Skip to main content
Submitted by thanu on ಸೋಮ, 07/30/2012 - 13:19
Forums

ಮೊನ್ನೆ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಕೃತ್ಯಕ್ಕೆ ಪ್ರಮುಖ ಕಾರಣರು ಯಾರು? ಹಿಂದು ಜಾಗರಣ ವೇದಿಕೆಯೋ ಅಥವಾ ಮಾಧ್ಯಮದವರೋ?


ಈಗಿನ ಕಾಲದಲ್ಲಿ ಬರ್ತಡೇ ಪಾರ್ಟಿ, ಗೆಟ್ ಟುಗೆದರ್ ಹೀಗೆ ಎಂಜಾಯ್ ಮಾಡಲು ವಿದ್ಯಾರ್ಥಿಗಳು ಒಂದೊಂದು ಹೆಸರನ್ನು ಇಟ್ಟುಕೊಂಡು ಪಾರ್ಟಿ ಮಾಡುವುದು ಸಾಮಾನ್ಯ ಮತ್ತು ಅದು ಅವರ ವಯಕ್ತಿಕ ವಿಚಾರ. ಮೊನ್ನೆ ಮಂಗಳೂರಿನಲ್ಲಿ ನಡೆಯುತ್ತಿದ್ದದ್ದು ಅದೇ.  ಆದರೆ ಹಿಂದು ಜಾಗರಣ ವೇದಿಕೆ ಇದನ್ನು ಸರಿಯಾಗಿ ಪರಿಶೀಲಿಸದೆ ಏಕಾಏಕಿ ವಿದ್ಯಾರ್ಥಿಗಳ ಬಟ್ಟೆ ಬಿಚ್ಚಿಸಿ, ಅರೆನಗ್ನರನ್ನಾಗಿಸಿ ಹಲ್ಲೆ ನಡೆಸಿರುವುದು ಅಮಾನವೀಯ.


     ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡುತ್ತಿದ್ದರು ಮತ್ತು ಧರ್ಮದ ವಿರುದ್ದ ಹೋಗುತ್ತಿದ್ದರು ಎನ್ನುವ ಹಿಂದು ಜಾಗರಣ ವೇದಿಕೆಯಲ್ಲಿನ ಒಬ್ಬ ವ್ಯಕ್ತಿಗಾದರು ಹಿಂದುತ್ವದ ಬಗ್ಗೆ ತಿಳಿದಿದೆಯೇ? ಹಲ್ಲೆ ನಡೆಸಬೇಕು ಎಂದೇನಾದರು ಹಿಂದುತ್ವದಲ್ಲಿ ಹೇಳಿದ್ದಾರೆಯೇ?  ಒಂದು ಕೋಣೆಯಲ್ಲಿ ಹತ್ತು-ಹನ್ನೊಂದು ಜನಗಳ ಮಧ್ಯೆ ನಡೆಯುತ್ತಿದ್ದಂತಹ ಪಾರ್ಟಿಯನ್ನು ಮಾಧ್ಯಮಗಳ ಮುಖಾಂತರ ಲಕ್ಷಾಂತರ ಮಂದಿ ನೋಡುವಂತೆ  ಮಾಡಿ ಸಮಾಜದ ಸ್ವಾಸ್ತ್ಯ ಕೆಡಿಸಿದವರು ಯಾರು..ಹೀಗೆ ತಪ್ಪೆಲ್ಲಾ ತಮ್ಮಕಡೆ ಇಟ್ಟುಕೊಂಡು ಮೃಗೀಯವಾಗಿ ವರ್ತಿಸಿರುವ ಇಂತಹವರಿಗೆ ಸರಿಯಾದ ಶಿಕ್ಷೆ ಆಗಬೇಕು. 


