Skip to main content

ಬಹಳ ದಿನಗಳಿಂದ ನಾನು ವಿಸ್ಮಯ ನಗರಿಯಲ್ಲಿ ಬರೆಯಲು ಆಗಲಿಲ್ಲಾ ಅದರಲ್ಲು ಈ ಒತ್ತಡದ ಜೀವನದಲ್ಲಿ ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ನುಸುಳಿ ಹೋಗುವ ಕೆಲಸವಿದೆಯಲ್ಲಾ ಅದೂ ತುಂಬಾ ಕಠಿಣ ಎನಿಸುತ್ತದೆ ಸುಮಾರು ನೂರಕ್ಕು ಹೆಚ್ಚು ಬರಹಗಳನ್ನು ಬರೆದೆ ಕೆಲವು ಗಣಕಯಂತ್ರದ ದೋಷಕ್ಕೆ ಒಳಾಗದವು ಕೆಲವು ನನ್ನ ಕೈ ದೋಷಕ್ಕೆ ಒಳಾಗದವು ಛೆ ಈ ರಾಜ್ಯದಲ್ಲಿ ಯಾವ ಪತ್ರಿಕೆಯು ನನ್ನ ಬರವಣಿಗೆ ಗುರುತಿಸುತ್ತಿಲ್ಲಾ ಎಂಬ ಬೇಸರ ಮೂಡಿತು ಆಗಾಗ ಈ ತಾಣದಿಂದ ಬರುತ್ತಿರುವ ಕೆಲವು ಉತ್ಸಾಹದ ಮಾತುಗಳು ಮತ್ತೆ ನನ್ನ ಬರವಣಿಗೆಯನ್ನು ಜಾಗೃತಗೊಳಿಸಿತು ಮೊನ್ನೆ ಹೀಗೆ ಕುಳಿತಾಗ ಬೆಂಗಳೂರಿನಿಂದ ಕರೆಯೊಂದು ಬಂತು ಸರ್ ನಾವು ಸುವರ್ಣಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯಿಂದ ಸಂಪಾದಕರು ಮಾತಾನಾಡುವದು ನಿಮ್ಮ ಒಂದು ಬರಹ ನಮ್ಮ ಪತ್ರಿಕೆಗೆ ಆಯ್ಕೆ ಮಾಡಿಕೊಂಡಿದ್ದೇವೆ ತುಂಬಾ ಚೆನ್ನಾಗಿ ನೀವು ವಿಸ್ಮಯನಗರಿ ತಾಣದಲ್ಲಿ ಬರೆದಿದ್ದೀರಿ ಅದನ್ನು ನಾವು ನಮ್ಮ ಪತ್ರಿಕೆಗೆ ಹಾಕಿಕೊಳ್ಳುತ್ತಿದ್ಧೆವೆ ಎಂದರು ಇದನ್ನು ತಿಳಿದ ನನಗೆ ತುಂಬಾ ಸಂತೋಷವಾಯಿತು. ಮೊನ್ನೆ ಅದರಂತೆ ಬರಹ ಪ್ರಕಟವಾಯಿತು ವಿಕ ದ ಖ್ಯಾತ ಅಂಕಣಕಾರ ಶ್ರೀವತ್ಸ ಜೋಶಿರವರು ಮೆಚ್ಚುಗೆಯ ಮಾತುಗಳ ಹಾಗೂ ಬೆಂಗಳೂರಿನ ಶ್ರೀ ಗಂಗಾಧರ ಸರ್ ರವರ ಮಾತು ನನಗೆ ತುಂಬಾ ಖುಶಿ ತಂತು ಇನ್ನು ನಮ್ಮ ಆಫೀನಲ್ಲಿ ನನ್ನ ಬರವಣಿಗೆಯ ಮಾತುಗಳೆ ನಡೆದವು ಹೀಗೆ ಈ ತಾಣ ನನಗೆ ತುಂಬಾ ಸಾಹಾಯಕಾರಿಯಾಗಿದೆ ಈ ತಾಣದ ಸರ್ವ ಸದಸ್ಯರಿಗೂ ಹಾಗೂ ಮುಖ್ಯವಾಗಿ ಸಂಪಾದಕರಿಗೂ ಮೇಲ್ದಿಕಾರಿಗಳಿಗೂ ಈ ಚಿಕ್ಕ ಬರಹಗಾರನ ಅನಂತ ಕೋಟಿ ನಮನಗಳು

ನಿಮಗೆ ಈ ತಾಣ ಹೇಗೆ ಉಪಯೋಗಕರ ಎಂಬುವದು ಹಂಚಿಕೊಳ್ಳಿ

ಕೆ.ಎಂ.ವಿಶ್ವನಾಥ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

praveen.kulkarni ಧ, 11/28/2012 - 11:18

ತುಂಬಾ ಸಂತೋಷವಾಯಿತು ವಿಶ್ವನಾಥ್ ಅವರೇ ನಿಮ್ಮ ಮಾತುಗಳನ್ನು ಕೇಳಿ.ಅದ್ಯಾವ ಕವನ /ಲೇಖನ ನಮ್ಮೊಂದಿಗು ಹಂಚಿಕೊಳ್ಳಿ ಮಾರಾಯ್ರೆ.

venkatb83 ಶುಕ್ರ, 11/30/2012 - 18:31

ಈ ತಾಣವನ್ನು  ಸೊಗಸಾಗಿ ರೂಪಿಸಿ  ವಿನ್ಯಾಸಗೊಳಿಸಿದ  ರಾಜೆಶ್ ಅವ್ರಿಗೆ  ಧನ್ಯವಾದಗಳು.. ಆ ಕಡೆ ಸಂಪದ ಹೊಸ ರೂಪ ಪಡೆದದ್ದು ಇಲ್ಲಿ ನೀವು ವಿಸ್ಮಯನಗರಿಯನ್ನ  ಬದಲಾಯಿಸಿದ್ದು ಕಾಕತಾಳಿಯವೆ?ನನಗಂತು ಈ ವಿನ್ಯಾಸ ಭಲೆ ಹಿಡಿಸಿತು..ಶುಭವಾಗಲಿ...ನನ್ನಿ \।/...

Gangamma. ಮಂಗಳ, 11/05/2013 - 19:54

ನನಗೆ ಈ ತಾಣ ತುಂಬಾ ಸಂತಸ ತಂದಿದೆ.

  • 886 views