ ಮಾಡಿಕೊಳ್ಳುವದು ತುಂಬಾ ಸ್ಪಷ್ಟವಾಗಿ ಕಂಡುಬರುತ್ತದೆ.

ಇವು ಜನರಿಗೆ ಸುದ್ದಿಯನ್ನು ಹೊತ್ತು ತರುತ್ತಿರುವವೊ ಇಲ್ಲಾ ಮಾಹಿತಿ ನೀಡುತ್ತಿರುವವೂ ಅಥವಾ ಜನರಿಗೆ ಹಾದಿ ತಪ್ಪಿಸುತ್ತಿರುವವೊ ತಿಳಿಯದಾಗಿದೆ ಇನ್ನು ಜಲ್ಲಾ ಮಟ್ಟದ ವರದಿಯಂತು ತುಂಬಾನೆ ವಿಚಿತ್ರ ಸಣ್ಣ ಉದಾಹರಣೆಯೆಂದರೆ ಮೊನ್ನೆ ಒಂದೆ ಸುದ್ದಿಯನ್ನು ಎರಡು ಪತ್ರಿಕೆ ಒಂದೆ ರೀತಿಯಾಗಿ ಬರೆದಿದ್ದವು ಆದರೆ ಅವುಗಳ ತಲೆಬರಹ ಮಾತ್ರ ಬೇರೆ ಬೇರೆ ಯಾಗಿದ್ದವು ವಿಷಯ ಒಂದೆ ಅದರ ತಾತ್ಪರ್ಯವು ಒಂದೆ ಆಗಿತ್ತು. ಹಾಗಾದರೆ ಓದುವವರನ್ನು ದಡ್ಡರೆಂದು ಭಾವಿಸಿದ್ದಾರೆಯೆ? ಈ ಪತ್ರಿಕೆಯವರು ಇನ್ನು ಪತ್ರಿಕೆಯ ಒಳಗಡೆ ಹೋದರೆ ಪತ್ರಿಕೆ ತುಂಬಾ ಕೆಲವು ಅಂಕಣಗಳು ಚರ್ಚೆಗಳಿಗೆ ಮಿಸಲಾಗಿವೆ ಅಲ್ಲಿನ ವಿಷಯ ನೋಡಿದರೆ ಬರಿ ಕಚ್ಚಾಟ ಮತ್ತು ಇದು ಒಂದು ಹುಚ್ಚಾಟವಾಗಿ ಪರಿಣಮಿಸಿದೆ ಆ ವಿಷಯ ಒಂದೆ ಪತ್ರಿಕೆ ಅಲ್ಲಾ ಎಲ್ಲಾ ಪತ್ರಿಕೆಗೂ ಹರಡಿ ಎಲ್ಲಾ ಪತ್ರಿಕೆಯಲ್ಲು ಒಂದೆ ವಾಸನೆ ಹರಡುತ್ತದೆ. ಒಂದೊಂದು ವಾರಗಟ್ಟಲೆ ಅದೊಂದೆ ದೊಡ್ಡ ಚರ್ಚೆ ಆ ಪತ್ರಿಕೆಯ ಪ್ರಮುಖ ಸುದ್ದಿಗಳೆಲ್ಲಾ ಮೂಲೆಗುಂಪಾಗಿ ಹೋಗುತ್ತವೆ. ಆ ಹುಚ್ಚು ಚರ್ಚೆಯ ನಡುವೆ ಇನ್ನು ಪತ್ರಿಕೆಗಳಲ್ಲಿ ಕೆಲವು ಹೇಳಿಕೆಗಳು ಕೊಡುತ್ತಾರೆ ಅವು ನಾವು ಸುಕ್ಷ್ಮವಾಗಿ ಗಮನಿಸಬೇಕು ಆ ಮಾತಿನಲ್ಲಿ ಯಾವದು ಸಮಾಜಿಕ ಕಳಕಳಿ ಅಲ್ಲಾ ಬರಿ ಅವರು ಇವರಿಗೆ ಬೈದರು , ಇವರು ಅವರಿಗೆ ವಿರುದ್ದವಾಗಿ ಬೈದರು ಇವೆಲ್ಲಾ ನಮಗೆ ಬೇಕೆ ಇಲ್ಲಿ ಎಲ್ಲರ ಸ್ವಾರ್ಥ ಅಡಗಿದೆ ಎಂಬುವದು ಸ್ಪಷ್ಟವಾದ ಮಾತು .

