Skip to main content

ಪೇಂಟ್.ನೆಟ್ - ಉಚಿತ ಫೋಟೋ ಎಡಿಟಿಂಗ್ ಟೂಲ್

ಬರೆದಿದ್ದುDecember 10, 2012
2ಅನಿಸಿಕೆಗಳು

ಸಾಮಾನ್ಯವಾಗಿ ಡಿಟಿಪಿ ಕೆಲಸಗಳಿಗೆ ನಾವು ಫೋಟೋ ಶಾಪ್ ಅಥವಾ ಕೋರೆಲ್ ಡ್ರಾ ಬಳಸುತ್ತೇವೆ, ಆದರೆ ಪೇಂಟ್.ನೆಟ್ ಎಂಬ ಉಚಿತ ತಂತ್ರಾಂಶ ಅನೇಕ ಮುಖ್ಯ ಚಿತ್ರ ಪ್ರಾಸೆಸಿಂಗ್ ಅನ್ನು ಮಾಡಬಲ್ಲುದು. ಇಂತಹ ಹಲವು ಟ್ರಿಕ್ ಗಳನ್ನು ನಿಮಗೆ ಈ ಸರಣಿ ಪರಿಚಯಿಸುತ್ತದೆ.

ಪೇಂಟ್.ನೆಟ್ ಉಚಿತ ಸಾಫ್ಟವೇರ್ ಅನ್ನು ನೀವು ಉಚಿತವಾಗಿ ಈ ತಾಣದಲ್ಲಿ ಡೌನ್ ಲೋಡ್ ಮಾಡಬಹುದು. ಇದನ್ನು ವಿಂಡೋಸ್ ಎಕ್ಸ್ ಪಿ, ವಿಂಡೋಸ್ ವಿಸ್ತಾ, ವಿಂಡೋಸ್ ೭ ಅಥವಾ ವಿಂಡೋಸ್ ೮ ರಲ್ಲಿ ಸ್ಥಾಪಿಸಬಹುದು. ಇದಕ್ಕೆ ಹಲವು ಪ್ಲಗ್ಗಿನ್ ಗಳು ಸಹ ಲಭ್ಯವಿದೆ. ಇದು ಉಚಿತ ಟೂಲ್ ಆಗಿದ್ದರೂ ಇದರಲ್ಲಿ ಲೇಯರ್, ಹಿಸ್ಟರಿ ಇನ್ನೂ ಹಲವು ಉತ್ತಮ ಫೀಚರ್ ಗಳು ಲಭ್ಯವಿದೆ.

ಮೊದಲು ಒಂದು ಚಿತ್ರವನ್ನು ಪೇಂಟ್.ನೆಟ್ ಅಲ್ಲಿ ತೆರೆಯುವದು ಹೇಗೆ ಎಂಬುದನ್ನು ತಿಳಿಯೋಣ.

ಪೇಂಟ್.ನೆಟ್ ಓಪನ್ ಮಾಡಿ. ಫೈಲ್ ಮೆನು > ಓಪನ್ ಗೆ ಹೋಗಿ. ಅಲ್ಲಿ ನಿಮ್ಮ ಚಿತ್ರ ಇರುವ ಫೋಲ್ಡರ್ ಗೆ ಹೋಗಿ ಚಿತ್ರವನ್ನು ತೆರೆಯಿರಿ.

ಮೂಲ ಚಿತ್ರ ಮೇಲಿದೆ. ಈಗ ಅದಕ್ಕೆ ಹಲವು ರೀತಿಯ ಇಫೆಕ್ಟ್ಸ್ ಕೊಡಬಹುದು. ಈ ಲೇಖನದಲ್ಲಿ ಅಡ್ಜಸ್ಟ್ ಮೆಂಟ್ ಮೆನು ಅಲ್ಲಿ ಲಭ್ಯವಿರುವ ಸೌಲಭ್ಯಗಳನ್ನು ಪರಿಚಯಿಸುತ್ತೇನೆ. ಮುಂದಿನ ಲೇಖನಗಳಲ್ಲಿ ಇನ್ನೂ ಹಲವು ಸಾಧ್ಯತೆಗಳನ್ನು ಹೇಳಿಕೊಡುತ್ತೇನೆ.

