Skip to main content
Forums

(ಚಿತ್ರ ಕೃಪೆಃ ಅಂತರ್ಜಾಲ, Picture Courtecy: Some Internet Photo)

 

 

 

ನಿಜವಾಗಲು Dubbing Ban ಅನ್ನೋ ಕಟ್ಟುಪಾಡು
ಸದ್ಯದ ಪರಿಸ್ಥಿತಿಯಲ್ಲಿ ಎಷ್ಟರ ಮಟ್ಟಿಗೆ ಸಹಕಾರಿ ಅನ್ನೋದು ಗೊತ್ತಿಲ್ಲ. ಈ ವಿಷಯದಲ್ಲಿ
ಮಾತ್ರ ಕನ್ನಡಿಗರು ನಿಜವಾದ ಶಾಪಗ್ರಸ್ಥರು ಅನ್ನಬಹುದು. ಯಾವರೀತಿಯಲ್ಲಿ ಇವತ್ತು ಕನ್ನಡ
ಚಿತ್ರರಂಗ ಕನ್ನಡಿಗರಿಗೆ ಮಾತ್ರ ಅನ್ನೋ Policy ಇಂದ ಕನ್ನಡಿಗರನ್ನು ಮೇಲೆತ್ತುವ ಕೆಲಸ
ಮಾಡುತ್ತಿದೆ ಅನ್ನೋದೇ ಗೊತ್ತಾಗ್ತಾ ಇಲ್ಲ. ಹಾಡು, ಸಂಗೀತ, ನಾಯಕ, ನಾಯಕಿ, ಖಳನಾಯಕ
ತಂತ್ರಜ್ಞರು  ಹೀಗೆ ಪಟ್ಟಿ ಬೆಳೆಯುತ್ತ ಹೋಗುತ್ತೆ, ಈ ಎಲ್ಲಾ ಕಡೇನೂ ಪರಭಾಷಿಗರು ಬಂದು
ಕೈ ಅಲ್ಲಾಡಿಸಿ ಹೋಗಿದ್ದಾರೆ. ಇವತ್ತು ಸೋನುನಿಗಮ ಒಂದೂ ಹಾಡು ಹಾಡದ ಸಿನಿಮಾ ಅಂದ್ರೆ
ಬಹುಶ ನಮಗೆ ಪಾಯಸ ಇಲ್ಲದ ಮದುವೆ ಊಟ ಅನ್ನೋಹಾಗಾಗಿದೆ. ಹೀಗಿರುವಾಗ ಇವರು ಯಾರ ಆಧಾರದ
ಮೇಲೆ ಕನ್ನಡದ ಕಲಾವಿದರಿಗೆ, ಸ್ಥಳಿಯರಿಗೆ ಅನ್ಯಾಯ ಆಗ್ತಾ ಇದೆ ಅಂತ ಹೇಳ್ತಾ ಇದ್ದಾರೆ
ಅನ್ನೋದೇ ಅರ್ಥವಾಗ್ತಿಲ್ಲ. ಇವರ ಸೃಜನಶೀಲತೆಗೆ ಪೆಟ್ಟು ಬೀಳುತ್ತೆ ಅನ್ನೋ ಭಯವಿದ್ದರೆ
Remake ಕೂಡ ಬ್ಯಾನ್ ಮಾಡಲಿ. ಅದು ಸಾಧ್ಯವಿಲ್ಲ ಯಾಕಂದ್ರೆ ನಮ್ಮ Producer ಗಳಿಗೆ,
Hero ಗಳಿಗೆ ಎಲ್ಲಾ Ready ಮೇಡ್ Food ಗಳ ಮೇಲೇನೆ ಆಸೆ ಜಾಸ್ತಿ , ಇದೆಂತ ನ್ಯಾಯ
ಸ್ವಾಮೀ ??? ತಮ್ಮ ಲಾಭ ನಷ್ಟವನ್ನ ಚಿಂತಿಸೋ ಇವರು ಪ್ರೇಕ್ಷರ ಅಪೇಕ್ಷೆಯ ವಿಷಯ ಬಂದಾಗ
ಕಾಲು ಸುಟ್ಟ ಬೆಕ್ಕಿನಂತೆ ಹಾರಾಡುತ್ತಾರೆ ಯಾಕೆ ???