ಇನ್ನು ಪುರವಣಿಗಳ ಮಾತೆ ಬೇರೆ ದಿನಕ್ಕೊಂದು ಪುರವಣಿ ಎಲ್ಲಾ ಪತ್ರಿಕೆಗೂ ಕಡ್ಡಾಯ ಓದುಗ ಯಾವದನ್ನು ಓದಬೇಕು ಯಾವದನ್ನ ಬಿಡಬೇಕು ಎನ್ನುವ ಗೊಂದಲದಲ್ಲಿದ್ದಾನೆ .ಇನ್ನು ಓದಿದರೆ ಎಲ್ಲವು ಗೊಂದಲಮಯವಾಗಿ ಕಾಣುತ್ತದೆ. ವಿಜಯಕರ್ನಾಟಕ,ಕನ್ನಡಪ್ರಭ,ಉದಯವಾಣಿ,ಸಂಯುಕ್ತಕರ್ನಾಟಕ,ಪ್ರಜಾವಾಣಿ, ಹೊಸಧಿಗಂತ , ವಿಜಯವಾಣಿ , ವಿಜಯ ನೆಕ್ಸ್ಟ್ ,ಕಣ್ಣು ಪತ್ರಿಕೆ, ಹಾಯ್ ಬೆಂಗಳೂರು , ಅಗ್ನಿ , ಪೋಲಿಸ್ ನ್ಯೂಸ್ , ಜಾಬ್ ನ್ಯೂಸ್ , ಉದ್ಯೋಗವಾರ್ತೆ , ಸುಧಾ, ಸಖಿ , ಕರ್ಮವೀರ ,ರೂಪತಾರಾ, ಅರಗಿಣಿ, ಚಿತ್ರಸೌರಭ, ಸಂಡೆ ಇಂಡಿಯಾ, ಮಯೂರ,ಮಾನಸ , ಓ ಮನಸೆ , ಪ್ರಿಯಾಂಕ, ಸಂಜೆವಾಣಿ, ಸಂದ್ಯಾಕಾಲ , ಸುವರ್ಣಟೈಮ್ಸ್ ಆಫ್ ಕರ್ನಾಟಕ , ಮುಂಜಾವು ,ವಿಶಲಾ ವಿಶ್ವ, ನಿಮ್ಮಕಿಡಿ, ಲಂಕೇಶ ಪತ್ರಿಕೆ ,ಪ್ರೇರಣಾ, ಸತ್ಯಕಾಮ , ವಾರ್ತಾಭಾರತಿ, ಪ್ರಜಾಪ್ರಗತಿ, ಸುದ್ಧಿಮೂಲ,ಬಿರುಗಾಳಿ. ಅಬ್ಬಾ ಈ ಪತ್ರಿಕೆಗಳ ಹೆಸರು ಹೇಳೋದರಲ್ಲೆ ಸುಸ್ತಾಗೊಯಿತು ಇವುಗಳು ಹೇಗೆ ಓದೊದು ಎಷ್ಟು ಕಷ್ಟ ಇನ್ನು ಅವಗಳನ್ನು ದಿನಾಲು ಓದಿ ಮುಗಿಸಬೇಕಾದರೆ ಎಷ್ಟು ಕಷ್ಟ ಆಗಬಹದು ಹೇಳಿ . ಈ ಎಲ್ಲಾ ಪತ್ರಿಕೆ ಒಬ್ಬ ಮನುಷ್ಯ ಓದಿ ಮುಗಿಸಲು ಸಾದ್ಯವೆ ಹೇಳಿ ಹೀಂಗಂತ ಪರವಾನಿಗೆ ನೀಡಿರುವ ಪತ್ರಿಕೆಗಳ ಇಲಾಖೆ ಸಂಬಂಧಿಸಿದ ಅಧಿಕಾರಿಗಳು ಯೋಚಿಸಿಲ್ಲವೆ?