ಆಟೋ ಲೆವಲ್ ಮೆನು (Auto Level)

ಇದು ಚಿತ್ರದ ಬೆಳಕು ಹಾಗೂ ತೀಕ್ಷ್ಣತೆಯನ್ನು ಬದಲಾಯಿಸಿ ಗುಣಮಟ್ಟ ಹೆಚ್ಚಿಸಲು ಪ್ರಯತ್ನಿಸುತ್ತದೆ. ಆದರೆ ಕೆಲವೊಮ್ಮೆ ಚಿತ್ರ ಮೂಲ ಚಿತ್ರಕ್ಕಿಂತಲೂ ಕೆಡುವದೂ ಉಂಟು. ಈ ಕೆಳಗೆ ಆಟೋ ಲೆವಲ್ ಬಳಸಿ ಬದಲಾಯಿಸಿದ ಚಿತ್ರ ನೋಡಿ.

ಬ್ಲಾಕ್ ಅಂಡ್ ವೈಟ್ ಮೆನು (Black and white)

ನಿಮಗೆ ಬಣ್ಣದ (ಕಲರ್) ಚಿತ್ರವನ್ನು ಕಪ್ಪು ಬಿಳುಪು ಮಾಡಲು ಈ ಆಯ್ಕೆ ಬಳಸಬಹುದು. ನಮ್ಮ ಮೂಲ ಚಿತ್ರವನ್ನು ಕಪ್ಪು ಬಿಳುಪು ಮಾಡಿದಾಗ ಕೆಳಗಿನಂತೆ ಕಾಣಿಸುವದು. 

 ಹ್ಯೂ / ಸ್ಯಾಚುರೇಶನ್ (Hue / Saturation)

ಇಲ್ಲಿ ಮುಖ್ಯವಾದ ಸೆಟ್ಟಿಂಗ್ ಸ್ಯಾಚುರೇಶನ್. ಅಕಸ್ಮಾತ್ ನಿಮಗೆ ಚಿತ್ರದಲ್ಲಿ ಬಣ್ಣದ ಪ್ರಮಾಣ ಹೆಚ್ಚಿಸಬೇಕೆಂದು ಇದ್ದರೆ ಈ ಆಯ್ಕೆ ಬಳಸಿ. ಮೇಲಿನ ಮೂಲ ಚಿತ್ರವನ್ನು ೧೨೫% ಪ್ರಮಾಣದ ಸ್ಯಾಚುರೇಶನ್ ಸೆಟ್ಟಿಂಗ್ ಆಯ್ಕೆ ಮಾಡಿದಾಗ ಈ ಕೆಳಗಿನಂತೆ ಕಾಣಿಸುತ್ತದೆ. ಬಣ್ಣ ಜಾಸ್ತಿ ಆದಾಗ ಚಿತ್ರ ನೈಸರ್ಗಿಕವಾಗಿ ಇರುವಂತೆ ಕಾಣಿಸದಿದ್ದರೂ ಕಣ್ಣಿಗೆ ಮುದ ಕೊಡುತ್ತದೆ. ಅದಕ್ಕಾಗಿ ಸಾಮಾನ್ಯವಾಗಿ ಪೋಸ್ಟರ್ ಗಳಲ್ಲಿ, ಜಾಹಿರಾತುಗಳಲ್ಲಿ ಕಲರ್ ಸ್ಯಾಚುರೇಶನ್ ಜಾಸ್ತಿ ಮಾಡಿರುತ್ತಾರೆ. ಕೆಳಗಿನ ಚಿತ್ರದಲ್ಲಿ ಮನೆಗಳ ಮೇಲ್ಛಾವಣಿ ಹಾಗೂ ಹಸಿರು ಹುಲ್ಲಿನ ಬಣ್ಣವನ್ನು ಮೂಲ ಚಿತ್ರದೊಂದಿಗೆ ಒಮ್ಮೆ ಹೊಂದಿಕೆ ಮಾಡಿ. ಇಲ್ಲಿ ಬಣ್ಣ ಜಾಸ್ತಿ ಇದೆ ಅಲ್ವಾ? ಈಗ ಹೇಳಿ ಸಾಮಾನ್ಯ ಕಣ್ಣುಗಳಿಗೆ ಯಾವ ಚಿತ್ರ ನೋಡಲು ಖುಷಿ ಕೊಡುತ್ತೆ ಅಂತಾ? ಇದನ್ನು ಬಳಸಿ ಬಣ್ಣದ ಪ್ರಮಾಣ ಕಡಿಮೆ ಸಹ ಮಾಡಬಹುದು,

