Skip to main content

ನಮ್ಮ ದೇಶದ ಇತಿಹಾಸ ಬದಲಿಸಿದ,ವರ್ತಮಾನದ ಹೊಲಸು ರಾಜಕೀಯ

ಇಂದ K.M.Vishwanath
ಬರೆದಿದ್ದುDecember 6, 2012
noಅನಿಸಿಕೆ

  ಭಾರತದ ಇತಿಹಾಸ ಒಂದು ಅವಿಸ್ಮರಣೀಯ ನೆನಪು. ಭೂಮಿಯ ಮೇಲಿನ ಎಲ್ಲಾ ದೇಶಗಳಿಗಿಂತ ವಿಭಿನ್ನವಾಗಿದ್ದು ,ಪ್ರತಿಯೊಂದು ದೇಶವು ಕಣ್ಣರಳಿಸಿ ಕೌತುಕದಿಂದನೋಡುವಂತಹ ಸಾಧನೆ ಮಾಡಿದ್ದು ಭಾರತವೆ ಸರಿ. ಈ ಸಾಧನೆ ಎಂಬುವುದು ಒಂದೆ ಕ್ಷೇತ್ರಕ್ಕೆ ಸೀಮಿತವಾಗಿಲ್ಲಾ ಪ್ರತಿಯೊಂದು ಕ್ಷೇತ್ರಕ್ಕುತಲುಪಿದೆ ನಮ್ಮ ಭಾರತದಲ್ಲಿ ಪ್ರತಿಯೊಂದಕ್ಕುಒಂದು ಸುಂದರ ಇತಿಹಾಸವಿದೆ. ಅದರದೆ ಆದ ಹಿನ್ನಲೆಯಿದೆ. ಯಾವತ್ತು ಅಳಿಸಲಾಗದ ಸಂಭ್ರಮವಿದೆ. ಸಿಹಿ ನೆನಪಿದೆ.ಈಗ ನನಗೆ ರಾಜಕೀಯ ಕ್ಷೇತ್ರವನ್ನು ಕುರಿತು ಸ್ವಲ್ಪ ವಿಚಾರ ವಿನಿಮಯ ಮಾಡಿಕೊಂಡರೆ ಸೂಕ್ತ ಎನಿಸುತ್ತದೆ. ನಮ್ಮ ಭಾರತದ ರಾಜಕೀಯದ ಇತಿಹಾಸ ಹಾಗೂ ನಮ್ಮ ರಾಜ್ಯದ ರಾಜಕೀಯ ಇತಿಹಾಸ ಹೇಳುವುದಾದರೆ ಅಂದಿನ ರಾಜಕೀಯ ಪವಿತ್ರ ಮತ್ತುಜನಸೇವೆಯ ಆಧಾರದ ಮೇಲೆ ಸಾಗಿತ್ತು.

ನಿಸ್ವಾರ್ಥ ರಾಜಕೀಯವಿತ್ತು ಎಂದು ಗೋಚರಿಸುತ್ತದೆ .ನಾನು ನನಗಾಗಿ ನನ್ನ ರಾಜಕೀಯವಲ್ಲಾ ಇದು ಜನರ ಉದ್ಧಾರ ಮಾಡಲು ಹಾಕಿದ ಒಂದು ವೇದಿಕೆ,ಈ ವೇದಿಕೆ ಜನ ನನಗೆ ನನ್ನ ಕ್ಷೇತ್ರ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿದ್ದಾರೆ ಅದಕ್ಕಾಗಿ ನಾನು ಅವರ ಆಶೊತ್ತರಗಳನ್ನು ಈಡೇರಿಸಬೇಕು ಎಂದು ತಿಳಿಯುತ್ತಿದ್ದರು. ನಮ್ಮ ಹಿರಿಯ ಮಾಹಾನ್ ಮುತ್ಸದ್ದಿಗಳಾದ ಪಂಡಿತ ನೆಹರು ,ಎ.ಬಿ.ವಾಜಪೇಯಿ,ಅವರಿಂದ ಹಿಡಿದು ಅನೇಕ ಹಿರಿಯ ಧೂರಿಣರು ತಮ್ಮ ಜೀವನವನ್ನುರಾಜಕೀಯ ಮತ್ತುಜನಸೇವೆಗಾಗಿಯೆ ಮುಡುಪಾಗಿಟ್ಟರು . ಅಂದು ಎಲ್ಲರು ಜನಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಇದು ಅವರು ಇದ್ದ ಸ್ಥಿತಿಗತಿಯೆ ಬಿಂಬಿಸುತ್ತದೆ. "ದೇಶ ನನಗೇನು ಮಾಡಿದೆ ಎನ್ನುವದಕ್ಕಿಂತ ದೇಶಕ್ಕಾಗಿ ನಾನೇನು ಮಾಡಿದೇನು" ಎನ್ನುವುದು ಮುಖ್ಯವಾಗುತ್ತದೆ. ಈ ದೇಶ ನನಗೆ ಅವಕಾಶಗಳನ್ನು ನೀಡಿದಾಗ ನಾನು ಅದನ್ನು ಸರಿಯಾಗಿ ಉಪಯೋಗಿಸಿಕೊಂಡೇನೊ ಇಲ್ಲಾ ದುರುಪಯೋಗ ಪಡೆಸಿಕೊಂಡೆನೊ ಎಂದು ಅಂದು ಯೋಚಿಸುತ್ತಿದ್ದರು. ಅಂದುನಾನು ಚಿಕ್ಕಂದಿನಲ್ಲಿ ಕೇಳಿದಂತೆ ನೆಹರು ಅವರು ಅಂದು ಸಾರಿಗೆ ವ್ಯವಸ್ಥೆಯ ತೊಂದರೆ ಇರುವುದರಿಂದ ಅವರು ನಡೆದುಕೊಂಡು ಜನರ ಅಹವಾಲು ಸ್ವಿಕರಿಸುತ್ತಿದ್ದರಂತೆ. ನಮ್ಮ ಊರಿಗೂ ನೆಹರು ಅಂದು ಕಾಲ್ನಡಿಗೆಯಲ್ಲಿ ಬಂದು ಹೋಗಿದ್ದಾರೆ ಎನ್ನುವ ಪ್ರತೀಕಗಳಿವೆ.
 