ಈ ಪತ್ರಿಕೆಗಳು ಸಾಮಾನ್ಯವಾಗಿ ಜನರಿಗೆ ಸುದ್ದಿಮಾಹಿತಿ ನೀಡುವ ಕೆಲಸವಾಗಬೇಕು ಆದರೆ ಕೆಲವು ಪತ್ರಿಕೆಗಳಂತು ಬರಿ ಎಲ್ಲರಿಗೂ ಹೆದರಿಸಿ ಟಾರ್ಗೆಟ್ ಮಾಡಿ ದುಡ್ಡು ವಸೂಲಿಗೆ ಬಿದ್ದಿರುವ ಸತ್ಯ ಗೊತ್ತಿದ್ದರು ಬೆಳಕಿಗೆ ಬರುತ್ತಿಲ್ಲಾ ಇಂತಹ ಹೀನಾಯ ಕೆಲಸಕ್ಕೆ ಎಷ್ಟೊ ಪತ್ರಿಕೆಗಳು ಮುಗಿಬಿದ್ದಿವೆ ಎಂಬುದು ಗೊತ್ತಿರದೆ ಇದ್ದರು ಸತ್ಯವಾದ ಮಾತು . ತಾವು ಕೇಳಿದಷ್ಟು ಹಣ ಕೊಟ್ಟರೆ ಮಾತ್ರ ಸುದ್ದಿ ಮುಚ್ಚಿಹಾಕುತ್ತೇವೆ. ಇಲ್ಲವಾದಲ್ಲಿ ಅದನ್ನು ಜನರ ಮುಂದೆ ಬೈಲಿಗೆ ಎಳೆಯುತ್ತೇವೆ ಎನ್ನುವ ಮಾತುಗಳು ಒಳಗಡೆ ಮಾತ್ರ ಇರುತ್ತೆ ಎಲ್ಲಿಯು ಹೊರಗೆ ಬಂದಿಲ್ಲಾ ಅಷ್ಟೆ ಅನೇಕ ಪತ್ರಿಕೆಗಳು ಹೆದರಿಸುವ ಕೆಲಸದಲ್ಲಿ ನಿರತವಾಗಿವೆ ಎಲ್ಲವು ಬರಿ ನೋಟಿನಲ್ಲಿ ಅದರ ನೋಟದಲ್ಲಿ ಕಳಿದುಹೊಗಿದೆ. ಈ ಪತ್ರಿಕೊದ್ಯಮ ಹಾಗಾಗಿ ಕೊನೆಗೆ ಎಲ್ಲಾ ಬರಹಗಳು ಸುದ್ದಿಗಳು ಮೂಲೆಗೆ ಕಸವಾಗಿ ಬಿಡುತ್ತವೆ . ಅರೆಗರಿಗೆ ಒಮ್ಮೆ ಸತ್ಯವನ್ನು ಒರೆಗೆಚ್ಚಿನೋಡುವ ಕಾರ್ಯ ಸದ್ಯ ಪತ್ರಿಕೆಯಲ್ಲಿ ನಡೆಯುತ್ತಿಲ್ಲಾ ಎಂಬುವದು ವಿಪರ್ಯಾಸದ ಸಂಗತಿ ಇದರಿಂದ ನಮ್ಮ ಪತ್ರಿಕೆಯ ಬಗ್ಗೆ ಪತ್ರಕರ್ತರ ಬಗ್ಗೆ ಗೌರವ ಕಡಿಮೆಯಾಗಿದೆ . ಅಂದು ಪತ್ರಕರ್ತರೆಂದರೆ ಭಯ ಗೌರವ ಎರಡು ಇತ್ತು. ಆದರೆ ಈಗ ಇರಲಿ ಬಿಡು ಎನ್ನುತ್ತಾರೆ. ಯಾಕೆಂದರೆ ಯಾರು ಸಾಚಾ ಆಗಿ ಉಳಿದಿಲ್ಲಾ ಮಾದ್ಯಮದವರು ಕೂಡಾ ಭ್ರಷ್ಟರೆ ಎನ್ನುವ ನಿಟ್ಟಿನಲ್ಲಿ ಮಾತಾಡುತ್ತಿದ್ದಾರೆ. ಒಬ್ಬ ಖ್ಯಾತ ಅಂಕಣಕಾರ ಒಬ್ಬ ಭ್ರಷ್ಠ ರಾಜಕಾರಣಿಯೆಂದು ನಾಡೆ ಒಪ್ಪಿರುವವನನ್ನು ಅವನು ತಪ್ಪೆ ಮಾಡಿಲ್ಲಾ ಆತನು ಜನರ ಉದ್ದಾರಕ್ಕಾಗಿ ಭ್ರಮಣೆಗೆ ಒಳಗಾದ ಎಂದು ಬಿಂಬಿಸುವದು ಅವನು ಒಳ್ಳೆಯವನು ಎಂದು ಹೇಳುವದು ಎಂದರೆ ನಮ್ಮ ಪತ್ರಿಕೊದ್ಯಮ ಎಲ್ಲಗೆ ಬಂದು ನಿಂತಿದೆ ಯೋಚಿಸಿ

