Skip to main content

ಕೃಷ್ಣಂ ವಂದೇ ಜಗದ್ಗುರು

ಇಂದ sridhar.G
ಬರೆದಿದ್ದುSeptember 7, 2012
noಅನಿಸಿಕೆ

ಈಗ ಕೃಷ್ಣ ಜನ್ಮಾಷ್ಟಮಿ ಸೌರಮಾನ ಪಂಚಾಂಗದ ರೀತ್ಯ ಶ್ರೀಕೃಷ್ಣನಿಗೆ ಆಚರಿಸಲಾಗುತ್ತಿದೆ.

 ಶ್ರೀ ಕೃಷ್ಣ ಜನ್ಮಾಷ್ಟಮಿ ಶುಭಾಶಯಗಳೊಂದಿಗೆ
ಕೃಷ್ಣಂ ವಂದೇ ಜಗದ್ಗುರು -ಎಂಬ ವಾಕ್ಯ ಬಹಳ ಮುಖ್ಯವಾದುದು.ಕೃಷ್ಣ ಹೆಸರು ಪ್ರಸ್ತಾಪ ವಾದಗೆಲ್ಲ ಲೀಲಾ ವಿನೋದಗಳು ,ಯುದ್ದದಲ್ಲಿ ಕೃಷ್ಣ ಅನುಸರಿಸಿದ ತಂತ್ರಗಾರಿಕೆ ನೆನಪಿಗೆ ಬರುತ್ತದೆ. ಆದರೆ ಕೃಷ್ಣ ಈ ಜಗತ್ತಿಗೆ ಪರಮಾತ್ಮನು ,ಗುರುವು ಆಗಿರುತ್ತಾನೆ.ಬಾಲ್ಯದಲ್ಲಿ ತನ್ನ ಸಾಕು ತಾಯಿ ಯಶೋದೆಗೆ ತಾನೇ ಸ್ವತಃ ಮಣ್ಣು ತಿಂದಂತೆ ನಟಿಸಿ, ಇಡೀ ಬ್ರಹ್ಮಾಂಡ ತನ್ನ ಬಾಯಿಯಲ್ಲಿ ತೋರಿಸಿದ.ನಾವುಗಳು ಮಕ್ಕಳಿಂದ ಕಲಿಯುವ ಎಸ್ಟೋ ವಿಷಯಗಳು ಇರುತ್ತದೆ.ಶ್ರೀಕೃಷ್ಣ ನಿಗೆ ಹಾಲಿನ ರೀತಿಯಲ್ಲಿ ವಿಷವುನಿಸಿದ ಪೂತನಿ ರಾಕ್ಷಸಿಯನ್ನು ತಾಯಿಯೆಂದೇ ಭಾವಿಸಿದ.ಹೆತ್ತ ತಾಯಿ -ದೇವಕಿ,ಸಾಕುತಾಯಿ-ಯಶೋದೆ ,ಹಾಲು ಎಂದು ವಿಷವುನಿಸಿದ - ಪೂತನಿ ಎಲ್ಲರೂ ತಾಯಿಗಳು. ತಾಯಿ ಪಾತ್ರದಲ್ಲಿ ಮೋಸ,ಕಪಟವಿಲ್ಲ.ತಾಯಿಗೆ ನೀಡಬೇಕಾದ ಗೌರವ ಬಾಲಕೃಷ್ಣ ಎತ್ತಿ ಹಿಡಿದ.