     ಮತ್ತೊಂದು ಅಂಶವೆಂದರೆ ಹಲ್ಲೆ ನಡೆಯುತ್ತಿರುವಾಗ ಮಾಧ್ಯಮದವರು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದನ್ನು ಬಿಟ್ಟು ಅದನ್ನು ಚಿತ್ರೀಕರಿಸಿ ಮಾಧ್ಯಮಗಳಲ್ಲಿ ಸತತವಾಗಿ ಪ್ರಕಟಿಸಿ  ತೊಟ್ಟಿಲನ್ನು ತೂಗಿ ಮಗುವನ್ನು ಚಿವುಟುವಂತಹ ಕೆಲಸ ಮಾಡುತ್ತಿದೆ.


    ಇವೆಲ್ಲವುಗಳ ಮಧ್ಯೆ ಉಳಿಯುವ ಕಟ್ಟಕಡೆಯ ಪ್ರಶ್ನೆಗಳೆಂದರೆ ಪಾರ್ಟಿ ನಡೆಯುತ್ತಿರುವ ವಿಷಯ ಹಿಂದು ಜಾಗರಣ ವೇದಿಕೆಗೆ ತಿಳಿಸಿದವರು ಯಾರು?ಹಲ್ಲೆ ನಡೆಯುತ್ತದೆ ಎಂದು ಮಾಧ್ಯಮದವರಿಗೆ ಗೊತ್ತಿದ್ದರೂ ಪೊಲೀಸರಿಗೆ ಮಾಧ್ಯಮದವರು ತಿಳಿಸಲಿಲ್ಲ ಯಾಕೆ?  ಮತ್ತು ಎರಡು ದಿನಗಳಿಂದ ಮಾಧ್ಯಮಗಳಿಗೆ ಮಂಗಳೂರು ಸಮಾಚಾರ ಬಿಟ್ಟರೆ ಟೆಲಿಕಾಸ್ಟ್   ಮಾಡಲು ಮತ್ಯಾವುದೇ ವಿಷಯ ಸಿಗುತ್ತಿಲ್ಲವೇ?


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

Nanjunda Raju Raju ಭಾನು, 08/05/2012 - 21:01

ಮಾನ್ಯ ತನು ರವರೇ, ಇಲ್ಲಿ ಹಲವಾರು ವಿಷಯಗಳ ಬಗ್ಗೆ ಯೋಚಿಸಬೇಕಾಗುತ್ತದೆ. ಅಂದರೆ, ಹಿಂದೂ ಜಾಗರಣಾ ವೇದಿಕೆ ಎಂಬ ಸಂಘಟನೆ ಹಿಂದು ಧರ್ಮದ ಬಗ್ಗೆ ನಿಜವಾಗಿಯೂ ಕಾಳಜಿ ಇದೆಯೇ? ಹಾಗೆ ಹಿಂದು ಧರ್ಮ ಉಳಿಸಲು ಇವರ ಹಿನ್ನೆಲೆ ಏನು? ಮೊದಲು ಇವರ ಉದ್ಯೋಗ ಏನು? ಅಥವಾ ಮಾಮೂಲು ವಸೂಲು ಮಾಡಲು ಈ ರೀತಿ ಮಾಡುತ್ತಿದ್ದಾರೆಯೇ? ಹಿಂದೂ ಜಾಗರಣಾ ವೇದಿಕೆ ಹೆಸರೇಳಿಕೊಂಡು ಹಿಂದುಗಳ ಮಾನವನ್ನು ಹಿಂದುಗಳೇ ತೆಗೆಯುತ್ತಿದ್ದಾರಾ?


ಅಕಸ್ಮಾತ್ ಸೇರಿದ್ದ ಹುಡುಗರು ಅಕ್ರಮ ಕೃತ್ಯದಲ್ಲಿ ತೊಡಗಿದ್ದರೆ, ಮೊದಲು ಪೋಲೀಸರಿಗೆ ನಂತರ ಮಾಧ್ಯಮದವರಿಗೆ ತಿಳಿಸಿ, ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳಬಹುದಿತ್ತು. ಆಗ ಹಿಂದು ಜಾಗರಣೆಯ ಶ್ರಮ ಸಾರ್ಥಕವಾಗುತ್ತಿತ್ತು.