 
ಇನ್ನು ಸ್ವಲ್ಪ ನಾವು ಈ ಟಿವಿ ಮಾದ್ಯಮದ ಕಡೆಗೆ ಹೊರಳುವದಾದರೆ ಅವು ಕೂಡಾ ನಾಯಿಕೊಡೆಯಂತೆ ಬೆಳೆದು ನಿಂತಿವೆ ಅವು ಕೂಡಾ ಒಂದೆ ಎರಡೆ ಸುಮಾರು ಚಾನಲ್ ಗಳು ಬಂದಿವೆ ನಮ್ಮ ಸರ್ಕಾರದ ಚಾನಲ್ ಆದ ಡಿಡಿ ೧ ಎಲ್ಲಿ ಮರೆಯಾಗಿ ಹೋಗಿದೆ ತಿಳಿಯುತ್ತಿಲ್ಲಾ ಈ ಬೆಳೆದಿರುವ ಎಲ್ಲಾ ಚಾನಲ್ ಗಳ ಸಂದೇಶವೇನು? ಒಂದು ಸಣ್ಣ ಉದಾಹರಣೆ ಬೆಳಿಗಿನ ಜಾವ ಎಲ್ಲಾ ಚಾನಲ್ ಗಳಲ್ಲಿ ಒಂದು ಕಾರ್ಯಕ್ರಮ ಬರುತ್ತೆ ಅದೆನೆಂದರೆ ಒಬ್ಬ ಸ್ವಾಮಿಜಿ ಬರುತ್ತಾನೆ ಆತ ಎಲ್ಲರ ರಾಶಿ ಜಾತಾಕ ಕೇಳಿ ಅವರ ಇಂದಿನ ಭವಿಷ್ಯ ಹೇಳುತ್ತಾನೆ ಅದನ್ನು ಕೇಳಿ ನಾವು ನಮ್ಮ ಮುಂದಿನ ದಿನವನ್ನು ಪ್ರಾರಂಭಿಸುತ್ತೇವೆ ಮೊನ್ನೆ ನಾನು ಬೆಳೆಗ್ಗೆ ಎದ್ದು ಮೂರು ಚಾನಲ್ ನಲ್ಲಿಯ ಇದೆ ಒಂದೆ ಕಾರ್ಯಕ್ರಮಕ್ಕೆ ಫೋನ್ ಮಾಡಿದ್ದೆ ಮೂರು ಜನ ಸ್ವಾಮಿಜಿಗೆ ನನ್ನ ರಾಶಿ ಜಾತಕ ಹೇಳಿದ್ದೆ ಅದಕ್ಕೆ ಅವರು ಹೇಳಿದ್ದು ಉತ್ತರವೆ ವಿಚಿತ್ರ ನನ್ನ ರಾಶಿ ಮತ್ತು ಜಾತಾಕ ಒಂದೆ ಆಗಿದ್ದರೆ ಅವರು ಹೇಳಿದ ಭವಿಷ್ಯ ಮಾತ್ರ ಬೇರೆ ಬೇರೆ ಯಾಗಿತ್ತು ಎಂಬುವದು ಗಮನಿಸಲೇಬೇಕಾದ ವಿಷಯವೆ ಸರಿ ಆ ಮೂವರು ಸ್ವಾಮಿಜಿಗಳು ಬೇರೆ ಬೇರೆ ಭವಿಷ್ಯ ಹೇಳುತ್ತಾರೆ ಅಂದರೆ ನಾವು ನಂಬಬೇಕೆ? ಇಂತಹ ಮುಂದುವರೆದ ಜನ ನಾವು ಇಂದಿಗೂ ಈ ಬೆಳಗ್ಗಿನ ರಾಶಿ ಜಾತಕ ಭವಿಷ್ಯದ ಕಡೆಗೆ ವಾಲುತ್ತಿದ್ದೇವೆ ಭವಿಷ್ಯ ಕೇಳಿ ಮುಂದಿನ ಜೀವನದ ಗುರಿ ಸಾಧನೆಯ ಕಡೆಗೆ ಗಮನಕೊಡುತ್ತೇವೆ. ಇನ್ನು ರಾತ್ರಿಯಾದರೆ ಸಾಕು ಗೋಳೊ ಎಂದು ಅಳುವ ದಾರಾವಾಹಿಗಳು ಸ್ವಲ್ಪ ರಿಲಾಕ್ಸ್ ಆಗೋಣ ಎಂದು ಟಿ.ವಿ. ಮುಂದೆ ಕೂತರೆ ಸಾಕು ಕಣ್ಣಿರ ದಾರೆ ಹರಿಸಲೇಬೇಕು ಅಂತಹ ದಾರವಾಹಿಗಳ ಅರ್ಭಟ ನಡೆದಿರುತ್ತದೆ. ಇದನ್ನು ನಮ್ಮ ಹೆಂಡತಿ ಮಕ್ಕಳು ಯಾರ ಪರಿವೆ ಇಲ್ಲದೆ ನೋಡುತ್ತಾ ಕುಳಿತ್ತಿರುತ್ತಾರೆ.