 ಸಾಂದೀಪನಿ ಗುರುಕುಲದಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿ ,ಸುಧಾಮಾನಂತಹ,ಇನ್ನುಳಿದ  ಸಹವರ್ತಿಯೊಂದಿಗೆ,ಶ್ರಮದಾನ ಕಾರ್ಯ ನಿರ್ವಹಿಸಿ ವಿದ್ಯೆ ಗಳಿಸಿದ ರೀತಿ ಅನುಕರಣೀಯ.ಅದೇ ಸುಧಾಮನಿಂದ ಅಕ್ಕಿಯ ಪುಡಿ ಅವಲಕ್ಕಿ ಸ್ವೀಕರಿಸಿ ಸ್ನೇಹದಲ್ಲಿ ಬಡವ ಶ್ರೀಮಂತಿಕೆ ಎಂಬ ಭೇದವಿಲ್ಲ ಎಂದು ಸಾರಿದ ಮಹಾನ್ ದೈವ.ಬಂಧುವಾದ ಶಿಶುಪಾಲನನ್ನುಸಂತೈಸಿ,ಅವನು ಕ್ರೂರನಾದ ಕಾರಣ ಸಮಾಜದ ಹಿತಕ್ಕಾಗಿ ದಂಡಿಸಿದ.ಅಂದರೆ ಬಂಧುಗಳನ್ನು ಆದರಿಸುವ ಸಮನ್ವಯತೆ ಇರಬೇಕೆಂದು ಜಗತ್ತಿಗೆ ಸಾರಿದ ವ್ಯಕ್ತಿ.ಗೋವರ್ದನ ಗಿರಿಯನ್ನು ತನ್ನ ಕಿರು ಬೆರಳಲ್ಲಿ ಎತ್ತಿ ಹಿಡಿದು ಗೋವುಗಳನ್ನು ಸಂರಕ್ಷಿಸಿ,ಪ್ರಾಣಿದಯೆ ತತ್ವವನ್ನು ಗಿರಿಧರನಾಗಿ ತಿಳಿಸಿದ.ಇಂದ್ರನ ಗರ್ವವನ್ನು ಮೆಟ್ಟಿ ನಿಂತು ,ಸ್ವಪ್ರತಿಸ್ತ್ತೆಸಲ್ಲದು ಎಂಬ ಅಂಶ ಬಹಿರಂಗಪಡಿಸಿದ.ಬಲರಾಮನ ಸೋದರತೆಗೆ ಗಟ್ಟಿತನ ಕೂಡಿಸಿದ ರಾಮಕೃಷ್ಣ .ಶಮಂತ ಮಣಿ ವಿಷಯದಲ್ಲಿ ಆರೋಪ ಬಂದಾಗ ಅದರಿಂದ ಹೊರಬರುವ ತನ್ನ ನಡೆಯನ್ನು  ಪಣ ವಾಗಿಸಿ ನಿರ್ದೋಷ ಸಾಬೀತುಪಡಿಸಿದ.ಮಹಾಸಾಧ್ವಿ ರುಕ್ಮಣಿಯ ಮುಕೇನ,ತಾನು ಸರಳ ಪೂಜೆಗೂ,ಆರಾಧನೆಗೂ,ಕೇವಲ ತುಳಸಿದಳಕ್ಕೆತಾನು ದೊರಕಬಲ್ಲೆ ಎಂದು ಶ್ರೀಹರಿ ನಿರೂಪಿಸಿದ.ನರಕಾಸುರನನ್ನು ವಧಿಸುವಾಗ ತನ್ನ ಪತ್ನಿ ಸತ್ಯಭಾಮೆಯನ್ನು ಯುದ್ದ ರಂಗಕ್ಕೆ ಕರೆದೊಯ್ದು , ಶತ್ರುವಿನ ವಶದಲ್ಲಿ ಹದಿನಾಲ್ಕು ಸಾವಿರ ಸ್ತ್ರೀಯರನ್ನು ವಿಮೊಚಿಸಿ,ಸ್ತ್ರೀಯರಿಂದಲೇ ಸ್ತ್ರೀಯರನ್ನು ಉದ್ದರಿಸಲು ಸಾದ್ಯ ಸಂದೇಶ ಸಾರಿದ.ಈಗಲೂ ಬ್ರಿಂನ್ದಾವನದ ಅಬಲೆಯರಿಗೆ ಆಶ್ರಯದಾತ.ಮಹಾಭಾರತ ಯುದ್ದದಲ್ಲಿ ಒಬ್ಬ ಯೋಧನಿಗಿರ ಬೇಕಾದ ಗುಣಗಳನ್ನು ತಿಳಿ ಹೇಳಿ ಅರ್ಜುನನನ್ನು ಜಾಗೃತಗೊಳಿಸಿದ.ಧರ್ಮವಂತ ಯೋಧನಿಗೆ ಪಾರ್ಥಸಾರಥಿ ತಾನಾಗಬಲ್ಲೆ .ಇದರಿಂದ ಜಗತ್ತಿಗೆ ಭಗವದ್ಗೀತೆ ದೊರಕಿತು. ಶಸ್ತ್ರ ಹಿಡಿಯದೆ ಕೌಶಲ್ಯದಿಂದ ದುಷ್ಟರಾದ ಕೌರವರನ್ನು  ಸಂಹರಿಸಿಲು ಕಾರಣನಾದ.ರಾಮನಂತೆ ನಡೆ-ಕೃಷ್ಣನಂತೆ ನುಡಿ ಎಂಬ ನನ್ನುಡಿಯು ಕೃಷ್ಣ ಜಗದ್ಗುರು ಎಂದೇ ಸಾರುತ್ತದೆ.ಆದುದರಿಂದ ಕೃಷ್ಣನನ್ನು ಕೇವಲ ಲೀಲಾ ವಿನೋದಕ್ಕೆ ಮಾತ್ರ ನೆನಪಿಸಿ ಕೊಳ್ಳದೆ,ಗುರುವಾಗಿ ಸ್ವೀಕರಿಸಬೇಕು.ಅಂತಹ ಆನಂದ ಮತ್ತೊಂದಿಲ್ಲ-

ಲೇಖಕರು

sridhar.G

MULBAGAL SRIDHAR

ನನ್ನ ಬಗ್ಗೆ ಬರೆಯಲು ನಾನೇನು ದೊಡ್ಡ ವ್ಯಕ್ತಿಯಲ್ಲ .ನಾನೊಬ್ಬ ಸಣ್ಣ ಲೇಖಕ

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.