ನಮ್ಮ ರಾಜಕೀಯ ಇತಿಹಾಸದಲ್ಲಿ ಇಂದಿರಾಗಾಂಧಿಯ ಆಡಳಿತ ಯಾರು ಮರೆಯಲು ಸಾಧ್ಯವಿಲ್ಲಾ,ನಮ್ಮ ಅಜ್ಜ ಅಜ್ಜಿಯರು ಅಂದು ಚುನಾವಣೆ ಸಂದರ್ಭದಲ್ಲಿ ನಾವು ಇಂದಿರಾ ರವರ ಚಿಹ್ನೆಗೆ ಮತ ಹಾಕತೀವಿ ಬೇರೆ ಯಾವ ಚಿಹ್ನೆಗೂ ಮತ ಹಾಕಲ್ಲಾ ಅಂತಿದ್ದರು. ಅವರ ಕಾರ್ಯಗಳನ್ನು ಬಡವರ ಪರ ಕಾಳಜಿಯನ್ನು ಎಲ್ಲರು ಮನವರಿಕೆಯಾಗುವಂತಹ ಕೆಲಸ ಮಾಡಿದ್ದರು. ಅವರ ಆಡಳಿತದ ಅವಧಿಯನ್ನು ಇಂದಿಗೂ ಜನ ಕೊಂಡಾಡುತ್ತಾರೆ. ಕಾರಣ ಇಷ್ಟೆಅವರು ರಾಜಕೀಯ ಮಾಡಿದ್ದು ಜನರಿಗಾಗಿ ಎಂಬುವುದು ಸ್ಪಷ್ಟವಾಗಿ ತಿಳಿಯುತ್ತದೆ ನಮ್ಮ ದೇಶವು ಕಂಡ ಇಂತಹ ಅನೇಕ ಮಾಹಾನ್ ರಾಜಕಾರಣಿಗಳು ತಲೆ ತಗ್ಗಿಸುವಂತಹ ವರ್ತಮಾನದಲ್ಲಿ ನಮ್ಮರಾಜಕೀಯದ ಸ್ಥಿತಿಗತಿಯಿದೆ. ಅದು ಯಾರ ಮೆಲ್ವಿಚಾರಣೆ ಇಲ್ಲದೆ ಲಗಾಮವಿಲ್ಲದ ಕುದುರೆಯಂತೆ ಓಡುತ್ತಿದೆ.

