Skip to main content

ಕನ್ನಡಿಯನ್ನು ಆಪಲ್ ಐಪ್ಯಾಡ್ ಎಂದು ಮೋಸ ಹೋದ ಹೆಂಗಸು!

ಬರೆದಿದ್ದುDecember 2, 2012
2ಅನಿಸಿಕೆಗಳು

ಮೋಸ ಮಾಡುವವರು ಎಲ್ಲ ಕಡೆ ಇದ್ದಾರೆ ಅಮೇರಿಕ ಬೇರೆ ಏನಲ್ಲ. ಅಮೇರಿಕದ ಅರ್ಲಿಂಗಟನ್ ನ ಮಹಿಳೆ ಒಬ್ಬಳು ಗ್ಯಾಸ್ ಅನ್ನು ಕಾರಿಗೆ ಟೆಕ್ಸಾಸ್ ನ ಗ್ಯಾಸ್ ಸ್ಟೇಶನ್ ಅಲ್ಲಿ ತುಂಬಿಸುತ್ತಿದ್ದಳು. ಆಗ ಒಬ್ಬ ಗಾಡಿಯಲ್ಲಿ ಬಂದ ೮೦೦ ಡಾಲರ್ ಬೆಲೆಯ ಐ ಪ್ಯಾಡ್ ಅನ್ನು ಆಕೆಗೆ ಬರಿ ೨೦೦ ಡಾಲರ್ ಗೆ ಆಫರ್ ನೀಡಿದ. ಅಷ್ಟು ಕಡಿಮೆಗೆ ಐಪ್ಯಾಡ್ ಬರಲು ಹೇಗೆ ಸಾಧ್ಯ, ಅಥವಾ ಇದು ಕದ್ದ ಮಾಲಾಗಿರಬಹುದು ಎಂದು ಯೋಚಿಸಲು ಹೋಗಲಿಲ್ಲ. ಹಾಳಾಗಿ ಹೋಗಲಿ ಆ ಬಾಕ್ಸ್ ಅಲ್ಲಿ ಏನಿದೆ ಎಂದೂ ತೆರೆದು ನೋಡಲಿಲ್ಲ. ತಕ್ಷಣ ಬಂದ ಡೀಲ್ ಅನ್ನು ಕಳೆದು ಕೊಳ್ಳಬಾರದೆಂದು ತಕ್ಷಣ ಹಣ ನೀಡಿ ಖರೀದಿಸಿದಳು.
ಆತ ಹಣ ಪಡೆದ ತಕ್ಷಣ ಹೊರಟು ಹೋದ. ಸೆಲ್ಲೋ ಟೇಪ್ ನಿಂದ ಸೀಲ್ ಆದ ಆ ಬಾಕ್ಸ್ ಮೇಲೆ ಐಪ್ಯಾಡ್ ಚಿತ್ರ ಇತ್ತು. ಈಕೆ ನಿದಾನವಾಗಿ ಆ ಬಾಕ್ಸ್ ತೆರೆದಳು. ಹಿಂದೆ ಐಪ್ಯಾಡ್ ನ ಹಾಗೆ ಕಾಣುತ್ತಿದ್ದ ಆಪಲ್ ನ ಲೋಗೊ ಇತ್ತು. ಮುಂದಿನ ಪರದೆ ಮೇಲೆ ಪೇಪರ್ ಗಳನ್ನು ಅಂಟಿಸಲಾಗಿತ್ತು. ಅವನ್ನು ತೆಗೆಯುತ್ತಾ ಹೋದಂತೆ ಅಲ್ಲಿ ಕಂಡಿದ್ದು ಐಪ್ಯಾಡ್ ಅಲ್ಲ ಕನ್ನಡಿ!ಅಂದರೆ ಆ ಅಸಾಮಿ ಕನ್ನಡಿಗೆ (ಮಿರರ್) ಆಪಲ್ ಲೋಗೋ ಹಾಕಿ ಬಾಕ್ಸ್ ಅಲ್ಲಿ ಹಾಕಿ ಇವಳಿಗೆ ಏಮಾರಿಸಿ ಹೋಗಿದ್ದ! ಆಕೆಯದೂ ತಪ್ಪಿದೆ. ಒಬ್ಬ ಅಪರಿಚಿತ ಅಷ್ಟು ಕಡಿಮೆ ಬೆಲೆಗೆ ಹೊಸ ವಸ್ತು ಮಾರುವಾಗ ಅದನ್ನು ಎಲ್ಲಿಂದಲೋ ಕದ್ದಿರುವ ಸಾಧ್ಯತೆ ಇತ್ತು. ಆದರೂ ಆಕೆ ಹಿಂದೆ ಮುಂದೆ ನೋಡದೆ ಖರೀದಿಸುದ್ದೂ ಸಹ ತಪ್ಪು ಅಲ್ವಾ?ಚಿತ್ರ ಕೃಪೆಃ ಸಿನೆಟ್

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

venkatb83 ಭಾನು, 12/02/2012 - 17:26

 ನೀವ್ ಬರೆದ  ಘಟನೆ ಓದಿ ಬಿದ್ದು ಬಿದ್ದು ನಕ್ಕೆ.ಇಂಗು ತಿಂದ  ಮಂಗ  :()))ಜನರ ದುರಾಶೆ - ಜಿಪುಣತನ-ಅವಸರ ಪ್ರವುತ್ತಿ  ಬಂಡವಾಳ ಮಾಡಿಕೊಂಡು  ಭಲೇ ಟೋಪಿ ಹಾಕಿರುವನು!!ಇದೊಂತರ ವಿಚಿತ್ರ ವಿಶೇಷ  ಕಳತನ-ಮೋಸ..!!ಜಗತ್ತಿನಲ್ಲಿ ಎಂಥೆಂಥವರು  ಹೇಗೆಲ್ಲ  ಮೋಸ ಮಾಡ್ತಾರಪ್ಪ..!!
ನೆಟ್ನಲ್ಲಿ ಹುಡುಕಿದಾಗ ಸಿಕ್ಕದ್ದು  ಇಲ್ಲಿದೆ...
ಶುಭವಾಗಲಿ..
\|/  http://www.222m.cn/?p=267 http://www.emirates247.com/offbeat/crazy-world/woman-buys-ipad-gets-mirror-2012-11-13-1.482701 http://www.88450.com/texas-woman-cheap-buy-mirror-micro-reading-cheated-buy-ipad/
  

ರಾಜೇಶ ಹೆಗಡೆ ಭಾನು, 12/02/2012 - 20:29

ನಮಸ್ಕಾರ ವೆಂಕಟೇಶ್,
ನಿಜ ಅತಿ ಆಸೆ ಗತಿ ಕೇಡು ಅಂತಾ ಸುಮ್ಸುಮ್ನೆ ಹೇಳ್ತಾರಾ? :)

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.