Skip to main content

ಆಸೆ ಬುದ್ಧನ ಮಹದಾಸೆ

ಬರೆದಿದ್ದುJuly 17, 2012
noಅನಿಸಿಕೆ

ಒಂದಾನೊಂದು ಕಾಲದಲ್ಲಿ ಕಪಿಲವಸ್ತುವೆಂಬ ನಗರದಲ್ಲಿ ಶುದ್ಧೋದನನೆಂಬ ಅರಸ ಆತನ ರಾಣಿ ಮಾಯಾದೇವಿ. ತೇಜಸ್ವಿಯಾದ ಮಗನೊಬ್ಬನು ಹುಟ್ಟಿದ. ಅವನಿಗೆ ಸಿದ್ಧಾರ್ಥ ಎಂದು ನಾಮಕರಣ ಮಾಡಿದರು.


ಮಗುವಿನ ಜಾತಕವನ್ನು ಬರೆದ ರಾಜಜ್ಯೋತಿಷಿಗಳು, ``ಈ ಬಾಲಕ ಅತ್ಯಂತ ಶ್ರೆಷ್ಠನಾದ ಮಹಾರಾಜನಾಗ್ತಾನೆ ಇಲ್ಲವೇ ಜಗತ್ತನ್ನು ಉಳಿಸುವ ಸನ್ಯಾಸಿಯಾಗುತ್ತಾನೆ" ಎಂದು ಭವಿಷ್ಯ ನುಡಿದರು.


ಇದರಿಂದ ಶುದ್ಧೋದನನಿಗೆ ಚಿಂತೆಯಾಯಿತು. ರಾಜಕುಮಾರ ಸಿದ್ಧಾರ್ಥನ ಕಣ್ಣಿಗೆ ಜಗತ್ತಿನ ಯಾವುದೇ ಕಷ್ಟವಾಗಲೀ ದುಃಖವಾಗಲೀ ಅರಿವಾಗಬಾರದೆಂದು ಆಜ್ಞಾಪಿಸಿದ.


ರಾಜಕುಮಾರ ಬೆಳೆದು ದೊಡ್ಡವನಾದ. ಸಕಲ ವಿದ್ಯಾಪಾರಂಗತನಾದ. ಯಶೋಧರೆಯೆಂಬ ರಾಜಪುತ್ರಿಯೊಂದಿಗೆ ಅವನ ಮದುವೆಯೂ ಆಯಿತು. ಒಮ್ಮೆ ರಾಜಧಾನಿಯ ಪ್ರಜೆಗಳ ಹಾಗು ಹೋಗುಗಳನ್ನು ನೋಡಿ ತಿಳಿಯ ಬೇಕೆಂದು ಅವನು ರಥದಲ್ಲಿ ಕುಳಿತು ಹೊರಟ.


ಹಾದಿಯಲ್ಲಿ ಮುದುಕನೊಬ್ಬ ಭಿಕ್ಷೆ ಬೇಡುತ್ತಾ ಕುಳಿತಿದ್ದ. ಅವನ ವಿಕಾರವಾದ ಮುಖವನ್ನು ನೋಡಿ ರಾಜಕುಮಾರ ಸಿದ್ಧಾರ್ಥನಿಗೆ ಆಶ್ಚರ್ಯವೂ ದುಃಖವೂ ಉಂಟಾದುವು. ರಥದ ಸಾರಥಿಯಾದ ಚೆನ್ನನನ್ನು ನೋಡಿ ಸಿದ್ದಾರ್ಥ ಕೇಳಿದ:


``ಚೆನ್ನ, ಆ ಮನುಷ್ಯನಿಗೇನಾಗಿದೆ?"


``ಅವನು ಮುದುಕನಾಗಿದ್ದಾನೆ ಅಷ್ಟೆ, ರಾಜಕುಮಾರ."


``ಅದ್ಯಾಕೆ ಅವನು ಮುದುಕನಾಗಿದ್ದಾನೆ ಚೆನ್ನ?"


``ರಾಜಕುಮಾರ, ವರ್ಷ ಕಳೆದಹಾಗೆ ಎಲ್ಲರೂ ಸಹ ಮುದುಕರಾಗುತ್ತಾರೆ."


``ಹಾಗಾದರೆ ಸುಂದರಿ ಯಶೋಧರೆಯೂ ಮುದುಕಿ ಆಗುವಳೆ?"


``ಹೌದು, ಮುಪ್ಪು ಮತ್ತು ಸಾವಿನಿಂದ ಯಾರಿಗೆ ಬಿಡುಗಡೆಯಿದೆ ಸಿದ್ಧಾರ್ಥ?"