ಕೇಂದ್ರದಲ್ಲಿ ಕಾಂಗ್ರೇಸ್ ಕೊಳ್ಳೆ ಹೊಡೆದರೆ ಅದಕ್ಕೆ ಪೈಪೋಟಿಯಾಗಿ ರಾಜ್ಯದಲ್ಲಿ ಬಿ.ಜೆ.ಪಿ. ನಾವೇನು ಕಮ್ಮಿಯಿಲ್ಲಾ ಎಂಬಂತೆ ಐದು ವರ್ಷಗಳಿಂದ ಎರಡು ಸರ್ಕಾರಗಳು ಸರಿಯಾಗಿ ಸಾಮಾನ್ಯ ಜನರ ಕಣ್ಣ ಮೇಲೆ ಮಣ್ಣೆರಚಿ ರಾಜಕೀಯ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವು ಅಲ್ಪ ಮತಕ್ಕೆ ಕುಸಿದಾಗ ಸಂಸದರನ್ನು ಹಣದಿಂದ ಕೊಂಡುಕೊಂಡರು ಎಂಬ ವದಂತಿಯೊಂದಿಗೆ ಪ್ರಾರಂಭವಾದ ಇವರ ರಾಜಕೀಯಆದರ್ಶ ಹೌಸಿಂಗ ಸುಸೈಟಿ ಹಗರಣದಲ್ಲಿ ಮಾಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ ಚೌವ್ಹಾಣಅಕ್ರಮದ ಆರೋಪದಮೇಲೆ ಪದತ್ಯಾಗ ಮಾಡಿದರು. ಅತಿದೊಡ್ಡ ಹಗರಣವಾದ 2ಜಿ ತರಾಂಗತರ ದೇಶದ ಇತಿಹಾಸದಲ್ಲೆ ತರಂಗಾಂತರ ಕದ್ದ ಖ್ಯಾತಿಗೆ ಭಾಜನವಾಯಿತು. ಒಬ್ಬ ಕೇಂದ್ರದ ಮಂತ್ರಿ ಅಧಿಕಾರ ಇರುವಾಗಲೆ ಜೈಲು ಸೇರಿದ. 71 ಸಾವಿರ ಕೋಟಿಹಗರಣ ಮಾಡಿದ್ದು ಇತಿಹಾಸವೇ ಸರಿ. ಅನೇಕ ಕಂಪನಿಗಳಿಗೆ ಹಣ ಪಡದು ಪರವಾನಿಗಿ ನೀಡಿ ಹಗರಣ ಮಾಡಿದ್ದು ಎ.ರಾಜ ಎಂಬ ಮಾಹಾನ್ ವ್ಯಕ್ತಿ. ಇಷ್ಟು ಕೊಳ್ಳೆ ಹೊಡೆಯಲು ಎ.ರಾಜಾ ಅವರಿಗೆ ಮನಸ್ಸಾದರು ಹೇಗೆ ಬಂತು ತಿಳಿಯದು. ಬಡಜನರ ಕಣ್ಣೀರು ಅರ್ಥವಾಗಲಿಲ್ಲವೆ? ಅಥವಾ ಎಲ್ಲರು ಸೇರಿ ಕೊಳ್ಳೆ ಹೊಡಿಯೋಣವೆಂದು ಯೋಜನೆ ರೂಪಿಸಿದರೆ ಕಾಂಗ್ರೇಸ್ ಪಕ್ಷ್ಯದವರು .