ವಿನಾಕಾರಣ, ಹೆಣ್ಣು ಮಕ್ಕಳನ್ನು ಅರೆ ನಗ್ನಗೊಳಿಸಿ, ಮೈ ಮುಟ್ಟುವುದು. ಹಲ್ಲೆ ಮಾಡುವುದು ಸಜ್ಜನರ ಕೆಲಸವಲ್ಲ. ಅದರಲ್ಲೂ ಮುಖ್ಯವಾಗಿ ಹಿಂದುಗಳ ಕೆಲಸವಲ್ಲ. ಹಾಗೆ ಹೇಳುವುದಾದರೆ, ಮಂಗಳೂರಿನಲ್ಲಿ ಮತ್ತು ಕರ್ನಾಟಕದಲ್ಲಿ ಎಷ್ಟೋ ಅಕ್ರಮ ಅನ್ಯಾಯಗಳು ನಡೆಯುತ್ತಿವೆ. ಅವುಗಳ ಕಡೆ ಹಿಂದೂ ಜಾಗರಣಾ ವೇದಿಕೆ ಗಮನಹರಿಸಿದ್ದರೆ ಒಪ್ಪಬಹುದಿತ್ತು.


ನೀವು ತಿಳಿಸಿರುವಂತೆ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಯುತ್ತಿದ್ದಾಗ, ಹಿಂದು ಜಾಗರಣಾ ವೇದಿಕೆಯವರು ಅರೆ ನಗ್ನಗೊಳಿಸಿ, ಮೈಮುಟ್ಟಿ ಹಲ್ಲೆ ಮಾಡುತ್ತಿದ್ದರೆ, ದೃಶ್ಯ ಮಾಧ್ಯಮದವರು, ಯಾವುದಾದರು ಚಿತ್ರದ ಶೂಟಿಂಗ್ ತೆಗೆಯುವಂತೆ, ನೇರ ಪ್ರಸಾರ ಮಾಡಲು ಅನುಕೂಲವಾಗುವಂತೆ ಚಿತ್ರಿಕರಿಸುತ್ತಿದ್ದರು. ಅವರ ನೀತಿಯ ಪ್ರಕಾರ ನಡೆಯುವ ಕೃತ್ಯ ಅಮಾನವೀಯವಾಗಿದ್ದರೂ, ಹೆಣ್ಣಿನ ಮೇಲೆ ಹಲ್ಲೆ, ಹತ್ಯಾಚಾರ ನಡೆಯುತ್ತಿದ್ದರೂ, ಚಿತ್ರಿಕರಿಸಿ, ತಮ್ಮ ಸಂಪಾದಕರಿಗೆ ನೀಡಬೇಕು. ಇಲ್ಲವಾದರೆ, ಆ ಚಾನಲ್ ನ ನಿರ್ದೇಶಕರು, ಘಟನೆ ನಡೆಯುತ್ತಿರುವಾಗ, ಚಿತ್ರಿಕರಿಸದ ಛಾಯಾ ಚಿತ್ರಗ್ರಾಹಕನನ್ನು ಕೆಲಸದಿಂದ ತೆಗೆಯುತ್ತಾರೆಂದು ಒಬ್ಬ ಛಾಯಾ ಗ್ರಾಹಕರು ಒಂದು ಬ್ಲಾಗಿನಲ್ಲಿ ಹೇಳಿಕೊಂಡಿದ್ದಾರೆ. 


ಇಲ್ಲಿ ಮುಖ್ಯವಾಗಿ ಗಮನಿಸುವ ಅಂಶವೆಂದರೆ, ಮೊದಲು ಒಂದೆರಡು ಛಾನಲ್ ಗಳಿದ್ದಾಗ ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಹಾರಿಸಿ, ವರದಿ ಮಾಡುತ್ತಿದ್ದರು. ಈಗ ಕನ್ನಡ ಛಾನಲ್ ಗಳು ಹೆಚ್ಚಾಗಿರುವುದರಿಂದ ಅವರಿಗೂ ವಿಷಯವಿಲ್ಲ. ಇಂತಹ ಕಾನೂನು ಸುವ್ಯವಸ್ಠೆಗೆ ಭಂಗ ತರುವಂತಹ  ಕೃತ್ಯ ನಡೆಸುತ್ತಿದ್ದಾರೆ.