ಆ ಎಲ್ಲಾ ದಾರವಾಹಿಗಳ ವಿಷಯ ಒಂದೆ ಆದರೆ ಹೆಸರು ಮಾತ್ರ ಬೇರೆ ಎಲ್ಲಾ ದಾರಾವಾಹಿಗಳಲ್ಲಿ ಇಂದಿಗೂ ಅತ್ತೆ ಸೊಸೆ, ಅಣ್ಣ ತಮ್ಮಂದಿರಾ, ಸಂಬಂಧಿಕರ , ಪ್ರೇಮಿಗಳ, ಜಗಳದ ಬಾದೆ ಇರುವದು ಸಾಮಾನ್ಯ ಆದರೆ ನಿಜ ಜೀವನದಲ್ಲಿ ಆಗುತ್ತಿರುವದೆ ಬೇರೆ ಇತ್ತ ಮುದಕರಾಗಿರುವ ತಂದೆ ತಾಯಿನೆ ಮಕ್ಕಳ ಬಿಟ್ಟು ದೂರ ಇರೋಣ ಅಂತಿದ್ದಾರೆ, ಅತ್ತ ಅತ್ತೆ ಸೊಸೆಯ ಜಗಳದ ಪ್ರಶ್ನೆಯೆ ಬರುವದಿಲ್ಲಾ ಏಕೆಂದರೆ ಮಗ ಈಗ ಒಬ್ಬನೆ ಸ್ವತಂತ್ರವಾಗಿ ಇರುವನು ಈತ್ತ ಸೊಸೆ ನನಗೆ ಅತ್ತೆ ಇಲ್ಲಾ ಅಂದರೆ ನಿನ್ನ ಜೊತೆಗೆ ಬರುತ್ತೇನೆ ಇಲ್ಲಾ ಅಂದರೆ ಇಲ್ಲಾ ಎನ್ನುತ್ತಾರೆ ಆದರೆ ನಮ್ಮ ದಾರವಾಹಿಗಳೇಕೆ ಇನ್ನು ಹಳೆಯ ಸಂಪ್ರಾದಾಯದಂತೆ ವರ್ತಿಸುತ್ತಿವೆ ತಿಳಿಯದು. ಈಗ ಎಲ್ಲಾ ಅಣ್ಣ ತಮ್ಮಂದಿರು ಸ್ವತಂತ್ರ ಜೀವಿಗಳಾಗಿದ್ದಾರೆ ಮತ್ತು ಈ ಟಿವಿಯವರು ನಾವು ನೋಡುಗರೆಲ್ಲಾ ಹುಚ್ಚರೆ ಎಂದು ಭಾವಿಸಿದ್ದಾರೆಯೆ? ಸಾಮಾಜಿಕ ಕಳಕಳಿ ಬಿಂಬಿಸುವ ಯಾವುದೆ ಮಾದ್ಯಮ ಕಾಣುತ್ತಿಲ್ಲಾ ಅವುಗಳನ್ನು ಹೋಗಲಾಡಿಸುವ ಯಾವ ಲಕ್ಷ್ಯಣವು ನಮ್ಮ ಮಾದ್ಯಮದಲ್ಲಿ ಈಗ ಸದ್ಯಕ್ಕೆ ಕಾಣುತ್ತಿಲ್ಲಾ ಅನಿಸುತ್ತಿದೆ .

ಸರಿ ಈಗ ರಾಜ್ಯದಲ್ಲಿ ಏನು ನಡೆದಿದೆ ಅಂತಾ ನ್ಯೂಸ್ ಚಾನಲ್ ಏನಾದರು ಆನ್ ಮಾಡಿದರೆ ಸಾಕು ಅಲ್ಲಿ ಬರಿ ರಾಜಕೀಯದ ಗೋಳಾಟ ಅವರು ಪಕ್ಷ್ಯ ಬಿಟ್ಟರು ಇವರು ಪಕ್ಷ್ಯ ಕಟ್ಟಿದರು . ಆ ನ್ಯೂಸ್ ಹೇಳುವ ಶೈಲಿಯನ್ನು ಗಮನಿಸಿಬೇಕು ಅದೇಷ್ಟು ಹೇಳತಾರೆ ಅಂದರೆ ಈಗ ಎಲ್ಲಿ ಅದು ನಡೆದೆ ಹೋಯಿತು ಹಾಳಾಗಿ ಹೋಯಿತು ಎನ್ನುವ ಹಾಗೆ ಹೇಳುತ್ತಾರೆ . ಕೇಳಿದ್ದು ಹಾರ್ಟ್ ರೋಗಿಯಾಗಿದ್ದರೆ ಅಲ್ಲೆ ಎದೆ ಒಡಕೊಂಡು ಸಾಯಬೇಕು. ಅಲ್ಲಿ ಬಳಸುವ ಭಾಷೆ ರಿತಿ ನೀತಿ ಎಲ್ಲವು ವಿಚಿತ್ರವಾಗಿದೆ . ಯಾವ ಪತ್ರಿಕೊದ್ಯಮದಲ್ಲಿ ಈ ರೀತಿಯಾಗಿ ಬೋದಿಸುವರೊ ತಿಳಿಯದು. ಭಯ ಹುಟ್ಟಿಸುವ ಕ್ರೈಂ ಸ್ಟೋರಿಗಳು ನಿದ್ದೆಗೆಡಿಸುವ ನಿಘೂಡ ರಹಸ್ಯಗಳು ಅವೆಲ್ಲಾ ನಮ್ಮ ಸಾಮಾಜಕ್ಕೆ ಭಯ ಹುಟ್ಟಿಸುತ್ತವೆ ಅಷ್ಟೆ ಅವು ನಮ್ಮ ಭಾವಿ ಭವಿಷ್ಯಕ್ಕೆ ಏನಾದರು ಕೊಡುಗೆಯಂತು ಕೊಡಲು ಸಾದ್ಯವೆ ಇಲ್ಲಾ. ಅಂತಹ ಕೆಟ್ಟ ಸುದ್ದಿಗಳಿಗಿಂತ ಒಂದು ಸಾಧನೆ ಮಾಡಿದ ಸಾಧಕನ ಬಗ್ಗೆ ಪ್ರಗತಿಪರ ರೈತನಾಗುವದು ಒಬ್ಬ ಉದ್ಯಮಿಯಾಗುವದು ಹೇಗೆ ಬದುಕುವ ದಾರಿ ಹೇಗೆ ಎಂಬ ಕಲ್ಪನೆ ಕೊಡಬೇಕು ಅನಿಸುವದಿಲ್ಲವೆ? ನಮ್ಮ ಮಾದ್ಯಮದವರಿಗೆ.