ಕಾಮನವೆಲ್ತ ಗೇಮ್ ರಾಷ್ಟ್ರ ಕಟ್ಟುವ ನಿಟ್ಟಿನಲ್ಲಿ ಆಡುವ ಆಟ ಮತ್ತು ದೇಶವನ್ನು ಅಭಿವೃದ್ಧಿಯತ್ತ ಕೊಂಡ್ಯೂಯುವ ವೇದಿಕೆ. ಅಂತಹ ವೇದಿಕೆಯಲ್ಲಿ ಹಗರಣ ಮಾಡುವ ರಾಜಕೀಯ ಧೂರಿಣರು ನಮ್ಮ ಸದ್ಯದ ಪುಣ್ಯ ರಾಜಕೀಯದಲ್ಲಿ ಇದ್ದಾರೆ ಎಂದರೆ ಎಂತಹ ನಾಚಿಕೆ ಪಡುವ ವಿಷಯವಲ್ಲವೆ? ಕಾಮನವೆಲ್ತ್ ಕ್ರಿಡಾಕೂಟಕ್ಕೆ ಸಜ್ಜುಗೊಳಿಸುವ ವೇದಿಕೆನೆ ಹಗರಣದಲ್ಲಿದೆ ಎಂದರೆ ನಮ್ಮ ಜನ್ಮಕ್ಕೆ ಬೆಂಕಿಹಾಕಬೇಕು. ಇದರಲ್ಲಿ ಹಗರಣ ಮಾಡಿ ಸಿಕ್ಕಿಬಿದ್ದು ಸುರೇಶ ಕಲ್ಮಾಡಿ ಜೈಲು ಸೇರಿದರು. ಇಷ್ಟುಮುಗಿಯುತ್ತಿದ್ದಂತೆ ಕಲ್ಲದ್ದಲು ನುಂಗುವ ಕೆಲಸಕ್ಕೆಕೈ ಹಾಕಿದರು. ಅಬ್ಬಾ ಈ ಹಗರಣ ನೆನಸಲಾಗದಂತಹ ಇತಿಹಾಸವೆ ಸರಿ . ನಮ್ಮ ಮೌನಯೋಗಿ ಮನಮೋಹನ ನನಗೇನು ಗೊತ್ತಿಲ್ಲಾ ನಾನು ಬರಿ ಸೋನಿಯಾ ಮೇಡಂ ಹೇಳಿದ್ದು ಮಾತ್ರ ಕೇಳಿದ್ದೆ ಅದರಂತೆ ಮಾಡಿದೆ ಅಂತಾ ದೂರ ಸರಿದರು. ಹೀಗೆ ಈ ಹೊಲಸು ರಾಜಕಾರಣಿಗಳುತಮ್ಮ ವಿರಾಟ ರೂಪ ತೋರುತ್ತಾ ತಮ್ಮ ಜೋಳಿಗೆ ತುಂಬಿಸಿಕೊಳ್ಳುತ್ತಾ ಸಾಮಾನ್ಯ ಜನರ ಮೇಲೆ ಬೆಲೆ ಏರಿಕೆಯ ಭಾರ ಹಾಕುತ್ತಾ ನಡೆದರು . ಸಾಮಾನ್ಯ ಜನರ ಸದಾ ಬಳಕೆ ಮಾಡುವ ಎಲ್.ಪಿ.ಜಿ. ಬೆಲೆ ಗಗನಕ್ಕೆ ಏರಿಸಿದರು. ವರ್ಷಕ್ಕೆ ಆರೆ ಸಿಲಿಂಡರ್ ಎಂದುಆದೇಶ ಮಾಡಿದರು. ಪೆಟ್ರೋಲ್ ಬೆಲೆ ಸಾಮಾನ್ಯ ಜನತೆಗೆ ಎಟುಕದಂತಾಗಿದೆ. ಬಂಗಾರದ ಬೆಲೆ ಭಯಂಕರ ಏರಿದೆಈ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ನಮಗೆ 3 ರುಪಾಯಿ ಕೆ.ಜಿ. ಅಕ್ಕಿ ಗೋಧಿ ಕೊಡುತ್ತೀವಿ ಅಂತಾ ಭರವಸೆ ನೀಡಿತ್ತು ಆದರೆ ಈಗ ನೂರು ರೂಪಾಯಿ ಭಾರ ನಮ್ಮ ತಲೆಯಮೇಲೆ ಹಾಕಿ ಆರಾಮವಾಗಿ ಸುಪ್ಪತ್ತಿಗೆ ಮೇಲೆ ಮಲಗಿ ನಿದ್ರಿಸುತ್ತಾ ಮತ್ತೊಮ್ಮೆ ಮಂತ್ರಿಗಿರಿ ಗದ್ದುಗೆ ಏರಲು ಸಜ್ಜಾಗುತ್ತಿದೆ .