     ಕಿರುತೆರೆಯ ವಿಷಯಕ್ಕೆ ಬಂದ್ರೆ ಇಲ್ಲೂ ನಿರ್ಬಂಧ ಇದೆ ಅನ್ನೋದು ನನಗೆ
ಗೊತ್ತಾಗಿದ್ದು  ಇತ್ತೀಚಿಗೆ ಒಂದು ಖಾಸಗಿ ವಾಹಿನಿ ಒಂದು ಐತಿಹಾಸಿಕ ಧಾರಾವಾಹಿಯನ್ನು
ಕನ್ನಡಕ್ಕೆ Dub ಮಾಡೋಕೆ ಹೊರಟಾಗ ನಡೆದ ಅವಾಂತರ ಗಳಿಂದ. ಎಂಥ ವಿಪರ್ಯಾಸ....
ಜಾಹಿರಾತುಗಳ ಮದ್ಯೆ ಕಾರ್ಯಕ್ರಮ ಅನ್ನೋದು ಇವತ್ತಿನ ಪರಿಸ್ಥಿತಿ, ಆ ಜಾಹಿರಾತುಗಳಲ್ಲಿ
ಕನ್ನಡದ ಮೂಲಗಳಿಗಿಂತ ಬೇರೆ ಭಾಷೆಗಳಿಂದ Dub ಆದ ಜಾಹಿರಾತುಗಳೇ ಹೆಚ್ಚು, ಅವುಗಳಲ್ಲಿ
ಬಳಸುವ ಕನ್ನಡವನ್ನ ಕೇಳಿದರೆ ಕೆಲವೊಮ್ಮೆ ಕನ್ನಡಿಗರೇ ಬೆಚ್ಚಿ ಬೀಳುತ್ತಾರೆ. ಈ
ವಿಷಯದಲ್ಲಿ ಕನ್ನಡಿಗರೇ ಅನ್ಯಾಯವಾಗಿಲ್ಲವೇ ಜಾಹಿರಾತುಗಳ Dubbing ಗೆ ಏಕೆ
ನಿರ್ಬಂಧವಿಲ್ಲ??? ಇವತ್ತು ಬೇರೆ ಭಾಷೆಗಳಿಗೊಂದು ತಮಿಳು ಭಾಷೆ ಪ್ರತ್ಯೇಕವಾಗಿ
ಜಾಹಿರಾತುಗಳು ನಿರ್ಮಾಣವಾಗ್ತಾ ಇದೆ ಕನ್ನಡಿಗರಿಗೂ ಪ್ರತ್ಯೇಕವಾಗಿ ಜಾಹಿರಾತುಗಳು ಬರಲಿ,
ಕನ್ನಡದಲ್ಲೂ ಸಾಕಷ್ಟು Modelling ಪ್ರತಿಭೆಗಳು ಇಲ್ಲವೇ ??? ಅವರಿಗೂ ಸಹಾಯವಾಗಲಿ. 

 

ಇವರ ಸ್ವಹಿತಕ್ಕೆ ಬಲಿಯಾಗುವವರು (ಮೂಕ)
ಪ್ರೇಕ್ಷಕರಾದ ನಾವು.... ಆಮೀರ್
ಖಾನ್ ರವರ "ಸತ್ಯಮೇವ ಜಯತೆ" ಯ  ಕೆಲವು ಸಂಚಿಕೆ ಮತ್ತು ಅದರ ಕನ್ನಡದ ಹಾಡನ್ನು ನೋಡಿದ ಮೇಲಂತೂ ಇಷ್ಟೆಲ್ಲಾ ಹೇಳದೆ ಇರೋದಿಕ್ಕೆ ನನ್ನಿಂದಾಗಲಿಲ್ಲ, YOU TUBE ನಲ್ಲಿ ವೀಡಿಯೊದ ಕೆಳಗೆ ಯಾರು ಪುಣ್ಯಾತ್ಮ ಹೀಗೆ ಕಾಮೆಂಟ್ ಮಾಡಿದ್ದ "What an Awesome Music
...don't know Kannada but have to download it but of its graceness "
ಜ್ಞಾನ ಅನ್ನೋದು ಭಾಷಾತೀತ ಅಲ್ಲವೆ??? ನಮ್ಮ
ನೀತಿ ನಮಗೆ ಮುಳುವಾಯಿತು ಅನ್ನೋದು  History , Discovery , Cartoon
network , Pogo , NGC
ಚಾನಲ್ ಗಳು ಕನ್ನಡವನ್ನು ಹೊರತುಪಡಿಸಿ ಉಳಿದಭಾಷೆಗಲ್ಲಿ ಪ್ರಸಾರವಾಗುತ್ತಿವೆ ಎಂಬ ವಿಷಯ ತಿಳಿದಾಗ ನಮಗೆ ಚುಚ್ಚೋದಿಲ್ಲವೇ? ಸಾಮಾಜಿಕ ಕಳಕಳಿ ಉಂಟು ಮಾಡುವ ಇಂತಹ ಕಾರ್ಯಕ್ರಮ ನೋಡುವ ಹಂಬಲವಿದ್ದರು ನಮ್ಮಿಂದ ಸಾಧ್ಯವಾಗುತ್ತಿಲ್ಲ, ಇದು ನಮಗಾಗುತ್ತಿರುವ ಮೋಸವಲ್ಲದೆ ಇನ್ನೇನು?

 

 

 

 

  
ಕನ್ನಡ ವೀಕ್ಷಕ ತನ್ನನು ನಂಬಿದವರನ್ನು ನಡುನೀರಿನಲ್ಲಿ ಕೈಬಿಟ್ಟ ಇತಿಹಾಸವೇ ಇಲ್ಲ
ಒಳ್ಳೆ ಕನ್ನಡ ಚಿತ್ರಗಳಿಗೆ ಎಷ್ಟೇ ಪೈಪೋಟಿ ಇರಲಿ ಆ ಚಿತ್ರವನ್ನ ಖಂಡಿತ
ಗೆಲ್ಲಿಸುತ್ತಾನೆ, ಯೋಗರಾಜ್ ಭಟ್, ಸೂರಿ, ಪ್ರೀತಂ ಗುಬ್ಬಿ, ದರ್ಶನ್, ಅಂಬರೀಶ್, ವಿಜಿ ,
Rock line ಹೀಗೆ ಅದೆಷ್ಟೋ ಪ್ರತಿಭೆ ಗಳಿರುವಂತಹ ನಮ್ಮ ಚಿತ್ರ ರಂಗ ಯಾರೆದುರೂ ಎಂದಿಗೂ
ತಲೆಬಾಗಲ್ಲ.

 

"ನನ್ನ ಮನರಂಜನೆ ಕೇಳೋ ಹಕ್ಕು ನನಗಿಲ್ಲವೇ"  
"ಸತ್ಯಮೇವ ಜಯತೆ" ಇದು ನನ್ನ ಅನಿಸಿಕೆ 

 

 

 

 

 

ಈ ಲೇಖನದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ

  • 589 views