Skip to main content

ನನ್ನ ಮೆಚ್ಚಿನ ಕನ್ನಡ ಹಾಸ್ಯ ಚಲನಚಿತ್ರಗಳು

ಬರೆದಿದ್ದುJuly 11, 2012
5ಅನಿಸಿಕೆಗಳು

ಹೀಗೆ ಸುಮ್ಮನೆ ಕುಳಿತಿದ್ದಾಗ ಕನ್ನಡದಲ್ಲಿ ನನಗೆ ಮನಸೂರೆಗೊಂಡ ಹಾಸ್ಯ ಚಿತ್ರಗಳ ಪಟ್ಟಿ ಮಾಡೋಣ ಅನ್ನಿಸಿತು.


ಗುರು ಅವನಿಗೆ ಪೆದ್ದ ಶಿಷ್ಯರು ಅದೆಂತ ಅವಾಂತರ ಆದೀತು ನೋಡಲು ಗುರು-ಶಿಷ್ಯರು ಚಿತ್ರ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗಲೇ ಬೇಕು. ರಾಮ ಶ್ಯಾಮ ಭಾಮದಲ್ಲಿ ಪತ್ನಿ-ಪ್ರೇಯಸಿ-ಸ್ನೇಹಿತನ ನಡುವೆ ಸಿಕ್ಕಿ ಒದ್ದಾಡುವ ಗಂಡ, ಪತ್ನಿ-ಪೆಟ್ರೋ ಮ್ಯಾಕ್ಸ್ ಇಬ್ಬರನ್ನೂ ನಿಭಾಯಿಸುವ ಗೋಲ್ ಮಾಲ್ ರಾಧಾ ಕೃಷ್ಣದ ಫಟಿಂಗ ಅಳಿಯ, ನಾರದ ಭೂಲೋಕಕ್ಕೆ ಬಂದು ತನ್ನ ತದ್ರೂಪಿ ವಿಜಯನಿಗೆ ನೀಡುವ ಸಂಕಷ್ಟಗಳು ನಾರದ ವಿಜಯ ದಲ್ಲಿ, ವಠಾರದ ಮಾಲೀಕನೊಂದಿಗೆ ಜಗಳ ಆಡುತ್ತಾ ಅವನ ಮಗಳೊಂದಿಗೆ ಪತ್ರ ಮುಖೇನ ಪ್ರೀತಿ ನಡೆಸುವ ಗಣೇಶನ ಮದುವೆ, ಯಾರಿಗೂ ಹೇಳ್ಬೇಡಿ ಸೈಟ್ ಕೊಡುತ್ತೇನೆ ಎಂದು ಹಣ ದೋಚುವ ಮೋಸಗಾರ, ಉಂಡೂ ಹೋದ ಕೊಂಡೂ ಹೋದದಲ್ಲಿ ನಾಮ ಇಡುವ ಕೌ ಡಾಕ್ಟರ್, ಹಗ್ಗ ಹಳ್ಳ ಪೆಠಾರಿ ಎಂದು ಬ್ಲ್ಯಾಕ್ ಮೇಲ್ ಮಾಡಿ ಗಜಪತಿ ಗರ್ವಭಂಗ ಮಾಡುವ ಕಿಲಾಡಿ, ಒಂದೇ ಎರಡೇ ಹಲವು ನಕ್ಕು ನಲಿಸುವ ಚಿತ್ರಗಳು.


 ನನಗೆ ಮುಖ್ಯವಾಗಿ ಅನಂತ ನಾಗ್, ಜಗ್ಗೇಶ್ ಕಾಮಿಡಿ ಚಿತ್ರಗಳು ಇಷ್ಟವಾದರೆ ದ್ವಾರಕೀಶ, ರಮೇಶ, ಬಾಲಕೃಷ್ಣ, ಸಾಧು ಕೋಕಿಲ, ಕೋಮಲ್, ಶರಣ್ ಹಾಸ್ಯಗಳು ಸಹ ಇಷ್ಟ. ಇತ್ತೀಚಿನ ನಾಯಕನಟರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಒಬ್ಬರೇ ಪರವಾಗಿಲ್ಲ ಅನ್ನಬಹುದು. ಇತ್ತೀಚಿನ ಅನೇಕ ಚಿತ್ರಗಳು ಹಾಸ್ಯಕ್ಕಿಂತ ಸಿಲ್ಲಿ ಕಾಮಿಡಿ ಅನ್ನಿಸಿದ್ದೇ ಜಾಸ್ತಿ. ಒಂದೆರಡು ಹಾಸ್ಯ ಇಷ್ಟವಾದರೂ ಇಡೀ ಚಿತ್ರ ಕುಟುಂಬ ನೋಡಿ ನಕ್ಕು ನಲಿಯುವ ಹಾಸ್ಯಮಯ ಚಿತ್ರ ಅನ್ನಿಸಿಲ್ಲ.ನಿಮಗೆ ಯಾವ ಹಾಸ್ಯ ಚಿತ್ರ ಇಷ್ಟ? ಕಮೆಂಟ್ ಹಾಕ್ತೀರಾ?