ನಮ್ಮ ರಾಷ್ಟ್ರದ ರಾಜಕೀಯ ಇತಿಹಾಸವೇಬುಡಮೇಲು ಮಾಡಿದ ಶ್ರೇಯಸ್ಸುಈ ಕಾಂಗ್ರೇಸ್ ಸರ್ಕಾರಕ್ಕೆ ಸಲ್ಲುತ್ತದೆ. ಮಾನ್ಯ ಇಂದಿರಾಗಾಂಧಿಯಂತಹ ದಿಟ್ಟ ಮಹಿಳೆ ಇದೆ ಸರ್ಕಾರದಲ್ಲಿ ಇದ್ದು ಅಂದಿನ ಬರಗಾಲ ಪರಿಸ್ಥಿತಿ ನಿಭಾಯಿಸಿದ್ದಾರೆ. ಆದರೆ ಅವರ ಪಕ್ಷ್ಯ ಈಗಿನ ಸರ್ಕಾರ ನಮ್ಮ ದೇಶಕ್ಕೆ ಕೊಳ್ಳೆ ಹೊಡೆದು ಬರಗಾಲ ತರಬೇಕು ಎನ್ನುವ ಕಾತುರದಲ್ಲಿದೆ ಎನಿಸುತ್ತಿದೆ. ನಮ್ಮ ಮೌನಯೋಗಿ ಮನಮೋಹನ ಯಾಕೊ ಗೊತ್ತಿಲ್ಲಾ ಎಲ್ಲಿಯು ಸೋನಿಯಾ ಮೇಡಂ ಪರಮಿಷನ್ ಇಲ್ಲದೆ ಮಾತೆ ಆಡಲ್ಲಾ ಅಂತಾರೆ. ದೇಶ ಹತ್ತಿ ಉರಿಯುವಾಗ ಇನ್ನು ಸೋನಿಯಾ ಮೇಡಂ ಆದೇಶ ಕೊಟ್ಟಿಲ್ಲಾ ಅಂತಾ ನೋಡುತ್ತಾ ನಿಲ್ಲುತ್ತಾರೆ. ಇವರೊಬ್ಬ ಆರ್ಥಿಕ ತಜ್ಞ ಎಂದು ಹೇಳಲು ನಾಚಿಕೆ ಬರುತ್ತದೆ. ನಮ್ಮ ಈ ಸೋನಿಯರವರು ಕೂಡಾ ಈ ಬೆಲೆ ಏರಿಕೆಯ ಬಗ್ಗೆ ತಲೆ ಕೆಡಿಸಿಕೊಂಡಿಲ್ಲಾ ಎಂಬುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಡೊಂಟ್ ವರಿ ಏನ್ ಆಗಲ್ಲಾ ಅನ್ನುತ್ತಾ ತಮ್ಮ ಏಸಿ ರೂಂಲ್ಲಿ ಓಸಿ ಕಾಫಿ ಕುಡಿಯುತ್ತಾ ಹಾಯಾಗಿದ್ದಾರೆ. ಎಲ್ಲವು ಈ ರಾಜಕೀಯ ಮಹಿಮೆ ಅವರ ಜೀವನ ತುಂಬಾ ಆರಾಮವಾಗಿ ಆನಂದದಾಯಕವಾಗಿ ನಡೆದಿದೆ. ನಮ್ಮಂತಹ ಬಡವರನ್ನು ಕೊಳ್ಳೆ ಹೊಡೆದು ಬದುಕುವ ಅವರದು ಒಂದು ಬದುಕೆ ಎಂದು ತಿಳಿದು ಅಸಯ್ಯ ವೆನಿಸುತ್ತದೆ . ಇತ್ತಿಚಿಗೆ ಸೋನಿಯಾ ಮೇಡಂರವರ ಅಳಿಯ ರಾರ್ಬಟ್ ಬಾದ್ರಾ ಡಿ.ಎಲ್.ಎಫ್. ಭೂಹಗರಣದಲ್ಲಿ ಭಾಗಿಯಾಗಿದ್ದು ಹೊರಬಿದ್ದಿದೆ . ಪೆಟ್ರೋಲ್,ಡಿಸೇಲ್,ಅಡುಗೆ ಅನೀಲ,ದಿನಬಳಕೆ ವಸ್ತುಗಳ ಬೆಲೆಏರಿಕೆ,ವರ್ಷಕ್ಕೆ 6 ಸಿಲಿಂಡರ ,2ಜಿ ಹಗರಣ ,ಕಾಮನವೆಲ್ತ ಕ್ರೀಡಾಕೂಟ, ಕಲ್ಲಿದ್ದಲು ಹಗರಣ,ಸ್ವಿಸ್ ಬ್ಯಾಂಕಿನಿಂದ ಹಣ ವಾಪಸಾತಿಯಲ್ಲಿ ವಿಳಂಬ, ಜನಲೂಕಪಾಲ್ ಮಸೂದೆ ಮಂಡನೆಗೆ ವಿಳಂಬ. ಹೀಗೆ ಇವರ ಹಗರಣಗಳ ಮಾಲೆ ಮುಂದುವರೆಯುತ್ತದೆ.

 
 