ಈ ರಾಜಕೀಯ ಮಾತ್ರ ಹೈಲೈಟ್ ಮಾಡಿ ಉಳಿದಿದ್ದು ಎಲ್ಲವು ಬದಿಗೊತ್ತಿ ಸಾಗುವದು ಎಷ್ಟು ಸಮಂಜಸ ನಮ್ಮ ಸಮಾಜದಲ್ಲಿ ರಾಜಕೀಯ ಬಿಟ್ರೆ ಯಾವ ವಿಷಯವೆ ಇಲ್ಲವೆ ನಮ್ಮ ಸಮಾಜಕ್ಕೆ ತಿಳಿಸಲು ನಾವು ಇಂದಿಗೂ ಎಷ್ಟೊ ಸಾಮಾಜಿಕ ಸಮಸ್ಯೆಗಳಿಂದ ಬಳಲುತ್ತಿದ್ದೇವೆ ಎಂಬ ಕಲ್ಪನೆ ಈ ಮಾದ್ಯಮದವರ ಕಣ್ಣಿಗೆ ಯಾಕೆ ಕಾಣುತ್ತಿಲ್ಲಾ. ಈ ಮಾದ್ಯಮಗಳಲ್ಲಿ ಇತ್ತಿಚಿಗೆ ಅದೆಷ್ಟೊ ಮಹಿಳಾ ಹಕ್ಕುಗಳ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವದು ಕಂಡುಬರುತ್ತಿವೆ ಒಬ್ಬ ಮಹಿಳೆ ಅತ್ಯಾಚಾರಕ್ಕೆ ಒಳಪಟ್ಟರೆ ಅದನ್ನು ರಿಪೀಟ್ ಮಾಡಿ ಮಾಡಿ ತೋರಿಸುವ ಅವಶ್ಯಕತೆ ಇದೆಯೆ ಅವಳು ಹೇಗೆ ಅತ್ಯಾಚಾರಕ್ಕೆ ಒಳಪಟ್ಟಳು ಎಂಬ ವಿಚಾರ ಸೂಲಲಿತವಾಗಿ ಹೇಳುವದು ತರವೆ , ಇಂದಿನ ಗಂಡು ಸಮಾಜದಲ್ಲಿ ಇದೆಲ್ಲಾ ಬೇಕೆ ? ಒಂದು ದರೋಡೆಯನ್ನು ಹೇಗೆ ಮಾಡಿದರು ಎಂಬುವದನ್ನು ಸವಿವರವಾಗಿ ತೋರಿಸುವದು ನಮಗೆ ಬೇಕೆ? ಇದಕ್ಕೆ ಉದಾಹರಣೆಯೆಂದರೆ ಹೋಟೆಲ್ ತಾಜ್ ಮೇಲೆ ದಾಳಿ ನಡೆಯುತ್ತಿರುವಾಗ ನೆನಪಾಗುತ್ತದೆ. ದಾಳಿಮಾಡುವ ದಾಳಿಕೋರನಿಗೆ ಏನು ಗೊತ್ತು ಹೇಳಿ ಅದು ಹೇಗಿದೆ ಮತ್ತು ಅದನ್ನು ಬೇಧಿಸಬಹುದು ಎಂದು ಗೊತ್ತಿತ್ತೆ ಇಲ್ಲಾ ಆತ ನಮ್ಮ ದೇಶದಲ್ಲಿಯೆ ನಮ್ಮ ವಾಹಿನಿಗಳು ಎಳೆಎಳೆಯಾಗಿ ಬಿತ್ತರಿಸಿದ ಮಾಹಿತಿ ನೋಡಿ ತಿಳಿದುಕೊಂಡು ಆ ಕಾರ್ಯ ಮಾಡಿದ್ದು ಎಲ್ಲರಿಗೂ ನೆನಪಿರುವ ಸಂಗತಿ. ನಮ್ಮ ಮಾದ್ಯಮಗಳು ಎಲ್ಲಿ ಇನ್ ಡೈರೆಕ್ಟಾಗಿ ದರೋಡೆಗೆ ಅವಕಾಶಮಾಡಿಕೊಡುತ್ತಿವೆಯೊ ಅನಿಸುತ್ತಿದೆ. “ ಆ ಕೊಲೆಯನ್ನು ಆ ವ್ಯಕ್ತಿ ಹೇಗೆ ಮಾಡದಾ ಅಂತಾ ತೋರಸ್ತೀವಿ ಒಂದು ಬ್ರೇಕ್ ನ ನಂತರ " ಈ ಮಾತು ನೀವು ಕೇಳಿರಬೇಕಲ್ಲಾ.

