ಅಂತರ
ಅಂತರ
ನಮ್ಮ ಸಮಾಜದಲ್ಲಿ ಮೂರು ವರ್ಗಗಳಿದ್ದು
ಸಾಹುಕಾರರು, ಸಾಫ್ಟವೇರು ಮತ್ತು ಸಾಮಾನ್ಯರು
ಸಾಹುಕಾರರ ಹತ್ಯೆಯಾದರೆ
ಲಕ್ಷೋಪಲಕ್ಷ ಜನ ಜಮಾಯಿಸುತ್ತಾರೆ.
ಸಿಬಿಐ ತನಿಖೆಯು ನಡೆಸುತ್ತಾರೆ
ಸಾಫ್ಟವೇರು ಜನ ಹತ್ಯೆಯಾದರೆ
ಸಾಫ್ಟವೇರಿನ ಸಾವಿರಾರು ಜನ ಸೇರುತ್ತಾರೆ
ಸರ್ಕಾರವೇ ಸಿಐಡಿಗಳನ್ನು ನೇಮಿಸುತ್ತಾರೆ.
ಸಾಮಾನ್ಯರು ಹತ್ಯೆಯಾದರೆ
ನೂರಾರು ಜನರು ಕಾಣದೇ
ತನಿಖೆ ಮಂದಗತಿಯಲ್ಲಿ ಸಾಗುತ್ತದೆ.
*ರವಿಚಂದ್ರವಂಶ್*
ಸಾಲುಗಳು
- 207 views
ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