ನನ್ನ ಕೆಲವು ಮೆಚ್ಚಿನ ಹಾಸ್ಯ ಕನ್ನಡ ಚಿತ್ರಗಳು ಇಲ್ಲಿವೆ. • ಗುರು ಶಿಷ್ಯರು

 • ನಾರದ ವಿಜಯ

 • ರಾಮ ಶ್ಯಾಮ ಭಾಮ

 • ಗೋಲ್ ಮಾಲ್ ರಾಧಾಕೃಷ್ಣ

 • ಗಣೇಶನ ಮದುವೆ

 • ಯಾರಿಗೂ ಹೇಳ್ಬೇಡಿ

 • ಉಂಡೂ ಹೋದ ಕೊಂಡು ಹೋದ

 • ಬಲ್ ನನ್ಮಗ

 • ಸರ್ವರ್ ಸೋಮಣ್ಣ

 • ನಂಜುಂಡೀ ಕಲ್ಯಾಣ

 • ಗಜಪತಿ ಗರ್ವಭಂಗ

 • ಲವ್ ಮಾಡಿ ನೋಡು

 • ಕುರಿಗಳು ಸಾರ್ ಕುರಿಗಳು

 • ಕತ್ತೆಗಳು ಸಾರ್ ಕತ್ತೆಗಳು

 • ಗಣೇಶ ಸುಬ್ರಹ್ಮಣ್ಯ

 • ಉಲ್ಟಾ ಪಲ್ಟಾ

ಲೇಖಕರು

ರಾಜೇಶ ಹೆಗಡೆ

ಕಂಡದ್ದು ಕಂಡ ಹಾಗೆ

ಸಾಫ್ಟವೇರ್ ಇಂಜನಿಯರ್. ಕನ್ನಡದಲ್ಲಿ ಸಾಫ್ಟವೇರ್ ತಯಾರಿಸುವದು ನನ್ನ ಹವ್ಯಾಸ. ಆಗಾಗ ಲೇಖನ ಬರೀತಿನಿ ಆದ್ರೆ ಅದರಲ್ಲಿ ಪಳಗಿದವನಲ್ಲ.

ಅನಿಸಿಕೆಗಳು

panchi (ಪ್ರಮಾಣಿಸಲ್ಪಟ್ಟಿಲ್ಲ.) ಗುರು, 07/12/2012 - 11:24

ರಾಜ್‌ಕುಮಾರ್‌ರವರ "ಬಂಗಾರದ ಪಂಜರ " ಮತ್ತು "ಭಾಗ್ಯದ ಲಕ್ಷ್ಮಿ ಬಾರಮ್ಮ"  (ಇವುಗಳು ಹಾಸ್ಯಚಿತ್ರಗಳ ಸಾಲಿಗೆ ಸೇರುತ್ತೋ ಇಲ್ಲವೋ ನನ್ಗೊತ್ತಿಲ್ಲ)  ಕೂಡ ನನಗಿಷ್ಟ.  ಅದರಲ್ಲೂ ಬಂಗಾರದ ಪಂಜರದಲ್ಲಿನ ರಾಜ್‌ಕುಮಾರ್‌ರವರ ನಟನೆ ಸೂಪರ್ ! ಮರೆಯಲಾರದಂತಹದ್ದು.

ರಾಜೇಶ ಹೆಗಡೆ ಗುರು, 07/12/2012 - 21:09

ಅನಿಸಿಕೆಗೆ ಧನ್ಯವಾದಗಳು :)


ಭಾಗ್ಯದ ಲಕ್ಷ್ಮೀ ಬಾರಮ್ಮ ಅಪ್ಪಟ ಹಾಸ್ಯ ಚಿತ್ರ. ನಾನಂತೂ ಹಲವು ಬಾರಿ ನೋಡಿ ನಕ್ಕಿದ್ದೇನೆ. ಬಂಗಾರದ ಪಂಜರ ಕೂಡಾ ಹಾಸ್ಯ ಚಿತ್ರ ಅನ್ನಬಹುದು. ಸ್ವಲ್ಪ ಮೆಲೋ ಡ್ರಾಮಾನೂ ಇದೆ. ಅದೂ ಕೂಡಾ ಅತ್ಯುತ್ತಮ ಚಿತ್ರಗಳಲ್ಲಿ ಒಂದು. ಅದೇ ರೀತಿ ರಾಜಕುಮಾರ ಅವರ ನೀ ನನ್ನ ಗೆಲ್ಲಲಾರೆ ಕೂಡಾ ಹಾಸ್ಯಮಯ ಸನ್ನೀವೇಶ ಹೊಂದಿದೆ. :)

venkatb83 ಶನಿ, 07/21/2012 - 16:05

+1

 

ಎಲ್ಲವೂ ಸಖತ್ ಹಾಸ್ಯ ಚಿತ್ರಗಳು

 

\।/

 

ಪಿಸುಮಾತು ಶುಕ್ರ, 07/13/2012 - 17:05

ಭಾಗ್ಯದ ಲಕ್ಷ್ಮೀ ಬಾರಮ್ಮ ಮತ್ತು ಬಂಗಾರದ ಪಂಜರ ರಾಜ್‌ಕುಮಾರ‍್ ಅವರ ಉತ್ತಮ ಹಾಸ್ಯ ಚಿತ್ರಗಳು. ಅಲ್ಲದೇ ಅವರ ಹಳೆಯ ಚಿತ್ರಗಳಲ್ಲಿ ನರಸಿಂಹರಾಜು ಹಾಸ್ಯವನ್ನು ಮರೆಯಲಾಗದು. ಕುರಿಗಳು ಸಾರ‍್ ಕುರಿಗಳು, ಗುರು ಶಿಷ್ಯರು, ನಂತರ ಜಗ್ಗೇಶ್, ಅನಂತ್‌ನಾಗ್, ಶಶಿಕುಮಾರ‍್ ನಟನೆಯ ಅವರ ಅನೇಕ ಚಿತ್ರಗಳು ಹಾಸ್ಯಮಯವಾಗಿವೆ.

sridharaha ಭಾನು, 07/22/2012 - 10:17

All are good cinemas only. Now a days also their are good movies coming.


 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

The content of this field is kept private and will not be shown publicly.