ಹೀಗೆ ಕೊಲೆ ಮಾಡುವದು ಹೇಗೆ ದರೋಡೆ ಮಾಡೋದು ಹೇಗೆ ಎಂಬುವದು ನಮ್ಮ ಚಿಕ್ಕ ಮಕ್ಕಳು ನೋಡುತ್ತಾರೆ ಅವರು ಹೀಗೆ ಮಾಡಬಹುದಲ್ಲಾ ಎಂದು ಕಲಿಯುತ್ತಾರೆ. ನಮ್ಮ ಮಾದ್ಯಮವು ತನ್ನ ಮಾದ್ಯಮದ ತತ್ವ ಪಾಲನೆ ಮಾಡುತ್ತಿಲ್ಲಾ ಅನಿಸುತ್ತಿದೆ. ಒಂದು ಮಾದ್ಯಮಕ್ಕೆ ಹೀಗೆ ಮಾಡಬೇಕು ಮತ್ತು ಇಂತಹ ಸುದ್ದಿಗಳನ್ನು ಕಾರ್ಯಕ್ರಮಗಳನ್ನು ಹೀಗೆ ಬಿತ್ತರಿಸಬೇಕು ಎಂಬ ನಿಯಮವನ್ನು ಉಲ್ಲಂಘಿಸುತ್ತಿವೆ ಅನಿಸುತ್ತಿದೆ. ಹಗಲು ಕಳ್ಳರನ್ನು ಹುಟ್ಟುಹಾಕು ಕೆಲಸಲದಲ್ಲಿ ನಮ್ಮ ಮಾದ್ಯಮಗಳು ನಿರತವಾಗಿವೆ ಮಾದ್ಯಮದಿಂದ ದೇಶದ ಉನ್ನತಿಯು ಆಗುತ್ತಿದೆ ಇತ್ತ ಅವನತಿಯು ಆಗುತ್ತಿದೆ ಎನ್ನುವದು ವಿಪರ್ಯಾಸವೆ ಸರಿ ಅದೇನೋ ಹೇಳತ್ತಾರಲ್ಲಾ "ಅತಿಯಾದರೆ ಅಮೃತವು ವಿಷ ಅಲ್ಲವೆ “ ಅತಿಯಾಗಿ ಬೆಳಿತುತ್ತಿರುವ ನಮ್ಮ ಮಾದ್ಯಮ ಲೋಕ ಇಂತಹ ಹೀನಾಯ ಕೆಲಸಕ್ಕೆ ಮತ್ತು ಬ್ಲಾಕ್ ಮೇಲ್ ಪತ್ರಿಕೊದ್ಯಮಕ್ಕೆ ಕೈ ಹಾಕಿದ್ದಾರೆ. ಮತ್ತೆ ನಾವು ಓದುಗರೇನು ಕಡಿಮೆ ಇಲ್ಲಾ ಯಾವ ಪತ್ರಿಕೆಯಲ್ಲಿ ಅಶ್ಲೀಲ ಭಾವಚಿತ್ರಗಳು ಇವೆಯೊ ಮತ್ತು ಯಾವ ಪತ್ರಿಕೆಯಲ್ಲಿ ರಾಜಕೀಯ ವಿದೆಯೊ ಅದನ್ನೆ ಆರಿಸುತ್ತೇವೆ. ನಮ್ಮ ಓದುವ ರೀತಿಯಲ್ಲು ತುಂಬಾ ಬದಲಾವಣೆಯಾಗಿದೆ. ಈಗ ಎಲ್ಲಿ ಯಾರಾದರು ಬೇಂದ್ರೆಯಂತಹ ಕವಿಯ ಕವನ ಓದುಗರು ಸಿಗುವದು ಮುಜಿಗರ ಯಾರಾದರು ಓದಿದರೆ ಅವರು ಹಳೆ ಮನುಷ್ಯ ಎಂಬ ಪಟ್ಟ ಈಗ ಏನಿದ್ದರು ಭಟ್ಟರ " ಕತ್ತಲಲ್ಲಿ ಕರಡಿಗೆ ಜಾಮೂನು ತಿನಿಸೊಕೆ" ಎಲ್ಲಾ ಕಿಚಿಡಿ ಕನ್ನಡ ಸಾಹಿತ್ಯ ನಮ್ಮ ಓದಾಗಿದೆ.