ಈ ದೂರಾಡಳಿತ ನಮ್ಮ ರಾಜ್ಯ ರಾಜಕೀಯಕ್ಕು ಅಂಟಿ ಪೈಪೋಟಿಗೆ ಬಿದ್ದು ಓಡುತ್ತಿದೆ. ನಾ ಮೇಲು ನಿ ಮೇಲು ಎಂಬಂತೆ ಜನರ ಕೊಳ್ಳೆ ಹೊಡೆಯುವ ಲೆಕ್ಕದಲ್ಲಿ ನಿರತವಾಗಿದೆ. ರಾಜ್ಯದ ಇತಿಹಾಸದಲ್ಲೆ ಮೊದಲ ಅಧಿಕಾರ ಹಿಡಿದ ಮಾನ್ಯ ಬಿ.ಜೆ.ಪಿ. ಸರ್ಕಾರ ಚುಕ್ಕಾಣಿ ಹಿಡಿದ ತಕ್ಷಣವೆ ಸಾಮಾನ್ಯ ಜನರ ಮೇಲೆ ಬರೆ ಎಳೆಯುವ ಕೆಲಸಕ್ಕೆ ಕೈ ಹಾಕಿತು ದೇಶ ಈ ಹಿಂದೆ ಎಂದೂ ಕಾಣದ ಭ್ರಷ್ಠಾಚಾರದ ಇತಿಹಾಸ ನಿರ್ಮಿಸಿತು. ಸರ್ಕಾರ ಇರುವಾಗಲೆ ಮುಖ್ಯಮಂತ್ರಿಯೊಬ್ಬ ಅಧಿಕಾರ ಶಾಹಿಯಾಗಿದ್ದು ಜೈಲು ಸೇರಿದ ಭೂ ಹಗರಣ,ಡಿ.ನೋಟಿಫಿಕೇಶನ,ಲಂಚಪ್ರಕರಣ, ಹೀಗೆ ಅನೇಕ ಹಗರಣಗಳು ಸರ್ಕಾರ ಅಸ್ತಿತ್ವದಲ್ಲಿರುವಾಗಲೆ ನಡೆದು ಎಲ್ಲರನ್ನು ಸೂಜಿಗಗೊಳಿಸಿತು. ಸರ್ಕಾರದಲ್ಲಿ ಕುರ್ಚಿಗಾಗಿ ಬಡದಾಡುವ ಕೆಲಸ ಬಿಟ್ಟರೆ ಬೇರಾವ ಅಭಿವೃದ್ಧಿ ಕಾರ್ಯಗಳು ನಮ್ಮ ಘನವೆತ್ತ ಸರ್ಕಾರ ಮಾಡಲೇ ಇಲ್ಲಾ. ಅವರ ಆಂತರಿಕ ಕಚ್ಚಾಟ ಸಾಮಾನ್ಯ ಜನರ ಸಮಸ್ಯೆಗಳ ಮೇಲೆ ಘೋರ ಪರಿಣಾಮ ಬೀರಿದವು. ಸಧನದಲ್ಲಿ ಅವರು ತೋರಿದ ಘನಂದಾರಿ ಕೆಲಸಗಳು ಈಡಿ ದೇಶವೆ ತಲೆ ತಗ್ಗಿಸುವಂತೆ ಮಾಡಿತು. ಆ ಸಮಯದ ಹೇಳಿಕೆಗಳು ಮಾತುಗಳು ಎಲ್ಲವು ವಿಚಿತ್ರ ಅನುಭವ ನೀಡುವಂತಹ ವಿಚಾರಗಳು. ಕೇಂದ್ರದಲ್ಲಿ ಬೆಲೆ ಏರಿಕೆ ಮೇಲೆ ಕಣ್ಣು ಹಾಯಿಸದೆ ಸಾಮಾನ್ಯ ಜನರ ಕೊಳ್ಳೆ ಹೊಡೆದರೆ ಇತ್ತ ರಾಜ್ಯ ಸರ್ಕಾರ ತಮ್ಮ ಸ್ವಾರ್ಥಕ್ಕಾಗಿ ಜನರ ಆಸೆ ಕನಸುಗಳನ್ನುನುಚ್ಚು ನೂರುಮಾಡಿದ ಶ್ರೇಯಸ್ಸು ಈ ಘನವೆತ್ತ ಸರ್ಕಾರಕ್ಕೆ ಸಲ್ಲುತ್ತದೆ. ಈ ಕಳೆದ ಐದು ವರ್ಷಗಳಲ್ಲಿಇವರು ನೀಡಿದ ಆಡಳಿತ ತುಂಬಾನೆ ಡಿಫಿರೆಂಟಾಗಿತ್ತು ಎಂದರೆ ತಪ್ಪಾಗಲಾರದು .

ಹೀಗೆ ನಮ್ಮನ್ನು ತುಳಿಯುವ ಪರಂಪರೆ ಈ ರಾಜಕೀಯದವರು ಮಾಡಿದ್ದುಎಲ್ಲರ ಕೆಂಗಣ್ಣಿಗೆ ಗುರಿಯಾಯಿತು. ನಾವು ವೈಜ್ಞಾನಿಕವಾಗಿ,ಸಾಮಾಜಿಕವಾಗಿ,ನಾವು ಯಾವುದೆ ನಿರಿಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗಲಿಲ್ಲಾ. ಅವರು ನೀಡಿದ ಆಡಳಿತದಲ್ಲಿ ಪಾರದರ್ಶಕತೆ ಕಾಣಲು ಸಾಧ್ಯವಾಗಲಿಲ್ಲಾ. ಯಾವುದೆ ಅಬಿವೃದ್ಧಿ ಕೆಲಸಗಳು ಹೊರಬರಲು ಸಾಧ್ಯವಾಗಲಿಲ್ಲಾ. ಎಲೆಕ್ಸನ್ ಬಂದಾಗ ಜನರನ್ನು ಕಲೆಕ್ಸನ್ ಮಾಡುವ ನಿಟ್ಟುನಲ್ಲಿ ಈ ರಾಜಕೀಯ ಧೂರಿಣರು ಇದ್ದಾರೆ.ನಮ್ಮ ರಾಜ್ಯ ಮತ್ತು ದೇಶ ಹೀಗೆ ಹೋದರೆ ನಮ್ಮನ್ನು ಮಾರಿ ನಾವೇನು ಮಾಡುವುದು ಹಣದುಬ್ಬರ ಹಾಗೆ ಹೀಗೆ ಅಂತಾ ಕಾರಣ ಹೇಳಿ ಜಾರಿಕೊಳ್ಳುತ್ತಾರೆ.