ಈ ಹಿಂದೆ ಸಹ, ಚಿತ್ರ ನಟ ದರ್ಶನ್ ಕೌಟುಂಬಿಕ ವಿಷಯವನ್ನು ದೊಡ್ಡದು ಮಾಡಿ, ದೇಶದ ಸಮಸ್ಯೆ, ಅಥವಾ ರಾಜ್ಯದ ಸಮಸ್ಯೆ ಎಂಬಂತೆ ಬಿಂಬಿಸಿ, ಪೋಲೀಸರಿಗೂ, ವಕೀಲರಿಗೂ ಮರಾಮಾರಿಯಾಗಿ , ಸಾರ್ವಜನಿಕರಿಗೆ ತೊಂದರೆಯಾಯಿತು.


ಸಾಮಾನ್ಯವಾಗಿ, ಸುದ್ದಿ ಮಾಧ್ಯಮಗಳು, ದೃಶ್ಯ ಮಾಧ್ಯಮಗಳು ಜನಪರ ಕಾರ್ಯಕ್ರಮಗಳನ್ನು  ಸೌಮ್ಯವಾಗಿ, ನೇರವಾಗಿ ಸುದ್ದಿಯನ್ನು ಬಿತ್ತರಿಸಲಿ, ವರದಿ ಮಾಡಲಿ. ಹಿಂದೆಯಲ್ಲ. ರೇಡಿಯೋಗಳಲ್ಲಿ ದೂರದರ್ಶನ ಕೇಂದ್ರಗಳಲ್ಲಿ ವರದಿ ಮಾಡುತ್ತಿರಲಿಲ್ಲವೆ?  


ಇದಕ್ಕೆ ಸರಕಾರ ಯೋಚಿಸಬೇಕು. ಕಡಿವಾಣವನ್ನು ಹಾಕಬೇಕು. ಅಲ್ಲವೇ?

ಅನಾಮಿಕನು (ಪ್ರಮಾಣಿಸಲ್ಪಟ್ಟಿಲ್ಲ.) ಮಂಗಳ, 08/07/2012 - 11:08

ರಾಜುರವರೇ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.  ನೀವು ಹೇಳಿರುವುದು ಸರಿ. ಛಾಯಾಗ್ರಾಹಕರು ಅದನ್ನು ಚಿತ್ರಿಸದಿದ್ದಲ್ಲಿ ಅವರ ಕೆಲಸಕ್ಕೆ ತೊಂದರೆಯಾಗುತ್ತದೆ.  ಅದಕ್ಕಾಗಿ   ಪತ್ರಿಕಾ ಮಂಡಳಿ ಟಿ.ವಿ. ಮಾಧ್ಯಮಗಳಿಗೆ ಕಡಿವಾಣ ಹಾಕುವಂತಹ ನೀತಿಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಏನೇನನ್ನು ಚಿತ್ರಿಸಬೇಕಾಗುತ್ತದೋ?. ಒಟ್ಟಿನಲ್ಲಿ ಸಮಾಜಕ್ಕೆ ಒಳಿತನ್ನು ಮಾಡುತ್ತೇವೆಂದು ಹೇಳಿಕೊಳ್ಳುವ ಟಿ.ವಿ.ಮಾಧ್ಯಮಗಳೇ ಸಮಾಜದ ಸ್ವಾಸ್ತ್ಯವನ್ನು ಹಾಳುಗೆಡುವಂತಹ ಕೆಲಸ ಮಾಡುತ್ತಿರುವುದು ವಿಷಾದಕರ ಸಂಗತಿ.

Nanjunda Raju Raju ಶುಕ್ರ, 08/10/2012 - 16:15

ಮಾನ್ಯ ಅನಾಮಿಕರೇ, ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು. ವಂದನೆಗಳೊಡನೆ.

  • 807 views