  
 
ಕೆ.ಎಂ.ವಿಶ್ವನಾಥ (ಮಂಕವಿ) ಮರತೂರ

ಹವ್ಯಾಸಿ ಬರಹಗಾರರು. 9620633104

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಅನಿಸಿಕೆಗಳು

venkatb83 ಶನಿ, 12/15/2012 - 18:18

ವಿಶ್ವನಾಥ್ ಅವ್ರೆ-

ಸಕಾಲಿಕ ಲೇಖನ..

ನಿಮ್ಮ ಅಭಿಪ್ರಾಯಗಳು ಅನಿಸಿಕೆಗಳು ಸತ್ಯ.
ಸಮೂಹ ಮಾಧ್ಯಮಗಳು ಸ್ವ ನಿಯಂತ್ರಣ  ಹಾಕಿಕೊಳ್ಳಬೇಕು ಅದು ಆಗುತ್ತಿಲ್ಲ. ವೈಭವೀಕರಣ  ಹೆಚ್ಚಿದೆ..ಸ್ಪರ್ಧೆ ಅಪಾಯಕಾರಿ ಹಂತ ಮುಟ್ಟಿದೆ..
ನೀವ್ ಹೇಳಿದ ಹಾಗೆ ಯಾವ್ದು ಸತ್ಯ ಯಾವ್ದು ಮಿತ್ಯ  ಅಂತ ಗ್ರಹಿಸೋಕೆ ಕಷ್ಟ ಆಗ್ತಿದೆ..ಎಲ್ಲರಿಗೂ ತಾವ್ ಹೇಳೋದೇ ಸರಿ...(((
ಈಗೆಗ ನಾ ಕೆಲ ಪತ್ರಿಕೆಗಳು ಮಾತು ಚನ್ನೆಲ್ಲುಗಳನ್ನು  ಓದೋದು ನೋಡೋದು ಬಿಟ್ಟಿರುವೆ..
ಸಣ್ಣ ಸುದ್ಧಿಗೂ ಈಗ ನಮ್ಮ ಬಾತ್ಮೀಧರರನು ಸಮ್ಪರ್ಕಿಸೋಣ ಎನ್ನುವವರಿಗೆ ಏನನ್ನಬೇಕು..!
ಕಡ್ಡಿ ಸುದ್ಧಿ
ಗುಡ್ಡ  ಮಾಡುತ್ತಿರುವರು ..:((
ನಿಮ್ಮ ಸ್ವ ವಿವರದಲ್ಲಿ  ತಿಳಿಸಿದ  ಆ ಮಾಹಿತಿ ಗೊತ್ತಿರಲಿಲ್ಲ...( ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮ)
ತಿಳಿಸಿ ಒಳ್ಳೆ ಕೆಲಸ ಮಾಡಿರುವಿರಿ..
ಆ ಗ್ರಂಥಗಳು ಮತ್ತು ಅದರ ಕತ್ರುವಿನ ಬಗ್ಗೆ ಇಲ್ಲಿ ಬರೆಯಿರಿ ನಮಗೂ  ಆ ಬಗ್ಗೆ ತಿಳಿಯಲಿ.
ಶುಭವಾಗಲಿ..
\|/
K.M.Vishwanath ಶನಿ, 12/15/2012 - 20:52

ನಿಮ್ಮ ಪ್ರೇರಣೆಯ ಮಾತುಗಳಿಗೆ ನಾನು ಚಿರರುಣಿಯಾಗಿದ್ದೇನೆ ನಿಮ್ಮ ಓದುಗರ ಸಲಹೆ ಸಹಕಾರ ತುಂಬಾ ಅಗತ್ಯವಿದೆ 

ತಮಗೆ ಅನಂತ ಧನ್ಯವಾದಗಳು 

 

ತಾವು ಹೇಳೀದಂತೆ ಮಿತಾಕ್ಷರ ಮತ್ತು ವಿಜ್ಷಾನೇಶ್ವರರ ಬಗ್ಗೆ ಬರೆಯಲು ತುಂಬಾ ಇದೆ ನಿಮ್ಮ ಆಸೆ ಆದಷ್ಟು ಬೇಗಾ ಈಡೇರಿಸುತ್ತೇನೆ 

 

ಧನ್ಯವಾದಗಳು 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.