 

 

ಇನ್ವರ್ಟ್ ಕಲರ್ಸ್ (Invert colors)

ಅಕಸ್ಮಾತ್ ಚಿತ್ರದ ನೆಗೆಟಿವ್ ತರಹ ಮಾಡಬೇಕೆಂದರೆ ನೀವು ಅಡ್ಜಸ್ಟ್ ಮೆಂಟ್ ಮೆನು ನಲ್ಲಿನ ಇನ್ವರ್ಟ್ ಕಲರ್ಸ್ ಆಯ್ಕೆ ಬಳಸಿ.ಅದನ್ನು ಬಳಸಿದಾಗ ಮೇಲಿನ ಮೂಲ ಚಿತ್ರ ಕೆಳಗಿನಂತೆ ಕಾಣಿಸುತ್ತದೆ.

 

ಬ್ರೈಟ್ನೆಸ್/ಕಾಂಟ್ರಾಸ್ಟ್ (Brightness/Contrast)

ಕೆಲವೊಮ್ಮೆ ಬೆಳಕು ಕಡಿಮೆ ಇರುವದರಿಂದಲೋ ಅಥವಾ ಮಂಜಿನಿಂದ ಚಿತ್ರ ಸರಿಯಾಗಿ ಬರದಿದ್ದರೆ ಈ ಬ್ರೈಟ್ನೆಸ್ ಹಾಗೂ ಕಾಂಟ್ರಾಸ್ಟ್ ಆಯ್ಕೆ ಬಳಸಿ ಸರಿಪಡಿಸಬಹುದು.

ಮೂಲ ಚಿತ್ರದ ಕಾಂಟ್ರಾಸ್ಟ್ ಜಾಸ್ತಿ ಮಾಡಿದಾಗ ಈ ಕೆಳಗಿನಂತೆ ಕಾಣಿಸುತ್ತದೆ.

 

ಇನ್ನೂ ಹಲವು ಪೇಂಟ್ .ನೆಟ್ ಸಾಫ್ಟವೇರ್ ನ ಫೀಚರ್ ಗಳು ಟ್ರಿಕ್ ಗಳ ಬಗ್ಗೆ ಮುಂದಿನ ಲೇಖನದಲ್ಲಿ ಬರೆಯುತ್ತೇನೆ. ನಿಮ್ಮ ಅನಿಸಿಕೆ, ಬೆಂಬಲಗಳನ್ನು ಕಮೆಂಟ್ ಮೂಲಕ ತಿಳಿಸಿ.

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಶನಿ, 12/15/2012 - 18:13

ರಾಜೇಶ್ ಅವ್ರೆ...
ಅತ್ಯುತ್ತಮ ಮಾಹಿತಿ... 
ಫೋಟೋ ಶಾಪ್ ಕಬ್ಬಿಣದ ಕಡಲೆ ಆಗಿದೆ.. ಇದನ್ನು ಪ್ರಯತ್ನಿಸಬಹುದು...ಪ್ರಯತ್ನಿಸುವೆ..

ಶುಭವಾಗಲಿ..
ರಾಜೇಶ ಹೆಗಡೆ ಭಾನು, 12/16/2012 - 14:03

ನಮಸ್ಕಾರ ವೆಂಕಟೇಶ ಅವರೇ,

ಸರಳ ಡಿಟಿಪಿಗೆ ಅಥವಾ ಫೋಟೋ ಪ್ರಾಸೆಸಿಂಗ್ ಗೆ ಪೇಂಟ್.ನೆಟ್ ಸೂಕ್ತ. ಆದರೆ ಫೋಟೋಶಾಪ್ ಜಗತ್ತಿನ ಅತ್ಯುತ್ತಮ ಇಮೇಜಿಂಗ್ ಟೂಲ್ ಎಂಬುದರಲ್ಲಿ ಸಂಶಯವಿಲ್ಲ. ವೃತ್ತಿಪರ ಕೆಲಸಕ್ಕೆ ಅದೇ ಸೂಕ್ತ. ಯಾವುದಕ್ಕೂ ಟ್ರೈ ಮಾಡಿ ನೋಡಿ. Smile

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.