ಸಿದ್ಧಾರ್ಥನಿಗೆ ದೊಡ್ಡ ಆಘಾತವಾಯಿತು. ಮುಪ್ಪು ಮತ್ತು ಸಾವುಗಳನ್ನು ತಾನು ಜಯಿಸಬೇಕು ಎಂದು ಅನಿಸಿತು. ಅರಮನೆಯ ಭೋಗಭಾಗ್ಯಗಳೆಲ್ಲಾ ಅವನಿಗೆ ತೃಣಮಾತ್ರವಾಗಿ ಕಂಡುವು.


ಒಂದು ದಿನ ರಾತ್ರಿ ಹೆಂಡತಿ ಯಶೋಧರೆ ಮತ್ತು ಹಸುಗೂಸು ಮಲಗಿ ನಿದ್ರಿಸುತ್ತಿದ್ದಾಗ ರಾಜವೇಷವನ್ನೆಲ್ಲಾ ಕಳಚಿಟ್ಟುಕೊಂಡು ಸಿದ್ಧಾರ್ಥ ಅರಮನೆಯಿಂದ ಹೊರಗೆ ಬಂದ. ತನ್ನ ಪ್ರಿಯ ಸೇವಕ ಚೆನ್ನನನ್ನು ಕರೆದು,


``ಚೆನ್ನ ನನ್ನ ಕಂಟಕ ಎಂಬ ಕುದುರೆಯನ್ನು ತಾ" ಎಂದು ನುಡಿದ.


ಚೆನ್ನ ಎಷ್ಟು ಬಗೆಯಾಗಿ ಬೇಡಿಕೊಂಡರೂ ಸಿದ್ಧಾರ್ಥ ತನ್ನ ನಿಶ್ಚಯವನ್ನು ಬದಲಾಯಿಸಲಿಲ್ಲ. ಚೆನ್ನನೂ ಸಿದ್ಧಾರ್ಥನೂ ಊರ ಹೊರಗೆ ಬಂದಾಗ ರಾಜಕುಮಾರ ತನ್ನ ವೇಷಭೂಷಣಗಳನ್ನೆಲ್ಲಾ ಚೆನ್ನನ ಕೈಗಿತ್ತು ``ಇನ್ನು ಹಿಂತಿರುಗು ಚೆನ್ನ"ಎಂದ.


ಚೆನ್ನ ಸಿದ್ಧಾರ್ಥನ ಕಾಲಿಗೆ ನಮಸ್ಕರಿಸಿದ. ಊರಿಗೆ ಹಿಂತಿರುಗಿ ನಡೆದುದನ್ನೆಲ್ಲಾ ರಾಜನಿಗೆ ವರದಿ ಮಾಡಿದ.


ಕಪಿಲವಸ್ತುವಿನಿಂದ ಹೊರಟ ಸಿದ್ಧಾರ್ಥ ಬಹುದೂರ ನಡೆದು ಗಯೆಯನ್ನು ತಲುಪಿದ. ಇಲ್ಲಿ ಬೋಧಿವೃಕ್ಷದ ಕೆಳಗೆ ಕುಳಿತು ಕಠಿಣ ತಪಸ್ಸು ಮಾಡಿದ. ಅವನ ಇಷ್ಟಾರ್ಥ ನೆರವೇರಿತು. ಸಿದ್ಧಾರ್ಥ ಬುದ್ಧನಾಗಿ ಜಗತ್ತಿನ ಜನರಿಗೆಲ್ಲಾ ಶಾಂತಿ ಅಹಿಂಸೆಗಳನ್ನು ಬೋಧಿಸಿದ.


ಈ ಕಥೆ ನಿಮ್ಮಲ್ಲೆರಿಗೂ ತಿಳಿದಿದೆ ಆತನ ""ಆಸೆಯೆ ದುಖಃಕ್ಕೆ ಮೂಲ"" ಎಂಬ ಲೊಕೊಕ್ತಿ ಸರ್ವರಿಗೂ ತಿಳಿದಿದೆ.


ಇಂತ ಮಹಾನ್ ವ್ಯಕ್ತಿಗೂ ಕೂಡ ಮಹತ್ತರ ಮಹದಾಸೆ ಇತ್ತೆಂದರೆ ನಂಬುದೋ ಕಷ್ಟ ಅಲ್ವ ,


ನಿಜ,    ಖಂಡಿತ ನಿಜ.                 """""" ಆಸೆ ಎಂಬ ಆಸೆಯನ್ನ ಬಿಡಬೇಕು"""""  ಎಂಬುದು ಬುದ್ದನ ಮಹಾದಾಸೆ.


ಇವಾಗ ನಂಬುತ್ತೀರ ???????????????


 

ಲೇಖಕರು

ರವಿಶಾಂತ್

ಎನಗಿಂತ ಕಿರಿಯರಿಲ್ಲ ಜಗದೋಳು.
ನವ ನವೀನ ಕೌತುಕ ವಿಷಯಗಳ ತಿಳಿಯುವ ಹಂಬಲ ಮನದೋಳು.
ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದಕ್ಕಿಂತ, ನೀವೇ ಹೇಳುವುದು ಉತ್ತಮ.

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.