Skip to main content

ಆತ್ಮಿಯಾ ಗೆಳೆಯರೆ ನಾನು ಮುಂದಿನ ದಿನಗಳಲ್ಲಿ ಒಂದು 

 

ಪತ್ರಿಕೆಯನ್ನು ತೆಗೆಯಬೇಕು ಎನ್ನುವ ಆಸೆ ಹೊಂದಿದ್ದದೆನೆ 

 

ಇದಕ್ಕೆ ನಿಮ್ಮ ಅಭಿಪ್ರಾಯವೇನು ಏನಾದರು ಸರಿ ನನಗೆ ನಿಮ್ಮ ಅಭಿಪ್ರಾಯ ತಿಳಿಸಿ

 

ಇಂತಿ ನಿಮ್ಮ 

 

ಕೆ.ಎಂ.ವಿಶ್ವನಾಥ

 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ದೇವರು ಒಳ್ಳೆಯದು ಮಾಡಲಿ ಗೆಳೆಯ, ನಿಮ್ಮ ಪ್ರಯತ್ನಃಕ್ಕೆ ಉತ್ತಮ ಯಶಸ್ಸು ಸಿಗಲಿ, ಬರೀ ಒಳ್ಳೆಯದನ್ನು ಮಾತ್ರ ಜಗತ್ತಿಗೆ ಕೊಡಿ.ಪೀತ ಪತ್ರಿಕೋದ್ಯಮ ಬೇಡ.


 


ಶಿವಕುಮಾರ್.ಎಸ್.ಈ,


ನ್ಯಾಯವಾದಿ, ತೆರಿಗೆ ಸಲಹೆಗಾರರು, ಜ್ಯೋತಿಷಿ, ಸಂಖ್ಯಾಶಾಸ್ತ್ರಜ್ನ, ವಾಸ್ತುಶಾಸ್ತ್ರಜ್ನ, ಪತ್ರಿಕೋದ್ಯಮ ವಿದ್ಯಾರ್ಥಿ,


ಬೆಂಗಳೂರು.

K.M.Vishwanath ಗುರು, 08/09/2012 - 11:51

ನಿಮಗೆ ದನ್ಯವಾದ

ರಾಜೇಶ ಹೆಗಡೆ ಶನಿ, 08/11/2012 - 06:58

ನಮಸ್ಕಾರ ವಿಶ್ವನಾಥ್ ಅವರೇ,


ನೀವು ಯಾವ ರೀತಿಯ ಪತ್ರಿಕೆ ಎಂಬುದನ್ನು ತಿಳಿಸಿಲ್ಲ. ದಿನಪತ್ರಿಕೆಯೇ? ವಾರ ಪತ್ರಿಕೆಯೇ? ಅಥವಾ ಮಾಸಿಕ ಪತ್ರಿಕೆಯೇ? ವಿಷಯ ಏನಿರುತ್ತದೆ?


ಅದರಲ್ಲೇ ಆದಾಯಗಳಿಸಿ ಬದುಕಬಯಸುತ್ತೀರಾ? ಅಥವಾ ಕೇವಲ ಹವ್ಯಾಸಕ್ಕಾಗಿ ಬೇರೆ ಕಡೆ ದುಡಿದ ಹಣ ಖರ್ಚು ಮಾಡಿ ನಷ್ಟದಲ್ಲಿ ನಡೆಸುತ್ತೀರಾ?


ಅಕಸ್ಮಾತ್ ಸಾಲ ಮಾಡಿ ಕನ್ನಡ ಪತ್ರಿಕೆ ನಡೆಸಿ ಅದರ ಆದಾಯದಲ್ಲಿ ಸಾಲ ತುಂಬಿ, ಜೀವನ ನಡೆಸುವದು ನಿಮ್ಮ ಗುರಿಯಾಗಿದ್ದರೆ ನೀವು ತುಂಬಾ ಯೋಚಿಸಬೇಕು. ಯಾಕೆಂದರೆ ಈಗಾಗಲೇ ಜನಪ್ರಿಯವಾಗಿರುವ ಪತ್ರಿಕೆಗಳಿಗಿಂತ ವಿಭಿನ್ನವಾಗಿ ಚೆನ್ನಾಗಿದ್ದರೆ ಮಾತ್ರ ಜನ ಕೊಂಡು ಕೊಳ್ಳುತ್ತಾರೆ. ಲೇಖನಗಳ ಜೊತೆ ಮುದ್ರಣ ಗುಣಮಟ್ಟ ಕೂಡಾ ಚೆನ್ನಾಗಿರಬೇಕು. ಬೆಲೆ ಜಾಸ್ತಿ ಇದ್ದರೂ ಕಡಿಮೆ ಜನ ಕೊಳ್ಳುತ್ತಾರೆ. ಜಾಹೀರಾತು ಇಲ್ಲದೇ ಕಡಿಮೆ ಬೆಲೆಗೆ ಪತ್ರಿಕೆ ಕೊಡುವದು ಅಸಾಧ್ಯ. ಆದರೆ ಮೊದಮೊದಲು ಪತ್ರಿಕೆಗಳಿಗೆ ದೊಡ್ಡ ಜಾಹೀರಾತು ದೊರೆಯದು.  ಅಕಸ್ಮಾತ್ ಇದರಲ್ಲಿ ವಿಫಲವಾದರೆ ಸಾಲದ ಹೊರೆ ತಾಳಲಾರದಷ್ಟು ಹೆಚ್ಚಾಗುತ್ತದೆ.ಕನ್ನಡ ಪತ್ರಿಕೆ ಕೊಳ್ಳುವವರ ಮಾರುಕಟ್ಟೆ ಅಧ್ಯಯನ ಮಾಡಿ ನಂತರ ಕಾಲಿಡುವದು ಒಳ್ಳೆಯದು.


ಸಣ್ಣ ಪ್ರಮಾಣದಲ್ಲಿ ಹವ್ಯಾಸಕ್ಕಾಗಿ ಪತ್ರಿಕೆ ನಡೆಸುವವರಾದರೆ ಚಿಂತಿಲ್ಲ.


 

Vinaya.g ಶನಿ, 01/11/2014 - 14:14

ಸರಿಯಾದ ಅಲೋಚನೆ ರಾಜೇಶ್ ರವರೇ

Vinaya.g ಶನಿ, 01/11/2014 - 14:17

ಕೆ.ಎಂ.ವಿಶ್ವನಾಥರವರೇ ವಿಚಾರಿಸಿ ಯೋಚಿಸಿ ಮುನ್ನುಗ್ಗಿ, ಯಾವುದೇ ಕಾರಣಕ್ಕು ಬೇರೆಯವರ ತರಹ ಹಣದ ಅಮಿಷಕ್ಕೆ ಮನಗೊಡದೆ ನಿಮ್ಮ ಬರವಣಿಗೆ ಕನ್ನಡಿಯಂತಿರಲಿ

 

ತಮ್ಮ ಶ್ರೇಯಸನ್ನು ಬಯಸುವ ಗೆಳತಿ

ವಿನಯ

  • 1085 views