ಹಾಗಾದರೆ ಇವರನ್ನು ಇಂತಹ ಆಡಳಿತ ನಡೆಸಲು ಅವಕಾಶ ಕೊಟ್ಟವರು ಯಾರು ಎಂದು ವಿಚಾರಿಸದರೆ ನಮಗೆ ನಾಚಿಕೆ ಬರುತ್ತದೆ. ಕಾರಣ ಅವರನ್ನು ಆ ಗದ್ದುಗೆಗೆ ಏರಿಸಿದ ಮಾಹಾನ್ ಜನತೆ ನಾವಲ್ಲವೆ?. ಈ ಸರ್ಕಾರಗಳನ್ನು , ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರ ನಮ್ಮ ಸಂವಿಧಾನ ನಮಗೆ ನೀಡಿದೆ ಅದರ ಪ್ರಕಾರ ನಾವು ಯಾವುದೆ ಆಮಿಷಕ್ಕೆ ಒಳಗಾಗದೆ ಆಯ್ಕೆ ಮಾಡಿದರೆ ಅವರು ಒಳ್ಳೆಯ ರಾಜಕಾರಣಿಯನ್ನು ಆರಿಸಿದ್ದೇವೆ ಎಂದು ತಿಳಿಯಬಹುದಾಗಿದೆ. ಆದರೆ ನಾವು ಎಂತಹ ಪ್ರಜೆಗಳೆಂದರೆ ಕ್ಷುಲ್ಲಕ ವಿಷಯ ಆಮಿಷಕ್ಕೆ ಒಳಗಾಗಿ ನಮ್ಮ ಮತದಾನದ ಹಕ್ಕನ್ನು ಮಾರಿಕೊಳ್ಳುತ್ತೇವೆ. ಕ್ಷಣಿಕ ಸುಖಕ್ಕಾಗಿ ನಮ್ಮನ್ನು ನಾವು ಮಾರಿಕೊಂಡು ಬಾಳುವ ನಮ್ಮ ನಡೆನುಡಿ ಎಷ್ಟು ಶುದ್ಧ ಎಂದು ಒಮ್ಮೆ ವಿಚಾರಮಾಡಬೇಕಾಗಿದೆ. ಇನ್ನು ಕೆಲವೆ ದಿನಗಳಲ್ಲಿ ಮತ್ತೆ ಕೇಂದ್ರ ಮತ್ತು ರಾಜ್ಯ ಸರ್ಕಾರದಲ್ಲಿ ಚುನಾವಣೆ ಎದುರಾಗಲಿವೆ ನಾವು ಬುದ್ದಿವಂತ ಮತದಾರರು ಎಂತಹ ಸರ್ಕಾರವನ್ನು ಆರಿಸಿ ತರುತ್ತೇವೆ ಎಂದು ಕಾದು ನೋಡಬೇಕಿದೆ. ನಾವು ಮುಂದಿನ ಸರ್ಕಾರ ನೇಮಿಸುವುದರಲ್ಲಿ ಅಡಗಿದೆ ನಮ್ಮ ಜಾಣತನ .

 
  
ಕೆ .ಎಂ.ವಿಶ್ವನಾಥ.(ಮಂಕವಿ) ಮರತೂರ..

ಲೇಖಕರು

K.M.Vishwanath

ಇವು ನಾ ಕಂಡ ಅನುಭವ ಮತ್ತು ಅನಿಸಿಕೆಗಳು

ನನ್ನ ಬಗ್ಗೆ................!

