Skip to main content

 ಧರ್ಮ ಅಂದರೆ ಏನು?

   ಸ್ನೇಹಿತರೇ ಧರ್ಮದ ಬಗ್ಗೆ ಪ್ರತಿಯೊಬ್ಬರಲ್ಲೂ ಒಂದೊಂದು ಭಾವನೆಗಳಿರುತ್ತವೆ. ಈ ಬಗ್ಗೆ ನಮ್ಮನ್ನ ನಾವು ಸ್ವ ವಿಮರ್ಶೆ ಮಾಡಿಕೊಳ್ಳೋಣವೇ?

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

ಅನಿಸಿಕೆಗಳು

ಪಿಸುಮಾತು ಶನಿ, 07/21/2012 - 18:29

ಆತ್ಮ ವಿಮರ್ಶೆಯೊಂದಿಗೆ ನಮ್ಮನ್ನು ನಾವೇ ತಿದ್ದಿ ತೀಡಿ ನಡೆಸುವ ಕ್ರಮ. ವಿವೇಕಾನಂದರು ಹೇಳಿರುವಂತೆ ಆತ್ಮ ಸಾಕ್ಷಾತ್ಕಾರವೇ ನಿಜವಾದ ಧರ್ಮ, ಹೊರತಾಗಿ ಯಾವ ದೇವರಿಗೂ ಇದು ಸಂಬಂಧಿಸಿದ್ದಲ್ಲ. "ಮತ"ವನ್ನು ಎಲ್ಲರೂ ಧರ್ಮ ಎಂಬ ಹೆಸರಲ್ಲಿ ಕರೆದು ಅದನ್ನು ತಮಗೆ ಬೇಕಾದಂತೆ ಉಪಯೋಗಿಸುತ್ತಿದ್ದಾರೆ. ಹಿಂದೂ, ಇಸ್ಲಾಂ, ಕ್ರೈಸ್ತ - ಇವೆಲ್ಲಾ ಮತಗಳೇ ಹೊರತೂ ಧರ್ಮಗಳು ಅನ್ನಲು ಸಾಧ್ಯವೇ ಇಲ್ಲ. ಏಕೆಂದರೆ ಇವರು ಹೇಳುವ ಮತಗಳಲ್ಲಿ ತಾನೇ ಶ್ರೇಷ್ಠ ಎಂಬ ಸ್ವಾರ್ಥ ಇದೆ. ಸ್ವಾರ್ಥವಿರುವಂತದ್ದು ಧರ್ಮವಾಗಲು ಸಾಧ್ಯವಿಲ್ಲ. ಅದು ನಿರ್ದಿಷ್ಟ ಗುಂಪಿಗೆ ಸೇರಿದ ಮತ ಮಾತ್ರ. 

maaysa ಶುಕ್ರ, 07/27/2012 - 20:16

ಧರ್ಮ ಎಂದರೆ 'ತಾನು ಸರಿಯೆಂದು ನಂಬಿರುವ ಹಾಗು ಅನುಸರಿಸುವ ತತ್ವ' . ಅದು ಯಾವಾಗಲೂ subjective. ಅದಕ್ಕೆ ಎಲ್ಲರಿಗೂ ಒಪ್ಪುವಂತರ ವ್ಯಾಖ್ಯಾನ ಬರೆಯಲು ಬರುವುದಿಲ್ಲ.!

 

ಒಂದು ಮತವನ್ನು 'ನಂಬಿ' ಅದನ್ನು ಅನುಸರಿಸುವವರಿಗೆ, ಆ ಮತವೇ ಧರ್ಮ.!

 

ಹೇಮಾವತಿ ಗುರು, 08/09/2012 - 15:50

 ತುಂಬಾ ಧನ್ಯವಾದಗಳು maaysa  ಮತ್ತು ಪಿಸುಮಾತುರವರೇ , ಒಂದೇ ಅರ್ಥದಲ್ಲಿ ಧರ್ಮ ಅಂದರೆ ಪ್ರತಿಯೊಬ್ಬರೂ ಪ್ರತಿಯೊಬ್ಬರ ಅಗತ್ಯವನ್ನರಿತು ಯಾರಿಗೂ ಯಾವ ರೀತಿಯಲ್ಲೂ ತೊಂದರೆಯಾಗದಂತೆ  ಪರಸ್ಪರ ಪ್ರೀತಿ ವಿಶ್ವಾಸದಿಂದ ಜೀವಿಸುವುದು ಅನ್ನೋನು ನನ್ನ ವೈಯಕ್ತಿಕ  ಅಭಿಪ್ರಾಯ. ಧರ್ಮದ ಹೆಸರಿನಲ್ಲಿ ಜನರ ಮನಶಾಂತಿ ಹಾಳು ಮಾಡುತ್ತಿರುವ ಎಲ್ಲರೂ ನಿಮ್ಮ ಅಭಿಪ್ರಯವನ್ನು ಓದಲೇಬೇಕು ಅನ್ನಿಸುತ್ತದೆ.ತುಂಬಾ ಚೆನ್ನಾಗಿ ಅಭಿಪ್ರಯ ಹೇಳಿದ್ದೀರಿ ಥ್ಯಾಂಕ್ಸ .

  • 1035 views