ಹಿಂದೂ ನ್ಯಾಯಸಂಹಿತೆ ಹಾಗೂ ಮಿತಾಕ್ಷರ ಎಂಬ ಅಮೋಘ ಗ್ರಂಥಗಳನ್ನು ಈ ಜಗತ್ತಿಗೆ ನೀಡಿದ ವಿಜ್ಞಾನೇಶ್ವರ ಹುಟ್ಟಿದ ಸುಕ್ಷೇತ್ರ, ಭಾರತ ದೇಶದ , ಕರ್ನಾಟಕ ರಾಜ್ಯದ ,ಗುಲಬರ್ಗಾ ಜಿಲ್ಲೆ ಹಾಗೂ ಚಿತ್ತಾಪೂರ ತಾಲೂಕಿನ ಮರತೂರ ಗ್ರಾಮದಲ್ಲಿ ಹುಟ್ಟಿದವನು, ಕವಲಗಾ ಮರೆಪ್ಪಾರವರ ಮೂರನೆ ಸುಪುತ್ರನಾಗಿ ಊರಿನ ಅದಿ ದೇವನಾದ ಶ್ರೀ ಕಾಶಿ ವಿಶ್ವನಾಥ ನ ಹೆಸರು ಇಟ್ಟಿಕೊಂಡವನು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸರಕಾರಿ ಹಿರಿಯಾ ಪ್ರಾಥಮಿಕ ಶಾಲೆ ಮರತೂರ ,ಹತ್ತನೆ ತರಗತಿಯನ್ನು ಸರಕಾರಿ ಸಂಯುಕ್ತ ಪದವಿ ಪೂರ್ವ ಕಾಲೇಜು ನಿಂಬರ್ಗಾ ಇಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿ ಬೆಳ್ಳಿ ಪದಕ ಪಡೆದೆ,ಸರಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಗುಲಬರ್ಗಾ ಇಲ್ಲಿ ಪಿ.ಯು.ಸಿ. ವಿಜ್ಞಾನ ವಿಭಾಗದಲ್ಲಿ ಪಾಸಾದೆ. ಕೀರ್ತಿ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ಶಿಕ್ಷಣದಲ್ಲಿ ಡಿಪ್ಲೋಮಾ ಪದವಿ ಪಡೆದೆ. ಸರಕಾರಿ ಪದವಿ ಮಹಾವಿದ್ಯಾಲಯಲ್ಲಿ ಬಿ.ಎಸ್.ಸಿ ಪದವಿ ಭೌತಶಾಸ್ತ್ರ ,ರಸಾಯನ ವಿಜ್ಞಾನ ಹಾಗು ಗಣಿತದಲ್ಲಿ ಮುಗಿಸಿದೆ. ನನ್ನ ಬಿ.ಎಡ್. ಪದವಿಯು ಶ್ರೀ ಹಿಂಗೂಲಾಂಬಿಕಾ ಶಿಕ್ಷಣ ಸಂಸ್ಥೆ ಗುಲಬರ್ಗಾದಲ್ಲಿ ನಡೆದಿದೆ. ನಾನು ಸದಾ ಕ್ರೀಯಾ ಶೀಲನಾಗಿದ್ದು ಆಗಾಗ ಸಮಾಜದ ಕೆಲವು ವಿಷಯಗಳ ಕುರಿತು ಬರವಣಿಗೆ ರೂಪದಲ್ಲಿ ಬರೆದಿದ್ದದೆನೆ. ಒಂದು ಸಿನಿಮಾದಲ್ಲಿ ಸಾಹಿತ್ಯವನ್ನು ಬರೆದಿದ್ದೇನೆ . ಬರೆಯುವದು ನನ್ನ ಮೊದಲ ಹವ್ಯಾಸವಾಗಿ ಪರಿಣಮಿಸಿದೆ. ಕೆಲವು ಪುಸ್ತಕಗಳನ್ನು ಕವನ ಸಂಕಲನಗಳನ್ನು ಬರೆದಿದ್ದೇನೆ ಆದರೆ ಯಾವುದು ಪ್ರಕಟವಾಗಿಲ್ಲಾ ಈಗಲು ಬರೆಯುತ್ತಲೆ ಇದ್ದೇನೆ. ಜೊತೆಗೆ ಸಮಾಜಿಕ ಸೇವೆಯಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ . ಸಮುದಾಯದ,ಸರ್ಕಾರಿ ಶಾಲೆಯ ಶಿಕ್ಷಕರ ,ಮಕ್ಕಳ ಸೇವೆಯನ್ನು ರಾಯಚೂರ ,ಗುಲಬರ್ಗಾ,ಯಾದಗಿರಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ.
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಕೊಡಮಾಡುವ ರಾಜ್ಯ ರಾಷ್ಟ್ರಕವಿ ಕುವೆಂಪು ಕಾವ್ಯ ಪ್ರಶಸ್ತಿ ಮೊನ್ನೆ ತಾನೆ ಪಡೆದೆ.

ಕೆ.ಎಂ.ವಿಶ್ವನಾಥ
ಹವ್ಯಾಸಿ ಬರಹಗಾರರು.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.